ಪ್ರಜಾ ನಾಯಕ ಸುದ್ದಿ ಜಗಳೂರು :- ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗದಂತೆ ಅಧಿಕಾರಿಗಳು ಮುನ್ನಚ್ಚೆರಿಕೆ ವಹಿಸಬೇಕು ಎಂದು ಶಾಸಕ ಬಿ.ದೇವೇಂದ್ರಪ್ಪ ಅವರು ಸೂಚಿಸಿ ದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಬಿ. ದೇವೇಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ತಾಲೂಕು ಪಂಚಾ ಯಿತಿ 2 ನೇ ತ್ರೈಮಾಸಿಕ ಸಭೆಯಲ್ಲಿ ಅವರು ಮಾತನಾ ಡಿದರು.
ಮುಂಗಾರು ಮಳೆ ಕೊರತೆಯಿಂದ ಒಂದೆಡೆ ಬರದ ಛಾಯೆ, ಮ ತ್ತೊoದೆಡೆ ಅಂತರ್ಜಲದ ಮಟ್ಟ ಕುಸಿತದಿಂದಾಗಿ ಜನ ಜಾನುವಾ ರುಗಳಿಗೆ ಕುಡಿಯುವ ನೀರಿಗೂ ಆಹಾಕಾರ ಎದುರಾಗುವ ಆತಂಕ ವಿದೆ.ಆದ್ದರಿಂದ ಅಧಿಕಾರಿಗಳು ನೀರಿನ ಸಮಸ್ಯೆಯಿರುವ ಗ್ರಾಮಗ ಳಲ್ಲಿ ಕೊಳವೆಬಾವಿ ಕೊರೆಯಿಸಲು ತಯಾರಿಯಲ್ಲಿರ ಬೇಕು. ರೈತ ರಿಂದ ಖಾಸಗಿ ಕೊಳವೆಬಾವಿ ಯಿಂದ ಟ್ಯಾಂಕರ್ ಗಳ ಮೂಲಕ ನೀರಿನ ಪೂರೈಕೆಗೆ ಸನ್ನದ್ದರಾಗಬೇಕು.ಜಲಜೀವನ್ ಮಿಷನ್ ಯೋ ಜ ನೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದರು.
ಸರಕಾರದಿಂದ ಮಹಿಳೆಯರಿಗೆ ವರದಾನವಾಗಿರುವ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಖಾತೆಗೆ ಹಣಜಮಾವಾಗದೆ ತಾಂತ್ರಿಕ ದೋಷದಿಂದ ಬ್ಯಾಂಕ್ ಗಳಿಗೆ ಅಲೆದಾಡುತ್ತಿದ್ದಾರೆ. ಶೀಘ್ರ ದಲ್ಲೇ ಸರಿಪಡಿಸಿ ಕಾರ್ಯನಿರ್ಹಿಸಬೇಕು ಎಂದು ಶಾಸಕ ರು ಸಿಡಿ ಪಿಓ ಬಿರೇಂದ್ರಕುಮಾರ್ ಅವರಿಗೆ ತಿಳಿಸಿದರು. ಹೊಸದಾಗಿ ಗೃಹ ಲಕ್ಷ್ಮಿ ಯೋಜನೆಗೆ 36134 ಅರ್ಜಿಗಳು ಬಂದಿದ್ದಾವೆ ಎಂದು ಉತ್ತ ರಿಸಿದರು
ತೀವ್ರ ಪೀಡಿತ ಹಿನ್ನೆಲೆಯಲ್ಲಿ ಸಾರ್ವಜನಿಕರು ಗೃಹಲಕ್ಷ್ಮಿ ಯೋಜನೆ ಯಿಂದ ಜೀವನ ನಡೆಸುತ್ತಿದ್ದಾರೆ ಈ ತಾಂತ್ರಿಕ ಸಮಸ್ಯೆಯನ್ನು ಬಗೆ ಹರಿಸಲು ಬ್ಯಾಂಕ್ ಮ್ಯಾನೇಜರ್ಗಳು ಮತ್ತು ಪೋಸ್ಟ್ ಆಫೀಸ್ ಇ ಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತೇನೆ ಎಂದರು
ಸಮಾಜ ಕಲ್ಯಾಣ ಇಲಾಖೆ ಕಚೇರಿಗಳು ಸುಮಾರು ದಿನಗಳಿಂದ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದು ಈ ತಿಂಗಳ ಅಂತ್ಯಕ್ಕೆ ಪ.ಪಂ ಕ ಚೇರಿಯ ಮೊದಲನೇ ಮಾಡಿಯ ಕಟ್ಟಡದಲ್ಲಿ ಶಿಫ್ಟ್ ಆಗಬೇಕು ಎಂದು ಎಂದು ತಿಳಿಸಿದರು ಈ ತಿಂಗಳು ಶಿಫ್ಟ್ ಆಗದೇ ಹೋದರೆ ನಿಮ್ಮ ಸಂಬಳದಲ್ಲಿ ಪಾವತಿ ಮಾಡಿ ಏನೇ ಸಮಸ್ಯೆಗಳಿದ್ದರೆ ಜಿಲ್ಲಾ ಧಿಕಾರಿಗ ಳೊಂದಿಗೆ ಮಾತನಾಡಿ ನಾನು ಬಗೆಹರಿಸುತ್ತೇನೆ ಎಂದು ಪಾಪಂ ಮುಖ್ಯಧಿಕಾರಿ ಲೋಕ್ಯ್ ನಾಯ್ಕ್ ಸಮಾಜ ಕಲ್ಯಾಣ ಅಧಿ ಕಾರಿಗಳಿಗೆ ಸೂಚನೆ ನೀಡಿದರು
ಪಿ.ಡಿ.ಒ ಗಳು ಕ್ಷೇತ್ರದಲ್ಲಿ ಚೆನ್ನಾಗಿ ಕೆಲಸ ನಿರ್ವಹಿಸುತ್ತಿಲ್ಲ ನಾನು ಸಾಕ ಷ್ಟು ಬಾರಿ ಎಚ್ಚರಿಕೆ ನೀಡಿದ್ದೆ ಮೊನ್ನೆ ಅಷ್ಟೇ ನಂದಿ ಲಿಂಗೇಶ್ವರ ಸಾ ರಂಗ ಮಠ ಮತ್ತು ಕಂಪ್ಯೂಟರ್ ಆಪರೇಟರ್ ಲೋಕಾಯು ಕ್ತ ಬಲೆ ಗೆ ಬಿದ್ದು ಪಿಡಿಒ ಹುದ್ದೆಗೆ ಕಳಂಕ ತಂದಂ ತಾಗಿದೆ ಕಷ್ಟ ಬಂದಾಗ ನಿಮ್ಮ ಪರ ಯಾರು ಬರುವುದಿಲ್ಲ ಸೋಮಾರಿ ತನ ಬಿ ಟ್ಟು ಕ್ಷೇತ್ರದ ಲ್ಲಿ ಕೆಲಸ ನಿರ್ವಹಿಸಿ ತಪ್ಪು ಮಾಡಿ ದರೆ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇನೆ ಎಂದರು.
” ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ ನನ್ನ ಗ್ರಾಮದಲ್ಲಿ ಅಕ್ರಮ ಮಧ್ಯ ಮಾರಾಟವಾಗುತ್ತಿದೆ ಗುಡಾಂಗಡಿಯಲ್ಲಿ ಎಲ್ಲಿಂದರಲ್ಲಿ ಮ ಧ್ಯ ಮಾರಾಟವಾಗುತ್ತಿದೆ ಇದು ಸರಿಯಲ್ಲ ಎಂದು ಪೊಲೀಸ್ ಇನ್ಸ್ಪೆ ಕ್ಟರ್ ಶ್ರೀನಿವಾಸ್ ರಾವ್ ಅವರಿಗೆ ಸ್ಥಳಕ್ಕೆ ಭೇಟಿ ನೀಡಿ ನಿರ್ದಾ ಕ್ಷಣ ವಾಗಿ ಕ್ರಮ ಕೈಗೊಳ್ಳಿ ಕ್ಷೇತ್ರ ದಲ್ಲಿ ಎಗ್ಗ್ ಇಲ್ಲದೆ ಎಲ್ಲೆಲ್ಲಿ ಮಟ್ಕಾ ಇಸ್ಪೀ ಟ್ ದಂದೆ ನಡಿಯು ತ್ತಿದೆಯೋ ಅಲ್ಲಿ ಕಡಿವಾಣ ಹಾಕಿ ಸೂಕ್ತ ಕಾ ನೂನು ಕ್ರಮ ಕೈಗೊಳ್ಳಿ ಎಂದು ತಿಳಿಸಿದರು.”
ತಹಶೀಲ್ದಾರ್ ಸೈಯದ್ ಕಲೀಮುಲ್ಲಾ ಮಾತನಾಡಿ ಪಿಡಿ ಖಾತೆ ಯ ಲ್ಲಿ 42 ಲಕ್ಷ ರೂಗಳು ಇದ್ದು ಎಲ್ಲಿ ನೀರಿನ ಸಮಸ್ಯೆ ಆಗುತ್ತದೆ ಅಲ್ಲಿ ಬೋರ್ ವೆಲ್ ಕುರಿಸಲು ಮತ್ತು ಖಾಸಗಿ ಬೋರ್ವೆಲ್ ನಿಂದ ನೀ ರು ಖರೀದಿಸಲು ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳು ತ್ತೇನೆ ಸರ್ ಎಂದು ಶಾಸಕ ಬಿ.ದೇವೇಂದ್ರಪ್ಪ ಇವರಿಗೆ ತಿಳಿಸಿದರು
ಪ್ರಸಕ್ತಸಾಲಿನಲ್ಲಿ 464.6 ಮಿ.ಮೀ ಮಳೆಯಾಗಬೇಕಿತ್ತು.ಆದರೆ ಕೇ ವಲ 295.6 ಮಳೆಯಾಗಿದೆ.ಹಿಂಗಾರು ಹಂಗಾಮಿನಲ್ಲಿ ಕಡಲೆ, ಶೇಂಗಾ,ಸೂರ್ಯಕಾಂತಿ,ದ್ವಿದಳ,ಏಕದಳ ಬೆಳೆವಾರು ಬಿತ್ತನೆ ಬೀಜ ಗಳಿಗೆ ಒಟ್ಟು 9100 ಕ್ವಿಂಟಾಲ್ ಬೇಡಿಕೆಯಿದ್ದು. 1010 ಕ್ವಿಂಟಾಲ್ ದಾಸ್ತಾನು ಸಂಗ್ರಹವಿದೆ.ಯೂರಿ ಯಾ,ಡಿಎ ಪಿ,ಎಂ.ಓ.ಪಿ.ಎಸ್ ಎಸ್ ಪಿ ವಿವಿಧ ಸಂಯುಕ್ತ ಗೊಬ್ಬರಗಳಿಗೆ ರಸಗೊಬ್ಬರದ ಬೇಡಿಕೆ ಯಂತೆ ಒಟ್ಟು 3772.3 ಕ್ವಿಂಟಾಲ್ ದಾಸ್ತಾನು ಲಭ್ಯವಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇ ಶಕ ಮಿಥುನ್ ಕಿಮಾವತ್ ಮಾ ಹಿತಿ ನೀಡಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಸಾಧಿಕ್ ಉಲ್ಲಾ ಮಾಹಿತಿ ನೀಡಿ,ಜಲಜೀವನ್ ಮಿಷನ್ ಯೋಜನೆ ಯಡಿ ಅನುಮೋದನೆಗೊಂಡ ಒಟ್ಟು 167 ಕಾಮ ಗಾರಿಗಳಲ್ಲಿ 29 ಕಾಮಗಾರಿಗಳು ಪೂರ್ಣಗೊಂಡಿದ್ದು. 62 ಕಾಮಗಾರಿಗಳು ಟೆಂಡ ರ್ ಹಂತದ ಪ್ರಗತಿಯಲ್ಲಿವೆ.20 ಕಾಮಗಾರಿಗಳ ಪ್ರಕ್ರಿಯೆ ಆರಂಭ ವಾಗಿಲ್ಲ ಎಂದು ಪ್ರಗತಿವರದಿ ಮಂಡಿಸಿದರು.
ಬಿಇಓ ಹಾಲಮೂರ್ತಿ ಅವರು ಶಿಕ್ಷಣ ಇಲಾಖೆಯಡಿ ವಿವಿಧ ಗ್ರಾ ಮಗಳಲ್ಲಿನ ಶಿಥಿಲಗೊಂಡ ಶಾಲಾ ದುರಸ್ಥೀಕರಣ,ನೂತನ ಕೊಠ ಡಿಗಳ ನಿರ್ಮಾಣ ಗಳ ಪ್ರಗತಿ,ಶೈಕ್ಷಣಿಕ ಸೌಲಭ್ಯಗಳ ಗುರಿ,ಪ್ರಗತಿ ಗಳ ಬಗ್ಗೆ ಮಾಹಿತಿ ನೀಡಿದರು.
ಇದೇ ವೇಳೆ ವಿವಿಧ ಇಲಾಖೆಗಳಡಿ ವಿವಿಧ ಅಭಿವೃದ್ದಿ ಕಾಮಗಾರಿ ಗಳ ಪ್ರಗತಿ ವರದಿಯನ್ನು ಆಯಾ ಇಲಾಖೆಗಳ ಅನುಷ್ಠಾನ ಅಧಿ ಕಾರಿಗಳು ಸಲ್ಲಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಸಯ್ಯದ್ ಕಲೀಂ ಉಲ್ಲಾ , ತಾ. ಪಂ ಇ.ಓ ಕರಿಬಸಪ್ಪ, ಪೊಲೀಸ್ ಇನ್ಸ್ಪೆಕ್ಟರ್ ಶ್ರೀನಿವಾಸ್ ರಾವ್. ಪ.ಪಂ ಮುಖ್ಯಧಿಕಾರಿ ಲೋಕ್ಯ್ ನಾಯ್ಕ್. ಗ್ರೇಡ್ -2 ತಹಶೀಲ್ದಾರ್ ಮಂಜಾನಂದ,ಸೇರಿದಂತೆ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅನುಷ್ಠಾನ ಅಧಿಕಾರಿಗಳು ಭಾಗವಹಿಸಿದ್ದರು.