ಪ್ರಜಾ ನಾಯಕ ಸುದ್ದಿ ಜಗಳೂರು -:ಧರ್ಮ ಸಮನ್ವಯ,ಕಾಯಕ ದಾಸೋಹ ಸೇವೆ,ಶಿಕ್ಷಣ ಪ್ರಸಾರ ಈ ಮೂರು ಮಹತ್ತುಗಳ ಮಹಾ ಮನೆಯಾಗುವುದರ ಜೊತೆಗೆ ಅಖಿಲ ಭಾರತ ಶರಣ ಸಾಹಿತ್ಯ ಪರಿ ಷತ್ತು ಸ್ಥಾಪಿಸಿದ ಕೀರ್ತಿ ಮೈಸೂರಿನ ಸುತ್ತೂರು ಮಠದ ಡಾ. ಶಿವ ರಾತ್ರಿ ರಾಜೇಂದ್ರ ಮಹಾಸ್ವಾಮಿಗಳಿಗೆ ಸಲ್ಲುತ್ತದೆ ಎಂದು ಬಸವ ಭಾರತಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ಡಾ. ಪ್ರಭಾಕರ್ ಲಕ್ಕೊಳ್ ರವರು ನುಡಿದರು.ಅವರು ಮಂಗಳವಾರ ಜಗಳೂರಿನಲ್ಲಿ ಶರಣ ಸಾಹಿತ್ಯ ಪರಿಷತ್ತು,ಕದಳಿ ಮಹಿಳಾ ವೇದಿಕೆ ಹಾಗೂ ದಿವ್ಯ ಭಾರತಿ ಪ್ರೌಢಶಾಲೆ ಸಹಯೋಗದಲ್ಲಿ ನಡೆದ ಸಂಸ್ಥಾ ಪಕ ದಿನಾಚರಣೆಯಲ್ಲಿ ಅನುಭಾವದ ನುಡಿಗಳನ್ನು ಆಡುತ್ತಿದ್ದರು. ಸ್ವಾಮೀಜಿಗಳ ಒಡನಾಟವನ್ನು ಮೆಲುಕು ಹಾಕಿದ ಲಕ್ಕೊಳ್ ರವರು ಬಸವಾದಿ ಶರಣರ ವಚನಗಳ ಪ್ರಸಾರ ಹಾಗೂ ಪ್ರಚಾರದಲ್ಲಿ ಸ್ವಾಮೀಜಿ ಗಳ ಸೇವೆಯನ್ನು ನಾವು ಮರೆಯಲಾಗದು ಎಂದು ಅವರು ಬಣ್ಣಿಸಿದರು.
ಇದೇ ಸಂದರ್ಭದಲ್ಲಿ ಏರ್ಪಡಿಸಲಾಗಿದ್ದ ಶರಣರ ಚಿಂತನೆ ಮತ್ತು ಜೆ.ಎಂ.ಇಮಾಂ ವಿಷಯ ಕುರಿತು ಸಾಹಿತಿ ಎನ್ ಟಿ ಎರ್ರಿಸ್ವಾಮಿ ಅವರು ದತ್ತಿ ಉಪನ್ಯಾಸವನ್ನು ನೀಡಿದರು. ಜೆ.ಎಂ. ಇಮಾಮ್ ರವರು ಹುಟ್ಟಿನಿಂದ ಮುಸ್ಲಿಮರಾದರೂ ಬದುಕಿನಿಂದ ಭಾರತೀ ಯರು. ಅವರು ಜಾತಿಯ ಸೋಂಕಿಲ್ಲದ ವ್ಯಕ್ತಿ.ಧರ್ಮವನ್ನು ಮೀರಿ ದ ಹೃದಯವಂತ. ಭಕ್ತಿಯಲ್ಲಿ ಹನುಮಂತ , ಭಾವೈಕ್ಯತೆಯಲ್ಲಿ ಧೀಮಂತ. ಮೈಸೂರು ಸಂಸ್ಥಾನದ ಆಡಳಿತದಲ್ಲಿ ಮಂತ್ರಿಯಾಗಿ. ವಿಧಾನಸಭೆ ,ಲೋಕಸಭೆಯ ಹಿರಿಯ ಸದಸ್ಯರಾಗಿ ,ಹಂಗಾಮಿ ದಿವಾನರು, ಲೋಕಸಭೆಯ ಹಂಗಾಮಿ ಸ್ಪೀಕರ್ ಆಗಿ ಅವರು ಸರಳ, ಸಜ್ಜನಿಕೆಯ, ಸಂಪನ್ನ, ಸಚ್ಚಾರಿತ್ರದ ವ್ಯಕ್ತಿಯಾಗಿ ಬದುಕಿದ ವರು ಅವರ ಬದುಕು ಇಂದಿನ ಪೀಳಿಗೆಗೆ ಆದರ್ಶಪ್ರಾಯ ಎಂದು ಹೇಳಿದರು.
ನಾಲಂದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾದ ಶ್ರೀ ಸಿ .ತಿಪ್ಪೇಸ್ವಾಮಿ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸರ್ವರಿಗೂ ಸಮಪಾಲು, ಸರ್ವರಿಗೆ ಸಮಬಾಳು ಎಂದು ಚಿಂತಿಸಿ ದವರು ಶರಣರು.ಅವರ ಆದರ್ಶಗಳ ಬೆಳಕಿನಲ್ಲಿ ಬಾಳಿದವರ ಜೆ.ಎಂ.ಇಮಾಂ ರವರು. ಅವರು ಆಕಾರದಲ್ಲಿ ಮಾತ್ರವಲ್ಲ, ವ್ಯಕ್ತಿತ್ವ ದಲ್ಲಿಯೂ ಎತ್ತರವಾದ ವ್ಯಕ್ತಿ ಎಂದು ವಿವರಿಸಿದರು.
ನಾಲಂದ ಕಾಲೇಜಿನ ಉಪನ್ಯಾಸಕರಾದ ಶ್ರೀ ಬಿ. ಎನ್. ಎಂ ಸ್ವಾಮಿಯವರು ಪ್ರಾಸ್ತಾವಿಕವಾಗಿ ಮಾತನಾಡಿ ನಡು ಕರ್ನಾಟಕದ ಭಾಗದಲ್ಲಿ ಜಗಳೂರಿನ ಡಾ. ಟಿ ತಿಪ್ಪೇಸ್ವಾಮಿ ಯವರು ಶರಣ ಸಾಹಿತ್ಯ ಪರಿಷತ್ತನ್ನು ಕಟ್ಟಿ ಬೆಳೆಸಿದ ಪರಿಯನ್ನು ಹಂಚಿಕೊಂಡರು.
ದಿವ್ಯ ಭಾರತಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಜಿ ಬಿ ಬಾಲರಾಜುರವರು ಅಧ್ಯಕ್ಷತೆಯನ್ನು ವಹಿಸಿ ಇಂದಿನ ಪೀಳಿಗೆಗೆ ವಚನ ಸಾಹಿತ್ಯದ ಸಾರವನ್ನು ಉಣಬಡಿಸುವ ಅಗತ್ಯತೆಯನ್ನು ವಿವರಿಸಿದರು.
ಈ ವೇದಿಕೆಯಲ್ಲಿ ದತ್ತಿದಾನಿಗಳಾದ ಶ್ರೀ ಜೆ .ಕೆ .ಹುಸೇನ್ ಮಿಯಾ ಸಾಬ್’ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ಜೆ .ಆರ್.ಗೌರಮ್ಮ, ನಿವೃತ್ತ ಉಪನ್ಯಾಸಕರಾದ ಡಿ.ಸಿ ಮಲ್ಲಿಕಾರ್ಜುನ, ಬಾಬು ಹೆಚ್.ಮರೇನಹಳ್ಳಿ ಸಂಪಾದಕರು ಪ್ರಜಾ ನಾಯಕ ಕನ್ನಡ ದಿನಪತ್ರಿಕೆ ಪತ್ರಿಕೆ ಹಾಗೂ ಸಂಜೆವಾಣಿ ದಿನಪತ್ರಿಕೆ ವರದಿಗಾರು ಪರಿಷತ್ತಿನ ಲೀಲಾವತಿ, ರೇವತಿ,ನಾಗರತ್ನ, ಮಂಜು ನಾಥ್,ಮತ್ತಿತರ ರು.ಶಿಕ್ಷಕರಾದ ರಮೇಶ್ ಇದ್ದರು.