ಪ್ರಜಾ ನಾಯಕ ಸುದ್ದಿ ಜಗಳೂರು :-ವಿಧಾನಸಭಾ ಕ್ಷೇತ್ರವ್ಯಾಪಿ ನನ್ನ ಆಡಳಿತಾವಧಿಯಲ್ಲಿ ಶಾಂತಿ ಸುವ್ಯವಸ್ಥೆ,ಸಾಮರಸ್ಯತೆ ಕಾಪಾ ಡುವೆ ಎಂದು ಶಾಸಕ ಬಿ.ದೇವೇಂದ್ರಪ್ಪ ಅಭಿಪ್ರಾಯ ವ್ಯಕ್ತಪಡಿ ಸಿದರು.
ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಪೊಲೀಸ್ ಠಾಣೆ ನವೀಕ ರಣ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ದರು.
ಸಾರ್ವಜನಿಕರ ಸರ್ಕಾರಿ ಕಟ್ಟಡಗಳನ್ನು ತಮ್ಮ ಆಸ್ತಿಯಂತೆ ಕಾಪಾ ಡ ಬೇಕು.ತಾಲೂಕಿನಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳ ನಿಷ್ಠೆ,ಕರ್ತವ್ಯಪಾಲನೆಯಿಂದ ಶಾಂತಿ ನೆಮ್ಮದಿಯಿಂದ ಸಾರ್ವಜನಿ ಕರು ಜೀವನ ಸಾಗಿಸುತ್ತಿದ್ದಾರೆ.
ನಾನು ಶಾಸಕನಾಗಿ ಆಯ್ಕೆಯಾಗಿ ಇದೀಗ 8 ತಿಂಗಳು ಕಳೆದಿವೆ. ತಾಲೂಕಿನಲ್ಲಿ ಗಂಭೀರಸಮಸ್ಯೆಗಳನ್ನು ಹೊರತುಪಡಿಸಿದರೆ,ಚಿಕ್ಕ ಪುಟ್ಟ ಪ್ರಕರಣಗಳಿಗೆ ಎಫ್ ಐ ಆರ್ ಗೆ ಅವಕಾಶ ನೀಡದೆ.ರಾಜಿ ಸಂಧಾನ,ಶಾಂತಿ ಸಭೆಯ ಮೂಲಕ ದೂರು ಅರ್ಜಿಗಳ ವಿಲೆವಾರಿ ಮಾಡಲು ಸೂಚಿಸಿರುವೆ.ಕ್ಷೇತ್ರದಲ್ಲಿ ಜಾತ್ಯಾತೀತ,ಧರ್ಮಾತೀತ, ಪಕ್ಷಾತೀತವಾಗಿ ಸಾಮರಸ್ಯ ಜೀವನಕ್ಕೆ ಅವಕಾಶ ಕಲ್ಪಿಸುವೆ ಎಂದು ವಾಗ್ದಾನಮಾಡಿದರು.
ಸಾರ್ವಜನಿಕರು ಸಮಾಜದಲ್ಲಿ ಅಶಾಂತಿ,ಕೃತ್ಯ,ಅಪರಾಧಗಳಿಂದ ದೂರವಿದ್ದು.ಮಹಾತ್ಮ ಗಾಂಧಿಜಿ ಕಂಡ ರಾಮರಾಜ್ಯದ ಕನಸ್ಸು ನನ ಸು ಮಾಡಬೇಕು.ಕ್ಷೇತ್ರದ ಅಭಿವೃದ್ದಿಗೆ ಮುಖ್ಯಮಂತ್ರಿ ಸಿದ್ದರಾಮ ಯ್ಯ ₹25 ಕೋಟಿ ಅನುದಾನ ಬಿಡುಗಡೆಮಾಡಿದ್ದು.ಅದರಲ್ಲಿ ಪೊಲೀಸ್ ಇಲಾಖೆಯ ಹಳೇಯ ವಸತಿಗೃಹಗಳನ್ನು ದುರಸ್ಥಿಗೊಳಿ ಸುವೆ ಎಂದು ಭರವಸೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್ ಮಾತನಾಡಿ, ಠಾಣಾಧಿಕಾರಿಯ ಇಚ್ಛಾಶಕ್ತಿಯಿಂದ ಇಂದು ಪೊಲೀಸ್ ಠಾಣೆ ದುರಸ್ಥಿಗೊಂಡು ಸುಂದರ ವಿನ್ಯಾಸದಲ್ಲಿ ಕಂಗೊಳಿಸುತ್ತಿದೆ. ಪೊಲೀಸ್ ಎಂದರೆ ಭಯ ಅಲ್ಲ ಭರವಸೆ ಅನ್ನೋದು ಸಾರ್ವಜನಿ ಕರು ಮನಗಂಡು ಸಾರ್ವಜನಿಕರು ಕೈಜೋಡಿಸಿದಾಗ ಮಾತ್ರ ಜನಸ್ನೇಹಿ ಪೊಲೀಸ್ ಆಗಲು ಸಾಧ್ಯ ಇದಕ್ಕೆ ಜಗಳೂರು ಒಂದು ನಿದರ್ಶನವಾಗಿದೆ ಎಂದು ಪ್ರಶಂಸಿದರು.
ಇಂದು ವಿಶ್ವ ಹೆಣ್ಣುಮಕ್ಕಳ ದಿನಾಚರಣೆಯಾಗಿದ್ದು.ಪೋಷಕರು ಹೆಣ್ಣು ಮತ್ತು ಗಂಡು ಮಕ್ಕಳ ಮಧ್ಯೆ ತಾರತಮ್ಯ ತೊರೆದು ಸಮಾನ ಶಿಕ್ಷಣಕ್ಕೆ ಒತ್ತು ಕೊಡಿ.ಹೆಚ್ಚುತ್ತಿರುವ ಫೊಕ್ಸೋ ಪ್ರಕರಣಗಳು,ಮಹಿ ಳೆಯರ ಮೇಲಿನ ದೌರ್ಜನ್ಯಗಳು ಕೊನೆಯಾಗಬೇಕು.ಮಹಿಳೆಯ ರನ್ನು ಗೌರವಿಸಬೇಕು.ಪೊಲೀಸ್ ಇಲಾಖೆಯ ಅಧಿಕಾರಿಗಳು ದೂರುಗಳಿಗೆ ತಕ್ಷಣ ಸ್ಪಂದಿಸದಿದ್ದರೆ.ಲೋಕಸ್ಪಂದನಾ,ಇ.ಆರ್ ಎಸ್ ಎಸ್ ಸಹಾಯವಾಣಿಗೆ ಕರೆ ಮಾಡಿ ಎಂದು ಸಲಹೆ ನೀಡಿ ದರು.
ಇದೇ ವೇಳೆ ಕಳವಾಗಿದ್ದ ಮೊಬೈಲ್ ಗಳನ್ನು ವಾರಸುದಾರರಿಗೆ ಮರಳಿ ಒದಗಿಸಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯ ಕುಮಾರ್,ಮಂಜುನಾಥ್,ಡಿ ಎಸ್ ಪಿ ಬಸವರಾಜ್,ತಹಶೀಲ್ದಾರ್ ಸಯ್ಯದ್ ಕಲೀಂ ಉಲ್ಲಾ,ಪೊಲೀಸ್ ಇನ್ಸ್ ಪೆಕ್ಟರ್ ಶ್ರೀನಿವಾಸ್ ರಾವ್,ಪಿಎಸ್ ಐ ಸಾಗರ್,ಮುಖಂಡರಾದ ಪಲ್ಲಾಗಟ್ಟೆ ಶೇಖರಪ್ಪ, ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್, ಬಿ.ಮಹೇಶ್ವರಪ್ಪ,ಸಿ.ಲಕ್ಷ್ಮ ಣ,ಮಂಜುನಾಥ್,ಅನೂಪ್ ರೆಡ್ಡಿ,ಶಂಭುಲಿಂಗಪ್ಪ,ಹಟ್ಟಿ ತಿಪ್ಪೇ ಸ್ವಾಮಿ,ತಿಮ್ಮಣ್ಣ,ಷಂಷುದ್ದೀನ್,ಸೇರಿದಂತೆ ,ಪೊಲೀಸ್ ಸಿಬ್ಬಂದಿ ಗಳು ಭಾಗವಹಿಸಿದ್ದರು.