ಪ್ರಜಾ ನಾಯಕ ಸುದ್ದಿ ಜಗಳೂರು :- ಶಿಕ್ಷಣ ಸಂಸ್ಥೆಯಲ್ಲಿ ಜವಾನ ವೃತ್ತಿಯನ್ನು 33 ವರ್ಷಗಳ ಕಾಲ ಸೇವೆಗೈದು ಕುಟುಂಬ ನಿರ್ವಹ ಣೆಯ ಜೊತೆಗೆ ಬದುಕು ಕಟ್ಟಿಕೊಂಡು ಜನರ ಆಶೀರ್ವಾದದಿಂದ ಶಾಸಕನಾಗಿರುವೆ ಮೂಲ ವೃತ್ತಿ ಗೌರವಕ್ಕಾಗಿ ಜೂನ್ 1 ರಂದು ಕಸಗುಡಿಸಿ ಗಂಟೆ ಭಾರಿಸಿ ಕ್ಷೇತ್ರದ ಅಭಿವೃದ್ದಿ ಕಾರ್ಯಚಟುವಟಿಕೆ ಗಳಿಗೆ ಚಾಲನೆ ನೀಡುವೆ ಎಂದು ಶಾಸಕ ಬಿ. ದೇವೇಂದ್ರಪ್ಪ ತಿಳಿಸಿದರು.
ತಾಲೂಕಿನ ಕೆಳಗೋಟೆ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ನೂತನ ಶಾಸಕ ದೇವೇಂದ್ರಪ್ಪ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಾಯಕದ ಬಗ್ಗೆ ಕೀಳಿರಿಮೆ ಸಲ್ಲದು :- ಕೆಳ ಹಂತದ ಯಾವುದೇ ವೃತ್ತಿ ಬಗ್ಗೆ ಕೀಳಿರಿಮೆ ಬೇಡ.ನಿಷ್ಠೆಯಿಂದ ಸೇವೆ ಮಾಡಿದರೆ ಪುಣ್ಯ ಪ್ರಾಪ್ತಿ ಎಂಬುದಕ್ಕೆ ನನ್ನ ಮಗ ಪಡೆದ ಉನ್ನತ ಹುದ್ದೆ ಮತ್ತು ನಾನು ಶಾಸಕನಾಗಿರುವುದೇ ಸಾಕ್ಷಿಯಾಗಿದೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಅಲೆಯಿಂದ ಸಂಪೂರ್ಣ ಬಹುಮತ ದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದಿದೆ.ಬಿಜೆಪಿ ಪಕ್ಷದ ಡಬಲ್ ಇಂಜಿನ್ ಸರಕಾರದ ಆಡಳಿತದಲ್ಲಿ ಒಂದು ಇಂಜಿನ್ ಕಳಚಿಬಿದ್ದಿದೆ ಮುಂದಿನ ದಿನದಲ್ಲಿ ಇನ್ನೊಂದು ಇಂಜಿನ್ ಕಿತ್ತೆಸೆಯಲು ಮತ ದಾರರು ಬೆಂಬಲಿಸಲಿದ್ದಾರೆ ಎಂದು ಭವಿಷ್ಯ ನುಡಿದರು.
ಕಾಂಗ್ರೆಸ್ ಪಕ್ಷದ ಎದೆಹಾಲು ಕುಡಿದವರಿಂದ ಪಕ್ಷಕ್ಕೆ ದ್ರೋಹ:- ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಅಧಿಕಾರವನ್ನು ಅನುಭವಿಸಿ ನಂತರ ಕಾಂಗ್ರೆಸ್ ಪಕ್ಷ ಬಂಜೆ ಎಂದು ತಿಳಿದು.ಶೇ.90 ರಷ್ಟು ಕಾರ್ಯಕರ್ತರು ಬೀದಿಯಲ್ಲಿ ಬಿಟ್ಟು ಹೋದರು.ಅದರ ಮಡಿಲು ಸೇರಿದ ನಮಗೆ ಗರ್ಭದಲ್ಲಿರುವ 51000 ಮತಗಳು ದೊರೆತು ಕ್ಷೇತ್ರದ ಜನತೆಯ ಬೆಂಬಲದಿಂದ ಶಾಸಕನಾಗಿ ಆಯ್ಕೆಯಾಗಿ ರುವೆ.ಇದನ್ನು ಕಾಂಗ್ರೆಸ್ ಮಾತೃವಿನ ಎದೆಹಾಲು ಕುಡಿದುಪಕ್ಷಕ್ಕೆ ಮೋಸಮಾಡಿದವರು ಆತ್ಮಾವಲೋಕನಮಾಡಿಕೊಳ್ಳಬೇಕಿದೆ ಎಂದು ನಿದರ್ಶನ ನೀಡಿದರು.
ನಾನು ರೌಡಿಯಲ್ಲ ಅಹಿಂಸಾವಾದಿ:-ಕೆಲವರು ನಾನೊಬ್ಬ ರೌಡಿ ಎಂದು ಬಿಂಬಿಸಿದರು ಆದರೆ ನಾನೊಬ್ಬ ಅಹಿಂಸಾವಾದಿ ಎಲ್ಲರ ನ್ನೂ ಪ್ರೀತಿಸುವೆ.ನಾನು ರೌಡಿಯಾದರೆ ಅದನ್ನು ಸಂಬಂಧಿಸಿದ ಇಲಾಖೆ ಗುರುತಿಸಬೇಕು ಎಂದ ಅವರು.ಕ್ಷೇತ್ರದಲ್ಲಿ ಮತಹಾಕಿದ ವರಿಗೆ ಮಾತ್ರವಲ್ಲ 193000 ಮತದಾರರಿಗೆ ನಾನು ಶಾಸಕನಾಗಿ ಕ್ಷೇತ್ರದ ಅಭಿವೃದ್ದಿಗೊಳಿಸುವೆ ಧೈರ್ಯದಿಂದ ನನಗೆ ಸಹಕರಿಸಿ ಎಂದು ಮನವಿಮಾಡಿದರು.
“ಸಾರ್ವಜನಿಕರ ಅಹವಾಲು ಸ್ವೀಕರಿಸಲು ಪಟ್ಟಣದ ಹಳೆಯ ಪಟ್ಟಣ ಪಂಚಾಯಿತಿ ಕಛೇರಿಯನ್ನು ಜನಸಂಪರ್ಕ ಕೇಂದ್ರ ವನ್ನಾಗಿಸುವೆ.ಹಾಗೂ ಮುಕ್ತಿವಾಹನ,ಅಂಬ್ಯುಲೆನ್ಸ್ ಒದಗಿಸುವೆ ಎಂದು ತಿಳಿಸಿದರು”
ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯಾಧ್ಯಕ್ಷ ಕೆಪಿ ಪಾಲಯ್ಯ ಮಾತ ನಾಡಿ,ನಮ್ಮ ಪಕ್ಷದ ಆಡಳಿತಾವಧಿಯಲ್ಲಿ ತಾಲೂಕಿನಲ್ಲಿ ಅನೇಕ ಪ್ರಮುಖ ರಸ್ತೆಗಳ ನಿರ್ಮಾಣಕ್ಕೆ ನಾನು ಹೆಚ್ಚು ಒತ್ತಡ ತಂದಿರುವೆ. ಪುನಃ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದಿದೆ.ಕಾರ್ಯ ಕರ್ತರು ಚಿಕ್ಕಪುಟ್ಟ ವೈಮನಸ್ಸುಗಳನ್ನು ತೊರೆದುಕ್ಷೇತ್ರದಲ್ಲಿನ ಹಳ್ಳಿಗಳ ಸಮಗ್ರ ಅಭಿವೃದ್ದಿಗೆ ಸಹಕರಿಸಬೇಕು ಎಂದು ಸಲಹೆ ನೀಡಿದರು
ಇದೇ ವೇಳೆ ಕೆಳಗೋಟೆ ಗ್ರಾಮದ ಗ್ರಾಮಸ್ಥರು ಪಟಾಕಿ ಸಿಡಿಸಿ ,ಕೇಕ್ ಕತ್ತರಿಸಿ ,ಶಾಸಕರನ್ನು ಸನ್ಮಾನಿಸಿ ಗೌರವಿಸಿದರು.
ಕೆಪಿಸಿಸಿ ತಾಲೂಕು ಉಸ್ತುವಾರಿ ಕಲ್ಲೇಶ್ ರಾಜ್ ಪಟೇಲ್ ಮಾತ ನಾಡಿ,ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ದೆವೇಂದ್ರಪ್ಪ ಅವರಿಗೆ 408 ಮತಗಳನ್ನು ಚಲಾಯಿಸಿ ಗೆಲುವಿಗೆ ಸಾಕ್ಷಿಯಾಗಿ ರುವ ಕೆಳಗೋಟೆ ಗ್ರಾಮಸ್ಥರಿಗೆ ಅಭಿನಂದನೆಗಳು.ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲು ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಸಿದ್ದತೆ ನಡೆಸಿದ್ದಾರೆ. ವಿರೋಧ ಪಕ್ಷಗಳ ಟೀಕೆಗಳಿಗೆ ಕಿವಿಗೊಡಬೇಡಿ.ಲಿಖಿತ ಸಂವಿ ಧಾನದಡಿ ಯಲ್ಲಿ ಕಾಂಗ್ರೆಸ್ ಪಕ್ಷ ಬದ್ದವಾಗಿರುತ್ತದೆ.ಆಡಳಿತ ಪಕ್ಷದ ಬಗ್ಗೆ ಜನತೆಯ ವಿಶ್ವಾಸ ಮುಖ್ಯ ಎಂದರು.
ಕಾಂಗ್ರೆಸ್ ಜಿಲ್ಲಾ ಪ್ರಧಾನಕಾರ್ಯದರ್ಶಿ ಪಲ್ಲಾಗಟ್ಟೆ ಶೇಖರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್, ಪಲ್ಲಾಗಟ್ಟೆ ಶೇಖರಪ್ಪ,ಸಿ.ತಿಪ್ಪೇಸ್ವಾಮಿ,ಗ್ರಾ.ಪಂ ಮಾಜಿ ಅಧ್ಯಕ್ಷ ಗುರುಸ್ವಾಮಿ,ಪ.ಪಂ ಸದಸ್ಯರಾದ ರವಿಕುಮಾರ್,ಶಕೀಲ್ ಅಹ ಮ್ಮದ್,ಮುಖಂಡರಾದ ರುದ್ರೇಶ್,ನವೀನ್ ಕುಮಾರ್, ಅಜಯ್, ದಾದಪೀರ್,ತಿಪ್ಪೇಸ್ವಾಮಿ,ಕೃಷ್ಣಪ್ಪ,ಗೌಸ್ ಪೀರ್,ವಿಜಯ್ ,ಗುರುಸಿದ್ದನಗೌಡ,ವೀರಭದ್ರಪ್ಪ,ಶಫಿವುಲ್ಲಾ,ಅಹಮ್ಮದ್ ಅಲಿ, ಅಜಾಮುಲ್ಲಾ,ಗ್ರಾ.ಪಂ ಸದಸ್ಯರಾದ ಹರೀಶ್,ಮಂಜುನಾಥ್, ಸೇರಿದಂತೆ ಇದ್ದರು.