ಪ್ರಜಾ ನಾಯಕ ಸುದ್ದಿ ಜಗಳೂರು :- ಜಾತ್ಯಾತೀತ ರಾಷ್ಟವಾದ ಭಾರ ತಕ್ಕೆ ವಿಶ್ವಕ್ಕೆ ಮಾದರಿಯಾಗುವಂತ ಸಂವಿಧಾನವನ್ನು ರಚಿಸಿದ ಕೀರ್ತಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದು ಶಾಸಕ ಬಿ.ದೇವೇಂದ್ರಪ್ಪ
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ರವ ರ ಜನ್ಮದಿನಾಚರಣೆಯ ಅಂಗವಾಗಿ ದಲಿತ ಸಂಘರ್ಷ ಸಮಿತಿಯ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವ ಚಿತ್ರಕ್ಕೆ ಪುಷ್ಪಗಳನ್ನು ಅರ್ಪಿಸಿದ ನಂತರ ಮಾತನಾಡಿದ ಅವರು, ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿoದಲೇ ಸರ್ವರಿಗೂ ಸಮಪಾಲು, ಸಮಬಾಳು ತತ್ವದಡಿ ಸೌಭ್ಯ ಗಳು ದೊರೆ ಯುವಂತಾಗಿದೆ. ಅಂಬೇಡ್ಕರ್ರವರ ತತ್ವಾದರ್ಶಗಳನ್ನು ನಾವೆಲ್ಲ ರು ಅಳಡಿಸಿ ಕೊಳ್ಳಬೇಕಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಜಗಳೂರು ಪಟ್ಟಣದ ಡಾ.ಅಂಬೇಡ್ಕರ್ ವೃತ್ತ ದಲ್ಲಿ ಬಳಿ ಇರುವ ಡಾ.ಬಿ.ಆರ್ ಅಂಬೇಡ್ಕರ್ ಪುತ್ತಳಿಗೆ ಶಾಸ ಕ ಬಿ ದೇವೇಂದ್ರಪ್ಪ.ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ. ಸೇರಿದಂತೆ ದಲಿತ ಮುಖಂಡರು ಪುಷ್ಪ ನಮನ ಸಲ್ಲಿಸುವ ಮೂಲ ಕ ಗೌರವ ಸಮರ್ಪಣೆ ಸಲ್ಲಿಸಿದರು.
ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮಾತ ನಾಡಿ ಎಲ್ಲರ ಒಳಿತಿಗಾಗಿ ಇದೆ ಸಂವಿಧಾನದಿಂದ ಮಾತ್ರ ಈ ಈ ದೇಶು ಅಭಿವೃದ್ಧಿ ಕಾಣಲು ಸಾಧ್ಯವಾಗಿದೆ ಆದ್ದರಿಂದ ಅಂಬೇಡ್ಕರ್ ಅವರ ಬರೆದಿರುವಂತಹ ಸಂವಿಧಾನವನ್ನು ಅಧ್ಯಯನ ಮಾಡುವುದು ಅವ ಶ್ಯ ಎಂದು ಹೇಳಿದರು.ಭಾರತದ ಕಾನೂನು ಅಸ್ಪೃಶ್ಯತೆ ನಿವಾ ರಣೆಯಾಗ ಬೇಕು.ಜನಸಾಮಾನ್ಯರಿಗೆ ಮೂಲಭೂತ ಕರ್ತವ್ಯ ಸಮಾ ನತೆ ಶಿಕ್ಷಣ ಕ್ಷೇತ್ರ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಅವರು ನೀಡಿದ ಕೊಡುಗೆಯನ್ನು ಸ್ಮರಿಸಲು ಪ್ರತಿ ವರ್ಷವೂ ಅಂಬೇಡ್ಕ ರ್ ಜಯಂತಿ ಯನ್ನು ಶಾಲಾ-ಕಾಲೇಜುಗಳು ಸರ್ಕಾರಿ ಖಾಸಗಿ ಕಚೇರಿಗಳಲ್ಲಿ ಆಚರಣೆ ಮಾಡಲಾಗುತ್ತದೆ ಎಂದರು.
ದಲಿತ ಮುಖಂಡ ಶಂಭುಲಿಂಗಪ್ಪ ಮಾತನಾಡಿ, ಅಂಬೇಡ್ಕರ್ ಅಂದಿ ನ ಪರಿಸ್ಥಿತಿಯಲ್ಲಿ ಅವರು ಪಟ್ಟ ನೋವು ಕಷ್ಟ ವೇದನೆ ಯಾರು ಕೂಡ ಅನುಭವಿಸಿಲ್ಲ ಆದ್ದರಿಂದ ಅವರ ಶ್ರಮವು ಅರಿವು ಎಲ್ಲರಿಗೂ ಕೂಡ ತಿಳುವಳಿಕೆಯಾಗಬೇಕಾಗಿದೆ.ಜೀವನದ ಆರಂಭ ದಿಂದ ಮರಣದವರಿಗೂ ಅವಮಾನ ಅನುಭವಿಸಿ ಜನರಿಗೆ ಸುಖ ಶಾಂತಿ ಕೊಟ್ಟು ಮಹಾನ್ ತ್ಯಾಗಿ ಯಾಗಿದ್ದಾರೆ
ಈ ಸಂಧರ್ಭದಲ್ಲಿ ನಿವೃತ್ತ ಸಮಾಜ ಕಲ್ಯಾಣ ಅಧಿಕಾರಿ ಬಿ. ಮಹೇಶ್ವ ರಪ್ಪ.ಸಿ.ತಿಪ್ಪೇಸ್ವಾಮಿ.ಗ್ಯಾಸ್ ಓಬಣ್ಣ. ಮಾಯಣ್ಣ.ಹಟ್ಟಿ ತಿಪ್ಪೇಸ್ವಾಮಿ.ಚೀತಪ್ಪ.ಇಕ್ಬಾಲ್ ಅಹಮದ್.ಪಾಪಣ್ಣ.ಕುರಿ ಜಯಣ್ಣ. ತಾನಾಜಿ ಗೋಸಾಯಿ.ಪಲ್ಲಾಗಟ್ಟೆ ಶೇಖರಪ್ಪ .ಶಿವಣ್ಣ.ವಿಜಯ್. ಮಾರತಿ. ಮಹಮ್ಮದ್ ಗೌಸ್.ಹರೀಶ್ ರಡ್ಡಿ.ಹಾಲೇಶ್. ನಿಬಗೂರು ಪರಸಪ್ಪ.ಹನುಮoತಪ್ಪ.ಕಾಟಪ್ಪ.ಸೇರಿದಂತೆ ದಲಿತ ಮುಖಂಡರು ಸಾರ್ವಜನಿಕರು ಇದ್ದರು