ಪ್ರಜಾ ನಾಯಕ ಸುದ್ದಿ ಜಗಳೂರು :- ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ ವಯೋನಿವೃತ್ತಿ ಅಂಗ ವಾಗಿ ತೋರಣಗಟ್ಟೆ ಗ್ರಾಮದ ಬಡಪ್ಪ ದಂಪತಿಗಳ ಪುತ್ರಿ ತುಳಸಿ ಯ ಗ್ಯಾಂಗ್ರಿನ್ ಶಸ್ತ್ರ ಚಿಕಿತ್ಸೆ ಕೊಡಿಸಿ ಕೃತಕ ಕಾಲುಗಳನ್ನು ಹಾಕಿ ಸುವ ಮೂಲಕದತ್ತು ಪಡೆದಿರುವೆ.ಉಜ್ವಲ ಭವಿಷ್ಯ ರೂಪಿಸುವೆ ಎಂದು ಶಾಸಕ ಬಿ.ದೇವೇಂದ್ರಪ್ಪ ಭರವಸೆ ನೀಡಿದರು.
ಪಟ್ಟಣದ ಗುರುಭವನದಲ್ಲಿ ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ,ಅವರ ವಯೋನಿವೃತ್ತಿ ಅಂಗವಾಗಿ ತಾಲೂಕು ನೌಕರರ ಸಂಘ,ವಿವಿಧ ಸಂಘ ಸಂಸ್ಥೆಗಳ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು,ನೌಕರರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಜಗತ್ತು ನಗುತಿರಲಿ ಜಗದಳವು ನನಗಿರಲಿ ಎಂಬ ಸ್ವಭಾವ ಹೊಂದಿದ ಮಹೇಶ್ವರಪ್ಪ ಅವರು ನನ್ನ ವಿದ್ಯಾರ್ಥಿ ಜೀವನದಲ್ಲಿ ಚಿತ್ರದುರ್ಗದ ಕಲಾ ಕಾಲೇಜು ಹಾಸ್ಟೆಲ್ ನಲ್ಲಿ ಅನ್ನ ಹಾಕಿದ್ದನ್ನು ನಾನು ಮರೆತಿಲ್ಲ.ತಾಲೂಕಿನಲ್ಲಿ 27 ವರ್ಷಗಳಕಾಲ ತನ್ನ ಪತ್ನಿಯ ಸಹಕಾರದಿಂದ ಜಾತ್ಯಾತೀತವಾಗಿ ಎಲ್ಲಾ ಜನತೆಯ ಮೆಚ್ಚುಗೆಗೆ ಪಾತ್ರರಾಗಿ ಕೌರವರಿಗಿಂತ ಮಿಗಿಲಾದ ಸಹೋದರ ಬಳಗ ಹೊಂದಿ ರುವುದು ಶ್ಲಾಘನೀಯ ಎಂದರು.
ಅಕ್ಷಯ ಪಾತ್ರೆಯಿದ್ದಂತೆ ಮಾಯಣ್ಣ :- ಶ್ರೀಕೃಷ್ಣ ನಿಂದ ಮಹಿಳೆ ಯೊಬ್ಬಳು ವರವಾಗಿ ಪಡೆದು.ಕುಟುಂಬದ 7 ಜನ ಸದಸ್ಯರಿಗೆ ಅನ್ನ ನೀಗಿಸುತ್ತಿದ್ದ ಅಕ್ಷಯಪಾತ್ರೆಯಂತೆ ಕಷ್ಟದಲ್ಲಿರುವವರಿಗೆ ಸಹಾಯ ಸ್ತಚಾಚುವ ಹೃದಯಶ್ರೀಮಂತಿಕೆಯ ಗುಣದ ಅಧಿಕಾರಿ ಮಾಯಣ್ಣ ಎಂದು ಬಣ್ಣಿಸಿದರು.
ಮನುಷ್ಯ ಕಾಗೆಯು ತನ್ನ ಬಳಗವನ್ನು ಕೂಗಿಕರೆಯುವಂತೆ ಹಂಚಿ ತಿನ್ನುವ ಮನೋಭಾವ ಮೈಗೂಡಿಸಿಕೊಂಡು ಮಹೇಶ್ಚರಪ್ಪ ಎಲ್ಲರೊಳಗೆ ಸತ್ತು ಬದುಕಿದವರಲ್ಲಿ ಒಬ್ಬರಾಗಿದ್ದಾರೆ.ಮನುಷ್ಯ ಹುಟ್ಟು ಸಾವಿನ ಮಧ್ಯೆ ಜೀವಿತಾವಧಿಯಲ್ಲಿ ಇತಿಹಾಸದ ಪುಟದಲ್ಲಿ ಸೇರಬೇಕು ಎಂದು ಹೇಳಿದರು.
ರಾಜಕಾರಣಿಗಳು ಸಮಾಜದಲ್ಲಿ ಕೇವಲ ನಮಿಸುವುದಕ್ಕೆ ಕಾಮ ಗಾರಿ ಅಭಿವೃದ್ದಿಗೆ ಸೀಮಿತವಾಗದೆ ಕಷ್ಟದಲ್ಲಿರುವ ಕಂಬನಿಗೆ ಮಿಡಿಯುವ ಹೃದಯಸ್ಪರ್ಶಿಗಳಾಗಬೇಕು.ಸಾತ್ವಿಕ ಗುಣಗಳನ್ನು ಬೆಳೆಸಿಕೊಳ್ಳಬೇಕು.ನಾನು ಅಪಘಾತಕ್ಕೀಡಾಗಿ ಮರುಜೀವ ಪಡೆದು ನಾನು ಶಾಸಕನಾಗಿರುವುದು ದರ್ಪಮೆರೆಯಲು ಅಲ್ಲ.ಜನಸೇವೆ ಮಾಡಲು ಸೇವಕನಾಗಿ ಬಂದಿರುವೆ.ಬರುವ ಶ್ರಾವಣದಲ್ಲಿ ಅನಾಥ ನಿಧಿ ಸಂಗ್ರಹಕ್ಕೆ ಜೋಳಿಗೆ ಹಾಕುವೆ.ಸಂಗ್ರಹವಾದ ನಿಧಿಯನ್ನು ಅನಾಥರಿಗೆ ನಿರ್ಗತಿಕರ ಸಹಾಯಕ್ಕೆ ಬಳಕೆಮಾಡಲಾಗುವುದು ಎಂದರು.
ಸಮಾಜಕಲ್ಯಾಣ ಇಲಾಖೆ ಜಿಲ್ಲಾ ಉಪನಿರ್ದೇಶಕ ನಾಗರಾಜ್ ಮಾತನಾಡಿ,ಸಮಾಜಕಲ್ಯಾಣ ಇಲಾಖೆ ಮಾತ್ರವಲ್ಲದೆ ತಾಲೂಕಿನ ವಿವಿಧ ಇಲಾಖೆಗಳನ್ನೊಳಗೊಂಡ ಅಪಾರ ಅಭಿಮಾನಿಬಳಗದ ಕುಟುಂಬದ ಮುಖ್ಯಸ್ಥನಂತಿರುವ ಅಧಿಕಾರಿ ಮಹೇಶ್ ಅಣ್ಣನನ್ನು ಕಂಡು ನಾನೊಬ್ಬ ಉನ್ನತ ಮಟ್ಟದ ಅಧಿಕಾರಿಯಾಗಿ ಮೂಕವಿಸ್ಮಿತ ನಾಗಿರುವೆ ಎಂದು ಹೇಳಿದರು.
ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ. ಮಹೇಶ್ವರ ಪ್ಪ ಮಾತನಾಡಿ,1995 ರಲ್ಲಿ ಎಸ್ ಡಿ ಎ ನೇಮಕೊಂಡು ವೃತ್ತಿಗೆ ಸೇರಿ ನಂತರ 1996 ರಲ್ಲಿ ಜಗಳೂರಿಗೆ ವಾರ್ಡನ್ ಆಗಿ ಆಗಮಿಸಿ ದ್ದ ವೇಳೆ ವಸತಿನಿಲಯಗಳಲ್ಲಿ ಕುಡಿಯುವ ನೀರು ಸೇರಿದಂತೆ ಸಾಕಷ್ಟು ಕಷ್ಟಗಳನ್ನು ಎದುರಿಸಿದೆವು.ನಂತರ ತಾಲೂಕಿನ ಜನತೆ ಯನ್ನು ತುಂಬಾ ಹಚ್ಚಿಕೊಂಡು ಸೇವೆಗೈದೆ.ಪರಿಣಾಮ ಜಗಳೂರು ಜನತೆಯ ಆತ್ಮೀಯತೆ ನನ್ನನ್ನು ವಯೋನಿವೃತ್ತಿ ಕಳೆದಿದ್ದು ನನ್ನ ಸೌಭಾಗ್ಯ ಎಂದರು.
ಗಳಗಳನೆ ಕಣ್ಣೀರಿಟ್ಟ ಅಧಿಕಾರಿ:- ನನ್ನ ಸೇವಾವಧಿಯವರೆಗೂ ನಾನು ಆಸ್ಪತ್ರೆಯಲ್ಲಿ ಗ್ಯಾಸ್ಟಿಕ್ ಗ್ಯಾಂಗ್ರಿನ್ ಗೆ ತುತ್ತಾಗಿದ್ದವೇಳೆ ಚಿಕಿತ್ಸೆಗೆ ರಜೆ ಹಾಕಿದ್ದು ಹೊರತುಪಡಿಸಿದರೆ ನಿವೃತ್ತಿಯವರೆಗೆ ಯಾವತ್ತೂ ರಜೆಹಾಕಿಲ್ಲ.ತಾಲೂಕಿನ ಜನತೆಯ ಅಭಿಮಾನಕ್ಕೆ ಚಿರ ಋಣಿ ಎಂದು ಗಳಗಳನೆಕಣ್ಣೀರಿಟ್ಟರು.
ಸನ್ಮಾನಗಳ ಸುರಿಮಳೆ :- ಸನ್ಮಾನ ಕಾರ್ಯಕ್ರಮದಲ್ಲಿ ನಿವೃತ್ತಿ ಹೊಂದಿದ ಅಧಿಕಾರಿ ಮಹೇಶ್ವರಪ್ಪದಂಪತಿಗಳಿಗೆ ಅಭಿಮಾನಿಗಳು ಅಧಿಕಾರಿಗಳು ವಿವಿಧ ಸಂಘಸಂಸ್ಥೆಯ ಪದಾಧಿಕಾರಿಗಳ ದಂಡು ಸರದಿಯೋಪಾದಿಯಲ್ಲಿನಿಂತು ಸನ್ಮಾನ ಅಭಿನಂದಿಸಿದ ಕ್ಷಣ ಮರುವಿವಾಹದ ಸಂಭ್ರಮ ಮನೆಮಾಡಿತ್ತು.
ಈ ಸಂದರ್ಭದಲ್ಲಿ ಪತ್ನಿ ಗಂಗಮ್ಮ ಮಹೇಶ್ವರಪ್ಪ,ತಹಶೀಲ್ದಾರ್ ಸಂತೋಷ್ ಕುಮಾರ್, ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಉಪ ನಿರ್ದೇಶಕ ನಾಗರಾಜ್, ಪೊಲೀಸ್ ಇಲಾಖೆ ವೃತ ನಿರೀಕ್ಷಕ ಶ್ರೀನಿವಾಸ್ ರಾವ್,ತಾ.ಪಂ ಇಓ ಚಂದ್ರಶೇಖರ್, ಪ.ಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ,ಟಿಎಚ್ ಓ ಡಾ.ನಾಗರಾಜ್, ನಿವೃತ್ತ ಸಮಾಜಕಲ್ಯಾಣ ಇಲಾಖೆ ಅಧಿಕಾರಿ ಅಶೋಕ, ವಿವಿಧ ತಾಲೂಕು ಮಟ್ಟದ ಅಧಿಕಾರಿಗಳಾದ ಮಿಥುನ್ ಕಿಮಾವತ್, ಲಿಂಗ ರಾಜ್,ನೌಕರರ ಸಂಘದ ಮಾಜಿ ಅಧ್ಯಕ್ಷ ಅಜ್ಜಪ್ಪ ನಾಡಿಗರ್, ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಜಿಎಸ್ ಚಿದಾನಂದಪ್ಪ. ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಲ್ಲಗಟ್ಟಿ ಶೇಖರಪ್ಪ . ಮಹಮ್ಮದ್ ಗೌಸ್. ತಿಮ್ಮಣ್ಣ. ಹರಿಹರ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ನಾಸಿರ್ ಉದ್ದೀನ್,ಸಹಾಯಕ ನಿರ್ದೇಶಕಿ ಸುನಿತಾ,ಸೇರಿದಂತೆ ಹಿತೈಷಿಗಳು ಅಭಿಮಾನಿಗಳು ಕುಟುಂಬ ವರ್ಗದವರು ಕಾರ್ಯ ಕ್ರಮದಲ್ಲಿ ಭಾಗವಹಿಸಿದ್ದರು..