ಪ್ರಜಾ ನಾಯಕ ಸುದ್ದಿ ಜಗಳೂರು :- ಮೀನುಗಾರಿಕೆ ವೃತ್ತಿ ಬಗ್ಗೆ ಕೀಳಿರಿಮೆ ಸಲ್ಲದು.ವೃತ್ತಿಯಿಂದ ಸ್ವಯಂ ಉದ್ಯೋಗ,ಆರ್ಥಿಕ ಸ್ವಾವಲಂಬಿತನ ಸಾಧ್ಯ ಎಂದು ಶಾಸಕ ಬಿ.ದೇವೇಂದ್ರಪ್ಪ ಸಲಹೆ ನೀಡಿದರು.
ತಾಲೂಕಿನ ಸಂಗೇನಹಳ್ಳಿ ಕೆರೆ ಬಳಿ ಮೀನುಗಾರಿಕೆ ಇಲಾಖೆ ಯಿಂದ ಮೀನುಗಾರಿಕೆ ಸಹಕಾರ ಸಂಘದವರಿಗೆ ಆಯೋಜಿಸಿದ್ದ ಕಾರ್ಯಾಗಾರ ಹಾಗೂ ಪ್ರಧಾಮಮಂತ್ರಿ ಮತ್ಸ್ಯ ಸಂಪದ ಯೋಜ ನೆಯಡಿ ಮೀನಿನಮ ಮರಿಗಳನ್ನು ಕೆರೆಗೆ ಬಿಡುವ ಮೂಲಕ ಚಾಲ ನೆ ನೀಡಿದರು.
ಮೀನಿನ ಆಹಾರ ಸೇವನೆಯಿಂದ ಮಾನವನ ದೇಹಕ್ಕೆ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಜೀವಸತ್ವಗಳು,ಕೊಬ್ಬಿನಾಮ್ಲವನ್ನು ಒದಗಿಸುತ್ತದೆ.ಅಲ್ಲದೆ ಮಾನಸಿಕವಾಗಿ ಚುರುಕುತನ,ದೈಹಿಕ ಕಾಂತೀಯತೆ ಹೆಚ್ಚುತ್ತದೆ ಎಂದ ಅವರು ಸಮುದ್ರದ ಕಡಲಿನಲ್ಲಿನ ಮಂಗಳೂರು, ಉತ್ತರ ಕನ್ನಡ ಭಾಗದಲ್ಲಿನ ಶಾಲಾ ಕಾಲೇಜಿನ ಪ್ರತಿ ಭಾವಂತ ವಿದ್ಯಾರ್ಥಿಗಳು ರಾಜ್ಯಕ್ಕೆ ಅಗ್ರಸ್ಥಾನ ಪಡೆಯುವುದು ಸಾಕ್ಷಿಯಾಗಿದೆ ಎಂದು ನಿದರ್ಶನ ನೀಡಿದರು.
ಶೀಘ್ರದಲ್ಲಿ ಕೆರೆಗಳು ಭರ್ತಿಯಾಗಿ ಮೀನುಗಾರಿಕೆಗೆ ಅನುಕೂಲ ವಾಗಲಿವೆ:- ತಾಲೂಕಿಗೆ 57 ಕೆರೆ ತುಂಬಿಸುವ ಯೋಜನೆಯಡಿ 11ಕೆರೆಗಳಿಗೆ ನೀರು ಭರ್ತಿಯಾಗಿದ್ದು.ಶೀಘ್ರದಲ್ಲಿ ಉಳಿದ ಕೆರೆಗಳು ಭರ್ತಿಯಾಗಲಿವೆ.ಅಲ್ಲದೆ ಇಮಾಂಸಾಹೇಬರು ನಿರ್ಮಿಸಿದ ತಾಲೂಕಿನ ಅತಿ ದೊಡ್ಡದಾಗಿರುವ ಸಂಗೇನಹಳ್ಳಿ ಕೆರೆ ಭದ್ರಾ ಮೇಲ್ದಂಡೆ ಯೋಜನೆಯಡಿ ಭರ್ತಿಯಾಗಲಿದೆ ಇದರಿಂದ ತಮಗೆ ಹೆಚ್ಚಿನ ಸಂಖ್ಯೆಯಲ್ಲಿ ಮೀನು ಸಾಕಾಣಿಕೆಗೆ ಅನುಕೂಲ ವಾಗಲಿದೆ. ತ್ವರಿತಗತಿಯಲ್ಲಿ ಸಾಗಿರುವ ಭದ್ರಾಮೇಲ್ದಂಡೆ ಯೋಜನೆ ಕಾಮ ಗಾರಿಯನ್ನು ಈ ವಾರದಲ್ಲಿ ಸಂಬಂಧಿಸಿದ ಅಧಿಕಾರಿಗಳ ಹಾಗೂ ಮಾಧ್ಯಮದವರೊಂದಿಗೆ ವೀಕ್ಷಿಸಲಾಗುವುದು ಎಂದು ತಿಳಿಸಿದರು.
ಸಂಗೇನಹಳ್ಳಿ ಕೆರೆ ವರುಣನ ಕೃಪೆಯಿಂದ ಕಳೆದ ವರ್ಷದಂತೆ ಭರ್ತಿಯಾಗಲಿ.ನೆರೆಹೊರೆಯ ಗ್ರಾಮಗಳ ರೈತರ ಬದುಕು ಹಸ ನಾಗಲಿ ಎಂದು ಹಾರೈಸಿದರು.
ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಅಣ್ಣಪ್ಪ ಮಾತನಾಡಿ, ಇಲಾಖೆಯಿಂದ ಮೀನುಗಾರರ ಸಹಕಾರ ಸಂಘದ ಪದಾಧಿಕಾರಿ ಗಳಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಗಳನ್ನು ವಿತರಿಸಲಾಗುವುದು ಇದರಿಂದ ಶೂನ್ಯ ಬಡ್ಡಿದರದಲ್ಲಿ ಸಾಲಸೌಲಭ್ಯ,ಹಾಗೂ ಮೀನು ಹಿಡಿಯುವ ಸಲಕರಣೆಗಳನ್ನು ಒದಗಿಸಲಾಗುವುದು.ಅಲ್ಲದೆ ಕೃಷಿ ಹೊಂಡಹೊಂದಿರುವ ರೈತರಿಗೆ ಮೀನು ಸಾಕಾಣಿಕೆಗೆ ಸಹಾಯ ಧನ ನೀಡಲಾಗುವುದು ಅಗತ್ಯ ದಾಖಲೆ ಸಲ್ಲಿಸಿ ಸದುಪಯೋಗ ಪಡೆದುಕೊಳ್ಳಬಹುದು ಎಂದು ಮಾಹಿತಿ ನೀಡಿದರು.
ಇದೇ ವೇಳೆ ಸಂಗೇನಹಳ್ಳಿ ಕೆರೆಗೆ 4 ಲಕ್ಷ ಮರಿಗಳನ್ನು ಬಿಡ ಲಾಯಿತು.
ಸಂದರ್ಭದಲ್ಲಿ ಪ.ಪಂ,ಸದಸ್ಯ ರಮೇಶ್ ರೆಡ್ಡಿ,ನಾಮನಿರ್ದೇಶಿತ ಸದಸ್ಯರಾದ ಕುರಿ ಜಯ್ಯಣ್ಣ,ತಾನಾಜಿ ಗೋಸಾಯಿ,ಪಿ.ಎಲ್.ಡಿ ಬ್ಯಾಂಕ್ ನಾಮನಿರ್ದೇಶಿತ ಸದಸ್ಯ ಸಣ್ಣಸೂರಜ್ಜ,ಮುಖಂಡರಾದ ಪಲ್ಲಾಗಟ್ಟೆ ಶೇಖರಪ್ಪ,ಅಹಮ್ಮದ್ ಅಲಿ,ಗೌಸ್ ಪೀರ್,ಗ್ರಾ.ಪಂ ಸದಸ್ಯ ಅನೂಪ್ ರೆಡ್ಡಿ,ಮೀನುಗಾರಿಕೆ ಸಹಕಾರ ಸಂಘದ ಗೋಪಿ,ಜಯ್ಯಣ್ಣ,ತಿಪ್ಪಮ್ಮ,ನಿವೃತ್ತ ಶಿಕ್ಷಕ ಪ್ರಕಾಶ್,ಸೇರಿದಂತೆ ಇದ್ದರು.