ಪ್ರಜಾ ನಾಯಕ ಸುದ್ದಿ ಜಗಳೂರು :- ಪಟ್ಟಣದ ಮುಖ್ಯರಸ್ತೆ ಸುಗಮ ಸಂಚಾರ ಕ್ಕಾಗಿ ರಸ್ತೆ ಆಗಲೀಕರಣ ಪ್ರಸ್ತಾವನೆಗೆ 20 ಕೋಟಿ ಅನುದಾನ ಬಿಡುಗಡೆ ಹೊಂದಿದ್ದು ಟೆಂಡರ್ ಪ್ರಕ್ರಿಯೆಯ ಲ್ಲಿದೆ.ಶೀಘ್ರದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ದಾವಣಗೆರೆ ಗ್ರಾಮಾಂತ ರ ಉಪವಿಭಾಗ ಹಾಗೂ ಪೊಲೀಸ್ ಠಾಣೆ ವತಿಯಿಂದ ಹಮ್ಮಿ ಕೊಂಡಿದ್ದ ಸಿಬ್ಬಂದಿಗಳಿಗೆ ಹೆಲ್ಮೆಟ್ ವಿತರಣೆ ಹಾಗೂ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.
ಪಟ್ಟಣದ ಬೀದಿ ಬದಿ ವ್ಯಾಪರಸ್ಥರು,ನನ್ನನ್ನು ಭೇಟಿಯಾಗಿ ರಸ್ತೆ ಅಗಲೀಕರಣ ಮುಂದೂಡಲು ಮನವಿ ಮಾಡಿದ್ದು, ಆದರೆ ಒಬ್ಬ ಜವಾಬ್ದಾರಿಯುತ ರಾಜಕಾರಣಿಯಾಗಿ,ಸುಗಮ ಸಂಚಾರ ಕ್ಕೆ ಅನುವು ಮಾಡುವುದಕ್ಕೆ ರಸ್ತೆ ಅಗಲೀಕರಣ ಅವಶ್ಯಕವಾಗಿದೆ ಎಂದು ಮನವರಿಕೆ ಮಾಡಿಕೊಟ್ಟಿದ್ದೇನೆ ಅಲ್ಲದೆ ರಾಜ್ಯದ ಹಲವು ಪಟ್ಟಣ,ನಗರಗಳಲ್ಲಿ ರಸ್ತೆಗಳು ಅಗಲೀಕರಣ ಮಾಡಿ ದ್ದಾರೆ.ಆದರೆ ಜಗಳೂರು ಪಟ್ಟಣದಲ್ಲಿ ಏಕೆ ಬೇಡ ಎಂಬ ಪ್ರಶ್ನೆ ಗಳನ್ನು ಅವರ ಮುಂದೆ ಇಟ್ಟಿದ್ದೇನೆ ರಸ್ತೆ ಅಗಲೀಕರಣಕ್ಕೆ ನಿಮ್ಮಗಳ ಸಹಕರ ತುಂಬಾ ಮುಖ್ಯ ಎಂದು ಮನವರಿಕೆ ಮಾಡಿದ್ದೇನೆ ಅಲ್ಲದೇ ಪ.ಪಂ ಮುಖ್ಯಾಧಿಕಾರಿ,ಗುತ್ತೆಗೆದಾರ,ಮತ್ತು ಇಂಜಿನಿಯರ್ಗಳ ಲೋಕೋಪಯೋಗಿ ಇಲಾಖೆ ಹೀಗೆ ಎಲ್ಲಾರ ಸಮ್ಮುಖದಲ್ಲಿ ಚರ್ಚೆ ನಡೆಸಿ,ನಮ್ಮ ಪಟ್ಟಣ ಸ್ವಚ್ಚ ಸುಂದರ ಪಟ್ಟಣವಾಗುವುದಕ್ಕೆ ಶ್ರಮಿಸಬೇಕು ಎಂದು ಸೂಚಿಸಿದ್ದೇನೆ
ಸಾರ್ವಜನಿಕ ಸ್ಥಳಗಳಲ್ಲಿ ಕರ್ಕಶ ಶಬ್ದದಿಂದ ಶಬ್ದ ಮಾಲಿನ್ಯ ಉಂಟುಮಾಡುತ್ತಿರುವ ಬೈಕ್ ಗಳನ್ನು ಸೀಜ್ ಮಾಡಬೇಕು. ಸಾರ್ವಜನಿಕರು ಹೆಲ್ಮೆಟ್ ಧರಿಸಿ ಪೊಲೀಸ್ ಇಲಾಖೆಯ ಸುರಕ್ಷಿತ ನಿಯಮಗಳನ್ನು ಪಾಲಿಸಬೇಕು.ಅಪಘಾತ ಸಂದರ್ಭ ದಲ್ಲಿ ಬೈಕ್ ಸವಾರರು ಸಾವಿನಿಂದ ರಕ್ಷಣೆ ಮಾಡಿಕೊಳ್ಳಿ ಎಂದರು.
ನನ್ನ ಆಡಳಿತಾವಧಿಯಲ್ಲಿ ವಿಂಡ್ ಫ್ಯಾನ್ ಅಳವಡಿಕೆಗೆ ಅವ ಕಾಶ ನೀಡುವುದಿಲ್ಲ.ಉದ್ಗಟ್ಟ ವಸತಿ ಶಾಲೆ ಪಕ್ಕದಲ್ಲಿ ಶಾಲಾ ಮಕ್ಕಳಿಗೆ ದುಷ್ಪರಿಣಾಮ ಬೀರುತ್ತಿರುವ ವಿಂಡ್ ಫ್ಯಾನ್ ತೆರವುಗೊಳಿಸಲು ಸೂಚಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಮತಿ ಉಮಾಪ್ರಶಾಂತ್ ಮಾತನಾಡಿ ದೇಶದಲ್ಲಿ ಪ್ರತಿಗಂಟೆಗೆ ಸಂಭವಿಸುವ 52 ಜನರ ಪ್ರಮಾಣದಲ್ಲಿ 19 ಜನ ಹೆಲ್ಮೆಟ್ ಧರಿಸದೆ ಸಾವನ್ನಪ್ಪುತ್ತಿದ್ದಾರೆ. ಪ್ರತಿ ವರ್ಷಕ್ಕೆ 52000 ಜನರು ಹೆಲ್ಮೆಟ್ ಧರಿಸದೆ ಸಾವನ್ನಪ್ಪುವ ಮಾಹಿತಿ ಲಭ್ಯವಾಗಿದೆ.ದೇಹದ ಸೂಕ್ಷ್ಮ ಹಾಗೂ ಮುಖ್ಯ ಅಂಗ ತಲೆಭಾಗವಾಗಿದ್ದು ಪ್ರತಿಯೊಬ್ಬ ದ್ವಿಚಕ್ರವಾಹನ ಸವಾರನು ಜೀವ ರಕ್ಷಣೆಗಾಗಿ ಗುಣಾತ್ಮಕ ಹೆಲ್ಮೆಟ್ ಧರಿಸಬೇಕು ಅಂತೆಯೇ ಸಾರ್ವ ಜನಿಕರಿಗೆ ದಂಡವಿಧಿಸುವ ಪೊಲೀಸ್ ಸಿಬ್ಬಂದಿ ಗಳು ಮೊದಲು ಹೆಲ್ಮಟ್ ಧರಿಸಿ ಮಾದರಿಯಾಗಬೇಕು ಎಂದು ಸಲಹೆ ನೀಡಿದರು.
ದಾವಣಗೆರೆ ಗ್ರಾಮಾಂತರ ವಿಭಾಗದ ಡಿವೈಎಸ್ ಪಿ ಬಸವ ರಾಜ್ ಮಾತನಾಡಿ ಯುವಕರು ಡ್ರಗ್ಸ್ ತೆಗೆದುಕೊಳ್ಳುವ ಮಾಹಿತಿಯನ್ನು 112 ಮೂಲಕ ಮಾಹಿತಿಕೊಡಿ ಪರೀಕ್ಷೆಗೊಳ ಪಡಿಸಿ ಸಾಬೀತಾದರೆ ನಿರ್ದಾಕ್ಷೀಣ್ಯವಾಗಿ ಪ್ರಕರಣ ದಾಖಲಿಸ ಲಾಗುವುದು.ಚುಚ್ವು ಮದ್ದು,ಹಾನಿಕಾರಕ ತ್ಯಾಜ್ಯ ವಸ್ತುಗಳನ್ನು ಆರೋಗ್ಯ ಇಲಾಖೆಗೆ ಚರ್ಚಿಸಿ ಸಾರ್ವಜನಿಕ ಸ್ಥಳಗಳಲ್ಲಿ ಎಸೆಯದಂತೆ ನಿಯಂತ್ರಿಸಲಾ ಗುವುದು ಎಂದರು.
ಇದೇ ವೇಳೆ ಪೊಲೀಸ್ ಸಿಬ್ಬಂದಿಗಳಿಗೆ ಹೆಲ್ಮೆಟ್ ವಿತರಿಸಿದರು. ಪಟ್ಟಣದಲ್ಲಿ ಬೈಕ್ ನಲ್ಲಿ ಎಸ್.ಪಿ,ಡಿ.ವೈ.ಎಸ್.ಪಿ.ಪಿ ಐ ಸಂಚ ರಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಪಿ.ಐ ಶ್ರೀನಿವಾಸ್ ರಾವ್,ಪಿ.ಎಸ್.ಐ ಸಾಗರ್, ಎ.ಎಸ್.ಐ ಗಳಾದ ಚಂದ್ರಶೇಖರ್, ಶಿವಪ್ರಸಾದ್, ಸಿಬ್ಬಂದಿಗ ಳಾದ ನಾಗಭೂಷಣ್,ಬಸವರಾಜ್,ಮಾರುತಿ, ಪಕ್ಷಣ್ಣ.ಉಮಾಪತಿ. ನಾಗರಾಜ್. ಪ್ರಶಾಂತ್,ಉಮಾಪತಿ, ಹನುಮಂತ ಕವಾಡಿ. ರಮೇಶ್.ಚಾಮರಾಜರೆಡ್ಡಿ. ಮಧುರ.ಅಜ್ಜಯ್ಯ.ಚೈತ್ರ.ಲಕ್ಷ್ಮಿ ದೇವಿ. ಸೇರಿದಂತೆ ಸಾರ್ವಜನಿಕರು ಇದ್ದರು.
“ಪಟ್ಟಣ ಮುಖ್ಯ ರಸ್ತೆ ಅಗಲೀಕರಣಕ್ಕೆ 20 ಕೋಟಿ ಹಣ ಬಿಡು ಗಡೆಯಾಗಿದೆ ಶೀಘ್ರವೇ ರಸ್ತೆ ಅಗಲೀಕರಣಕ್ಕೆ ಮುಂದಾಗಲಾ ಗುವುದು ಅಲ್ಲದೆ ಪಟ್ಟಣದ ಸೌಂದರ್ಯಕ್ಕೆ,ಅಭಿವೃದ್ಧಿಗೆ ಬೀದಿ ಬದಿ ವ್ಯಾಪರಸ್ಥರು ಸಹಕರಿಸಬೇಕು,ಬೀದಿ ಬದಿ ವ್ಯಾಪರಸ್ಥರ ನ್ನು,ಅಂಗಡಿ ಮಾಲೀಕರನ್ನು ಒಕ್ಕಲೆಬ್ಬಿಸುವ ಉದ್ದೇಶ ಉದ್ದೇಶ ವಿಲ್ಲ.ಕಾನೂನು ಚೌಕಟ್ಟಿನಲ್ಲಿ ಸಾರ್ವಜನಿಕರ ಹಿತಕಾಯುತ್ತೇನೆ ಕೊಟ್ಟ ಭರವಸೆಯನ್ನು ಹುಸಿಯಾಗದಂತೆ ಹಿಡೇರಿಸುತ್ತೇನೆ”
-ಬಿ.ದೇವೇಂದ್ರಪ್ಪ,ಶಾಸಕರು ಜಗಳೂರು ವಿಧಾನಸಭಾ ಕ್ಷೇತ್ರ.