ಪ್ರಜಾ ನಾಯಕ ಸುದ್ದಿ ಜಗಳೂರು :- ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳನ್ನು ಅರಿತು ಯುವ ಸಮೂಹ ಜಾಗೃತರಾಗಬೇಕಿದೆ ಎಂದು ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯಾ ಧ್ಯಕ್ಷ ಕೆ.ಪಿ.ಪಾಲಯ್ಯ ಸಲಹೆ ನೀಡಿದರು.
ಪಟ್ಟಣದ ಪ್ರೇರಣಾ ಟ್ರಸ್ಟ್ ಸಭಾಂಗಣದಲ್ಲಿ ಮಾನವಬಂಧುತ್ವ ವೇದಿಕೆವತಿಯಿಂದ ಹಮ್ಮಿಕೊಂಡಿದ್ದ 133 ನೇ ಡಾ.ಬಿ.ಆರ್. ಅಂಬೇಡ್ಕರ್ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.
ಶೋಷಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ,ಎಲ್ಲಾ ವರ್ಗದ ಮಹಿಳೆಯರಿಗೆ ಶಿಕ್ಷಣ,ಸಮಾನತೆ,ಆಸ್ತಿ ಹಕ್ಕಿನಲ್ಲಿ ಮೀಸಲಾತಿ ಕಲ್ಪಿ ಸಿದ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಮಾಜಕ್ಕೆ ಬೆಳಕು ನೀಡಿ ದ ಆಶಾಕಿರಣವಾದರು.ಆದರೆ ಮೀಸಲಾತಿ ಅನುಭವಿಸುತ್ತಿರುವ ಸಮುದಾಯದವರೇ ಸಂವಿಧಾನ ವಿರೋಧಿಗಳಿಗೆ ಬೆಂಬಲಿಸುತ್ತಿ ದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಮಾನವ ಬಂಧುತ್ವ ವೇದಿಕೆ ಮೂಲಕ ಬುದ್ದ,ಬಸವ, ಅಂಬೇಡ್ಕರ್ ಅವರ ಆದರ್ಶಗಳನ್ನು ಸಮಾಜಕ್ಕೆ ತಿಳಿಸಲಾಗುತ್ತಿದೆ. ಸುಳ್ಳು ಪ್ರಚಾರಮಾಡುತ್ತಿರುವ ಕೋಮುವಾದಿಗಳ ಮಧ್ಯೆ ತಾಲೂಕಿ ನಲ್ಲಿ ಮಾನವಬಂಧುತ್ವ ವೇದಿಕೆ ಕಛೇರಿ ತೆರೆದು ವಿಚಾರವಂತರು ಪ್ರತಿ ಗ್ರಾಮಪಂಚಾಯಿತಿ ವ್ಯಾಪ್ತಿ ಮಹಾನೀಯರ ಕುರಿತು ನೈಜ ವೈ ಚಾರಿಕೆತೆ ದೃಷ್ಠಿಕೋನದ ಪ್ರಚಾರ ನಡೆಸಬೇಕಿದೆ ಕಳೆದ ಹತ್ತು ವರ್ಷಗಳಿಂದ ಹಲವು ಕಾರ್ಯಕ್ರಮಗಳನ್ನ ಮಾಡುತ್ತಲೆ ಬಂದಿ ದ್ದೇವೆ ಮುಂದೆಯೂ ಸಹ ಎಲ್ಲಾ ದಾರ್ಶನಿಕರ ಜಯಂತೋತ್ಸವ ಹಾಗು ವೈಚಾರಿಕ ವೈಜ್ಞಾನಿಕ ಪ್ರಗತಿಪರ ವಿಚಾರಧಾರೆಗಳಿಗೆ ನಮ್ಮ ಚಳುವಳಿ ಸಾಗಲಿದೆ ಎಂದು ಹೇಳಿದರು ಎಂದು ಕರೆ ನೀಡಿ ದರು.
ಹಿರಿಯ ಪತ್ರಕರ್ತ ಹಾಗೂ ವಕೀಲ ಡಿ.ಶ್ರೀನಿವಾಸ್ ಮಾತನಾಡಿ, ಶೋಷಿತ ಸಮುದಾಯಗಳ ಶೋಷಣೆಯಿಂದ ವಿಮೋಚನೆಗಾಗಿ ರಚಿಸಿದ ಅಂಬೇಡ್ಕರ್ ಅವರ ಸಂವಿಧಾನ ಬಗ್ಗೆ ಮೇಲ್ವರ್ಗದ ಸ ಮುದಾಯಗಳಿಂದ ವ್ಯಾಪಕ ಅಸಹನೆಯಿದೆ.ಸಂವಿಧಾನದ ಜಾರಿ ಗೊಂಡನಂತರ ದಶಕಗಳಿಂದಲೂ ಮೀಸಲಾತಿ ಅನುಭವಿಸುತ್ತಿರು iವವರ ಮೇಲೆ ಪಟ್ಟಭದ್ರ ಹಿತಾಸಕ್ತಿಗಳಿಂದ ದಬ್ಬಾಳಿಕೆ,ಹಲ್ಲೆಗಳು ನಡೆಯುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಸಂವಿಧಾನ ಬದಲಾವಣೆ ಹೇಳಿಕೆ ಹಾಸ್ಯಾಸ್ಪದ.ಕೆಲವೊಬ್ಬ ರಾಜ ಕಾ ರಣಿಗಳಿಂದ ಸಂವಿಧಾನ ವಿರೋಧಿಹೇಳಿಕೆ ಹಾಗೂ ಜಂತರ್ ಮಂಥರ್ ನಲ್ಲಿನ ಸಂವಿಧಾನ ಕೈಪಿಡಿ ಸುಟ್ಟುಹಾಕಿರುವುದು ಅಂಬೇಡ್ಕರ್ ವಾದಿಗಳ ಮೇಲೆ ಭಾವನಾತ್ಮಕ ಹಲ್ಲೆನಡೆಸುವ ಹು ನ್ನಾರ ಗಳು.ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರೂ ರಾಜ ಕೀಯ ಪ್ರಜ್ಞೆ ಹೊಂದುವ ಮೂಲಕ ಸಂವಿಧಾನ ವಿರೋಧಿಗಳಿಗೆ ಮತನೀಡಬಾರದು ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಮಾನವಬಂಧುತ್ವ ವೇದಿಕೆಯ ಜಿಲ್ಲಾ ಸಂಚಾ ಲಕ ವಕೀಲ ಮರೇನಹಳ್ಳಿ ಟಿ.ಬಸವರಾಜ್,ತಾಲೂಕು ಸಂಚಾಲಕ ಧನ್ಯಕುಮಾರ್.ಪ್ರಾಂಶುಪಾಲರಾದ ನಾಗಲಿಂಗಪ್ಪ ,ಪಾಧರ್ ಸಲ್ವೆ ಸ್ಟರ್ ಸನ್,ವಕೀಲ ರಾದ ಸಣ್ಣೋಬಯ್ಯ. ನಾಗೇಶ್, ಕರಿಬಸಪ್ಪ, ರುದ್ರೇಶ್,ಮರೇನಹಳ್ಳಿ ತಿಪ್ಪೇಸ್ವಾಮಿ.ಉಮಾಪತಿ.ಮಹಾಂತೇಶ್ ಮುಖಂಡರಾದ ಜಯಣ್ಣ.ಎಂ.ಎಸ್.ನಜೀರ್ ಅಹ್ಮದ್ ,ಮಾದಿ ಹಳ್ಳಿ ಮಂಜುನಾಥ್, ಗ್ರಾ.ಪಂ.ಅಧ್ಯಕ್ಷ ತಿಪ್ಪೇಸ್ವಾಮಿ, ಮಲೆ ಮಾಚಿ ಕೆರೆ ಸತೀಶ್. ಜೀವನ. ಕರಿಬಸಪ್ಪ.ರಾಜು ತಿಪ್ಪೇಸ್ವಾಮಿ. ಮಹ ಬೂಬ್ ಸಾಬ್. ವಿಜಯ್ ಕೆಂಚೋಳ್. ನಿಂಗರಾಜ್.ರಂಗಸ್ವಾಮಿ, ಅಂಬೇಡ್ಕರ್ ಪುತ್ತಳಿ ಸಮಿತಿ ಅಧ್ಯಕ್ಷ ಪೂಜಾರ್ ಸಿದ್ದಪ್ಪ ,ಹೇಮ ರೆಡ್ಡಿ, ಪೈಲ್ವಾನ್ ತಿಪ್ಪೇಸ್ವಾಮಿ,ಕಿರಣ್ ಕುಮಾರ್, ರಮೇಶ್,ಗೋಗು ದ್ದು ತಿಪ್ಪೇಸ್ವಾಮಿ, ಕರಿಬಸಪ್ಪ ,ಗೌರಿಪುರ ರಾಜು.ಸೇರಿದಂತೆ ಅನೇಕರು ಇದ್ದರು