ಪ್ರಜಾ ನಾಯಕ ಸುದ್ದಿ ಜಗಳೂರು :-ವಿಧಾನಸಭಾ ಚುನಾವಣೆ ಯಲ್ಲಿ ಬಿಜೆಪಿ ಪಕ್ಷಕ್ಕೆ ಮತನೀಡಿ 4 ನೇ ಬಾರಿ ನಾನು ಶಾಸಕ ನಾಗಿ ಆಯ್ಕೆಯಾಗಲು ಆಶೀರ್ವಾದಿಸಿ ಬರದನಾಡಿನ ಸಮಗ್ರ ಅಭಿವೃದ್ದಿ ಗೊಳಿಸುವೆ ತಮಗೆ ಚಿರ ಋಣಿಯಾಗಿರುವೆ ಎಂದು ಶಾಸಕ ಎಸ್.ವಿ.ರಾಮಚಂದ್ರ ಮನವಿ ಮಾಡಿದರು.
ಪಟ್ಟಣದ ಬಯಲು ರಂಗಮಂದಿರ ಆವರಣದಲ್ಲಿ ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿನ ಬಿಜೆಪಿ ಆಡಳಿತಾವಧಿಯಲ್ಲಿ ಅಭಿವೃದ್ದಿ ಪರ್ವ:- ರಾಜ್ಯದಲ್ಲಿ ಬಿಜೆಪಿ ಆಡಳಿತಾವಧಿಯಲ್ಲಿ ಕ್ಷೇತ್ರಕ್ಕೆ ₹3500 ಕೋಟಿ ವೆಚ್ಚದಲ್ಲಿ ಅಭಿವೃದ್ದಿ ಪರ್ವ ಸಾಗಿದೆ.ಸಿರಿಗೆರೆ ಶ್ರೀಗಳ
ಆಶೀರ್ವಾದದಿಂದ 57 ಕೆರೆ ತುಂಬಿಸುವ ಯೋಜನೆ ಸಾಕಾರ ಗೊಂಡು ಕೆರೆಗಳು ಶೀಘ್ರ ಭರ್ತಿಯಾಗಲಿವೆ.₹1260 ಕೋಟಿ ವೆಚ್ಚದಲ್ಲಿ ಕನಸಿನ ಭದ್ರಾಮೇಲ್ದಂಡೆ ಯೋಜನೆ ಕಾಮಗಾರಿಗೆ ಚಾಲನೆ ಸಿಕ್ಕಿದೆ.₹350 ಕೋಟಿ ವೆಚ್ಚದಲ್ಲಿ ಅನೇಕ ಸಮುದಾಯ ಭವನಗಳು,ಹಳ್ಳಿಗಳ ರಸ್ತೆ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಂಡಿ ರುವೆ.₹2ಕೋಟಿ ರಾಜ್ಯ ಹೆದ್ದಾರಿ ಅಭಿವೃದ್ದಿ,₹ 4 ಕೋಟಿ ವೆಚ್ಚದಲ್ಲಿ ಪಟ್ಟಣದ ದ್ವಿಮುಖ ರಸ್ತೆ ನಿರ್ಮಾಣ ಮಾಡಲಾಗಿದೆ.ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯಇ ಲಾಖೆಯ ₹482 ಕೋಟಿ ವೆಚ್ಚದಲ್ಲಿ ಬಹು ಗ್ರಾಮ ಕುಡಿ ಯುವ ನೀರಿನ ಯೋಜನೆಯಡಿ ತಾಲೂಕಿನ ಸಂತೆಮುದ್ದಾಪುರ ಸೇರಿದಂತೆ 164 ಗ್ರಾಮಗಳಿಗೆ ತುಂಗಾಭದ್ರಾ ನೀರು ಪೂರೈಕೆ ಯೋಜನೆ, ಲೊಕೋಪಯೋಗಿ ಇಲಾಖೆಯ ರಸ್ತೆ ಅಗಲೀಕರಣ ಇತರೆ ಕಾಮಗಾರಿಗಳಿಗೆ ವಿವಿಧ ₹ 15.75 ಕೋಟಿ ವೆಚ್ಚದ,ಆರ್ ಡಿ ಪಿಆರ್ ಇಲಾಖೆಯ ₹ 11.25 ಕೋಟಿ ವೆಚ್ಚದಲ್ಲಿ ವಿವಿಧ ರಸ್ತೆ ಅಭಿವೃದ್ದಿ ಕಾಮಗಾರಿಗಳಿಗೆ ಇಂದು ಶಂಕುಸ್ಥಾಪನೆ ನೆರವೇರಿಸಲಾಗಿದೆ.ಒಟ್ಟಾರೆಯಾಗಿ ನನ್ನ ಆಡಳಿತಾ ವಧಿಯಲ್ಲಿ ಅಭಿವೃದ್ದಿಗೆ ಒತ್ತು ನೀಡಿರುವೆ ಎಂದು ಹೇಳಿದರು.
” ನಾನು ಜಗಳೂರು ಎಸ್ ಟಿ ಮೀಸಲು ಕ್ಷೇತ್ರದಲ್ಲಿ ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿ ಯಾರೊಬ್ಬ ಶಾಸಕ ಮಾಡದಿ ರುವ ಪಟ್ಟಣದಲ್ಲಿ ವಾಲ್ಮಿಕಿ ಪುತ್ಥಳಿ,ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿ ನಿರ್ಮಿಸಿದ ಪುಣ್ಯ ನನಗಿದೆ ಎಂದು ಹರ್ಷ ವ್ಯಕ್ತ ಪಡಿಸಿದರು.”
ವಿರೋಧ ಪಕ್ಷದವರ ವದಂತಿಗೆ ಕಿವಿಗೊಡಬೇಡಿ :- ಆರೋಗ್ಯ ಸರಿಯಿಲ್ಲ ಎಂಬ ವಿರೋಧ ಪಕ್ಷದವರ ವದಂತಿ ಗಳಿಗೆ ಕಿವಿ ಗೊಡಬೇಡಿ,ನಾನು ಯಾವುದೇ ಅನಾರೋಗ್ಯ ಪೀಡಿತನಾಗಿಲ್ಲ, ಆರೋಗ್ಯವಂತನಾಗಿರುವೆ ದಣಿವರಿಯದೆ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸಿ. ತಮ್ಮೆಲ್ಲರ ಹೃದಯ ಸ್ಪರ್ಶಿ ಯಾಗಿರುವೆ.ಇನ್ನೂ ಎರಡು ಬಾರಿ ಶಾಸಕನಾಗಲು ಸದೃಢ ನಾಗಿರುವೆ.ನಿಮ್ಮ ಮನೆಯ ಮಗ ನಾಗಿ ಸೇವೆಗೈಯುವೆ.ತಮ್ಮ ಅಹವಾಲು ಸ್ವೀಕಾರಕ್ಕೆ ನಮ್ಮ ಮನೆ ಬಾಗಿಲು ಸದಾ ತೆರೆದಿ ರುತ್ತದೆ ಎಂದರು.
ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಮಾತನಾಡಿ, ಸಂತೆ ಮುದ್ದಾಪುರ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಯಡಿ ₹482 ಕೋಟಿ ವೆಚ್ಚದಲ್ಲಿ 164 ಹಳ್ಳಿಗಳ ಮನೆಬಾಗಿಲಿಗೆ ಕುಡಿ ಯುವ ನೀರು ಪೂರೈಕೆ ಬೃಹತ್ ಯೋಜನೆಗೆ ಶಿಲಾನ್ಯಾಸ ಗೊಂಡಿ ರುವುದು ಸಂತಸದ ಸಂಗತಿ ಎಂದರು.
ಬರದನಾಡಿನ ಭಗೀರಥ ಎಸ್.ವಿ.ಆರ್:- ಬರದನಾಡಿಗೆ ₹2300 ಕೋಟಿ ನೀರಾವರಿ ಯೋಜನೆಗಳ ಅನುದಾನ ತಂದಿರುವ ಕೀರ್ತಿ ಬರದನಾಡಿನ ಭಗೀರಥ ಶಾಸಕ ಎಸ್.ವಿ.ರಾಮಚಂದ್ರ ಅವರಿಗೆ ಸಲ್ಲುತ್ತದೆ.ಜಿಲ್ಲೆಯ ಇತರೆ ತಾಲೂಕುಗಳ ಮಾದರಿ ಯಲ್ಲಿ ನೀರಾವರಿ ವಂಚಿತ ಬರದನಾಡು ಹಸಿರುನಾಡಾ ಗುವುದು.ಇದು ಬಿಜೆಪಿ ಆಡಳಿತಾವಧಿಯಲ್ಲಿ ಎಂಬುದು ಮೈ ಲುಗಲ್ಲಾಗಿದೆ ಎಂದು ಬಣ್ಣಿಸಿದರು.
ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ದಿ ಬಿಜೆಪಿ ಪಕ್ಷದ ಮಂತ್ರ ವಾಗಿದೆ.ಜಗಳೂರು ವಿಧಾನ ಸಭಾ ಕ್ಷೇತ್ರ ಸೇರಿದಂತೆ.ರಾಜ್ಯ ಮತ್ತು ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಆಡಳಿತಕ್ಕೆ ಬೆಂಬಲಿಸ ಬೇಕು. ಕೇಂದ್ರದಲ್ಲಿ ಪ್ರಧಾನಿ ಮೋದಿಜಿ ಅವರು ಭದ್ರಾ ಮೇಲ್ದಂಡೆ ಯೋಜನೆಗೆ ₹5300 ಕೋಟಿ ಅನುದಾನ ನೀಡಿದ್ದಾರೆ.ಅಲ್ಲದೆ ನಾನು ವಿಧಾನ ಪರಿಷತ್ ಸದಸ್ಯನಾಗಿ ಸ್ವಗ್ರಾಮ ಹುಚ್ಚಂಗಿಪುರ ಗ್ರಾಮದಲ್ಲಿ ₹4.50 ಕೋಟಿ ವೆಚ್ಚದಲ್ಲಿ ಸರಕಾರಿ ಮಾದರಿ ಶಾಲೆ ಸುಸಜ್ಜಿತ ಕಟ್ಟಡ ನಿರ್ಮಿಸುತ್ತಿರುವೆ ಎಂದರು.
ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಎಚ್.ಸಿ.ಮಹೇಶ್ , ಪ.ಪಂ ಉಪಾಧ್ಯಕ್ಷೆ ನಿರ್ಮಲ ಹನುಮಂತಪ್ಪ,ಮಾಜಿ ಜಿ.ಪಂ ಸದಸ್ಯರಾದ ಎಸ್.ಕೆ.ಮಂಜುನಾಥ್,ಸೊಕ್ಕೆ ನಾಗರಾಜ್ ,ಬಿಸ್ತುವಳ್ಳಿ ಬಾಬು,ಕೃಷ್ಣಮೂರ್ತಿ,ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ವೇಣು ಗೋಪಾಲರೆಡ್ಡಿ,ಮುಖಂಡರಾದ ಮಂಜುನಾಥಯ್ಯ ,ಅಜಯ್ ಬಣಕಾರ್,ಪೂಜಾರ್ ಸಿದ್ದಪ್ಪ,ಗಡಿಮಾಕುಂಟೆ ಸಿದ್ದೇಶ್, ಬಕ್ಕೇಶ್ ಪಟೇಲ್,ರಾಜೇಶ್,ಫಣಿಯಾಪುರ ಲಿಂಗರಾಜ್, ಬಾಲೇನಹಳ್ಳಿ ಕೆಂಚನಗೌಡ,ಇಲಾಖೆಯ ತಹಶೀಲ್ದಾರ್ ಸಂತೋಷ್ ಕುಮಾರ್ ಜಿ. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಹೇಶ್ವರಪ್ಪ. ಕೃಷಿ ಇಲಾಖೆ ಮಿಥುನ್. ತೋಟಗಾರಿಕೆ ವೆಂಕಟೇಶ್ ಮೂರ್ತಿ . ಸಾದಿಕ್ಉಲ್ಲಾ ಖಾನ್,ತಿಪ್ಪೇಸ್ವಾಮಿ, ಸೇರಿದಂತೆ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಕಾರ್ಯ ಕರ್ತರಿದ್ದರು