ಪ್ರಜಾ ನಾಯಕ ಸುದ್ದಿ ಜಗಳೂರು :- ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿ ತಾಂ ಶ ದಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷದಿಂದ ಪ್ರಥಮ ಸ್ಥಾನದಲ್ಲಿದ್ದ ಜಗಳೂರು ತಾಲ್ಲೂಕು ಈ ಬಾರಿ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದು, ಸರ್ಕಾರಿ ಶಾಲೆಗಳು ಕಳಪೆ ಸಾಧನೆ ಮಾಡಿವೆ.
ತಾಲ್ಲೂಕಿಗೆ ಈ ಬಾರಿ ಶೇ.70ರಷ್ಟು ಫಲಿತಾಂಶ ಬಂದಿದ್ದು, ಜಿಲ್ಲೆ ಯಲ್ಲಿ ನಾಲ್ಕನೇ ಸ್ಥಾನ ಪಡೆದಿದೆ. ಕಳೆದ ವರ್ಷ ಶೇ96 ರಷ್ಟು ಫಲಿತಾಂಶ ಬಂದಿತ್ತು. ಈ ಬಾರಿ ಫಲಿತಾಂಶದಲ್ಲಿ ಒಟ್ಟಾರೆ ಶೇ 26 ರಷ್ಟು ಕಡಿಮೆಯಾಗಿದೆ.
ತಾಲ್ಲೂಕಿನಲ್ಲಿ 1134 ಬಾಲಕಿಯರು 1187 ಬಾಲಕರು ಸೇರಿದಂತೆ ಒಟ್ಟು 2321 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದರು 1625 ವಿದ್ಯಾ ರ್ಥಿಗಳು ತೇರ್ಗಡೆಯಾಗಿದ್ದಾರೆ. ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿನಿ ಯರು ಮೇಲುಗೈಸಾಧಿಸಿದ್ದಾರೆ.
ಸರ್ಕಾರಿ, ಹಾಗು ಖಾಸಗಿ ಸೇರಿದಂತೆ ಕಳೆದ ಬಾರಿ23 ಪ್ರೌಢಶಾಲೆ ಗಳಲ್ಲಿ ಶೇ100ರಷ್ಟು ಫಲಿತಾಂಶ ಬಂದಿತ್ತು. ಆದರೆ ಈ ಬಾರಿ ಕೇವಲ 3 ಶಾಲೆಗಳು ಮಾತ್ರ ಶೇ100 ಫಲಿತಾಂಶ ಸಾಧನೆ ಮಾಡಿವೆ.
ತಾಲ್ಲೂಕಿನ ಮುಗ್ಗಿದರಾಗಿಹಳ್ಳಿಯ ಮೊರಾರ್ಜಿ ವಸತಿ ಶಾಲೆ,ಉದ್ದ ಗಟ್ಟ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಹಾಗೂ ದಿದ್ದಿಗೆ ಗ್ರಾಮದ ಖಾಸಗಿ ರೂರಲ್ ಪಬ್ಲಿಕ್ ಶಾಲೆಗಳು ಶೇ 100 ರಷ್ಟು ಫಲಿತಾಂಶದ ಸಾಧನೆ ಮಾಡಿವೆ.
2023 24 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಎನ್ಎಂಕೆ ಶಾಲೆ ಯ ವಿದ್ಯಾರ್ಥಿ ಜೆ.ಎನ್ ಸಂಜನಾ 614 ಪಡೆದರೆ ಜಿಎಂ ಇಮಾಂ ಸ್ಮಾರಕ ಶಾಲೆಯ ವಿದ್ಯಾರ್ಥಿನಿ ಎಂ.ಜಿ ಸಿಂಚನಾ 611 ಪಡೆದಿದ್ದಾರೆ ಬಾಲ ಭಾರತಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಯಾದ ಕುಮಾರಿ ಆರ್.ಎನ್ ಆಕಾಂಕ್ಷ 607 (ಶೇ 97.12) ಅಂಕ ಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.ನವಚೇತನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಎಚ್.ಎಮ್.ಸುಮಂತ್ 599 (ಶೇ.96) ಅಂಕ ಪಡೆದುಕೊಂಡಿದ್ದಾರೆ.ಮೆದಗಿನಕೆರೆ ಮುರಾರ್ಜಿ ದೇಸಾಯಿ .ವಸತಿ ಶಾಲೆಯ ವಿದ್ಯಾರ್ಥಿ ಎಲ್.ಶ್ರೇಯ 598 (ಶೇ.95.68) ಸಿದ್ದಾರ್ಥ್ 588 ಎ.ಯಶ್ವಂತ್ ಸೇರಿದಂತೆ 19 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ ಆರ್ ವಿ ಎಸ್ ಶಾಲೆಯ ವಿದ್ಯಾರ್ಥಿ ಸೌಮ್ಯ 596 ಅಂಕಗಳಿಸಿದ್ದಾಳೆ ಉದ್ದಗಟ್ಟದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಎಚ್. ಹಂಸಶ್ರೀ 581 ಅಂಕ ( ಶೇ92.24) ನೇತ್ರಾವತಿ ಎಸ್.ಎಚ್. 563 (ಶೇ90.04) ಪ್ರಥಮ ಸ್ಥಾನಗಳಿಸಿದ್ದಾರೆ.ಕಲ್ಲೇದೇವಪುರದ ಶ್ರೀ ಕಲ್ಲೇಶ್ವರ ಗ್ರಾಮಾಂತರ ಪ್ರೌಢಶಾಲೆಯ ವಿದ್ಯಾರ್ಥಿನಿ ಎನ್.ವಿ ಕಲ್ಲಮ್ಮ 527. ಜಿ.ಟಿ ದ್ರಾಕ್ಷಾಯಿಣಿ 523. ಡಿ.ವಿನಯ್ 549 ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ
ತಾಲೂಕಿನಲ್ಲಿ 50 ವಿದ್ಯಾರ್ಥಿಗಳು ಕನ್ನಡ ಭಾಷೆಯಲ್ಲಿ 125ಕ್ಕೆ 125 ಅಂಕ ಗಳಿಸಿದ್ದಾರೆ
ಸರ್ಕಾರಿ ಪ್ರೌಢಶಾಲೆಗಳ ಕಳಪೆ ಸಾಧನೆಗೆ ಪೋಷಕರ ಆಕ್ರೋಶ
ತಾಲ್ಲೂಕಿನಲ್ಲಿ 17 ಸರ್ಕಾರಿ ಪ್ರೌಢಶಾಲೆಗಳಿದ್ದು, ಯಾವುದೇ ಶಾಲೆ ಯಲ್ಲೂ ಶೇ100ರಷ್ಟು ಫಲಿತಾಂಶ ಬಂದಿಲ್ಲ. ಶಿಕ್ಷಣ ಇಲಾಖೆಯ ನಿಯಮಗಳ ಶೇ40ಕ್ಕಿಂತ ಕಡಿಮೆ ಫಲಿತಾಂಶ ಪಡೆದ ಶಾಲೆಗಳ ನ್ನು ಕಲಿಕಾ ವೈಫಲ್ಯ ಎಂದು ಪರಿಗಣಿಸಿ ಮುಖ್ಯ ಶಿಕ್ಷಕರಿಗೆ ನೋಟಿ ಸ್ ಜಾರಿ ಮಾಡಲಾಗುತ್ತದೆ.
ದೇವಿಕೆರೆ ಸರ್ಕಾರಿ ಪ್ರೌಢಶಾಲೆ ಶೇ18.18, ತೋರಣಗಟ್ಟೆ ಶೇ41, ರಸ್ತೆಮಾಚಿಕೆರೆ ಶಾಲೆಯಲ್ಲಿ ಶೇ37ರಷ್ಟು ಕಡಿಮೆ ಫಲಿತಾಂಶ ಬಂದಿ ದೆ. ಕಡಿಮೆ ಫಲಿತಾಂಶ ಬಂದಿರುವ ಶಾಲೆಗಳ ಮುಖ್ಯ ಶಿಕ್ಷ ಕರಿಗೆ ನೋಟಿಸ್ ಜಾರಿ ಮಾಡಲಾ ಗುತ್ತದೆ ಎಂದು ಕ್ಷೇತ್ರ ಶಿಕ್ಷಣಾ ಧಿಕಾರಿ ಹಾಲಮೂರ್ತಿ ತಿಳಿಸಿದ್ದಾರೆ.
ಕಳೆದ 5 ವರ್ಷಗಳಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ದಲ್ಲಿ ಜಿಲ್ಲೆಗೆ ಪ್ರಥಮಸ್ಥಾನ ಗಳಿಸಿದ್ದ ತಾಲ್ಲೂಕು ಈ ಬಾರಿ ಕುಸಿತ ಕಂಡಿದೆ. ಶಿಕ್ಷ ಣ ಇಲಾಖೆ ಈ ಬಾರಿ ಸಿಸಿ ಕ್ಯಾಮೇರಾ ಕಣ್ಗಾವಲಿನಲ್ಲಿ ಬಿಗಿ ಬಂದೋಬಸ್ತ್ ನಿಂದ ನಡೆಸಲಾಗಿತ್ತು. ಅನುತ್ತೀರ್ಣರಾದ ಮಕ್ಕಳು ಎದೆಗುಂದದೆ ಉತ್ತಮ ಅಭ್ಯಾಸದೊಂದಿಗೆ ಪೂರಕ ಪರೀಕ್ಷೆಯನ್ನು ಎದುರಿಸ ಬೇಕು ಎಂದು ಬಿಇಓ ಹಾಲಮೂರ್ತಿ ಕಿವಿಮಾತು ಹೇಳಿ ದ್ದಾರೆ.
ಈ ಬಾರಿ ಶಿಕ್ಷಕರು ಉತ್ತಮ ತರಬೇತಿ ನೀಡದೆ ನಿರ್ಲಕ್ಷ್ಯ ತೋರಿದ್ದಾ ರೆ. ಶಿಕ್ಷಣ ಇಲಾಖೆ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಬೇಕಿತ್ತು. ಪರೀಕ್ಷೆ ತಯಾರಿ ನಡೆಸಬೇಕಿತ್ತು. ವಿದ್ಯಾರ್ಥಿಗಳು ಸುಕ್ತ ಪೂರ್ವ ಸಿದ್ಧತೆ ಇಲ್ಲದೆ ಪರೀಕ್ಷೆ ಎದುರಿಸಿರುವುದೇ ಫಲಿತಾಂಶ ಕುಸಿತಕ್ಕೆ ಕಾರಣವಾಗಿದೆ ಎಂದು ಕೆಲವು ಪೋಷಕರು ಬೇಸರ ವ್ಯಕ್ತಪಡಿಸಿ ದ್ದಾರೆ