ಪ್ರಜಾ ನಾಯಕ ಸುದ್ದಿ ಜಗಳೂರು :- ತಾಲೂಕನ್ನು ಬರ ಪೀಡಿತ ಪಟ್ಟಿಗೆ ಪ್ರಥಮ ಹಂತದಲ್ಲಿ ರಾಜ್ಯ ಸರ್ಕಾರ ಘೋಷಿಸಿ ಆದೇಶಿಸಿದೆ ತಾಲೂಕು ಮಟ್ಟದ ಅಧಿಕಾರಿಗಳು ಜಾಗೃತರಾಗಿ ಜನರ ಸಂಕಷ್ಟ ಗಳಿಗೆ ಭಾಗಿಯಾಗಿ ಬರ ನಿರ್ವಹಣೆ ಮಾಡಬೇಕು ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.
ಪಟ್ಟಣದ ವಿದ್ಯಾನಗರದಲ್ಲಿರುವ ಪ್ರಸ್ ಕ್ಲಬ್ ನಲ್ಲಿ ಸುದ್ದಿ ಗೋಷ್ಠಿ ಯನ್ನು ಉದ್ದೇಶಿಸಿ ಮಾತನಾಡಿ ನಮ್ಮ ತಾಲೂಕಿನಲ್ಲಿ ವಾಡಿಕೆಗಿಂತ ಶೇ.73 ಮಿ.ಮಿ.ಮಳೆ ಕಡಿಮೆಯಾಗಿದ್ದು ಇದರಿಂದ ತಾಲೂಕಿನಲ್ಲಿ ರೈತರು ಆತಂಕಕ್ಕೆ ಈಡಗಿದ್ದರು ಇನ್ನು ಮುಂದೆ ರೈತರು ಭಯಪಡುವ ಅಗತ್ಯವಿಲ್ಲ ರಾಜ್ಯ ಸರ್ಕಾರ ಬರಪೀಡಿತ ಪ್ರದೇಶ ಪಟ್ಟಿಗೆ ಮೊದಲ ನೇ ಹಂತದಲ್ಲಿಯೇ ಸೇರ್ಪಡೆ ಮಾಡಿದೆ
ಜಗಳೂರು ತಾಲೂಕುನ್ನು ಮಾಧ್ಯಮ ಬರಪಟ್ಟಿಯಲ್ಲಿ ಸೇರಿದೆ ಎಂದು ವಿರೋಧಿಸಿ ಅನೇಕ ರೈತ ಪರ ಸಂಘಟನೆಗಳು ಪ್ರತಿ ಭಟನೆ ಮಾಡಿದ್ದವು ಅದನ್ನು ಗಮನದಲ್ಲಿಟ್ಟು ಕೊಂಡ ಕಂದಾಯ ಇಲಾಖೆ. ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಜಂಟಿ ಸಮೀಕ್ಷೆ ಮಾಡಿ ರಾಜ್ಯ ಸರ್ಕಾರಕ್ಕೆ ವರದಿ ಮಾಡಿದ್ದರು ಅದರಂತೆ ಈಗ ಸೇರ್ಪಡೆಯಾಗಿದೆ
ಈ ಹಿನ್ನೆಲೆಯಲ್ಲಿ ತಾಲೂಕನ್ನು ಬರಪೀಡಿತ ಪಟ್ಟಿಗೆ ಸೇರಿಸಲು ಹಾಗೂ ನೆರೆಗುದಿಗೆ ಬಿದ್ದಿರುವ ಭದ್ರ ಮೇಲ್ದಂಡೆ ಯೋಜನೆಗೆ ಚುರುಕು ನೀಡಬೇಕು ಎಂದು ಕೆಲ ದಿನಗಳ ಹಿಂದೆ ಪತ್ರಿಕಾಗೋಷ್ಠಿ ಮುಖಾಂತರ ಮಾಜಿ ಶಾಸಕ ಎಸ್.ವಿ ರಾಮ ಚಂದ್ರ ಒತ್ತಾಯಿಸಿ ದ್ದರು ಅದರಂತೆ ಜಗ ಳೂರು ಸೇರ್ಪಡೆಯಾಗಿದ್ದು ರೈತರು ನಿಟ್ಟಿ ಸಿರು ಬಿಟ್ಟಂತಾಗಿದೆ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಬಗ್ಗೆ ಗಮನ ಹರಿಸಿ ಆದಷ್ಟು ಬೇಗನೆ ತ್ವರಿತ ಗತಿ ಯಲ್ಲಿ ಕಾಮಗಾರಿಗೆ ಚಾಲನೆ ನೀಡ ಲಾಗುವುದು ಶಾಸಕ ಬಿ.ದೇವೇಂದ್ರಪ್ಪ ಪ್ರತಿಕ್ರಿಯಿ ಸಿದರು
ಅನೇಕ ವರ್ಷಗಳಿಂದಲೂ ಬರಪೀಡಿತಕ್ಕೆ ಜಗಳೂರು ತುತ್ತಾ ಗುತ್ತ ಬಂದಿದೆ-: ಮುಂಗಾರು ಮಳೆ ಕೊರತೆಯಿಂದಾಗಿ ಬೆಳೆ ಗಳು ಮೆಕ್ಕೆಜೋಳ.ರಾಗಿ ಶೇಂಗಾ ಸೇರಿದಂತೆ ಇನ್ನು ಅನೇಕ ಬಿಸಿಲಿನ ತಾಪಕ್ಕೆ ಬಾಡಿ ಬೆಂಡಾಗಿ ಒಣಗಿವೆ ಇನ್ನು ಅನೇಕ ಜನರು ಬಿತ್ತನೆ ಮಾಡಿ ಹುಟ್ಟದೆ ಮಳೆ ಬಾರದೆ ಕೈ ಕೈಕೊಟ್ಟಿದೆ ರೈತರು ಆಕಾಶದತ್ತ ಮುಗಿಲು ನೋಡುವ ಪರಿಸ್ಥಿತಿ ಉಲ್ಬಣ ವಾಗಿತ್ತು
“ನಮ್ಮ ರೈತರು ಹಿಂಗಾರು ಬೆಳೆಗಳನ್ನು ಬೆಳೆಯಲು ಬಿತ್ತನೆ ಬೀಜ ಗಳಾದ ಕಡಲೆ.ಬಿಳಿ ಜೋಳ.ಕುಸುಮೆ.ಸೂರ್ಯಕಾಂತಿ ಸೇರಿ ದಂತೆ ರಸಗೊಬ್ಬರ ಕೊರತೆ ಯಾಗದಂತೆ ಕ್ರಮ ಕೈಗೊಳ್ಳ ಲಾಗು ವುದುಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣ ಗೊಳ್ಳದಂತೆ ಮುಂಜಾಗ್ರತೆ ಕ್ರಮವಹಿಸಲು ತಾಲೂಕು ಮಟ್ಟ ಅಧಿ ಕಾರಿಗಳಿಗೆ ಈಗಾಗಲೇ ತಿಳಿಸಿದ್ದೇನೆ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ದುಡಿ ಯುವ ಕೈಗಳಿಗೆ ಕೆಲಸ ಕೊಡುವ ವ್ಯವಸ್ಥೆ ಮಾಡಲಾಗುವುದು ಅಗತ್ಯವಿದ್ದರೆ ಗೋ ಶಾಲೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗುವುದು”
– ಶಾಸಕ ಬಿ.ದೇವೇಂದ್ರಪ್ಪ ಜಗಳೂರು ವಿಧಾನಸಭಾ ಕ್ಷೇತ್ರ
ಈ ಸಂದರ್ಭದಲ್ಲಿ ತಹಸೀಲ್ದಾರ್ ಅರುಣ್ ಕಾರಗಿ.ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಿಥುನ್ ಕಿಮಾವತ್. ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ತೊಟದಯ್ಯ,ಕೆಪಿಸಿಸಿ ಸದಸ್ಯ ರಾದ ಕಲ್ಲೇಶ್ ರಾಜ್ ಪಾಟೇಲ್.ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಷಂಷೀರ್ .ಜಿಲ್ಲಾ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಪಲ್ಲಾಗಟ್ಟೆ ಶೇಖರಪ್ಪ, ಮುಖಂಡರಾದ ಮಹಮ್ಮದ್ ಗೌಸ್.ಷಂಶುದ್ದಿನ್. ಅನೂಪ್ ರೆಡ್ಡಿ ಪ.ಪಂ ನಾಮ ನಿರ್ದೇಶನ ಸದಸ್ಯ ಸಣ್ಣ ತಾನಾಜಿ, ಸೇರಿದಂತೆ ಮತ್ತಿತರರು ಹಾಜರಿದ್ದರು.