ಪ್ರಜಾ ನಾಯಕ ಸುದ್ದಿ ಜಗಳೂರು :- ವಿದ್ಯಾರ್ಥಿಗಳು ಸುಂದರ ಭವಿಷ್ಯ ರೂಪಿಸಿಕೊಂಡು ದೇಶದ ಸತ್ಪ್ರಜೆಗಳಾಗಿ ಹೊರಹೊಮ್ಮ ಬೇಕು ಎಂದು ಶಾಸಕ ಬಿ.ದೇವೇಂದ್ರಪ್ಪ ಕಿವಿಮಾತು ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದ್ದ 2023-24ನೇ ಸಾಲಿನ ಎನ್ ಎಸ್ ಎಸ್,ಸಾಂಸ್ಕೃ ತಿಕ,ಕ್ರೀಡಾ,ಯುವ ರೆಡ್ ಕ್ರಾಸ್,ರೋವರ್ಸ್,ಐಕ್ಯೂ ಎಸಿ,ಸಮಿತಿ ಗಳ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತ ನಾಡಿದರು.
ಸಮಾಜದಲ್ಲಿ ಅಕ್ಷರ ಜ್ಞಾನದಿಂದ ಅಂಧಕಾರ ನಿರ್ಮೂಲನೆ ಸಾಧ್ಯ. ಮನುಷ್ಯ ಭೂಮಿ ಮೇಲೆ ಜನಿಸಿದ ಮೇಲೆ ಸಾಧನೆಗೈದರೆ ಮಾತ್ರ ಜೀವನ ಸಾರ್ಥಕ.ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಅತ್ಯಗತ್ಯ.ಇಂದಿನ ಕಾರ್ಯಕ್ರಮದಲ್ಲಿ ಇರುವ ಶಿಸ್ತು ನನಗೆ ವಿಸ್ಮಯಗೊಳಿಸಿದೆ ಎಂದು ಪ್ರಶಂಸಿದರು.
ವಿದ್ಯಾರ್ಥಿ ಜೀವನ ಸ್ಮರಿಸಿದ ಶಾಸಕ :- ನಾನು ವ್ಯಾಸಂಗ ಮಾ ಡು ವಾಗ ಕೂಲಿಕೆಲಸಮಾಡಿದ್ದೆ.ಆದರೆ ನಿಮಗೆ ಅಂತಹ ಕಷ್ಟದ ಜೀವ ನ ಬಂದಿಲ್ಲ.ಸರಕಾರದ ಸೌಲಭ್ಯಗಳಿವೆ ಸದುಪಯೋಗ ಪಡೆದು ಕೊಳ್ಳ ಬೇಕು ಎಂದು ಸಲಹೆ ನೀಡಿದರು.
ಗ್ಯಾರಂಟಿ ಯೋಜನೆಗಳ ಜಾರಿಯಿಂದ ಸರಕಾರದ ಅನುದಾನದ ಕೊರತೆಯಿದೆ.ಮಾರ್ಚ್ ತಿಂಗಳ ನಂತರ ಕಾಲೇಜಿನ ಸರ್ವತೋ ಮು ಖ ಅಭಿವೃದ್ದಿಗೆ ಹೆಚ್ಚಿನ ಅನುದಾನತರುವೆ.ಬೇಡಿಕೆಯಂತೆ ಸಭಾಭವನ,ಸಾರಿಗೆ,ಮೂಲಸೌಕರ್ಯ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಬಂಡಾಯ ಸಾಹಿತಿ ನಿವೃತ್ತ ಪ್ರಾಂಶುಪಾಲ ಡಾ.ಸಿ.ಶಿವಲಿಂಗಪ್ಪ ಉ ಪನ್ಯಾಸ ನೀಡಿ,ಕಾಲೇಜು ಹಂತದಲ್ಲಿ ರಚಿಸಿರುವ ವಿವಿಧ ಸಮಿತಿ ಗಳು ಆಸಕ್ತಿದಾಯಕ ಕ್ಷೇತ್ರದಲ್ಲಿ ಅವ್ಯಕ್ತವಾದ ಪ್ರತಿಭೆಗಳ ಅನಾವರ ಣಕ್ಕೆ ಪೂರಕವಾಗಿರುತ್ತವೆ.ವಿದ್ಯಾರ್ಥಿ ಸಮೂಹ ಕಾಲೇಜು ಹಂತದ ಲ್ಲಿ ಮಾನಸಿಕ ಚಂಚಲತೆ ನಿಗ್ರಹಿಸಿ ವ್ಯಾಸಂಗಕ್ಕೆ ಮಹತ್ವ ಕೊಡಿ ನಿರ್ಲಕ್ಷ್ಯವಹಿಸಿ ಉಜ್ವಲ ಭವಿಷ್ಯಕ್ಕೆ ಸಂಚಕಾರ ತಂದುಕೊಳ್ಳಬೇಡಿ. ಪೋಷಕರ ಶ್ರಮ ಸಮಾಜದ ಅಭಿವೃದ್ದಿ ಚಿಂತನೆಯನ್ನು ಅವ ಲೋಕನಮಾಡಿಕೊಳ್ಳಬೇಕಿದೆ ಎಂದು ಕಿವಿಮಾತು ಹೇಳಿದರು.
ಎನ್ ಇಪಿ ಜಾರಿಯಿಂದ ಉನ್ನತ ಶಿಕ್ಷಣದಲ್ಲಿ ಯಶಸ್ಬಿ ಅಸಾಧ್ಯ ಎಂಬ ತಜ್ಞರ ವಾದವಿದೆ.ಕೌಶಲ್ಯ ನೆಪದಲ್ಲಿ ಪ್ರಸಕ್ತವಾಗಿ ಶಿಕ್ಷಣ ಮಾನವ ಕೇಂದ್ರಿತ ಶಿಕ್ಷಣ ಮಾರುಕಟ್ಟೆ ಕೇಂದ್ರಿತವಾಗುತ್ತಿದೆ.ಕೆಲ ವರ ಪಾಲಾಗಿ ಉಳಿದವರು ವಂಚಿತರಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ಸಂದರ್ಭ ದಲ್ಲಿ ಪ್ರಾಂಶುಪಾಲರಾದ ಡಾ.ರಾಜೇಶ್ವರಿ ಪೂಜಾರ್, ಪ.ಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ,ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್,ಮುಖಂಡರಾದ ಓಮಣ್ಣ,ಸಿಡಿಸಿ ಸದಸ್ಯರಾದ ಓಮಣ್ಣ,ಹಟ್ಟಿ ತಿಪ್ಪೇಸ್ವಾಮಿ,ಜೀವಣ್ಣ ಸಾಹಿತಿ ಡಿ.ಸಿ.ಮಲ್ಲಿಕಾರ್ಜು ನ್, ಮುಖಂಡರಾದ ಪಲ್ಲಗಟ್ಟೆ ಶೇಖರಪ್ಪ.ಪತ್ರಕರ್ತ ಲೋಕೇಶ್. ಮಹಮ್ಮಮದ್ ಗೌಸ್ ಪ್ರಾಧ್ಯಾಪಕರಾದ ಸತೀಶ್,ಸಲ್ಮಾತಾಜ್, ಚೈತ್ರಾ,ಅಮ ರೇಶ್,ಸೇರಿದಂತೆ ಇದ್ದರು.