ಜಗಳೂರು ಸುದ್ದಿ:
ಸಂವಿಧಾನದ ಪಾವಿತ್ರತೆ ಕಾಪಾಡಬೇಕಾದ ರಾಜಕಾರಣಿಗಳು ಇಂದು ಚೆಲ್ಲಾಟವಾಡುತ್ತಿದ್ದಾರೆ.ಮುತ್ಸದ್ದಿ ರಾಜಕಾರಣಿ ದಿ.ಇಮಾಂಸಾಹೇಬರಂತಹವರು ಕಣ್ಮರೆಯಾಗಿದ್ದಾರೆ.ಎಂದು ಅಖಿಲಭಾರತ ಶರಣ ಸಾಹಿತ್ಯ ಪರಿಷತ್ತಿನ ಗೌರವ ಸಲಹೆಗಾರ ಹಾಗೂ ಜಾನಪದ ವಿದ್ವಾಂಸ ನಾಡೋಜ ಡಾ. ಗೋ.ರು. ಚನ್ನಬಸಪ್ಪ ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ಇಮಾಂ ಶಾಲಾ ಆವರಣದಲ್ಲಿ ಇಮಾಂ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಜೆ.ಎಂ ಇಮಾಂ ಸ್ಮಾರಕ ರಾಜ್ಯ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದಿವಂಗತ ಇಮಾಂ ಸಾಹೇಬರ ಮೇಲೆ ನನಗೆ ಅಪಾರ ಅಭಿಮಾನವಿದೆ.ಅವರು ಮೈಮನಗಳಲ್ಲಿ ಸದಾ ಜಾಗೃತಿ ಅಂತಃಪ್ರಜ್ಞೆಯಿಂದ ರಾಜಕೀಯ ಪರಿಪಕ್ವತೆ ಹೊಂದಿದ್ದರು.
ಈ ದೆಸೆಯಿಂದಲೇ ಇಂದಿಗೂ ಜನಮಾನಸದ ಹೃದಯದಲ್ಲಿ ಉಳಿದಿದ್ದಾರೆ.ಇವರ ರಾಜಕೀಯ ವೃತ್ತಿಜೀವನ ಪ್ರಸಕ್ತವಾಗಿ ಜನರ ನೆಮ್ಮದಿ ಕಿತ್ತುಕೊಳ್ಳುತ್ತಿರುವ ಆಡಳಿತ ಸರಕಾರದ ರಾಜಕಾರಣಿಗಳಿಗೆ ಆದರ್ಶವಾಗಬೇಕು.ವಿಧಾನ ಸಭೆಯಲ್ಲಿನ ಚರ್ಚೆಗಳು ಜನಸಾಮಾನ್ಯರು ತಲೆ ತಗ್ಗಿಸುವಂತಿವೆ.
ಸಂವಿಧಾನದ ನಿರ್ದೇಶನಗಳನ್ನು ಪಾಲಿಸುತ್ತಿಲ್ಲ ಇದು ದೇಶದ ಜನರ ದುರದೃಷ್ಟಕರ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ರಂಜಾನ್ ದರ್ಗಾ ಆಯ್ಕೆ ಸಂತಸತಂದಿದೆ:-
ಇಮಾಂಸಾಹೇಬರ ಸ್ಮಾರಕವಾಗಿ ರಾಜ್ಯಪ್ರಶಸ್ತಿಗೆ ಭಾಜನ
ರಾಗಿರುವ ರಂಜಾನ್ ದರ್ಗಾ ಅವರು ಧರ್ಮಾತೀತವಾಗಿ ಪ್ರಗತಿಪರ, ವೈಚಾರಿಕ ಸಾಹಿತ್ಯದಿಂದ ಮಾಧ್ಯಮ,ಸಾಮಾಜಿಕ ಹೊರಾಟದ ಸೇವೆಗೈದಿದ್ದು.ಅವರ ಸಂಶೋಧನಾ ಸಾಮರ್ಥ್ಯ
ಗಳನ್ನು ಅವರು ರಚಿಸಿದ ಕೃತಿಗಳೇ ಸಾರುತ್ತವೆ.ದರ್ಗಾ ಅವರಿಗೆ ಇಮಾಂ ರಾಜ್ಯ ಪ್ರಶಸ್ತಿ ಪ್ರಧಾನ ನನಗೆ ಸಂತಸ ತಂದಿದೆ ಎಂದು ಹೇಳಿದರು.
ಸಾಹಿತಿ ಹಾಗೂ ನಿವೃತ್ತ ಪ್ರಾಧ್ಯಾಪಕ ರಹಮತ್ ತರೀಕೆರೆ ಮಾತನಾಡಿ,ಅಧಿಕಾರ ದುರಪಯೋಗ ಮಾಡಿಕೊಳ್ಳದ ರಾಜಕಾರಣಿ ಇಮಾಂಸಾಹೇಬರಾಗಿದ್ದರು.ಸಾಂಸ್ಕೃತಿಕ ವ್ಯಕ್ತಿತ್ವ ಹೊಂದಿದ ಮುತ್ಸದ್ದಿ ರಾಜಕಾರಣಿಗಳಾಗಿ ಸೇವೆಗೈದ ಎಸ್.ನಿಜಲಿಂಗಪ್ಪ,ದೇವರಾಜ್ ಅರಸ್,ಜವಾಹರ್ ಲಾಲ್ ನೆಹರೂ,ಶಾಂತವೀರಗೋಪಾಲಸ್ವಾಮಿ,ಅವರ ಸಾಲಿನಲ್ಲಿಇಮಾಂಸಾಹೇಬರೊಬ್ಬರಾಗಿದ್ದಾರೆ.ಇವರುಗಳು ಜನರ ನೆಮ್ಮದಿಯ ಬದುಕಿನ ಚಿಂತನೆಯುಳ್ಳವರಾಗಿದ್ದರು ರಚನಾತ್ಮ ವಿರೋಧ ಪಕ್ಷದ ನಾಯಕರಾಗಿದ್ದರು ಎಂದು ಸ್ಮರಿಸಿದರು.
ನಾಡಿಗೆ ಮಹಿಳೆಯರ ಕೊಡುಗೆ ಅಪಾರ:-
ದೇಶಕಟ್ಟುವ ಮಹಿಳೆಯರ ಪಾತ್ರದ ಬಗ್ಗೆ ಇಮಾಂಸಾಹೇಬರು ರಚಿಸಿದ ‘ನೂರ್ ಜಹಾನ್’ ಕೃತಿ ಮಹತ್ವದ್ದಾಗಿದೆ.ನಾಡಿನ ಅಭಿವೃದ್ದಿಗೆ ರಾಣಿಯರ ಮತ್ತು ಮಹಿಳೆಯರ ಸಾಧನೆ ಅಪಾರವಾಗಿದೆ.ಸಾರ್ವಜನಿಕ ಜೀವನದಲ್ಲಿ ಮಹಿಳೆಯರಿಗೆ ಸ್ಥಾನಮಾನ ಕಲ್ಪಿಸದಿದ್ದರೆ ದೇಶದ ಸಮಗ್ರ ಅಭಿವೃದ್ದಿ ಅಸಾಧ್ಯ ಎಂದು ಅಭಿಪ್ರಾಯವ್ಯಕ್ತಪಡಿಸಿದರು.
ಪ್ರಗತಿಪರ ಸಾಹಿತಿ ರಂಜಾನ್ ದರ್ಗಾ ಅವರ ಕಾವ್ಯ
ಮೀಮಾಂಸೆಯ ಆಶಯದಂತೆ ದೇಶದಲ್ಲಿ ಬಂಡವಾಳಶಾಹಿತ್ವ ಪರ ಆಡಳಿತ ಕೊನೆಗೊಳ್ಳಬೇಕಿದೆ ಎಂದರು.
ಇಮಾಂ ರಾಜ್ಯ ಪ್ರಶಸ್ತಿ ಪುರಸ್ಕೃತ ಹಾಗೂ ಪ್ರಗತಿಪರ
ಲೇಖಕ ರಂಜಾನ್ ದರ್ಗಾ ಮಾತನಾಡಿ,ನಾನು ಬಾಲ್ಯದಿಂದಲೇ ಇಮಾಂ ಸಾಹೇಬರ ಪರಿಚಯಕಂಡವನು,ಅವರೇ ನನ್ನ ಸಾಮಾಜಿಕ ಸೇವೆ ಸಾಹಿತ್ಯಲೋಕಕ್ಕೆ ಪಾದಾರ್ಪಣೆಗೆ ಸ್ಪೂರ್ತಿ.ಧರ್ಮಾತೀತವಾಗಿ ದೇಶದಲ್ಲಿ ಇಮಾಂ ಅವರು ಇಮ್ಮಣ್ಣ ವಾಗಿರುವುದೇ ಭಾರತದ ಬಹುತ್ವ ಸಂಸ್ಕೃತಿ.
ದೇಶದಲ್ಲಿನ ಮುಸ್ಲಿಂ ಸಮುದಾಯ ಇಮಾಂಸಾಹೇಬರ ಅನುಯಾಯಿಗಳಾಗಬೇಕಿದೆ ಹಲವು ಧರ್ಮಗಳಿರುವ ಭಾರತದಲ್ಲಿ ಬಹುಸಂಸ್ಕೃತಿ ಉಳಿದುಬಹುತ್ವ ರಾಷ್ಟ್ರ
ವಾಗಬೇಕಿದೆ ಎಂದು ಕಿವಿಮಾತು ಹೇಳಿದರು.
ಮಹಾರಾಷ್ಟ್ರದ ಶಾಹುಮಹಾರಾಜರ ಆಳ್ವಿಕೆ ಮಾದರಿಯಲ್ಲಿ ಕರ್ನಾಟಕದಲ್ಲಿ ನಾಲ್ವಡಿ ಕೃಷ್ಣರಾಜ್ ಒಡೆಯರ್,ಅವರ ಆಡಳಿತವಿತ್ತು.ಈ ವೇಳೆ ಇಮಾಂಸಾಹೇಬರು ಸಚಿವರಾಗಿ ನಿಸ್ವಾರ್ಥ ಸೇವೆಯಿಂದ ಪಂಚವಾರ್ಷಿಕ ಯೋಜನೆ
ಜಾರಿಗೊಳಿಸಿದರು,ನೀರಾವರಿ, ಶಿಕ್ಷಣ ಕ್ಷೇತ್ರಗಳಿಗೆ
ಅಪಾರ ಕೊಡುಗೆ ನೀಡಿದ್ದಾರೆ.ಅಲ್ಲದೆ ಜಗಳೂರಿನ ನಿವಾಸಕ್ಕೆ ನಾಲ್ವಡಿ ಕೃಷ್ಣರಾಜ್ ಒಡೆಯರ್ ಆಗಮಿಸಿದ ಇತಿಹಾಸ
ವಿದೆ.ಇದು ಅವರ ಘನತೆ ಎತ್ತಿಹಿಡಿಯುತ್ತದೆ.ರಾಜಕಾರಣಿ
ಗಳಿಗೆ ಅಧಿಕಾರದಲ್ಲಿ ಆರ್ಥಿಕ ಅವಲಂಬನೆವಿರಬಾರದು ಎಂದು ಬಲವಾಗಿ ನಂಬಿ ಸಾಬೀತುಪಡಿಸಿದ ಧೀಮಂತನಾಯಕ ಇಮಾಂಸಾಹೇಬರು.ಇಂತಹ ರಾಜಕೀಯ ಪ್ರಜ್ಞೆ
ಅವರ ತಾತ ಫಕೀರ್ ಸಾಬ್,ತಂದೆ ಬಡೇ ಸಾಹೇಬರಿಂದ ರಕ್ತಗತವಾಗಿ ಬಂದಿತ್ತು ಎಂದು ತಿಳಿಸಿದರು.
ಸಂದರ್ಭದಲ್ಲಿ ಇಮಾಂ ಟ್ರಸ್ಟ್ ಅಧ್ಯಕ್ಷ ಜೆ.ಕೆ.ಹುಸೇನ್ ಮಿಯ್ಯಾ ಸಾಬ್,ಪಿಂಜಾರ ಸಮಾಜದ ರಾಜ್ಯಾಧ್ಯಕ್ಷ ಜಲೀಲ್ ಸಾಹೇಬ್,ಇಬ್ರಾಹಿಂ ಟ್ರಸ್ಟ್ ಅಧ್ಯಕ್ಷ ದಾದಖಲಂದರ್,
ಶರಣಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಬಿ.ಪರಮೇಶ್ವರಪ್ಪ,
ಸಾಹಿತಿ ಎನ್.ಟಿ.ಎರ್ರಿಸ್ವಾಮಿ,ನಿವೃತ್ತ ಪ್ರಾಂಶುಪಾಲ ಯಾದವರೆಡ್ಡಿ,ಡಾ.ನಿಬಗೂರು ರಾಜಣ್ಣ,ಪ್ರಾಧ್ಯಾಪಕ ದಾದಪೀರ್.ನವಿಲೇ ಹಾಳ್,ಶಾಹಿನಾಬೇಗಂ,ಮುನ್ನಸಾಬ್,
ನಿವೃತ್ತ ಉಪನ್ಯಾಸಕ ತಿಮ್ಮರಾಜ್,ಡಿ.ಸಿ.ಮಲ್ಲಿಕಾರ್ಜುನ್,
ಸೇರಿದಂತೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.