ಪ್ರಜಾ ನಾಯಕ ಸುದ್ದಿ ಜಗಳೂರು -: ಪಟ್ಟಣದ ಹಳೆ ಮಹಾತ್ಮ ಗಾಂಧೀಜಿ ವೃತ್ತದಲ್ಲಿ ಕೆಪಿಸಿಸಿ ಕಾರ್ಯಧ್ಯಕ್ಷರು ಹಾಗೂ ಮಾಜಿ ಸಂಸದ ಶ್ರೀ ಧ್ರುವ ನಾರಾಯಣ ಅವರ ನಿಧನದ ಹಿನ್ನಲೆಯಲ್ಲಿ ಕೆಪಿಸಿಸಿ ಎಸ್. ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ ಪಾಲಯ್ಯ ಹಾಗೂ ಕಾಂಗ್ರೆಸ್ ಮುಖಂಡ ಚಿಕ್ಕಮ್ಮನಹಟ್ಟಿ ಬಿ ದೇವೇಂದ್ರಪ್ಪ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಶ್ರೀಯುತರ ಭಾವಚಿತ್ರಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು
ನಂತರ ಕೆ.ಪಿ.ಸಿ.ಸಿ ಎಸ್.ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ ಪಾಲಯ್ಯ ಮಾತನಾಡಿ ಕಾಂಗ್ರೆಸ್ ಪಕ್ಷದ ಕಾರ್ಯ ಚಟುವಟಿಕೆಗಳಲ್ಲಿ ಅವಿರತ ತೊಡಗಿಸಿಕೊಂಡು ಅಪಾರ ಸೇವೆ ಸಲ್ಲಿಸುತ್ತಿದ್ದ ಕಾರ್ಯಾಧ್ಯಕ್ಷರಾದ ಶ್ರೀ ಧ್ರುವ ನಾರಾಯಣ ಅವರ ನಿಧನವು ಅಪಾರ ನೋವುಂಟುಮಾಡಿದೆ.ಅವರು ರಾಜಕೀಯ ನಾಯಕ ಮತ್ತು ಸಂಸದೀಯ ಪಟುವಾಗಿ ತನ್ನ ಶ್ರಮ, ಪ್ರಬುದ್ಧತೆ ಮತ್ತು ಬದ್ಧತೆಯಿಂದ ಅತ್ಯುನ್ನತ ಸ್ಥಾನಕ್ಕೇರುವ ಎಲ್ಲ ಲಕ್ಷಣಗಳನ್ನು ಹೊಂದಿದ್ದರು. ಧ್ರುವನಾರಾಯಣ್ ಅವರ ಬದುಕು ಅರ್ಧ ದಾರಿಯಲ್ಲಿಯೇ ಕೊನೆಗೊಂಡದ್ದು ನಾಡಿಗೆ ಮತ್ತು ಜನತೆಗೆ ತುಂಬಲಾರದ ನಷ್ಟ.ಅವರ ಸಾಧನೆಯ ಬದುಕು ಶಾಶ್ವತವಾಗಿ ನಮ್ಮ ನೆನಪಲ್ಲಿರುತ್ತದೆ ಎಂದು ನೋವಿನಿಂದ ಪ್ರತಿಕ್ರಿಯಿಸಿದ್ದಾರೆ. ಅವರಿಗೆ 61 ವರ್ಷ ಅಷ್ಟೇ ಆಗಿತ್ತು ಅವರ ಸಾವು ನನಗೆ ಅಷ್ಟೇ ಅಲ್ಲ, ಕಾಂಗ್ರೆಸ್ ಕಾರ್ಯಕರ್ತರಿಗೆ, ನಾಯಕರಿಗೆ ತುಂಬಲಾರದ ನಷ್ಟ. ಆದರೆವಿಧಿ ಆಟದ ಮುಂದೆ ನಾವ್ಯಾರು ಆಡೋಕೆ ಆಗಲ್ಲ. ಕಾಂಗ್ರೆಸ್ ನಲ್ಲಿ ಎನ್.ಎಸ್.ಯು.ಐ ನಿಂದ ವಿಧಾನಸಭಾ, ಸಂಸತ್ತಿಗೆ ಹೋದವರು ಕಾಂಗ್ರೆಸ್ ಗೆ ಬಹಳ ನಿಷ್ಟರಾಗಿ, ಬದ್ಧತೆ ಇದ್ದವರು. 2 ಬಾರಿ ಶಾಸಕರು, 2 ಬಾರಿ ಎಂಪಿಯಾಗಿದ್ದವರು ಜನಪರ ಕಾಳಜಿ ಇದ್ದ ವ್ಯಕ್ತಿ ಆರ್ ಧ್ರುವನಾರಾಯಣ್ ಅವರ ಆತ್ಮಕ್ಕೆ ಮತ್ತು ಕುಟುಂಬಕ್ಕೆ ಭಗವಂತ ಶಾಂತಿ ನೆಮ್ಮದಿ ಕೊಟ್ಟು ಕಾಪಾಡಲಿ ಎಂದರು
ನಂತರ ಕಾಂಗ್ರೆಸ್ ಮುಖಂಡ ಚಿಕ್ಕಮ್ಮನಹಟ್ಟಿ ಬಿ ದೇವೇಂದ್ರಪ್ಪ ಮಾತನಾಡಿ ಸಂತೆ ಮಾರನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಕೇವಲ ಒಂದು ಮತದಿಂದ ಗೆದ್ದು ವಿಧಾನಸಭೆ ಪ್ರವೇಶಿಸಿದ್ದ ಧ್ರುವ ನಾರಾಯಣ್ ಅವರು ಸೌಮ್ಯ ಸ್ವಭಾವದ ವ್ಯಕ್ತಿ ಎಂದೇ ಖ್ಯಾತಿ ಪಡೆದಿದ್ದರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಎಲ್ಲಾ ತಯಾರಿ ಮಾಡಿದ್ದರು. ಆದರೆ ಏಕಾಏಕಿ ಹೃದಯಘಾತದಿಂದ ಸಾವನ್ನುಪ್ಪಿರುವ ಸುದ್ದಿಯನ್ನು ಕೇಳಿ ನಮ್ಮೆಲ್ಲರಿಗೆ ಬೇಸರವೆನಿಸಿದೆ ದೇವರು ಅವರ ಆತ್ಮಕ್ಕೆ ಮತ್ತು ಅವರ ಕುಟುಂಬಕ್ಕೆ ಶಾಂತಿ ನೀಡಲಿ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಮಾಳಮ್ಮನ ಹಳ್ಳಿ ವೆಂಕಟೇಶ್.ಡಿ. ಆರ್.ಹನುಮಂತಪ್ಪ.ಮರೆನಹಳ್ಳಿ ಚಂದ್ರ ಶೇಖರ್.ಸಿ.ಆರ್ ತಿಮ್ಮಣ್ಣ .ಬುಳ್ಳನಹಳ್ಳಿ ನಾಗರಾಜ್. ಖಲೀಲ್ ಸಾಬ್. ಚಿಕ್ಕಮ್ಮನಹಟ್ಟಿ ಮಾರಪ್ಪ.ರಾಜಣ್ಣ. ನರೇನಹಳ್ಳಿ ಕುಮಾರ್ ನಾಯ್ಕ. ಸರ್ಕಲ್ ಕಾಟಪ್ಪ.ಎಂ.ಎಸ್ ನಜೀರ್ ಅಹ್ಮದ್.ಮರೇನ ಹಳ್ಳಿ ಕುಮಾರ್ .ಹರೀಶ್ ರೆಡ್ಡಿ .ಖಾಸಿಂಸಾಬ್. ನಾಗರಾಜ್. ದತ್ತಾತ್ರೇಯ.ಸಲ್ಮಾನ್.ವಿಜಯ್. ನಾಗೇಶ್. ರುದ್ರೇಶ್. ಗುರುಸ್ವಾಮಿ. ಅನ್ವರ್ . ಬಸವರಾಜ್ . ರಾಜು ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಅಭಿಮಾನಿಗಳು ಇದ್ದರು.