ಪ್ರಜಾ ನಾಯಕ ಸುದ್ದಿ ಜಗಳೂರು :ತಾಲೂಕಿನ ಕೆರೆಗಳ ಒತ್ತುವರಿ ಗೆ ಕ್ರಮಕೈಗೊಂಡು.ಪಕ್ಕದಲ್ಲಿ ಮನೆನಿರ್ಮಾಣಕ್ಕೆ ತಡೆಹಾಕಿ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಪ್ರಗತಿ ಪರಿ ಶೀಲನಾ ಸಭೆಯಲ್ಲಿ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿ ದರು.
ತಹಶೀಲ್ದಾರ್ ಸಂತೋಷ್ ಕುಮಾರ್ ಮಾತನಾಡಿ,ತಾಲೂಕಿನ ಅಸಗೋಡು ಕೆರೆ ಪಕ್ಕದಲ್ಲಿ ಮಳೆಗೆ 10 ಮನೆಗಳು ಭಾಗಶಃ ಹಾನಿ ಗೊಳಗಾಗಿದ್ದು ತಲಾ ₹10000 ಪರಿಹಾರ ನೀಡಲಾಗಿದೆ. ಬಿಳಿಚೋಡು ಹಳ್ಳ ಭರ್ತಿಯಾದವೇಳೆ ಜನತಾಬಡಾವಣೆಯಲ್ಲಿ ಮನೆಗಳಿಗೆ ನೀರು ನುಗ್ಗುತ್ತದೆ.ಹಿರೇಮಲ್ಲನಹೊಳೆ ಗ್ರಾಮದ ಕೆರೆ ಅಂಚಿನಲ್ಲಿ 40ಕುಟುಂಬಗಳು ವಾಸವಾಗಿವೆ ಎಂದು ಮಾಹಿತಿ ನೀಡಿದರು.
ನಂತರ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಅವರು ,ತಾಲೂಕಿನ ಪ್ರತಿ ಕೆರೆಗಳ ಪಟ್ಟಿ ತಯಾರಿಸಿ ನೀರು ಭರ್ತಿಯಾದ ವೇಳೆ ಹಿನ್ನೀರು ಮನೆಗಳಿಗೆ ನುಗ್ಗದಂತೆ ಟ್ರಂಚ್ ಹಾಕಿಸಿ.ಒಂದು ವೇಳೆ ಒತ್ತುವರಿಮಾಡಿ ಮನೆಗಳು ನಿರ್ಮಾಣಮಾಡಿದ್ದಲ್ಲಿ ಅವರ ನ್ನು ಸ್ಥಳಾಂತರಿಸಿ.ಸರ್ಕಾರಿ ಜಮೀನಿನಲ್ಲಿ ಅಥವಾ ಖಾಸಗಿ ಜಮೀನು ಖರೀದಿಸಿ ಶಾಶ್ವತ ನಿವೇಶನ ಸೂರು ಕಲ್ಪಿಸಿ ಎಂದು ಪಿಡಿಓ ಹಾಗೂ ಅಧಿಕಾರಿಗಳಿಗೆ ಸಲಹೆ ನೀಡಿದರು.
ಪಟ್ಟಣದಲ್ಲಿ ಚರಂಡಿ ಸ್ವಚ್ಛತೆ ಗೊಳಿಸಬೇಕು ಮಳೆಗಾಲದಲ್ಲಿ ಚರಂಡಿ ನೀರು ಯಾವುದೇ ಮನೆಗಳ ಮುಂಬಾಗ ಸಂಗ್ರಹವಾಗ ದೆ ಹೊರಹೊಲಯಕ್ಕೆ ಸರಾಗವಾಗಿ ಹರಿದುಹೋಗಲು ವ್ಯವಸ್ಥೆ ಮಾಡಬೇಕು ಕೆರೆ ಒತ್ತುವರಿ ಮಾಡಿರುವ ವಸತಿ ಕುಟುಂಬಗಳಿಗೆ ನೊಟೀಸ್ ನೀಡಿ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಹೇಳಿದರು.ಖಾಸಗಿ ಹಾಗೂ ಸರಕಾರಿ ಶಾಲಾ,ಹಾಗೂ ಅಂಗನ ವಾಡಿ ಕಟ್ಟಡಗಳ ಸುಸ್ಥಿತಿ ಗಾಗಿ ಮಾಹಿತಿ ಪಡೆದು ಅಗತ್ಯವಿರು ವಕಡೆ ದುರಸ್ಥಿಗೆ ಕ್ರಮಕೈಗೊಳ್ಳಬೇಕು.ಮಂಜೂರಾದ ಕಟ್ಟಡ ಕಾಮಗಾರಿ ಪರಿಶೀಲನೆನಡೆಸಿ ಶೀಘ್ರ ಕಟ್ಟಡ ಪೂರ್ಣಗೊಳಿಸಲು ಸಂಬಂಧಿಸಿದ ಇಲಾಖೆಗೆ ಸೂಚಿಸಿ ವಾರಕ್ಕೊಮ್ಮೆ ಅಧಿಕಾರಿಗಳ ಸಭೆ ಕರೆಯಬೇಕು ಎಂದು ತಹಶೀಲ್ದಾರ್ ಗೆ ತಿಳಿಸಿದರು.
ಟಾಸ್ಕ್ ಪೋರ್ಸ್ ಸಮಿತಿ ರಚಿಸಿ :-ಗ್ರಾಮ ಮಟ್ಟದಲ್ಲಿ ಅಧಿಕಾರಿ ಗಳು ಚುನಾಯಿತ ಜನಪ್ರತಿನಿಧಿಗಳು,ಎನ್ ಜಿಓ ಗಳನ್ನೊಳಗೊಂಡ ಟಾಸ್ಕ್ ಫೊರ್ಸ್ ಸಮಿತಿ ರಚಿಸಿ ಪ್ರಕೃತಿ ವಿಕೋಪ ತುರ್ತುಸಮಸ್ಯೆ ಗಳನ್ನು ಪರಿಹರಿಸಬೇಕು.ತಾಲೂಕು ಹಂತದ ಸಹಾಯವಾಣಿ ಕೇಂದ್ರ ನಿರಂತರಾಗಿ ಚಾಲನೆಯಲ್ಲಿರಲಿ ಎಂದರು.
ಜಿ.ಪಂ ಸಿಇಓ ಸುರೇಶ್ ಹಿಟ್ನಾಳ್ ಮಾತನಾಡಿ,ಗ್ರಾಮೀಣ ಭಾಗ ದಲ್ಲಿ ಶುದ್ದ ಕುಡಿಯು ನೀರಿನ ಘಟಕಗಳ ರಿಪೇರಿ,ಬೋರ್ ವೆಲ್ ದುರಸ್ಥಿ,ಚೆಕ್ ಡ್ಯಾಂ ಗಳ ಸ್ವಚ್ಛತೆ ಗೊಳಿಸಬೇಕು.ಸಮರ್ಪಕ ಚರಂಡಿ ವ್ಯವಸ್ಥೆ ನಿರ್ಮಿಸಿ ಪ್ರಕೃತಿ ವಿಕೋಪಗಳಿಗೆ ತಕ್ಷಣ ಸ್ಪಂದಿಸ ಬೇಕು ಎಂದು ಪಿಡಿಓ ಗಳಿಗೆ ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರ ಪ್ಪ ಮಾತನಾಡಿ,ಪಟ್ಟಣದಲ್ಲಿ ಸುಸಜ್ಜಿತ ಹಾಸ್ಟೆಲ್ ಕಟ್ಟಡಗಳಿದ್ದು ವಿದ್ಯಾರ್ಥಿಗಳ ವಸತಿಗೆ ಯಾವುದೇ ತೊಂದರೆಯಿಲ್ಲ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು ಮತ್ತು ಜಗಳೂರು ತಾಲೂಕಿನಲ್ಲಿ ಬಹು ದಿನಗಳ ಬೇಡಿಕೆಯಾಗಿದ್ದ ಅಲೆಮಾರಿ ಜನಾಂಗದ ಅವರಿಗೆ ಈಗಾಗಲೇ ತಾವು ಆದೇಶ ನೀಡಿದ್ದೇವೆ ಜಿಲ್ಲಾ ಉಪ ವಿಭಾಗದ ಅಧಿಕಾರಿಗಳ ಹತ್ತಿರ ಕಡತ ಇದೆ ಹೆಸರಿಗೆ ಆದೇಶವಾಗಿ ಪಹಣಿ ಬಂದ ನಂತರ ಎಲ್ಲಾ 41 ಕುಟುಂಬಗಳಿಗೆ ಹಕ್ಕು ಪತ್ರ ನೀಡುತ್ತೇವೆ ಎಂದು ಮಾನ್ಯ ಜಿಲ್ಲಾ ಧಿಕಾರಿಗಳಿಗೆ ಅಲೆಮಾರಿ ಜನಾಂಗದ ಪರವಾಗಿ ಅಭಿನಂದನೆ ಗಳು ಎಂದು ತಿಳಿಸಿದರು.
ಸಂದರ್ಭದಲ್ಲಿ ಉಪವಿಭಾಗ ಅಧಿಕಾರಿ ದುರ್ಗಾಶ್ರೀ,ತಹಶೀಲ್ದಾರ್ ಸಂತೋಷ್ ಕುಮಾರ್,ತಾ.ಪಂಇಓ ಚಂದ್ರ ಶೇಖರ್ ಸೇರಿದಂತೆ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅನುಷ್ಠಾನ ಅಧಿಕಾರಿಗಳು ಇದ್ದರು.