ಪ್ರಜಾ ನಾಯಕ ಸುದ್ದಿ ಜಗಳೂರು :- ಅಧಿಕಾರಿಗಳು 76 ನೇ ಸ್ವಾತಂತ್ರ್ಯ ದಿನಾಚರಣೆ ಅದ್ದೂರಿ ಆಚರಣೆಗೆ ಸನ್ನದ್ದರಾಗಬೇಕು .ಧ್ವಜಾರೋಹಣ ಕಾರ್ಯಕ್ರಮದಲ್ಲಿ ಅಲ್ಪ ಲೋಪವೆಸಗಿದರೂ ಕ್ಷಮೆಯಿಲ್ಲದೆ ನಿರ್ದಾಕ್ಷೀಣ್ಯ ಕ್ರಮ ಗೊಳ್ಳುವೆ ಎಂದು ಶಾಸಕ ಬಿ.ದೇವೇಂದ್ರಪ್ಪ ತಾಕೀತು ಮಾಡಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಕರೆದಿದ್ದ ಸ್ವಾತಂತ್ರ್ಯ ದಿನಾಚರಣೆ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಸಮಯಕ್ಕೆ ಸರಿಯಾಗಿ ತಮ್ಮ ತಮ್ಮ ಇಲಾಖೆಗಳಲ್ಲಿ ಕಡ್ಡಾಯವಾಗಿ ಜಾಗೃತಿಯಿಂದ ಧ್ವಜಾರೋಹಣ ನೆರವೇರಿಸಬೇಕು.ನಿರ್ಲಕ್ಷ್ಯದಿಂದ ಬೇಕಾಬಿಟ್ಟಿ ಆಚರಿಸಿದರೆ ಸಹಿಸದೆ ಉಪಮುಖ್ಯಮಂತ್ರಿಗೆ ವರದಿ ಕಳಿಸುವೆ.ಕಳೆದ ವರ್ಷಗಳಿಗಿಂತ ಈ ಬಾರಿ ಪ್ರತಿಯೊಂದು ಇಲಾಖೆ ಗಳ ಕಟ್ಟಡ ಹಾಗೂ ಪಟ್ಟಣದ ಪ್ರಮುಖ ಬೀದಿಗಳಲ್ಲಿ ದೀಪಾ ಲಂಕೃತ,ತಳಿರು ತೋರಣಗಳಿಂದ ಮದುವಣಗಿತ್ತಿಯಂತೆ ಕಂಗೊಳಿಸಬೇಕು ಎಂದು ಸೂಚಿಸಿದರು.
“ವೇದಿಕೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನೆರಳು,ಮಳೆ ಯಿಂದ ಮಕ್ಕಳು,ಸಾರ್ವಜನಿಕರು ರಕ್ಷಣೆಗೆ,ಉಪಹಾರ,ಕುಡಿ ಯುವ ನೀರಿನ ಸೌಲಭ್ಯ ಕಲ್ಪಿಸಬೇಕು.ದೇಶಭಕ್ತಿಗೀತೆ ಗಳಿಗೆ ಉತ್ತಮ ತರಬೇತಿ ನೀಡಿದ ಶಾಲೆಗಳ ಮಕ್ಕಳ ನೃತ್ಯಕ್ಕೆ ಅವಕಾಶ ಕೊಡಿ ಎಂದು ಬಿಇಓ ಸುರೇಶ್ ರೆಡ್ಡಿಗೆ ತಿಳಿಸಿದರು “
ದೇಶಕ್ಕೆ ಸ್ವಾತಂತ್ರ್ಯ ಕೇವಲ ಶಾಂತಿಯಿಂದ ಮಾತ್ರವಲ್ಲ.ಜಲಿಯನ್ ವಾಲ್ ಬಾಗ್ ಹತ್ಯಾಕಂಡದಂತಹ ಹಲವಾರು ರಕ್ತಪಾತಗಳ ಹೋರಾಟದ ಫಲವಾಗಿ ನಾವು ನೆಮ್ಮದಿಯ ಬದುಕು ಸಾಗಿಸುತ್ತಿ ದ್ದು.ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸ್ವಯಂಪ್ರೇರಿತವಾಗಿ ಭಾಗವಹಿ ಸುವುದು ಪ್ರತಿಯೊಬ್ಬ ಭಾರತೀಯನ ಆದ್ಯ ಕರ್ತವ್ಯ.ನಾನು ಶಾಸಕ ನಾಗಿಆಯ್ಕೆಯಾದ ನಂತರ ಮೊದಲನೇ ರಾಷ್ಟ್ರೀಯ ಹಬ್ಬ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸುತ್ತಿರುವುದು ಹರ್ಷ ತಂದಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಭಾರಿ ತಹಶೀಲ್ದಾರ್ ಮಂಜಾನಂದ,ತಾ.ಪಂ ಇಓ ಚಂದ್ರಶೇಖರ್,ಪ್ರಭಾರಿ ಬಿಇಓ ಸುರೇಶ್ ರೆಡ್ಡಿ,ಪ.ಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ,ದಲಿತ ಸಂಘಟನೆ ಮುಖಂಡ ಶಂಭುಲಿಂಗಪ್ಪ,ಹಟ್ಟಿ ತಿಪ್ಪೇಸ್ವಾಮಿ,ಮಾಳಮ್ಮನಹಳ್ಳಿ ವೆಂಕಟೇಶ್, ಪಲ್ಲಾಗಟ್ಟೆ ಶೇಖರಪ್ಪ,ಸೇರಿದಂತೆ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.