ಪ್ರಜಾ ನಾಯಕ ಸುದ್ದಿ ಜಗಳೂರು :- ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಸರಳಜೀವನ,ಆಡಳಿತ ವೈಖರಿ ಇಂದಿನ ರಾಜ ಕಾರಣಿಗಳಿಗೆ ಅದರ್ಶ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿ ದರು.
ಪಟ್ಟಣದ ಜನಸಂಪರ್ಕಕೇಂದ್ರದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ 39ನೇ ಪುಣ್ಯಸ್ಮರಣೆ ಹಾಗೂ ಸರ್ದಾರ್ ವಲ್ಲ ಭಾ ಯಿ ಪಟೇಲ್ ಅವರ ಜನ್ಮದಿನದ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪಾ ರ್ಚನೆ ಸಲ್ಲಿಸಿ ಅವರು ಮಾತನಾಡಿದರು.
ಇಂದಿರಾಗಾಂಧಿ ಅವರು ಆಗರ್ಭಶ್ರೀಮಂತನ ಮಗಳಾಗಿ ಜನಿಸಿ ಪುಟ್ಟಮನೆಯಲ್ಲಿ ವಾಸವಾಗಿ ಬಡವರ ಪ್ರತಿಬಿಂಬವಾಗಿ ತನ್ನದೇ ಜೀವನಶೈಲಿಯಲ್ಲಿ ಪ್ರತಿಯೊಬ್ಬರ ಬದುಕಿನ ಆಶಾಕಿರಣವಾಗಿದ್ದರು. ದೇಶಕ್ಕಾಗಿ ಗಾಂಧಿ ವಂಶದವರ ಪ್ರಾಣತ್ಯಾಗಮಯಿ ಜೀವನ ಅಜ ರಾಮರ ಎಂದು ಬಣ್ಣಿಸಿದರು.
ದೇಶದ ಒಗ್ಗೂಡಿಕೆಗಾಗಿ 1885 ರಲ್ಲಿ ಎ.ಓ.ಹ್ಯೂಮ್ ಅವರು ಸ್ಥಾಪಿ ಸಿದ ಕಾಂಗ್ರೆಸ್ ಪಕ್ಷ ದೇಶದ ಜನಪರ ಜನಪ್ರಿಯ ಆಡಳಿತಕ್ಕೆ ಕೈಗ ನ್ನಡಿಯಾಗಿದೆ.ದೇಶಕ್ಕೆ ಸ್ವಾತಂತ್ರ್ಯ,ತ್ರಿವರ್ಣಧ್ವಜ ಒದಗಿಸಿದ ಕಾಂಗ್ರೆ ಸ್ ಪಕ್ಷಕ್ಕೆ ಇತಿಹಾಸವಿದೆ.ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಆಡಳಿತ ಸರಕಾರ ನೀಡಿದ್ದ ಭರವಸೆಯ ಗ್ಯಾರಂ ಟಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಿದೆ.ಇದರ ಬಗ್ಗೆ ಅಪಪ್ರಚಾರಮಾಡಿದ್ದ ಬಿಜೆಪಿ ಪಕ್ಷದವರು ಮೊದಲಸರದಿಯಲ್ಲಿ ಫಲಾನುಭವಿಗಳಾಗಿ ಅನುಭವಿಸುತ್ತಿದ್ದಾರೆ.ಯಾರು ಈ ಸೌಲಭ್ಯ ಪಡೆದಿಲ್ಲ ಮಾಹಿತಿ ಕೊಡಿ ಎಂದು ಪ್ರಶ್ನಿಸಿದರು.
ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಕಛೇರಿಯಿಲ್ಲದೆ ಪಕ್ಷದ ಸಭೆ ನಡೆಸಲು ಸ್ಥಳಕ್ಕಾಗಿ ಪರದಾಡಬೇಕಿತ್ತು.ಇದೀಗ ಚಿರಪರಿಚಿತ ಪಟ್ಟಣ ಪಂಚಾ ಯಿತಿ ಹಳೇ ಕಟ್ಟಡ ಜನಸಂಪರ್ಕ ಕೇಂದ್ರವಾಗಿ ಸುಂದರ ವಿನ್ಯಾಸ ದಲ್ಲಿ ಅಲಂಕಾರಗೊಂಡು ,ಪುಸ್ತಕಗಳ ಜ್ಞಾನಭಂಡಾರವಾಗಿ ಮಾರ್ಪ ಟ್ಟಿದೆ.ನನಗೆ ಟಿಕೇಟ್ ಕೊಟ್ಟು ಗೆಲ್ಲಿಸಿದ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠಾವಂತನಾಗಿರುವೆ ಎಂದರು.
ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮಾತ ನಾಡಿ,ಇಂದಿರಾಗಾಂಧಿ ಅವರು ಪ್ರಧಾನಮಂತ್ರಿ ಯಾಗಿದ್ದ ವೇಳೆ ದೇಶಾಭಿಮಾನದ ಕೊರತೆ,ದೇಶದಲ್ಲಿ ಕ್ಷಾಮ ಆವರಿಸಿ ತುರ್ತುಪರಿ ಸ್ಥಿತಿಯಲ್ಲಿ ಜನತೆಗೆ ಒಪ್ಪತ್ತಿನ ಊಟಕ್ಕೂ ಕಷ್ಟವಿದ್ದಾಗ ಆಹಾರದಾ ಸ್ತಾನು ಪೂರೈಕೆಯೊಂದಿಗೆ,ನೆರೆಹೊರೆಯ ದೇಶಗಳ ಆಕ್ರಮಣ ದಿಂದ ರಕ್ಷಿಸಿ ಇಂದಿಗೂ ಜನಮಾನಸದಲ್ಲಿ ಉಳಿದಿದ್ದಾರೆ.ಅದರೆ ಕೇಂದ್ರದ ಬಿಜೆಪಿ ಆಡಳಿತ ಸರಕಾರ ಅವರ ಜಾತಿರಹಿತ ,ಜನಪರ ಕಾರ್ಯಕ್ರಮಗಳನ್ನು ಹಂತಹಂತವಾಗಿ ವಿಮುಖಗೊಳಿಸಿ ಇಂದಿ ರಾ ಗಾಂಧಿ ಅವರ ಹೆಸರನ್ನು ಅಳಿಸುವ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿದರು.
ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್ ಮಾತನಾಡಿ,ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ಖಲಿಸ್ಥಾನದಿಂದ ಭಾರತೀಯರ ನ್ನು ರಕ್ಷಿಸಿ ತಾನು ಅಂಗರಕ್ಷಕನ ಗುಂಡಿಗೆ ಬಲಿಯಾಗಿ ಹುತಾತ್ಮರಾ ದರು.ಪಾಕಿಸ್ತಾನ ಬಾಂಗ್ಲದೇಶವನ್ನು ವಿಭಜನೆಗೊಳಿಸಿದ ಧೀಮಂತ ಮಹಿಳೆ.ಶಿಕ್ಷಣ,ಆರೋಗ್ಯ,ಕೃಷಿ,ಪಂಚವಾರ್ಷಿಕ ಯೋಜನೆ,ಬಡತ ನ ನಿವಾರಣೆ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಜಾರಿ ಗೊಳಿಸಿದರು ಎಂದು ತಿಳಿಸಿದರು.
ಕೆಪಿಸಿಸಿ ಎಸ್ಸಿ ಘಟಕದ ಸಿ.ತಿಪ್ಪೇಸ್ವಾಮಿ ಮಾತನಾಡಿ,ಇತ್ತೀಚಿನ ಯುವಸಮೂಹದಲ್ಲಿ ದೇಶಾಭಿಮಾನ ಕ್ಷೀಣಿಸುತ್ತಿದೆ.ತುರ್ತು ಪರಿ ಸ್ಥಿತಿಯಲ್ಲಿ ರಷ್ಯಾ,ಅಮೆರಿಕಾ ದೇಶಗಳಲ್ಲಿ ಸಾಕುಪ್ರಾಣಿಗಳಿಗೆ ಬಳ ಸುತ್ತಿದ್ದ ಕೆಂಪು ಜೋಳವನ್ನು ಆಮದುಮಾಡಿ ದೇಶದ ಜನರನ್ನು ಬದುಕಿಸಿದರು.ಇಂತಹ ಕಾಂಗ್ರೆಸ್ ಪಕ್ಷದ ನಾಯಕರ ಕೊಡುಗೆ ಅಪಾರ ಎಂದರು.
” ಇನ್ನು ಮುಂದೆ ಪಟ್ಟಣದ ಶಾಸಕರ ಕಚೇರಿ ಮುಂಭಾಗ ನೂತ ನ ಕ್ಯಾಂಟೇನ್ ಉದ್ಘಾಟನೆ ಮಾಡಿ ನಂತರ ಮಾತನಾ ಡಿದ ಅವರು ಪ್ರತಿನಿತ್ಯ ಗರ್ಭಿಣಿ / ಬಾಣಂತಿಯರು ಮತ್ತು ಒಳರೋಗಿ ಗಳಿಗೆ ಕ್ಯಾಂಟೇನ್ ನಲ್ಲಿ ಉಚಿತ ಗಂಜಿ ಮತ್ತು ಬಿಸಿ ನೀರು ಮಾಡ ಲಾಗು ತ್ತಿದೆ ಅವ ಶ್ಯಕತೆ ಇರುವ ರೋಗಿ ಗಳು ಬಂದು ಈ ವ್ಯವಸ್ಥೆ ಯನ್ನು ಸದುಪಯೋಗಪಡಿಸಿ ಕೊಳ್ಳಬೇಕು “
– ಶಾಸಕ ಬಿ.ದೇವೇಂದ್ರಪ್ಪ
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್ ಸಮಾಜ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ ಪ.ಪಂ ಸದಸ್ಯ ರಮೇಶ್ ರೆಡ್ಡಿ ,ಮುಖಂಡರಾದ ಪಲ್ಲಾಗಟ್ಟೆ ಶೇಖರ ಪ್ಪ,ಕಾನನಕಟ್ಟೆ ಪ್ರಭು,ಓಬಣ್ಣ,ಪ್ರಕಾಶ್ ರೆಡ್ಡಿ,ಗುರುಮೂರ್ತಿ,ಕಾಟ ಪ್ಪ,ಅಹಮ್ಮದ್ ಅಲಿ,ಮಾಳಮ್ಮನಹಳ್ಳಿ ವೆಂಕಟೇಶ್,ಗುಡ್ಡದ ಲಿಂಗ ನ ಹಳ್ಳಿ ನಾಗರಾಜ್,ವಿಜ ಯ್ ಕೆಂಚೋಳ್,ಸತ್ಯಮೂರ್ತಿ, ಪ.ಪಂ ಸದಸ್ಯ ರಮೇಶ್ ರೆಡ್ಡಿ,ನಾಮನಿರ್ದೇಶಿತ ಸದಸ್ಯರಾದ ತಾನಾಜಿ, ಜಯ್ಯ ಣ್ಣ,ಶಾಂತ ಕುಮಾರ್,ಸೇರಿದಂತೆ ಇದ್ದರು.