ಪ್ರಜಾ ನಾಯಕ ಜಗಳೂರು ಸುದ್ದಿ :- ಅರಣ್ಯ ರಕ್ಷಣೆ ಪ್ರತಿಯೊ ಬ್ಬರ ಹೊಣೆಯಾಗಿದ್ದು.ಗಿಡಮರ ಬೆಳೆಸುವಲ್ಲಿ ಸಾಲುಮರದ ತಿಮ್ಮಕ್ಕ ಆದರ್ಶ ವಾಗಿದ್ದಾರೆ ಎಂದು ಶಾಸಕ ಬಿ.ದೇವೇಂದ್ರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಅರಣ್ಯ ಇಲಾಖೆ ಆವರಣದಲ್ಲಿ ಪ್ರಾದೇಶಿಕ ಅರಣ್ಯ ವಿಭಾ ಗ ಹಾಗೂ ರಂಗಯ್ಯನದುರ್ಗ ವನ್ಯಜೀವಿ ಅರಣ್ಯ ವಲಯ ಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಫಲಾನುಭವಿಗಳಿಗೆ ರಿಫಿ ಲ್ಲಿಂಗ್ ಸಿಲಿಂಡರ್ ವಿತರಿಸಿ ಅವರು ಮಾತನಾಡಿದರು.
ಪ್ರಕೃತಿ ನಾಶದಿಂದ ಜೀವಸಂಕುಲಕ್ಕೆ ಆಪತ್ತು ಎದುರಾಗಲಿದೆ.ಆದ್ದ ರಿಂದ ತಾಲೂಕಿಗೆ ವರದಾನವಾಗಿರುವ ಕೊಂಡಕುರಿ ಅಭಯಾರ ಣ್ಯದ ಅಂಚಿನಲ್ಲಿರುವ ಗ್ರಾಮಗಳ ಜನತೆಯ ಜೊತೆ ಸಹವರ್ತನೆ ಯೊಂದಿಗೆ ನಡೆದುಕೊಂಡು ಮರಕಡಿಯುವುದನ್ನು ಮುಂಜಾಗ್ರ ತಾವಾಗಿ ಅಧಿಕಾರಿಗಳು ಜಾಗೃತಿ ಮೂಡಿಸಬೇಕು.ಕೊವಿಡ್ ಸಂದರ್ಭ ದಲ್ಲಿ ಆಮ್ಮಜನಕ ಪೂರೈಕೆಗೆ ಅಲೆದಾಡಿದ್ದನ್ನು ಯಾರೊ ಬ್ಬರೂ ಮರೆಯಬಾರದು ಎಂದು ಕಿವಿಮಾತು ಹೇಳಿದರು.
ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಶ್ರೀನಿವಾಸ್ ಮಾತನಾಡಿ, ಶೇ.33 ರಷ್ಟು ಕಾಡು ಬೆಳೆಸಲು ಸಾರ್ವಜನಿಕರು ಕೈಜೋಡಿಸ ಬೇಕು. ಇಲಾಖೆಯ ಸೌಲಭ್ಯಗಳನ್ನು ಸದುಪಯೋಗ ಪಡೆದು ಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಾಮಾಜಿಕವಲಯ ಅರಣ್ಯಾಧಿಕಾರಿ ಮಹೇಶ್ವ ರಪ್ಪ,ಅರಣ್ಯಾಧಿಕಾರಿಗಳಾದ ಮಹೇಶ್ ನಾಯ್ಕ, ಮಂಜಣ್ಣ,ರಮ್ಯ, ಪ.ಪಂ.ನಾಮನಿರ್ದೇಶಿತ ಸದಸ್ಯರಾದ ಜಯ್ಯಣ್ಣ, ಉಪನ್ಯಾಸಕ ಷಂಷುದ್ದೀನ್,ಸಿಬ್ಬಂದಿಗಳಾದ ಅಂಜಿನಪ್ಪ,ಚೇತನ್, ನಾಗರಾಜ್, ಮುಖಂಡರಾದ ಷಂಷುದ್ದೀನ,ಪಲ್ಲಾಗಟ್ಟೆ ಶೇಖರಪ್ಪ,ಗೌಸ್ ಪೀರ್,ಸೇರಿದಂತೆ ಇದ್ದರು.