ಪ್ರಜಾ ನಾಯಕ ಸುದ್ದಿ ಜಗಳೂರು :- ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಕ್ರೀಡೆಗಳು ಪೂರಕವಾಗಲಿವೆ.ವಿದ್ಯಾರ್ಥಿಗಳು ಕ್ರೀಡೆಗಳ ಲ್ಲಿ ಭಾಗವಹಿಸಬೇಕು ಎಂದು ಶಾಸಕ ಬಿ.ದೆವೇಂದ್ರಪ್ಪ ಕಿವಿಮಾತು ಹೇಳಿದರು.
ಪಟ್ಟಣದ ಬೇಡರ ಕಣ್ಣಪ್ಪ ಪ್ರೌಢಶಾಲಾ ಆವರಣದಲ್ಲಿ ಆರ್ ವಿ ಎಸ್ ಶಾಲೆ ವತಿಯಿಂದ ಆಯೋಜಿಸಿದ್ದ ದಕ್ಷಿಣ ವಲಯಮಟ್ಟದ ಪ್ರೌಢಶಾಲಾ ಹಂತದ ಕ್ರೀಡಾಕೂಟ ಕಾರ್ಯಕ್ರಮವನ್ನು ಉದ್ಘಾ ಟಿಸಿ ಅವರು ಮಾತನಾಡಿದರು.
ಕ್ರೀಡೆಗಳಲ್ಲಿ ಮೈಮರೆತು ತಲ್ಲೀನರಾದಾಗ ಸಿಗುವ ಮಾನಸಿಕ ನೆಮ್ಮದಿಗೆ ಎಲ್ಲೆಯಿಲ್ಲ.ಜೀವನದಲ್ಲಿ ಹಣಗಳಿಕೆ ಮಾಡಬಹುದು ಆದರೆ ಆರೋಗ್ಯ ಗಳಿಕೆ ಅಸಾಧ್ಯ.ವಿದ್ಯಾರ್ಥಿದೆಸೆಯಿಂದ ಕ್ರೀಡಾ ತರಬೇತಿ ಪಡೆದು ಸ್ಪರ್ಧಿಸಿ ರಾಜ್ಯ ರಾಷ್ಟ್ರ ಮಟ್ಟದಲ್ಲಿ ತಾಲೂಕಿನ ವಿದ್ಯಾಸಂಸ್ಥೆಯ ಕೀರ್ತಿ ಪತಾಕಿ ಹಾರಿಸಬೇಕು ಎಂದರು.
ನನ್ನ ಕ್ರೀಡಾ ಸಾಧನೆಗೆ ಬಡತನ ಅಡ್ಡಿ :- ನಾನು ವಿದ್ಯಾರ್ಥಿ ಜೀವ ನ ದಲ್ಲಿ ಕ್ರೀಡೆಗಳಲ್ಲಿ ಭಾಗವಹಿಸಿದ್ದೆ.ಎಲ್ಲಾ ಸಾಮರ್ಥ್ಯ ವಿದ್ದರೂ ಬಡತ ನ ಅಡ್ಡಿಯಾಗಿ ಚಾಂಪಿಯನ್ ಶಿಪ್ ಪಡೆಯುವಲ್ಲಿ ವಂಚಿತನಾಗಿ ರುವೆ.ಇದೀಗ ಹಣ ಆಸ್ತಿ ಗಳಿಸಿರುವೆ ಆದರೆ ಅವಕಾಶ ,ದೈಹಿಕ ಸದೃಢತೆ,ಆರೋಗ್ಯ ಮರುಕಳಿಸುವುದಿಲ್ಲ ಎಂದು ಮೆಲುಕು ಹಾಕಿದರು.
ಧರ್ಮ,ಜಾತಿ,ಲಿಂಗತಾಮ್ಯವಿಲ್ಲದೆ ಕ್ರೀಡಾ ರಂಗದಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ತಮ್ಮ ಜೀವನದಲ್ಲಿ ಆಸಕ್ತಿದಾಯಕ ಕ್ಷೇತ್ರದಿಂದ ಸತತ ಪ್ರಯತ್ನದಿಂದ ಉತ್ತಮ ಸಾಧನೆಗೈಯಬೇಕು ಎಂದರು.
ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮಾತ ನಾಡಿ,ಬೇರೆ ಯಾವ ಕ್ಷೇತ್ರಕ್ಕಿಂತಲೂ ಕ್ರೀಡಾ ರಂಗ ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಲು ಉತ್ತಮ ವೇದಿಕೆಯಾಗಿದೆ.ತೀರ್ಪುದಾರರು ಪ್ರಾಮಾಣಿಕ ತೀರ್ಪು ನೀಡಬೇಕು.ಕ್ರೀಡಾಪಟುಗಳು ವೈಯಕ್ತಿಕ ದ್ವೇಷ ತೊರೆದು ಸ್ಪರ್ಧಾ ಮನೋಭಾವ ಮೈಗೂಡಿಸಿಕೊಳ್ಳಬೇಕು ಎಂದರು.
ಇದೇ ವೇಳೆ ಕ್ರೀಡಾ ಧ್ವಜರೋಹಣ ನೆರವೇರಿಸಿ,ಜ್ಯೋತಿ ಸ್ವೀಕ ರಿಸಿ, ನಂತರ ವಾಲಿಬಾಲ್ ಮಹಿಳಾ ವಿಭಾಗದಿಂದ ಪ್ರಥಮ ಸ್ಥಾನ ಗಳಿಸಿದ ಎನ್ ಎಂಕೆ ಶಾಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಶೀಲ್ಡ್ ವಿತರಿಸಿದರು.
ಈ ಸಂದರ್ಭದಲ್ಲಿ ಬಿಇಓ ಹಾಲಮೂರ್ತಿ,ಉಪಪ್ರಾಂಶುಪಾಲ ಹಾಲಪ್ಪ,ಕೊಟ್ರೇಶ್,ಆರ್ ವಿ ಎಸ್ ಸಂಸ್ಥೆ ಕಾರ್ಯದರ್ಶಿ ವಿರೇಶ್,ಅನುದಾನ ರಹಿತ ಖಾಸಗಿ ಶಾಲಾ ಸಂಘದ ಅಧ್ಯಕ್ಷ ಎನ್.ಎಂ. ಲೊಕೇಶ್,ಕಾರ್ಯದರ್ಶಿ ಪಿ.ಎಸ್.ಅರವಿಂದನ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಸುರೇಶ್ ರೆಡ್ಡಿ, ಮುಖಂಡ ರಾದ ಸಿ.ತಿಪ್ಪೇಸ್ವಾಮಿ,ಕಲ್ಲೇಶ್ ರಾಜ್ ಪಟೇಲ್,ಪಲ್ಲಾ ಗಟ್ಟೆ ಶೇಖರಪ್ಪ,ಮಾಜಿ ಪ.ಪಂ ಸದಸ್ಯ ಮಂಜುನಾಥ್. ಗುತ್ತಿದುರ್ಗ ರುದ್ರೇಶ್.ಹನುಮಂತಪುರ ರಾಜು.ಪ್ರಕಾಶ್ ರೆಡ್ಡಿ,ಮುಖ್ಯಶಿಕ್ಷಕಿ ವಿಜಯಲಕ್ಷ್ಮಿ,ಸೇರಿದಂತೆ ಇದ್ದರು.