ಪ್ರಜಾ ನಾಯಕ ಸುದ್ದಿ ಜಗಳೂರು :- ತಾಲೂಕಿನ ಬಸನಗೌಡ ತಂದೆ ಚಂದ್ರಪ್ಪ , 47 ವರ್ಷ. ಸ್ವಂತ ವಿಳಾಸ :-ಕೆಳಗೋಟೆ ಗ್ರಾಮ , ಜಗಳೂರು ತಾಲ್ಲೂಕು ದಾವಣಗೆರೆ ಜಿಲ್ಲೆ ಹಾಲಿ ವಾಸ :- ಕರಿ ಯಾಂಬಿಕಾ ದೇವಸ್ಥಾನದ ಬಳಿ,ನಿಟ್ಟುವಳ್ಳಿ , ದಾವಣಗೆರೆ ರವರ ಕೆಳಗೋಟೆ ಗ್ರಾಮದಲ್ಲರುವ ಮನೆ ಖಾತೆ ನಂ -23 ನೇ ದ್ದಕ್ಕೆ ಈ – ಸ್ವತ್ತು ಮಾಡಿಕೊಡಲು ಅರ್ಜಿ ಸಲ್ಲಿಸಿದ್ದು , ಕೆಚ್ಚೇನಹಳ್ಳಿ ಗ್ರಾಮ ಪಂಚಾಯ್ತಿ ಪಿಡಿಓ ರವರಾದ ಶ್ರೀ ನಂದಿ ಲಿಂಗೇಶ ಸಾರಂಗಮಠ ರವರು ಸದರಿ ಈ – ಸ್ವತ್ತು ಮಾಡಿಕೊಡಲು 10,000 / – ರೂ ಲಂಚದ ಹಣಕ್ಕೆ ಬೇಡಿಕೆ ಇಟ್ಟದ್ದು .
ಈ ಸಂಬಂಧ ದಿನಾಂಕ : 21-10-2023 ರಂದು ದಾವಣಗೆರೆ ಲೋಕಾಯುಕ್ತ ಪೊಲೀಸ್ ಠಾಣೆ ಗುನ್ನೆ ನಂ :- 18/2023 ಕಲಂ 7 ( ೩ ) ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ -1988 ( ತಿದ್ದುಪಡಿ ಕಾಯ್ದೆ -2018 ) ರೀತ್ಯ ಪ್ರಕರಣ ದಾಖಲಾಗಿ ತನಿಖೆ ಕೈಗೊಂಡಿ ರುತ್ತದೆ .
ಈ ದಿವಸ ದಿನಾಂಕ : 27-10-2023 ರಂದು ಮೇಲ್ದಂಡ ಪ್ರಕರ ಣದಲ್ಲಿ ಆರೋಪಿತರಾದ ಶ್ರೀ ನಂದಿ ಲಿಂಗೇಶ ಸಾರಂಗಮಠ ಎಸ್. ಎಂ ತಂದೆ ಭೀಮಲಿಂಗಯ್ಯ ,35 ವರ್ಷ,ಪಿಡಿಓ , ಕೆಚ್ಚೇನ ಹಳ್ಳಿ ಗ್ರಾಮ ಪಂಚಾಯ್ತಿ ,ಜಗಳೂರು ತಾಲ್ಲೂಕು ,ದಾವಣಗೆರೆ ಜಿಲ್ಲೆ ಮತ್ತು ಅಜ್ಜಯ್ಯ ಆರ್ ತಂದೆ ರುದ್ರೇಶ್ ,32 ವರ್ಷ ,ಡಾಟಾ ಎಂಟ್ರಿ ಆಪರೇಟರ್ , ಕೆಚ್ಚೇನಹಳ್ಳಿ ಗ್ರಾಮ ಪಂಚಾಯ್ತಿ,ಜಗಳೂರು ತಾಲ್ಲೂ ಕು ,ದಾವಣಗೆರೆ ಜಿಲ್ಲೆ ರವರುಗಳು ತಾಲ್ಲೂಕು ಪಂಚಾಯ್ತಿಯ ಕಛೇರಿಯಲ್ಲಿ ಫಿರ್ಯಾದಿ ಕಡೆ ಯಿಂದ 10,000 / – ರೂ ಗಳ ಲಂಚದ ಹಣವನ್ನು ಪಡೆಯುವಾಗ ಟ್ರ್ಯಾಪ್ ಆಗಿದ್ದು ,ಮುಂದಿನ ಕ್ರಮಕ್ಕಾಗಿ ದಸ್ತಗಿರಿ ಮಾಡಿರುತ್ತದೆ.
ಶ್ರೀ ಎಂ.ಎಸ್ ಕೌಲಾಪೂರೆ , ಪೊಲೀಸ್ ಅಧೀಕ್ಷಕರು , ಕರ್ನಾಟಕ ಲೋಕಾಯುಕ್ತ ,ದಾವಣಗೆರೆ ರವರ ಮಾರ್ಗದರ್ಶನದಲ್ಲಿ ಅಧಿ ಕಾರಿ ಮತ್ತು ಸಿಬ್ಬಂದಿಯವರು ಟ್ರ್ಯಾಪ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು ,ಟ್ರ್ಯಾಪ್ ಯಶಸ್ವಿಯಾಗಿರುತ್ತದೆ.