ಪ್ರಜಾ ನಾಯಕ ಸುದ್ದಿ ಜಗಳೂರು :- ಸಾಸ್ವೆಹಳ್ಳಿ ಏತ ನೀರಾವರಿ ಕಾಮಗಾರಿ ಪ್ರಗತಿಯ ಮಾದರಿಯಲ್ಲಿ ಜಗಳೂರು 57 ಕೆರೆ ತುಂಬಿ ಸುವ ಯೋಜನೆ ಕಾಮಗಾರಿ ಪ್ರಗತಿಯ ವರದಿ ಪಟ್ಟಿ ತಯಾರಿಸಿ ಶೀಘ್ರ ಪ್ರತ್ಯೇಕ ಸಭೆ ನಡೆಸಲು ಸಿರಿಗೆರೆ ಬೃಹನ್ಮಠದ ಶ್ರೀ ಶ್ರೀ ಶ್ರೀ 1108 ಶಿವಮೂರ್ತಿ ಶಿವಚಾರ್ಯ ಮಹಾಸ್ವಾಮಿ ಗಳು ಸಲಹೆ ನೀಡಿದರು.
ಸಿರಿಗೆರೆ ಬೃಹನ್ಮಠದ ನ್ಯಾಯಪೀಠದಲ್ಲಿ ಕರೆದಿದ್ದ 57 ಕೆರೆ ತುಂಬಿ ಸುವ ಯೋಜನೆಗಳ ಕಾಮಗಾರಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಕಳೆದ 6 ವರ್ಷಗಳ ಹಿಂದೆ ಭರಮಸಾಗರ ಹಾಗೂ ಜಗಳೂರು ಕೆರೆ ತುಂಬಿಸುವ ಅವಳಿ ಯೋಜನೆಗಳು ಒಟ್ಟಿಗೆ ಸಾಕಾರಗೊಂಡಿದ್ದವು. ಆದರೆ ಜಗಳೂರು ಕೆರೆ ತುಂಬಿಸುವ ಯೋಜನೆ ಪೈಪ್ ಲೈನ್ ಕಾಮ ಗಾರಿ ವಿಳಂಬವಾಗಿದೆ. ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ ಕೊ ನೆಯಲ್ಲಿ ಆರಂಭವಾಗಿದ್ದರೂ ತ್ವರಿತಗತಿಯಲ್ಲಿ ಕಾಮಗಾರಿ ನಡೆದು ಮುಕ್ತಾಯದ ಹಂತದಲ್ಲಿದೆ.ಕೂಡಲೇ ಅಧಿಕಾರಿಗಳು ಗುತ್ತಿಗೆದಾರ ರು ಪೂರ್ಣ ಹಾಗೂ ಅಪೂರ್ಣಗೊಂಡಿರುವ ಕಾಮಗಾರಿಗಳ ದಾಖಲು ವರದಿ ತಯಾರಿಸಿ ಸಂಸದ,ಶಾಸಕರಿಗೆ ಹಾಗೂ ನ್ಯಾಯ ಪೀಠಕ್ಕೆ ತಲುಪಿಸಬೇಕು ಎಂದು ತಿಳಿಸಿದರು.
ತುಪ್ಪದಹಳ್ಳಿ ಕೆರೆಯ ನೀರಿನ ಪೌಂಟೇನ್(ಚಿಲುಮೆ) ಭರಮ ಸಾಗರ ಕೆರೆಯ ಮಾದರಿಯಲ್ಲಿ ನಿರ್ಮಾಣಮಾಡಬೇಕು.ತುಪ್ಪದ ಹಳ್ಳಿ ಕೆರೆಯಿಂದ ಉಳಿದ ಕೆರೆಗಳಿಗೆ ಶೀಘ್ರ ಪೈಪ್ ಲೈನ್ ಕಾಮ ಗಾರಿ ಪೂರ್ಣಗೊಳಿಸಿ ಮಾರ್ಗಮಧ್ಯೆ ಅರಣ್ಯ ಇಲಾಖೆ,ಇತರೆ ಅಡೆ ತಡೆಗಳು ಬಂದರೆ ಸ್ಥಳಿಯ ಶಾಸಕರ ಗಮನಕ್ಕೆ ತಂದು ತಾಂತ್ರಿಕ ದೋಷ ಸರಿಪಡಿಸಿಕೊಳ್ಳಬೇಕು ಅಲ್ಲದೆ ಕಾಮಗಾರಿ ವಿಳಂಬ ಮಾಡಿದರೆ ಪೆನಾಲ್ಟಿ ಹಾಗೂ ನೊಟೀಸ್ ಜಾರಿಮಾಡಲು ಕರ್ನಾ ಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿ ಕಾರ್ಜು ನ್ ಬಸಪ್ಪ ಗುಂಗೆ ಅವರಿಗೆ ಸೂಚಿಸಿದರು.
ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ಧನಂಜಯ್ ಮಾಹಿತಿ ನೀಡಿ,ತುಪ್ಪದಹಳ್ಳಿ ಕೆರೆಗೆ ಪ್ರಾಯೋಗಿಕವಾಗಿ ನೀರು ಹರಿಸಲಾಗಿದೆ.ಶೀಘ್ರದಲ್ಲಿ 11 ಕೆರೆಗಳಿಗೆ ನೀರು ಹರಿಸಲು ಸಿದ್ದತೆ ನಡೆಸಲಾಗಿದೆ.
ದಿಟೂರು ಬಳಿ ಜಾಕ್ ವೆಲ್, ಪಂಪ್ ಹೌಸ್,ಕಂಟ್ರೋಲ್ ರೂಂ, ಸ್ಟ್ರೀಮಿಂಗ್,ಚಟ್ನಹಳ್ಳಿ ಡಿಲೆವರಿ ಛೇಂಬರ್,ಕಾಮಗಾರಿ ಮುಕ್ತಾಯ ವಾಗಿದೆ.1.2,1.8,0.8 ಸುತ್ತಳತೆಯ ಪೈಪ್ ಗಳು ಪೂರೈಕೆಯಾಗಿವೆ. ಇದರಿಂದ 18 ಕಿಮೀ ಪೈಪ್ ಲೈನ್ ಕಾಮಗಾರಿ ಪ್ರಗತಿಯಲ್ಲಿದೆ.7 ಕಿಮೀ ಪೈಪ್ ಲೈನ್ ಕಾಮಗಾರಿಗೆ 1.5 ಸುತ್ತಳತೆಯ ಪೈಪ್ ಗಳು ಪೂರೈಕೆಯಾಗಿಲ್ಲ ವಾರದೊಳಗೆ ಸರಿಪಡಿಸಲಾಗುವುದು ಎಂದರು.
ಶಾಸಕ ಬಿ.ದೆವೇಂದ್ರಪ್ಪ ಮಾತನಾಡಿ,ತುಪ್ಪದಹಳ್ಳಿ ಕೆರೆಗೆ ಪ್ರಾಯೋ ಗಿಕವಾಗಿ ನೀರು ಹರಿಸಿದಾಗ ಕ್ಷೇತ್ರದ ರೈತರಲ್ಲಿ ಮಂದಹಾಸ ಮೂಡಿತ್ತು.ಆದರೆ ನಂತರ ಗುತ್ತಿಗೆದಾರ ಹಾಗೂ ಇಂಜಿನಿಯರ್ ಗಳ ನಿರ್ಲಕ್ಷ್ಯದಿಂದ ಪೈಪ್ ಲೈನ್
ಕಾಮಗಾರಿ ವಿಳಂಬವಾಗಿದೆ.ರೈತರು ನೀರು ಹರಿಯುವ ನಿರೀಕ್ಷೆ ಯಲ್ಲಿ ಕಾದುಕುಳಿತಿದ್ದಾರೆ.ಜಗಳೂರು ಕೆರೆಗೆ ನೀರು ಹರಿಸಿದರೆ 30 ಕೆರೆಗಳು ಭರ್ತಿಯಾಗಲಿವೆ ಸಬೂಬು ಹೇಳುವುದು ಬಿಡಿ ಕೆಲಸ ಮಾಡಿ ಎಂದು ತಾಕೀತು ಮಾಡಿದರು.
ಕರ್ನಾಟಕ ನೀರಾವರಿ ನಿಗಮ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ್ ಬಸಪ್ಪ ಗುಂಗೆ ಮಾತನಾಡಿ,ಜಗಳೂರು ತಾಲೂಕಿ ನ 57 ಕೆರೆ ತುಂಬಿಸುವ ಯೋಜನೆಯ ಪೈಪ್ ಲೈನ್ ಕಾಮಗಾರಿ ಪ್ರಗತಿ ವರದಿ ಪಡೆಯಲಾಗುವುದು.ನಂತರ ತಾಂತ್ರಿಕ ದೋಷ ಸರಿಪಡಿಸಿ ಶೀಘ್ರ ಕಾಮಗಾರಿ ಪೂರ್ಣಗೊಳಿಸಬೇಕು.ವಿಳಂಬನೀತಿ ಅನುಸರಿಸಿದರೆ ನಿಗಮದ ನಿಯಮಾವಳಿಯಂತೆ ಗುತ್ತಿಗೆದಾರರಿಗೆ ಪೆನಾಲ್ಟಿ ಹಾಗೂ ನೊಟೀಸ್ ಜಾರಿ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ್,ಚನ್ನಗಿರಿ ಶಾಸಕ ಶಿವಗಂಗಾ,ಮಾಯಕೊಂಡ ಶಾಸಕ ಬಸವಂತಪ್ಪ,ಶಿವಮೊಗ್ಗ ನೀರಾವರಿ ನಿಗಮ ಮುಖ್ಯ ಇಂಜಿನಿಯರ್ ಪ್ರಶಾಂತ್,ಅಪ್ಪರ್ ಭದ್ರಾ ಇಲಾಖೆಯ ಮುಖ್ಯ ಇಂಜಿನಿಯರ್ ಶಿವಾನಂದ ಬಣ ಕಾರ್,ಗುತ್ತಿಗೆದಾರ ದಯಾನಂದ,ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್, ಮುಖಂಡರಾದ ಶಶಿಧರಪಟೇಲ್, ಪಟ್ಟಣ ಪಂಚಾಯಿತಿ ಸದಸ್ಯ ರಾದ ರಮೇಶ್ ರೆಡ್ಡಿ.ರವಿಕುಮಾರ್. ಮಹಮ್ಮದ್ ಆಲಿ ಮುಖಂಡ ರಾದ ಮಹಮ್ಮದ್ ಗೌಸ್.ಓಮಣ್ಣ ,ಪ್ರಕಾಶ್ ರೆಡ್ಡಿ, ಪ್ರಥಮ ದರ್ಜೆ ಗುತ್ತಿಗೆದಾರ ಸುಧೀರ್ ರೆಡ್ಡಿ, ಡಿಪಿ ಜಗಳೂರಯ್ಯ. ಕೆಳಗೋಟೆ ಅಹಮ್ಮದ್ ಅಲಿ.ನಾಗರಾಜ್.ಚಿಕ್ಕಮಲ್ಲನಹೂಳೆ ಮಾರುತಿ. ಲೋಕೇಶ್.ಶೇಖರಪ್ಪ.ಸೇರಿದಂತೆ ರೈತ ಮುಖಂಡರುಗಳು ಭಾಗವಹಿಸಿದ್ದರು.