ಪ್ರಜಾ ನಾಯಕ ಸುದ್ದಿ ಜಗಳೂರು :- ಪಟ್ಟಣದ ಪ್ರವಾಸಿ ಮಂದಿ ರ ದಲ್ಲಿ ಕರ್ನಾಟಕ ಎಸ್ಸಿ/ ಎಸ್ಟಿ ಪತ್ರಿಕಾ ವರದಿಗಾರರ ಕ್ಷೇಮಾಭಿವೃದ್ದಿ ಸಂಘ (ರಿ) ಜಗಳೂರು ವತಿಯಿಂದ ವಿಶ್ವ ಪ್ರಜಾ ಪ್ರಭುತ್ವ ದಿನಾಚರ ಣೆಯನ್ನು ಭಾರತದ ಸಂವಿಧಾನದ ಪ್ರಸ್ತಾವನೆ ಓದುವ ಮೂಲಕ ಆಚರಿಸಲಾಯಿತು.
ರಾಜ್ಯ ಪ್ರಧಾನ ಕಾರ್ಯದರ್ಶಿ ಓ.ಮಂಜಣ್ಣ ಮಾತನಾಡಿ,ಸಮಾಜ ದಲ್ಲಿ ಶೋಷಣೆ ಮುಕ್ತ ಸಮಾಜಕ್ಕೆ ಸಂವಿಧಾನ ಮೂಲಮಂತ್ರ ವಾಗಿದೆ.ಕೆಲ ಮೂಲಭೂತವಾದಿ ಗಳಿಂದ ಸಂವಿಧಾನ ವಿರೋಧಿ ಮನಸ್ಥಿತಿ ಬದಲಾಗಬೇಕಿದೆ.ಮುಂದಿನ ದಿನಗಳಲ್ಲಿ ಸಂಘದಿಂದ ತಾಲೂಕಿನ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಂವಿಧಾನ ಓದು ಕಾರ್ಯಕ್ರಮದಡಿ ಜಾಗೃತಿ ಮೂಡಿಸಲಾಗುವುದು ಎಂದರು.
“ಕರ್ನಾಟಕ ಎಸ್ಸಿ /ಎಸ್ಟಿ ಪತ್ರಿಕಾ ವರದಿಗಾರರ ಕ್ಷೇಮಾಭಿವೃದ್ಧಿ ಸಂಘ (ರಿ) ಜಗಳೂರು ಎಸ್ಸಿ.ಎಸ್ಟಿ. ಪತ್ರಿಕಾ ವರದಿಗಾರರ ಸಂವಿಧಾನ ಬದ್ದ ಹಕ್ಕು ಗಳಿಗಾಗಿ,ಸಾಮಾಜಿಕ,ಮೂಲಭೂತ ಸೌಕರ್ಯ.ಆರ್ಥಿಕ ಭದ್ರತೆ.ಅವರ ಹಿತ ರಕ್ಷಣೆ ಕಾಪಾಡಲು ಸಂಘ ರಾಜ್ಯ ವ್ಯಾಪಿ ಶ್ರಮಿಸಲಿದೆ ಹೊರತು ಬೇರೆ ಸಂಘ ಮತ್ತು ಸಂಘಟನೆಗಳಿಗೆ ವಿರೋಧಿಸುವ ಮತ್ತು ಧಕ್ಕೆ ತರುವಂತಹ ಸಂಘವಲ್ಲ”
-ಎಚ್.ಆರ್. ಬಸವರಾಜ್.ರಾಜ್ಯದ್ಯಕ್ಷರು .ಕರ್ನಾಟಕ ಎಸ್ಸಿ /ಎಸ್ಟಿ ಪತ್ರಿಕಾ ವರದಿಗಾರರ ಕ್ಷೇಮಾಭಿವೃದ್ಧಿ ಸಂಘ (ರಿ) ಜಗಳೂರು
ಈ ವೇಳೆ ಸಂಘದ ಗೌರವ ಅಧ್ಯಕ್ಷ ಸಿ.ಬಸವರಾಜ್ ಮಾತನಾಡಿ, ದೇಶದಲ್ಲಿ ರಾಜಪ್ರಭುತ್ವ ನಂತರ ಸರ್ವಾಧಿಕಾರತ್ವ ಆಡಳಿತಕ್ಕೆ ಸಂವಿಧಾನ ಮುಕ್ತಿನೀಡಿದ್ದು. ಸಾರ್ವಭೌಮ ರಾಷ್ಟ್ರವಾಗಿರುವ ಭಾರತ ದೇಶದಲ್ಲಿ ಸರ್ವಧರ್ಮ,ಸಮಾಜವಾದಿ,ಜಾತ್ಯಾತೀತ, ಸಮಭಾವದ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ರಚಿಸಲು ಪ್ರಜಾ ಪ್ರಭುತ್ವದ ಆಶಯಗಳನ್ನು ಎತ್ತಿಹಿಡಿವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ ಎಂದರು.ಎಸ್ ಸಿ ಎಸ್ ಟಿ ಪತ್ರಿಕಾ ವರದಿಗಾರರ ಸಂವಿಧಾನ ಬದ್ದ ಹಕ್ಕು ಗಳಿಗಾಗಿ,ಸಾಮಾಜಿಕ,ಆರ್ಥಿಕ ಭದ್ರತೆ ಕಾಪಾಡಲು ಸಂಘ ಶ್ರಮಿಸಲಿದೆ ರಾಜ್ಯ ವ್ಯಾಪಿ ಸಂಘದ ವಿಸ್ತರಣೆಗೆ ಪದಾಧಿಕಾರಿಗಳು ಕೈ ಜೋಡಿಸಬೇಕು ಎಂದು ಕರೆ ನೀಡಿದರು.
ಸಂಘದ ಕಾನೂನು ಸಲಹೆಗಾರ ತಿಪ್ಪೇಸ್ವಾಮಿ ಮಾತನಾಡಿ, ದೇಶ ದಲ್ಲಿ ಸಂವಿಧಾನ ಪ್ರತಿಯೊಬ್ಬ ಪ್ರಜೆಗೂ ಸಮಾನ ಅವಕಾಶ,ಸೂಕ್ತ ಸ್ಥಾನಮಾನ,ವ್ಯಕ್ತಿಗೌರವ ರಾಷ್ಟ್ರದ ಏಕತೆಯನ್ನು ಸಾರಿದೆ.ಬದ್ದರಾಗಿ ಸಂವಿಧಾನಕ್ಕೆ ಗೌರವ ಸಮರ್ಪಣೆಗೆ ಸಂಕಲ್ಪಗೈಯಬೇಕು ಎಂದರು.
ರಾಜ್ಯ ಉಪಾಧ್ಯಕ್ಷ ರಾಜಪ್ಪ ಮಾತನಾಡಿ, ಡಾ.ಬಿ.ಆರ್ ಅಂಬೇಡ್ಕರ್ ಅವರ ಅವಿರತ ಶ್ರಮದಿಂದ ಸಂವಿ ಧಾನ ರಚನೆಯಾಗಿ ಮೂಲ ಭೂತ ಹಕ್ಕುಗಳು,ಮತ್ತು ಕರ್ತವ್ಯ ಗಳನ್ನು ಎತ್ತಿಹಿಡಿಯಲಾಗಿದೆ. ಇದರಿಂದ ಪ್ರತಿಯೊಬ್ಬರಿಗೂ ನ್ಯಾಯ,ಅಭಿವ್ಯಕ್ತಿ,ವಿಶ್ವಾಸ, ಧರ್ಮ ಶ್ರದ್ದೆ ಲಭಿಸಿದೆ.ಧರ್ಮ,ಲಿಂಗ ತಾರತಮ್ಯ,ತೊಲಗಿಸಿ ಸಮಾನತ ದೃಷ್ಠಿ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಧನ್ಯಕುಮಾರ್ ಎಚ್. ಎಂ. ಹೊಳೆ,ರಾಜ್ಯಸಂಘಟನಾ ಕಾರ್ಯದರ್ಶಿಗಳಾದ ಮಾದಿಹಳ್ಳಿ ಮಂಜಪ್ಪ,ಸಿದ್ದಮ್ಮನಹಳ್ಳಿ ಬಸವರಾಜ್,ಖಜಾಂಚಿ ಬಿ.ಓ ಮಾರುತಿ, ಸೇರಿದಂತೆ ಇದ್ದರು.