ಪ್ರಜಾ ನಾಯಕ ಸುದ್ದಿ ಜಗಳೂರು :- ತಾಂತ್ರಿಕ ದೋಷಗಳನ್ನು ಸರಿಪಡಿಸಿಕೊಂಡು ಗೃಹಲಕ್ಷ್ಮಿ ಯೋಜನೆಯನ್ನು ಯಶಸ್ವಿಯಾಗಿ ತಲುಪಿಸಲು ಅಧಿಕಾರಿಗಳು ಜವಾಬ್ದಾರಿವಹಿಸಬೇಕು ಎಂದು ಶಾಸಕ ಬಿ.ದೇವೇಂದ್ರಪ್ಪ ಸೂಚಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗೃಹಲಕ್ಷ್ಮಿ ಯೋಜನೆ ಕುರಿತು ಗ್ರಾಮಪಂಚಾಯಿತಿ ನೋಡೆಲ್ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಆಗಸ್ಟ್ 30 ರಂದು ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹಲಕ್ಷ್ಮಿ ಯೋಜನೆ ವಿದ್ಯುಕ್ತ ಚಾಲನೆ ನೀಡಲಿದ್ದು.ಅಂದಿ ನ ದಿನ ಜಗಳೂರಿನಲ್ಲಿ ಚಾಲನೆ ಕಾರ್ಯಕ್ರಮ ಆಯೋಜಿಸಲಾಗು ವುದು.ಅರ್ಹ ಫಲಾನುಭವಿಗಳಿಗೆ ಜಾಗೃತಿ ಮೂಡಿಸಿ ಕಡ್ಡಾಯ ವಾಗಿ ಅರ್ಜಿಸಲ್ಲಿಸಲು ಕ್ರಮಕೈಗೊಳ್ಳಬೇಕು.ತಾಂತ್ರಿಕ ದೋಷಗಳ ನ್ನು ಸರಿಪಡಿಸಿಕೊಂಡು ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಪಡೆ ಯಬೇಕು ಎಂದು ತಿಳಿಸಿದರು.
ಕಾಂಗ್ರೆಸ್ ಸರಕಾರದ ಮಹತ್ತರ ಗ್ಯಾರಂಟಿ ಯೋಜನೆ ಅರ್ಹರಿಗೆ ತಲುಪಬೇಕು.ಹಾಗೂ ಅಧಿಕಾರಿಗಳು ತಮ್ಮ ಕರ್ತವ್ಯ ಮೆರೆಯ ಬೇಕು. ನನ್ನ ಆಡಳಿತಾವಧಿಯಲ್ಲಿ ಕ್ಷೇತ್ರದ ಅಭಿವೃದ್ದಿಗೆ ತಮ್ಮ ಜವಾ ಬ್ದಾರಿಯುತ ಕೆಲಸದ ನಿರೀಕ್ಷೆ ಬಯಸುವೆ.ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ರಾಜ್ಯಕ್ಕೆ ಮಾದರಿಗೊಳಿಸಿ ರುವಿರಿ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಆಹಾರ ಮತ್ತು ನಾಗರಿಕ ಇಲಾಖೆ ಉಪನಿರ್ದೇಶಕ ಸಿದ್ದರಾಮ್ ಮರಿಹಾಳ್ ಮಾತನಾಡಿ,ಸ್ತ್ರೀಯರ ಸಬಲೀಕರಣದ ಉದ್ದೇಶ ದಿಂದ ಗೃಹಲಕ್ಷ್ಮಿ ಯೋಜನೆ ಜಾರಿಯಾಗಿದೆ .ಸರಕಾರ ನಿರ್ದೇಶನ ದಂತೆ ಮುಖ್ಯಂತ್ರಿಗಳ ಗೃಹಲಕ್ಷ್ಮಿ ಯೋಜನೆ ಚಾಲನಾ ಕಾರ್ಯ ಕ್ರಮ 10*10 ಇಂಚಿನ ಎಲ್ ಇಡಿ ನೇರಪ್ರಸಾರ ಗ್ರಾಮಪಂಚಾ ಯಿತಿ ವ್ಯಾಪ್ತಿ ಕನಿಷ್ಠ 2000 ಜನರಿಗೆ ತಲುಪಬೇಕು.ತಾಲೂಕಿನಲ್ಲಿ 42968 ಪಡಿತರ ಚೀಟಿಗಳಲ್ಲಿ 36902 ಶೇ. 86 ರಷ್ಟು ಅರ್ಜಿ ಸಲ್ಲಿಸಿದ್ದಾರೆ.ಎಪಿಎಲ್ ಫಲಾನುಭವಿಯೂ ಅರ್ಜಿಸಲ್ಲಿಸಬಹುದು ಆದರೆ ಆದಾಯ ತೆರಿಗೆ ಪಾವತಿದಾರರಾಗಿರಬಾರದು.ಅಗತ್ಯ ದಾಖಲೆಗಳ ಬಗ್ಗೆ ಜನರಿಗೆ ತಿಳಿಸಬೇಕು.ಹೆಚ್ಚಿನ ಮಾಹಿತಿಗಾಗಿ 8147500500 ಗೆ ಎಸ್ ಎಂಎಸ್ ಮಾಡಿ,ಅಥವಾ 1902 ಟೋಲ್ ಫ್ರೀಗೆ ಕಾಲ್ ಮಾಡಿ ಎಂದು ಮಾಹಿತಿ ನೀಡಿದರು.
ಸಂದರ್ಭದಲ್ಲಿ ಗ್ರೇಡ್ -2 ತಹಶೀಲ್ದಾರ್ ಮಂಜಾನಂದ, ತಾ.ಪಂ ಇಓ ಚಂದ್ರಶೇಖರ್,ಪ.ಪಂ.ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ಸಿಡಿಪಿಓ ಬಿರೇಂದ್ರಕುಮಾರ್,ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.