ಪ್ರಜಾ ನಾಯಕ ಸುದ್ದಿ ಜಗಳೂರು :-ಇಂದು ಪಟ್ಟಣದಲ್ಲಿ ಶ್ರೀ ಬೇಡಿ ಸಂಜೀವ ಮೂರ್ತಿ ಹನುಮಾನ್ ಸೇವಾ ಸಮಿತಿಯಿಂದ ಪ್ರಥಮ ವರ್ಷದ ಹನುಮ ಮಾಲಾಧಾರಿಗಳಿಂದ ಪಟ್ಟಣದಲ್ಲಿ ಬೃಹತ್ ಸಂಕೀರ್ತನ ಶೋಭ ಯಾತ್ರೆ ಅದ್ದೂರಿಯಾಗಿ ನೆರವೇರಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ದೇವಸ್ಥಾನಗಳ ಸರ್ವಧರ್ಮ ಸಮಿತಿಯ ಪ್ರಾಂತ್ಯ ಪ್ರಮುಖ ಮುನಿಯಪ್ಪನವರ ಮಾತನಾಡಿ ನಾಳೆನ ಕಾರ್ಯಕ್ರಮದಲ್ಲಿ ಮಾಲಾಧಾರಿಗಳು ಬೆಳಗ್ಗೆ 6 ಗಂಟೆಗೆ ಸ್ನಾನ ಮಾಡಿ ಹೋಮ ಅವನದಲ್ಲಿ ಕುಳಿತುಕೊಳ್ಳ ಬೇಕು. ಪೂರ್ಣ ಅವಧಿ ಇರುತ್ತದೆ. ನಂತರ ಸ್ವಾಮೀಜಿಗಳಿಂದ ಧಾರ್ಮಿಕ ಸಭೆ ಇರುತ್ತದೆ. ನೀವುಗಳು ನಿಮ್ಮ ಕುಟುಂಬದವರನ್ನು ಕರೆತರಬೇಕು. ನಂತರ ಸ್ವಾಮೀಜಿಗಳು ನಿಮಗೆ ಅಕ್ಷತೆ ಹೂವನ್ನು ಹಾಕಿ ಆಶೀರ್ವಾದ ಮಾಡುತ್ತಾರೆ ನಂತರ ಮಾಲೆಯನ್ನು ತೆಗೆಯ ಬೇಕು. ಈ ಕಾರ್ಯಕ್ರಮಕ್ಕೆ ಕುಟುಂಬ ಸಮೇತರು ಎಲ್ಲರೂ ಬನ್ನಿ ಎಂದು ಕರೆ ನೀಡಿದರು.
ಕರಿಬಸಯ್ಯ ಮಾತನಾಡಿ ಇಂದು ಹಳ್ಳಿಗಳಿಂದ ಬಹಳ ಜನರು ಬಂದಿದ್ದೀರಿ. ನಾಳಿನ ಕಾರ್ಯಕ್ರಮಕ್ಕೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ನೀವುಗಳು ಕರೆತರಬೇಕು. ಮುಂಜಾನೆ 9:00 ಗಂಟೆಗೆ ಸತ್ಸಂಗ. ಹನುಮಾನ್ ಚಾಲೀಸ್ ಶುರು ಮಾಡಲಾಗುವುದು ಹಾಗಾಗಿ ಎಲ್ಲಾ ಮಾಲಾಧಾರಿಗಳು ಹಾಜರಿರಬೇಕು ಎಂದು ಹೇಳಿದರು.
ಬೃಹತ್ ಸಂಕೇತನ ಶೋಭ ಯಾತ್ರೆಗೆ ಪೊಲೀಸ್ ಇಲಾಖೆಯ ಪಿ.ಐ ಶ್ರೀನಿವಾಸ್ ರಾವ್ ಅವರ ಮಾರ್ಗದರ್ಶನದಲ್ಲಿ ಸಿಬ್ಬಂದಿ ಗಳು ಯಾವುದೇ ಘಟನೆ ನಡೆಯದಿರುವ ರೀತಿ ತಮ್ಮ ಕರ್ತವ್ಯ ವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು.
ಶೋಭ ಯಾತ್ರೆಯು ಮೆರವಣಿಗೆ ಮುಖಾಂತರ ಹೊರಟು ಅಂಬೇಡ್ಕರ್ ವೃತ್ತದಿಂದ ಪ್ರಮುಖ ರಸ್ತೆಗಳ ಮುಖಾಂತರ ಹೊರಕೆರೆಯ ಮಾರಮ್ಮನ ದೇವಸ್ಥಾನ ಹತ್ತಿರ ಕೊನೆಗೊಳಿಸ ಲಾಗಿತ್ತು. ಈ ಯಾತ್ರೆಯಲ್ಲಿ ಸಾವಿರಕ್ಕೂ ಹೆಚ್ಚು ಮಾಲಾಧಾರಿಗಳು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಜಗಳೂರಿನ ಶಾಸಕರಾದ ಎಸ್ ವಿ ರಾಮ ಚಂದ್ರಪ್ಪ, ನಿವೃತ್ತ ಡಿ ವೈ ಎಸ್ ಪಿ ಕಲ್ಲೇಶಪ್ಪ , ಎ ಎಂ ಮರುಳಾ ರಾಧ್ಯ, ಬಿದರಿಕೆರೆ ಪ್ರಕಾಶ್, ಡಾಕ್ಟರ್ ರವಿಕುಮಾರ್, ಜೆ ವಿ ನಾಗರಾಜ್, ಶಿವಕುಮಾರ ಸ್ವಾಮಿ, ರವಿಕುಮಾರ್. ಪೆಟ್ರೋಲ್ ಬಂಕ್ ಮಾಲೀಕರ ಬಾಬಣ್ಣ. ಎಸ್ ಕೆ ಮಂಜುನಾಥ್ ಸೇರಿದಂತೆ ಭಕ್ತಾದಿಗಳು ಹಾಗೂ ಮಾಲಾಧಾರಿಗಳು ಪಾಲ್ಗೊಂಡಿದ್ದರು.