ಪ್ರಜಾ ನಾಯಕ ಸುದ್ದಿ ಜಗಳೂರು :-ಪ್ರಸ್ತುತ ರಾಜಕೀಯ ಕಾರಣ ಕ್ಕಾಗಿ ಜಾತಿ,ಧರ್ಮಗಳ ಮಧ್ಯೆ ವಿಷ ಬೀಜ ಬಿತ್ತುವ,ದ್ವೇಷದ,ಸುಳ್ಳು ಭಾಷಣಗಳ ಪ್ರಭಾವಕ್ಕೆ ಸಂಪೂರ್ಣ ಕಡಿವಾಣ ಹಾಕಲು ಬಸವ ತತ್ತತ್ವೇ ಬ್ರಹ್ಮಾಸ್ತ್ರ ವಚನ ಸಾಹಿತ್ಯದ ಮೂಲಕ ವೈಚಾರಿಕತೆ,ಸಾಮಾ ಜಿಕ ಸಮಾ ನತೆಗಾಗಿ ಅವಿರತ ಶ್ರಮಿಸಿದ ವಿಶ್ವಗುರು ಬಸವಣ್ಣನ ಜಯಂತಿ ಆಚರಣೆಗಿಂತ ಅವರ ವಿಚಾರಗಳು ಯುವ ಸಮೂಹಕ್ಕೆ ಮಾದರಿಯಾಗಲಿ ಎಂದು ತಾ.ಪಂ.ಮಾಜಿ ಸದಸ್ಯ ಹಾಗೂ ಮಾನ ವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ಮರೇನ ಹಳ್ಳಿ ವಕೀಲ ಬಸವರಾಜ್ ಅಭಿಪ್ರಾಯ ವ್ಯಕ್ತಪಡಿಸಿದರು.
ಜಗಳೂರು ಪಟ್ಟಣದ ಪ್ರೇರಣಾ ಚರ್ಚ್ ಸಭಾಂಗಣದಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಮಹಾ ಮಾನವತ ವಾದಿ ವಿಶ್ವಗುರು ಬಸವಣ್ಣ ಜಯಂತ್ಯೋತ್ಸವ ಆಚರಣೆ ಕಾರ್ಯ ಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿ ದರು.
ನೊಂದ ಜನರ ಕಣ್ಣೀರು ಹೊರೆಸಿದ ಬಸವಣ್ಣ,ಅಸ್ಪೃಶ್ಯತೆ,ಮೌಢ್ಯಾ ಚರಣೆ, ಅಸಮಾನತೆ ವಿರುದ್ಧ ಹೋರಾಟ ನಡೆಸಿದ ಫಲ ಇಂದು ಎಲ್ಲ ವರ್ಗದ ಜನ ವಿವಿಧ ಕ್ಷೇತ್ರದಲ್ಲಿ ಸ್ಥಾನಮಾನ ಪಡೆದು,ಬದು ಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ ಆರ್ಥಿಕ ಸಮಾನತೆ,ಸಾಮಾಜಿಕ, ಶೈಕ್ಷಣಿಕ,ಸಾಂಸ್ಕೃತಿಕ ಏಕತೆಯಂತಹ ಶ್ರೇಷ್ಠ ಮತ್ತು ಉದಾತ್ತ ಧ್ಯೇಯಗಳನ್ನು ಮೂಲಮಂತ್ರವನ್ನಾಗಿ ಸಿಕೊಂಡು, ಪ್ರಜಾಪ್ರಭುತ್ವ ತಳಹದಿಯ ಮೇಲೆ ನಿರ್ಮಿತ ಗೊಂಡ ಅನುಭವಮಂಟಪ ಪ್ರಥ ಮ ಸಂಸತ್ತು.ಇಂದು ಎಲ್ಲಾ ವರ್ಗದ ಶೋಷಿತರಿಗೆ,ಮಹಿಳೆಯರಿಗೆ ಜಾರಿಗೊಂಡಿರುವ ಪ್ರಜಾಸತ್ತಾತ್ಮಕ,ಕಾನೂನಾತ್ಮಕ ಸಂವಿಧಾನದ ಆಶಯಗಳು 12 ನೇ ಶತಮಾನದಲ್ಲಿ ಬಸವಣ್ಣನ ಆಶಯಗಳಾಗಿ ದ್ದವು.ಅಂಬೇಡ್ಕ ರ್ ಮತ್ತು ವಿಶ್ವಗುರು ಬಸವಣ್ಣ ಅವರನ್ನು ಕೇವ ಲ ಒಂದು ವರ್ಗಕ್ಕೆ ಸೀಮಿತಗೊಳಿಸಬಾರದು ಎಂದು ಹೇಳಿದರು.
ಪ್ರಾಂಶುಪಾಲ ನಾಗಲಿಂಗಪ್ಪ ಮಾತನಾಡಿ 12ನೇ ಶತಮಾನದ ಲ್ಲಿ ಯೇ ಮುಂದಿನ ದಿನಗಳಲ್ಲಿ ನಾಡು ಎದುರಿಸುವ ಸಮಸ್ಯೆಗಳಿಗೆ ವಚನಗಳ ಮೂಲಕ ಸಂದೇಶ ನೀಡಿದ ಬಸವಣ್ಣನವರ ತತ್ವಗಳು ಅನುಭವ ಮಂಟಪದಲ್ಲಿ ಬುನಾದಿ ಆಗಿದೆ ಬಸವಣ್ಣನವರ ಅನು ಭವ ಮಂಟಪದಲ್ಲಿ ಶೋಷಿತ ವರ್ಗದ ಪುರುಷ ವಚನಕಾರರಿಗೆ ಮಾತ್ರವಲ್ಲದೆ ಮಹಿಳಾ ವಚನಗಾರ್ತಿ ಯರಿಗೂ ವಚನಗಳ ಮೂ ಲಕ ಅಭಿವ್ಯಕ್ತಿ ಸ್ವಾತಂತ್ರ್ಯಕಲ್ಪಿಸಿದ್ದರು.ಶೋಷಿತ ವರ್ಗಕ್ಕೆ ಬಸವಣ್ಣ ವಿಶಿಷ್ಠವಾದ ದೈವಮಾನವರಾಗಿದ್ದಾರೆ ಅಂತೆಯೇ ವೈಚಾರಿಕ ಪ್ರಜ್ಞೆ ಯ ವಿವೇಕವನ್ನು ಬೆಳೆಸಿದ ಬಸವಣ್ಣನ ಚಿಂತನೆಗಳು ಜಗತ್ತನ್ನೇ ಆಳುವಂತಿವೆ ಎಂದು ತಿಳಿಸಿದರು.
ವಕೀಲ ಆರ್.ಓಬಳೇಶ್ ಮಾತನಾಡಿ ಬಸವಣ್ಣನವರು ಕ್ರಾಂತಿಕಾ ರಿ ವೈಚಾರಿಕ ಚಿಂತನೆವುಳ್ಳ ಬಸವಣ್ಣನನ್ನು ನಂದಿವಿಗ್ರಹ ಎತ್ತುಗಳ ಪ್ರತಿ ರೂಪವಾಗಿ ಬಿಂಬಿಸಿ ಮೂರ್ತಿ ಆರಾಧನೆ ವೈಭವೀಕರಿಸಲಾಗಿ ದೆ.ಅವರ ನೈಜ ವಿಚಾರಧಾರೆ,ಆದರ್ಶಗಳ ನ್ನು ತಿರುಚುವ ಹುನ್ನಾರ ನಡೆಯುತ್ತಿದೆ.ವಿಶ್ವಗುರು ಬಸವಣ್ಣ ಜನಿಸಿದ ನಾಡಿನಲ್ಲಿ ಕೋಮು ವಾದ,ಜಾತೀಯತೆ,ಧರ್ಮಾಂಧತೆ ತಾಂಡವಾಡುತ್ತಿದೆ ಕೆಲರಾಜಕಾ ರಣಿಗಳನ್ನು ವಿಶ್ವಗುರುವನ್ನಾಗಿ ಸಲು ಹೊರಟಿರುವುದು ಅಪಾಯ ಕಾರಿ ಬೆಳವಣಿಗೆ ಎಂದು ಆತಂಕವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಹಿರಿಯ ನಾಗರೀಕ ಸಂಘದ ತಾಲೂಕು ಅಧ್ಯಕ್ಷ ಸಿ.ತಿಪ್ಪೇಸ್ವಾಮಿ,ಮಾನವ ಬಂಧುತ್ವ ವೇದಿಕೆ ತಾಲೂಕು ಸಂಚಾಲಕ ಧನ್ಯಕುಮಾರ್ ,ವಕೀಲರಾದ ಸಣ್ಣ ಓಬಯ್ಯ, ರಂಗಪ್ಪ,ಭೂಪತಿ, ತಿಪ್ಪೇಸ್ವಾಮಿ,ಮಹಾಂತೇಶ್,ಮರೇನಹಳ್ಳಿ ತಿಪ್ಪೇಸ್ವಾಮಿ,ರುದ್ರೇಶ್ ಮಾಜಿ ಪ.ಪಂ ಅಧ್ಯಕ್ಷ ಮಂಜುನಾಥ್, ಪ್ರಗತಿಪರ ಸಂಘಟನೆ ಮುಖಂಡರಾದ ಮರೇನಹಳ್ಳಿ ನಜೀರ್ ಅಹಮ್ಮದ್,ರಾಜಪ್ಪ ವ್ಯಾಸ ಗೊಂಡನಹಳ್ಳಿ,ಸತೀಶ್ ಮಲೆಮಾಚಿಕೆರೆ,ಮಾದಿಹಳ್ಳಿ ಮಂಜು ನಾಥ್, ಇಂದಿರಾ ಗುರುಸ್ವಾಮಿ.ಮಹಮ್ಮದ್ ರಫೀಕ್.ರಮೇಶ. ಬ್ ,ಓಬಳೇಶ್,ರುದ್ರೇಶ್,ವಿಜಯ್ ಕೆಂಚೋಳ್,ನರೇನಹಳ್ಳಿ ಕುಮಾರ ನಾಯ್ಕ,ಸೇರಿದಂತೆ ಇದ್ದರು.