ಪ್ರಜಾ ನಾಯಕ ಸುದ್ದಿ ಜಗಳೂರು :- ರಾಜಪ್ರಭುತ್ವಕ್ಕೆ ಇತಿಹಾಡಿ ಸಂವಿಧಾನದಡಿ ಪ್ರಜಾಪ್ರಭುತ್ವ ವ್ಯವಸ್ಥೆ ಕಲ್ಪಿಸಿದ ಸಂವಿಧಾನವೇ ಶ್ರೇಷ್ಠ ಎಂದು ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲ ಯ್ಯ ಅಭಿಮತ ವ್ಯಕ್ತಪಡಿಸಿದರು.
ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ದಲಿತ ಸಂಘರ್ಷ ಸಮಿತಿ ಹಾಗೂ ಪ್ರಗತಿ ಪರಸಂಘಟನೆ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಡಾ. ಬಿ. ಆರ್ .ಅಂಬೇಡ್ಕರ್ ಅವರ 67 ನೇ ಪರಿನಿಬ್ಬಣ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.
ಸಂವಿಧಾನ ಪೂರ್ವದಲ್ಲಿ ಮತದಾನದಹಕ್ಕು ಕೇವಲ ಒಂದು ವರ್ಗ ಕ್ಕೆ ಸೀಮಿತವಾಗಿತ್ತು.ಹಾಗೂ ರಾಜಮನೆತನದವರು ವಂಶ ಪರಂಪ ರೆಯಾಗಿ ಪರ್ಯಾಯವಾಗಿ ಆಡಳಿತದ ಅಧಿಕಾರ ಅನು ಭವಿಸುತ್ತಿದ್ದರು.ಆದರೆ ಸಂವಿಧಾನ ಜಾರಿಯಾದ ನಂತರ ದೇಶದ ಸಾಮಾನ್ಯ ಪ್ರಜೆಗೂ ಆಡಳಿತದ ಅಧಿಕಾರ ಲಭಿಸಲು ಹಾಗೂ ಅವಕಾಶ ವಂಚಿತ ಮಹಿಳೆಯರಿಗೂ ಸೇರಿದಂತೆ ಪ್ರತಿ ಯೊಬ್ಬಪ್ರ ಜೆಗೂ ಮತದಾನದ ಹಕ್ಕು ಚಲಾಯಿಸಲು ಅವಕಾಶ ಒದಗಿಸಿರು ವುದು ನಮ್ಮೆಲ್ಲರ ಸೌಭಾಗ್ಯ.ನಾನು ಎರಡು ಬಾರಿ ಜಿಲ್ಲಾಪಂಚಾಯಿ ತಿ ಸದಸ್ಯನಾಗಿ ಆಯ್ಕೆಯಾಗಿರುವೆ.ಸ್ಥಳೀಯ ಆಡಳಿತ ವಿಕೇಂದ್ರಿ ಕರಣದಲ್ಲಿ ತಾಲೂಕಿನಲ್ಲಿ ಸಾವಿರಾರು ಜನ ಅಧಿಕಾರ ಅನುಭವಿಸಿ ದ್ದರೂ ಪ್ರಜಾಪ್ರಭುತ್ವಕ್ಕೆ ಕಾರಣವಾದ ಬಾಬಾಸಾಹೇಬರನ್ನು ಮಾತ್ರ ಯಾರೋಬ್ಬರೂ ಸ್ಮರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮಹಿಳೆಯರು ಒಳಗೊಂಡಂತೆ ಶೋಷಿತ ವರ್ಗಕ್ಕೆ ವಿದ್ಯಾಭ್ಯಾಸಕ್ಕೆ ನಿರಾಕಾರಣೆಯಿದ್ದ ಸಂದರ್ಭದಲ್ಲಿ ಬಾಬಾಸಾಹೇಬರು ವಿದೇಶದಲ್ಲಿ ಅಭ್ಯಾಸ ಮಾಡಿ ದೇಶಕ್ಕೆ ಸಂವಿಧಾನ ರಚಿಸಿದ ಮಹಾನಾಯಕರಾ ಗಿದ್ದಾರೆ ಎಂದು ತಿಳಿಸಿದರು.
ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ,ನಾನು ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿರುವುದು ಡಾ.ಬಿ.ಆರ್.ಅಂಬೇಡ್ಕ ರ್ ಅವರ ಸಂವಿಧಾನದ ಕೊಡುಗೆಯಿಂದ.ನನ್ನ ಆಡಳಿತಾವಧಿ ಯಲ್ಲಿ ಪಟ್ಟಣದ ಕೇಂದ್ರಸ್ಥಾನದಲ್ಲಿ ಪುತ್ಥಳಿ ನಿರ್ಮಿಸಿ ಋಣತೀರಿಸಿ ರುವೆ ಎಂದರು.
ತಹಶೀಲ್ದಾರ್ ಸಯ್ಯದ್ ಕಲೀಂ ಉಲ್ಲಾ ಮಾತನಾಡಿ,ಡಾ.ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನದ ಬಿಕ್ಷೆಯಿಂದ ನಾವು ಬದುಕುತ್ತಿ ದ್ದೇವೆ.ಅವರ ಜೀವಿತಾವಧಿ ಯಲ್ಲಿ ಅಂದಿನ ಸಮಾಜದಲ್ಲಿ ಅನು ಭವಿಸಿದ ಸಾಮಾಜಿಕ ಶೋಷಣೆ,ಅಸ್ಪೃಶ್ಯತೆ, ಉಪದ್ರವಗಳು,ಸಂಕ ಷ್ಟಗಳನ್ನು ನೈಜಜೀವನಾಧಾರಿತ ಧಾರವಾಹಿ ಮಹಾನಾಯಕದಲ್ಲಿ ಚಿತ್ರೀಕರಣಗೊಂಡಿದೆ. ಪ್ರತಿಯೊಬ್ಬರೂ ವೀಕ್ಷಿಸಿ ಮನಗಾಣಬೇಕಿದೆ ಎಂದರು.
ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್ ಮಾತನಾಡಿ, ಬಾಬಾಸಾ ಹೇಬರ ಜನ್ಮ,ವಿದ್ಯಾಭ್ಯಾಸ,ಬೌದ್ದಧರ್ಮ ಸ್ವೀಕಾರ,ಏಕ್ಯ,ಹಾಗೂ ಅಂತ್ಯಸಂಸ್ಕಾರವಾದ ಸ್ಥಳಗಳು ಅವರ ಅನುಯಾಯಿಗಳಿಗೆ ಇಂದಿಗೂ ಪುಣ್ಯಭೂಮಿಗಳಾಗಿವೆ.ಅಂಬೇಡ್ಕರ್ ಅವರು ಕೇವಲ ಒಂದು ಜಾತಿಗೆ ಸೀಮಿತವಾಗಿಲ್ಲ ಅವರ ಸಂವಿಧಾನದ ಆಶಯಗ ಳು ಪಾಲನೆಯಾಗುತ್ತಿವೆ ಎಂದರು.
ಪೊಲೀಸ್ ನಿರೀಕ್ಷಕ ಶ್ರೀನಿವಾಸ್ ರಾವ್ ಮಾತನಾಡಿ,ಅಂಬೇಡ್ಕರ್ ಆಶಯದಂತೆ ಎಲ್ಲಾ ಸಮುದಾಯದವರು ಶಿಕ್ಷಣಕ್ಕೆ ಒತ್ತು ನೀಡ ಬೇಕಿದೆ ಶಿಕ್ಷಣದಿಂದ ಮಾತ್ರ ಸಮಾಜದ ಬದಲಾವಣೆ ಸಾಧ್ಯ ಸಂ ಘ ಟನೆಗಳು ವೈಮನಸ್ಸುಗಳಿಂದ ವಿಮುಖಗೊಳ್ಳುತ್ತಿವೆ. ಅಂಬೇಡ್ಕ ರ್ ಅವರ ಚರಿತ್ರೆ ವಿದೇಶಿಗಳಲ್ಲಿ ಪ್ರಾರಂಭವಾಗಿವೆ.ಆದರೆ ನಮ್ಮ ದೇಶದಲ್ಲಿ ಸೃಷ್ಠಿಸಿದ ಚರಿತ್ರೆ ಓದಲು ಸಮಯವಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮಾಜಕಲ್ಯಾಣ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ,ಪ.ಪಂ ಮುಖ್ಯಾಧಿಕಾರಿ ಲೋಕ್ಯಾ ನಾಯ್ಕ,ಡಿ.ಎಸ್.ಎಸ್ ತಾಲೂಕು ಅಧ್ಯಕ್ಷ ಕುಬೇಂದ್ರ ಪ್ಪ, ಅಂಬೇ ಡ್ಕರ್ ಪುತ್ಥಳಿ ನಿರ್ಮಾಣ ಸಮಿತಿ ಅಧ್ಯಕ್ಷ ತುಪ್ಪದಹಳ್ಳಿ ಸಿದ್ದಪ್ಪ,ದಲಿ ತ ಸಂಘಟನೆ ಒಕ್ಕೂಟದತಾಲೂಕು ಅಧ್ಯಕ್ಷ ರಾಜಪ್ಪ ವ್ಯಾಸಗೊಂಡ ನಹಳ್ಳಿ,ಕೆಪಿಸಿಸಿ ಎಸ್ ಸಿ ಘಟಕದ ಸಿ.ತಿಪ್ಪೇಸ್ವಾಮಿ, ಸಾಹಿತಿ ಎನ್ ಟಿ ಎರ್ರಿಸ್ವಾಮಿ, ದಲಿತ ಸಂಘಟನೆ ಹಿರಿಯ ಮುಖಂಡರಾದ ಸಿದ್ದಮ್ಮ ನಹಳ್ಳಿ ವೆಂಕಟೇಶ್.ಆದಿ ಜಾಂಬವ ವಿದ್ಯಾರ್ಥಿ ನಿಲಯದ ಕಾರ್ಯ ದರ್ಶಿ ಅಣಬೂರು ರಾಜಶೇಖರ್. ಶ್ರೀ ರಾಘವೇಂದ್ರ ವಿದ್ಯಾಸಂಸ್ಥೆಯ ಕಾರ್ಯದರ್ಶಿ ತಾಯಿಟೊಣಿ ಬಾಬು ರಾಜೇಂದ್ರ ಪ್ರಸಾದ್.ಗೌರಿಪುರ ಕುಬೇರಪ್ಪ.ಪ್ರಗತಿ ಪರ ಸಂಘಟನೆ ಮುಖಂಡ ರಾದ ಮಾದಿಹಳ್ಳಿ ಮಂಜುನಾಥ್.ಮಹಲಿಂಗಪ್ಪ ಸಮಾಜ ಕಲ್ಯಾಣ ಇಲಾಖೆ ಸಹಾ ಯಕ ನಿರ್ದೇಶಕ ಅಶೋಕ್,ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆ ಕಲ್ಯಾಣ ಅಧಿಕಾರಿ ಲೋಹಿತ್,ದಲಿತ ಮುಖಂಡ ರಾದ ಮಂಜಣ್ಣ, ರುದ್ರೇಶ್,ಕುಮಾರ್.ಅಹಮ್ಮದ್ ಅಲಿ,ನಜೀರ್ ಅಹಮ್ಮದ್ ಮರೇನಹಳ್ಳಿ ,ಮೆದಗಿನಕೆರೆ ಹನುಮಂತಪ್ಪ. ಮಾಜಿ ಪಟ್ಟಣ ಪಂಚಾಯತಿ ಸದಸ್ಯ ಮಂಜುನಾಥ್ ಸೇರಿದಂತೆ ಇದ್ದರು.