ಪ್ರಜಾ ನಾಯಕ ಸುದ್ದಿ ಜಗಳೂರು :- ಅಂಬೇಡ್ಕರ್ ವೃತ್ತದ ನಾಮ ಕರಣ ಕಡ್ಡಾಯವಾಗಲಿ ಎಂದುಅಂಬೇಡ್ಕರ್ ಪುತ್ಥಳಿ ಸಮಿತಿ ಹಾ ಗೂ ಪ್ರಗತಿ ಪರ ಸಂಘಟನೆ ಮುಖಂಡರುಗಳು,ಅಧಿಕಾರಿಗಳು ಸಾರ್ವಜನಿಕರಿಗೆ ಜಾಗೃತಿಮೂಡಿಸಿದರು.
ಪಟ್ಟಣದ ಅಂಬೇಡ್ಕರ್ ವೃತ್ತದ ರಸ್ತೆಬದಿಯಲ್ಲಿನ ಅಂಗಡಿಗಳ ಬೋರ್ಡ್ ನಲ್ಲಿ ಕೆಇಬಿ ವೃತ್ತ ಎಂಬುದಕ್ಕೆ ಸಾಂಕೇತಿಕವಾಗಿ ಮಸಿ ಬಳಿಯುವ ಮೂಲಕ ಅಂಗಡಿ ಮಾಲಿಕರಿಗೆ ಮನವರಿಕೆ ಮಾಡಿ ದರು.
ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಮತ್ತು ನಿರ್ವಹಣಾ ಸಮಿತಿ ಅಧ್ಯ ಕ್ಷ ತುಪ್ಪದಹಳ್ಳಿ ಪೂಜಾರ್ ಸಿದ್ದಪ್ಪ ಮಾತನಾಡಿ,ದಶಕಗಳ ಕನಸಿ ನಂತೆ ಪಟ್ಟಣದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಪುತ್ಥಳಿ ಅನಾವರಣ ಗೊಂಡು ವರ್ಷಕಳೆದಿದೆ.ಆದರೂ ಸಾರ್ವಜನಿಕರ ಗಮನಕ್ಕೆ ಅಂಬೇಡ್ಕರ್ ವೃತ್ತ ಎಂಬುದು ಖ್ಯಾತಿಹೊಂದಿಲ್ಲ.ಕಾರಣ ಕೆಇಬಿ ಕಛೇರಿ ಹೊಂದಿದ್ದರಿಂದ ಕೆಇಬಿ ವೃತ್ತ ಎಂದು ಇಂದಿಗೂ ಮನೆ ಮಾತಾಗಿದೆ.ಕೂಡಲೇ ಪಟ್ಟಣಪಂಚಾಯಿತಿ ಅಧಿಕಾರಿಗಳು ವೃತ್ತ ದಲ್ಲಿನ ನೆರೆಹೊರೆಯ ಅಂಗಡಿ ಬೋರ್ಡ್ ಗಳಲ್ಲಿ ಅಂಬೇಡ್ಕರ್ ವೃತ್ತ ಎಂದು ಕಡ್ಡಾಯವಾಗಿ ನಮೂದಿಸಲು ಜಾಗೃತಿಮೂಡಿಸ ಬೇಕು ಎಂದು ಆಗ್ರಹಿಸಿದರು.
ಭಾರತ್ ಗ್ಯಾಸ್ ಏಜೆನ್ಸಿ ಮಾಲೀಕ ಓಬಣ್ಣ ಮಾತನಾಡಿ,ಅಂಬೇಡ್ಕ ರ್ ವೃತ್ತಕ್ಕೆ ಸಾರ್ವಜನಿಕರು ಗುರುತಿಸುವಂತಹ ಬೃಹದಾಕಾರದ ಡಿಜಿಟಲ್ ನಾಮಫಲಕ,ಲ್ಯಾನ್, ಅಳವಡಿಸಬೇಕು.ಪುತ್ಥಳಿ ಚೌಕಟ್ಟಿ ನಲ್ಲಿ ಸುತ್ತಲೂ ಹಸಿರೀಕರಣವನ್ನಾಗಿ ಮಾರ್ಪಡಿಸಿ.ವಾಹನ ಸಂಚಾರದಿಂದ ಅವಘಡ ಜರುಗದಂತೆ ಹೈಮಾಸ್ಟ್ ದೀಪದಿಂದ ರಾತ್ರಿ ಕಂಗೊಳಿಸುವಂತೆ ಮಾಡಬೇಕು ಎಂದು ಮನವಿ ಮಾಡಿ ದರು.
ತಹಶೀಲ್ದಾರ್ ಸಯ್ಯದ್ ಕಲೀಂ ಉಲ್ಲಾ ಮೌಖಿಕ ಮನವಿ ಸ್ಚೀಕರಿಸಿ ಮಾತನಾಡಿ,ದೇಶಕ್ಕೆ ಸಂವಿಧಾನ ಕೊಟ್ಟಂತಹ ಮಹಾನ್ ನಾಯಕ ಬಾಬಾಸಾಹೇಬರಿಗೆ ಪ್ರತಿಯೊಬ್ಬರೂ ಗೌರವಿಸಬೇಕು.ಹಲವು ವರ್ಷ ಗಳಿಂದ ಕೆಇಬಿ ಇಲಾಖೆ ಇರುವುದರಿಂದ ಜನರಲ್ಲಿ ರೂಢಿ ಯಾಗಿದೆ.ಇದೀಗ ಅಂಬೇಡ್ಕರ್ ಪುತ್ಥಳಿ ಹೊಂದಿದ್ದು.ಮುಂಬರು ವ ದಿನಗಳಲ್ಲಿ ಸ್ವಾಭಾವಿಕವಾಗಿ ಅಂಬೇಡ್ಕರ್ ವೃತ್ತದ ಪ್ರಚಾರವಾ ಗುತ್ತದೆ.ಹಾಗೂ ಅಗತ್ಯ ನಾಮಫಲಕ,ವಿದ್ಯುತ್ ದೀಪ ಅಳವಡಿಸಿ ಸುತ್ತಲೂ ಅಭಿವೃದ್ದಿಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸ್ಥಳಕ್ಕೆ ಶಾಸಕ ಬಿ.ದೇವೇಂದ್ರಪ್ಪ ಭೇಟಿ ಭರವಸೆ :- ಅಂಬೇಡ್ಕರ್ ವೃತ್ತಕ್ಕೆ ಶಾಸಕ.ಬಿ.ದೇವೇಂದ್ರಪ್ಪ ಭೇಟಿ ನೀಡಿ ನಾನು ಮೀಸಲಾತಿ ಯಡಿ ಕ್ಷೇತ್ರದಲ್ಲಿ ಶಾಸಕನಾಗಿ ಆಯ್ಕೆಯಾ ಗಿರುವೆ.ನಾನೊಬ್ಬ ಅಂಬೇ ಡ್ಕರ್ ಅಭಿಮಾನಿಯಾಗಿದ್ದು. ಅಂಬೇಡ್ಕರ್ ಪುತ್ಥಳಿಗೆ ನಮನ ಸಲ್ಲಿಸಿ.ನಂತರ ಅಂಬೇಡ್ಕರ್ ವೃತ್ತದ ಸರ್ವತೋಮುಖ ಅಭಿವೃದ್ದಿಗೆ ಬದ್ದನಾಗಿರುವೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೋಕ್ಯಾ ನಾಯ್ಕ,ಪಿಎಸ್ ಐ ಸಾಗರ್,ದಲಿತ ಸಂಘಟನೆ ಮುಖಂಡರಾದ ವಕೀಲ ಹನುಮಂತಪ್ಪ,ಕುಬೇಂದ್ರಪ್ಪ,ಸತೀಶ್,ಮಂಜಣ್ಣ,ಶಿವಣ್ಣ, ಕರಿಬಸಪ್ಪ,ಉಮೇಶ್,ಶಿವಮೂರ್ತಿ,ಗೌರಿಪುರ ಸತ್ಯಮೂರ್ತಿ,ಕಾನಿ ಪ ಸಂಘದ ತಾಲೂಕು ಅಧ್ಯಕ್ಷ ಚಿದಾನಂದಪ್ಪ,ಪ್ರಗತಿಪರ ಮುಖಂ ಡರಾದ ವ್ಯಾಸಗೊಂಡನಹಳ್ಳಿ ರಾಜಪ್ಪ ,ಧನ್ಯಕುಮಾರ್ ಎಚ್.ಎಂ. ಹೊಳೆ, ಮಾದಿಹಳ್ಳಿ ಮಂಜುನಾಥ್,ಸೇರಿದಂತೆ ಭಾಗವಹಿಸಿದ್ದರು.