ಪ್ರಜಾ ನಾಯಕ ಸುದ್ದಿ ಜಗಳೂರು :- 4 ನೇ ಬಾರಿ ಶಾಸಕನನ್ನಾಗಿಸಿ ಕ್ಷೇತ್ರ ದ ಶಾಶ್ವತ ನೀರಾವರಿ ಯೋಜನೆಗಳ ಕಾಮಗಾರಿ ಪೂರ್ಣ ಗೊಳಿಸಲು ಅವಕಾಶ ಕೊಡಿ ಎಂದು ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಎಸ್.ವಿ.ರಾಮಚಂದ್ರ ಮನವಿಮಾಡಿದರು.
ಪಟ್ಟಣದ ಈಶ್ವರ ದೇವಸ್ಥಾನದಿಂದ ಭುವನೇಶ್ವರಿ ವೃತ್ತದಮೂಲಕ ಮಹಾತ್ಮಗಾಂಧಿ ನಂತರ ಅಂಬೇಡ್ಕರ್ ವೃತ್ತದವರೆಗೆ ರೋಡ್ ಶೋ ನಡೆಸಿ ನಂತರ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿ ದರು.
ಬಿಜೆಪಿ ಸರಕಾರದ ಆಡಳಿತಾವಧಿಯಲ್ಲಿ ಕ್ಷೇತ್ರಕ್ಕೆ ₹3500 ಕೋಟಿ ಅನುದಾನದಲ್ಲಿ ರಸ್ತೆ,ಶಾಶ್ವತ ನೀರಾವರಿ ಯೋಜನೆಗಳನ್ನು ಸಾಕಾರ ಗೊಳಿಸಿರುವೆ.57 ಕೆರೆತುಂಬಿಸುವ ಯೋಜನೆ ಪೈಪ್ ಲೈನ್ ಕಾಮ ಗಾರಿ ತ್ವರಿತಗತಿಯಲ್ಲಿ ಸಾಗಿದೆ.₹1360 ಕೋಟಿ ವೆಚ್ಚದ ಕನಸಿನ ಭದ್ರಾಮೇಲ್ದಂಡೆ ಯೋಜನೆ ಕಾಮಗಾರಿಗೆ ಶಂಕುಸ್ಥಾಪನೆ ನೆರ ವೇರಿಸಲಾಗಿದೆ.ಅಲ್ಲದೆ ಜಲಜೀವನ್ ಮಿಷನ್ ಯೋಜನೆಯಡಿ 164 ಹಳ್ಳಿಗಳ ಮನೆ ಬಾಗಿಲಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುವುದು ಮೇ ಹತ್ತರಂದು ನಡೆಯುವ ಚುನಾವಣೆ ಯಲ್ಲಿ ನಿಮ್ಮ ಆಶೀರ್ವಾದ ನನ್ನ ಮೇಲಿರಲಿ ಎಂದರು.ಮೇ.10 ರಂದು ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ನನ್ನ ಕಮಲದ ಗುರುತಿಗೆ ಮತಚಲಾಯಿಸಿ ಅಧಿಕ ಮತಗಳ ಅಂತರ ದಲ್ಲಿ ಗೆಲ್ಲಿಸಬೇಕು ಎಂದು ಮನವಿಮಾಡಿದರು.
ವದಂತಿಗಳಿಗೆ ಕಿವಿಗೊಡದೆ ಕಾರ್ಯಕರ್ತರು ಒಗ್ಗಟ್ಟಿನಿಂದ ಬೂತ್ ಮಟ್ಟದಲ್ಲಿ ಹೆಚ್ಚು ಮತಗಳನ್ನು ಹಾಕಿಸಿ ಮತ್ತೊಮ್ಮೆ ಎಸ್.ವಿ. ರಾಮಚಂದ್ರ ಗೆಲ್ಲಿಸಿ ಸಚಿವನಾಗಲು ಅವಕಾಶ ನೀಡಿ ಎಂದು ಜಿಎಂ ಸಿದ್ದೇಶ್ವರ್ ಪುತ್ರ ಅನಿತ್ ಹೇಳಿದರು.
ಸಂದರ್ಭದಲ್ಲಿ ಶಾಸಕ ಪತ್ನಿ ಇಂದಿರಾ ರಾಮಚಂದ್ರ,ಬಿಜೆಪಿ ಮಂಡಲ ಅಧ್ಯಕ್ಷ ಎಚ್.ಸಿ.ಮಹೇಶ್ ,ಮುಖಂಡರಾದ ಸೊಕ್ಕೆ ನಾಗರಾಜ್, ಬಿದರಿಕೆರೆ ರವಿಕುಮಾರ್ ರಶ್ಮಿ ರಾಜಪ್ಪ,ಬಿಸ್ತುವಳ್ಳಿ ಬಾಬು,ಕೃಷ್ಣ ಮೂರ್ತಿ,ಬೆಂಚಿಕಟ್ಟೆ ಅಂಜಿನಪ್ಪ,ಜಯಲಕ್ಷ್ಮಿ, ಹೊನ್ನಮರಡಿ ಬಾಲರಾಜ್ ಸೇರಿದಂತೆ ಇದ್ದರು.