ಪ್ರಜಾ ನಾಯಕ ಸುದ್ದಿ ಜಗಳೂರು :- ಸಿರಿಗೆರೆ ಶ್ರೀಗಳ ಆಶೀರ್ವಾದ ದಿಂದ ಸಾಕಾರಗೊಂಡಿರುವ ಎರಡು ಶಾಶ್ವತ ನೀರಾವರಿ ಯೋಜ ನೆ ಗಳ ಕಾಮಗಾರಿ ಪೂರ್ಣಗೊಳಿಸುವೆ.ನಾನು ಮಾತನಾಡುವ ಶಾಸಕನಲ್ಲ ಕ್ಷೇತ್ರವನ್ನು ಅಭಿವೃದ್ದಿಪಡಿಸುವ ಸೇವಕ ಎಂದು ಶಾಸಕ ಬಿ.ದೇವೇಂದ್ರಪ್ಪ ಭರವೆ ನೀಡಿದರು.
ಪಟ್ಟಣದ ತರಳಬಾಳು ಭವನದಲ್ಲಿ ಕಾಂಗ್ರೆಸ್ ಪಕ್ಷದಿಂದ ನೂತನ ಶಾಸಕ ಬಿ.ದೇವೇಂದ್ರಪ್ಪ ಅವರಿಗೆ ಅಭಿನಂದನೆ ಹಾಗೂ ಕಾರ್ಯ ಕರ್ತರಿಗೆ ಕೃತಜ್ಞತಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
2018ರಲ್ಲಿ ತರಳಬಾಳು ಹುಣ್ಣಿಮೆ ಸಂದರ್ಭದಲ್ಲಿ ಸಿರಿಗೆರೆ ಶ್ರೀ ಗಳು 57 ಕೆರೆ ತುಂಬಿಸುವ ಯೋಜನೆ ರೂಪಿಸಿದ್ದು.ಮುಖ್ಯ ಮಂತ್ರಿ ಸಿದ್ದರಾಮಯ್ಯ ನವರ ಸಹಕಾರದಿಂದಯಶಸ್ವಿಯಾಗಿ ಕ್ಷೇತ್ರದಲ್ಲಿ ಪೈಪ್ ಲೈನ್ ಕಾಮಗಾರಿ ಪ್ರಗತಿಯಲ್ಲಿದೆ.ಅಲ್ಲದೆ ಬಹುದಿನದ ಕನಸಿನ ಭದ್ರಾಮೇಲ್ದಂಡೆ ಯೋಜನೆ ಕಾಮಗಾರಿ ಸಾಕಾರಗೊಂಡಿ ದ್ದು.ನನ್ನ ಆಡಳಿತಾವಧಿಯಲ್ಲಿ ಮತ್ತೊಮ್ಮೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬಹುಮತದಿಂದ ಆಡಳಿತ ಚುಕ್ಕಾಣಿ ಹಿಡಿದು ಸಿದ್ದರಾಮಯ್ಯ ನವರು ಮುಖ್ಯಮಂತ್ರಿಯಾಗಿರುವುದು ಕ್ಷೇತ್ರಕ್ಕೆ ವರದಾನವಾಗಿ ದ್ದು.ಬರದನಾಡುನೀರಾವರಿ ನಾಡಾಗಿ ಪರಿವರ್ತನೆಗೊಂಡು ರೈತರ ಬದುಕು ಹಸನಾಗಲಿದೆ.ಜಾನು ವಾರುಗಳು ಸಂತೃಪ್ತಿ ಜೀವನಸಾಗಿ ಸುವಂತಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕ್ಷೇತ್ರದಲ್ಲಿ ಶಿಕ್ಷಣ,ಆರೋಗ್ಯ,ಸಾರಿಗೆ,ರಸ್ತೆ ಅಭಿವೃದ್ದಿ ಕುಡಿಯುವ ನೀರು ಪುರೈಕೆ,ಬಡವರಿಗೆ ಸೂರು ಕಲ್ಪಿಸಲು ಮೊದಲ ಆದ್ಯತೆ ನೀಡಲಾಗುವುದು ಕ್ಷೇತ್ರದಲ್ಲಿ ನನ್ನನ್ನು ಶಾಸಕನನ್ನಾ ಗಿಸಲು ಗೆಲು ವಿನ ರಥ ಪಾದಗಟ್ಟೆ ತಲುಪಿಸಿದ ಪೂಜಾರಿ ಗಳಂತಿದ್ದ ಕಾರ್ಯ ಕರ್ತರಿಗೆ ಹಾಗೂ ಮತದಾರರಿಗೆ ಅಬಿನಂದನೆಗಳು ಎಂದು ತಿಳಿಸಿದರು.
ಪಕ್ಷ ತೊರೆದವರಿಗೆ ಕಾರಣ ಕೇಳಿ ಬರಮಾಡಿಕೊಳ್ಳುವೆ:- ಕಾಂಗ್ರೆ ಸ್ ಪಕ್ಷ ಬಿ ಫಾರಂ ನೀಡುತ್ತಿದ್ದಂತೆ ಪಕ್ಷ ತೊರೆದು ಹೊರ ಹೋದ ವರು.ಇದೀಗ ಪಕ್ಷದಿಂದ ಗೆದ್ದ ನಂತರ ಪುನಃ ಪಕ್ಷ ಸೇರ್ಪಡೆಗೆ ತುದಿಗಾಲಲ್ಲಿ ನಿಂತಿರುವವರಿಗೆ ನನ್ನ ಪ್ರಶ್ನೆ ಅಧಿಕಾರ,ಸ್ಥಾನಮಾನ ಅನುಭವಿಸಿದ್ದ ನೀವು ಏಕೆ,ಎಲ್ಲಿಗೆ ಯಾವ ಉದ್ದೇಶಕ್ಕೆ ಹೊಗಿದ್ದಿರಿ ಎಂಬುದನ್ನು ಸ್ಪಷ್ಟನೆ ನೀಡಿ ಬನ್ನಿ.ನಿಜಕ್ಕೂ ಸ್ವಾಬಿಮಾನವಿದ್ದರೆ ಉತ್ತರಿಸಿ.ನೀವು ಅವಸರ ದಲ್ಲಿ ಕೇವಲ ಗೂಟ ಕಿತ್ತುಕೊಂಡು ನನಗೆ ಶಾಸಕನ ಕುರ್ಚಿ ಬಿಟ್ಟು ಹೋಗಿರುವಿರಿ ಅದೇ ನನಗೆ ಭದ್ರ ವಾಗಿದೆ ಆದರೆ ನಾನು ಕೇವಲ ಮತನೀಡಿದ 51000 ಮತ ದಾರರಿಗೆ ಮಾತ್ರ ಶಾಸಕ ನಲ್ಲ 193000 ಮತದಾರರಿಗೂ ಶಾಸಕ ನಾಗಿ ಸ್ಪಂದಿಸುವೆ ಎಂದು ಸವಾಲು ಹಾಕಿದರು.
5 ವರ್ಷದ ಆಡಳಿತವಾಧಿಯ ನಂತರ ನನ್ನ ಆಡಳಿತಾವಧಿ ಯಲ್ಲಿ ಕೈಗೊಳ್ಳುವ ಕ್ಷೇತ್ರದ ಅಭಿವೃದ್ದಿ ಕಾಮಗಾರಿಗಳನ್ನು ಅವಲೋಕಿಸಿ ಸಮರ್ಥನಾಗಿದ್ದರೆ ಜನಪ್ರಿಯ ಶಾಸಕನ ಬಿರುದು ಕೊಡಿ ಅಲ್ಲಿಯ ವರೆಗೂ ನಾನೊಬ್ಬ ಅಸಮರ್ಥಶಾಸಕ ನಾಗಿ ಸೇವೆಗೈಯುವೆ ತಾವು ಸಹಕರಿಸಬೇಕು ಎಂದು ಕಾರ್ಯ ಕರ್ತರಿಗೆ ಹೇಳಿದರು.
ಕೋಮುವಾದಿ ಬಿಜೆಪಿ ಪಕ್ಷ ಕಿತ್ತೆಸೆಯಿರಿ:- ಎಐಸಿಸಿ ಅಧ್ಯಕ್ಷ ಮಲ್ಲಿ ಕಾರ್ಜುನ್ ಖರ್ಗೆ ಅವರ ಕಿವಿಮಾತಿನಂತೆ ದೇಶದಲ್ಲಿ ಕೋಮು ವಾದಿ ಬಿಜೆಪಿ ಪಕ್ಷ ಕಿತ್ತೆಸೆಯೋಣ.ಡಬಲ್ ಇಂಜಿನ್ ಸರಕಾರ ಎಂದು ಬೀಗುತ್ತಿದ್ದ ಬಿಜೆಪಿ ಆಡಳಿತ ಸರಕಾರದಿಂದ ಬೇಸತ್ತ ಮತ ದಾರರು ಒಂದು ಇಂಜಿನ್ ಕತ್ತರಿಸಿದ್ದಾರೆ.ಮುಂಬರುವ ಚುನಾ ವಣೆ ಯಲ್ಲಿ ಮತ್ತೊಂದು ಇಂಜಿನ್ ಕಳಚಿ ಬೀಳ ಲಿದೆ ಎಂದು ಭವಿಷ್ಯ ನುಡಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಸಗೋಡು ಜಯಸಿಂಹ ಮಾತ ನಾಡಿ,ದಿವಂಗತ ಇಮಾಂ ಸಾಹೇಬ್,ಅಶ್ವತ್ಥರೆಡ್ಡಿ ಅವರಂತಹ ಮುತ್ಸದ್ದಿ ರಾಜಕಾರಣಿಗಳು ಜನಿಸಿದ ಜಗಳೂರು ಜಾತ್ಯಾತೀತ ಕ್ಷೇತ್ರವಾಗಿದೆ.ಕೆ.ಪಿ.ಪಾಲಯ್ಯ ಅವರು ಕ್ಷೇತ್ರದ ಎಲ್ಲಾವರ್ಗದವರ ವಿಶ್ವಾಸ ಗಳಿಸಿದ ಕಾಂಗ್ರೆಸ್ ಪಕ್ಷದ ಸಿದ್ದಾಂತ ಅಳವಡಿಸಿಕೊಂಡ ಶಿಸ್ತಿನ ಸಿಪಾಯಿಯಾಗಿದ್ದಾರೆ.ಪ್ರತಿಯೊಬ್ಬ ರೂ ಪಕ್ಷದ ನಿರ್ಣಯಕ್ಕೆ ಬದ್ದರಾಗಿರಬೇಕು. ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನ ದಡಿ ಏಕತೆ ಸಾರುವ ಸರ್ವಧರ್ಮ ಸಮಾನತೆಯ ಪ್ರತೀಕವಾಗಿರು ವುದು ಕಾಂಗ್ರೆಸ್ ಪಕ್ಷ ಎಂದು ಹೇಳಿದರು.
ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮಾತ ನಾಡಿ,ಮಾಜಿ ಶಾಸಕ ಎಚ್.ಪಿ.ರಾಜೇಶ್ ನೇತೃತ್ವದಲ್ಲಿ ಪ್ರಮುಖ ಮುಂಚೂಣಿ ನಾಯಕರುಗಳು ಕಾಂಗ್ರೆಸ್ ಪಕ್ಷ ತೊರೆದು ಹೋದ ಸಂದರ್ಭದಲ್ಲಿ ಸಾಮಾನ್ಯ ಕಾರ್ಯಕರ್ತರು ಮೆಟ್ಟಿನಿಂತು ಸಂಕಷ್ಟ ಕಾಲದಲ್ಲಿ ಕೈಹಿಡಿದು ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಸಾಕ್ಷಿಯಾದ ನಿಮಗೆ ಕೃತಜ್ಞತೆಗಳು.ವೈಮನಸ್ಸು ತೊರೆದು ಕ್ಷೇತ್ರದ ಅಭಿವೃದ್ದಿಗೆ ಕೈಜೋಡಿಸಿ ದೇಶದಲ್ಲಿ ಎಲ್ಲಾ ವರ್ಗದವರ ನೆಮ್ಮದಿಗೆ ಕಾಂಗ್ರೆಸ್ ಪಕ್ಷದ ಆಡಳಿ ಅವಶ್ಯಕ ಮುಂಬರುವ ಚುನಾವಣೆಗಳನ್ನು ಸವಾ ಲಾಗಿ ಸ್ವೀಕರಿಸೋಣ ಎಂದು ಕರೆ ನೀಡಿದರು.
ಕೆಪಿಸಿಸಿ ತಾಲೂಕು ಉಸ್ತುವಾರಿ ಕಲ್ಲೇಶ್ ರಾಜ್ ಪಟೇಲ್ ಮಾತ ನಾಡಿ,ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳನ್ನು ಷರತ್ತುರಹಿತ ವಾಗಿ ಜಾರಿಗೊಳಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಿಜೆಪಿ ಪಕ್ಷದ ಟೀಕಾಕಾರರಿಗೆ ಉತ್ತರಿಸಿದ್ದಾರೆ.ಮುಂಬರುವ ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷದ ಗೆಲುವು ನಿಶ್ಚಿತ ಎಂದರು.
ಈ ಸoದರ್ಭದಲ್ಲಿ ಮಾಜಿ ಸಂಸದ ಚನ್ನಯ್ಯ ಒಡೆಯರ್ ಪುತ್ರ ಡಾ.ಉದಯಶಂಕರ್ ಒಡೆಯರ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾದ ಷಂಷೀರ್ ಅಹಮ್ಮದ್,ಎಸ್.ಮಂಜು ನಾಥ್,ಮುಖoಡ ರಾದ ಜಯದೇವನಾಯ್ಕ, ಪಲ್ಲಾಗಟ್ಟೆ ಶೇಖರಪ್ಪ,ಸಿ.ತಿಪ್ಪೇ ಸ್ವಾಮಿ,ಶಂಭು ಲಿoಗಪ್ಪ,ಮಹೇಶ್,ಹಟ್ಟಿತಿಪ್ಪೇಸ್ವಾಮಿ,ಸುಧೀರ್ ರೆಡ್ಡಿ,ವಾಲಿಬಾಲ್ ತಿಮ್ಮಾರೆಡ್ಡಿ,ಯರಬಳ್ಳಿ ಉಮಾಪತಿ,ರೇವಣ್ಣ ಗೌಡ,ಓಮಣ್ಣ,ಗುರು ಸಿದ್ದನಗೌಡ್ರ್ ,ಗುತ್ತಿದುರ್ಗ ರುದ್ರೇಶ್ ,ವಿಜಯ್ ಕೆಂಚೋಳ್, ತಿಪ್ಪೇಸ್ವಾಮಿ,ರoಗ ಸ್ವಾಮಿ,ನಾಗ ರಾಜ್,ಕೆಳಗೋಟೆ ಅಹಮ್ಮದ್ ಅಲಿ, ನರೇನಹಳ್ಳಿ ಕುಮಾರಣ್ಣ.ಮೆಹಬೂಬ್ ಸಾಬ್,ಉಮಾ ದೇವಿ ಸೇರಿದಂತೆ ಇದ್ದರು.