ಪ್ರಜಾ ನಾಯಕ ಸುದ್ದಿ ಜಗಳೂರು :- ತಾಲೂಕಿನ ಕಾನನಕಟ್ಟೆ ಗ್ರಾಮದ ಸಿಆರ್ ಪಿ ಎಫ್ ಯೋಧ ಪಿ.ವಿರುಪಾಕ್ಷಿ ಅವರು ನಿವೃತ್ತಿ ಹಿನ್ನೆಲೆಯಲ್ಲಿ ತಾಲೂಕಿಗೆ ಅದ್ದೂರಿಯಾಗಿ ಮೆರವಣಿಗೆಯೊಂದಿಗೆ ಸ್ವಾಗತಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು,ಬಾಲ್ಯದ ಕನಸಿನಂತೆ 2002 ಇಸ್ವಿಯ ಫೆಬ್ರುವರಿ 15 ರಂದು ಸಿಆರ್ ಪಿಎಫ್ ಯೋಧ ನಾಗಿ ನೇಮಕಗೊಂಡು ಸೇರ್ಪಡೆಯಾದ ನಾನು 20 ವರ್ಷಗಳ ಕಾಲ ಮಹರಾಷ್ಟ್ರ,ಶ್ರೀನಗರ,ಅಂಡಮಾನ್ ನಿಕೋಬಾರ್, ತೆಲಂಗಾಣ,ಛತ್ತೀಸ್ ಘಡ್ ಸೇರಿದಂತೆ ನಕ್ಸಲ್ ಏರಿಯಾಗಳಲ್ಲಿ ಬಿಗುವಿನ ವಾತಾವರಣದಲ್ಲಿ ದೇಶಕ್ಕಾಗಿ ಪ್ರಾಣದ ಹಂಗು ತೊರೆದು ಸೇವೆಸಲ್ಲಿಸಿದ ನೆಮ್ಮದಿ ನನಗಿದೆ.ಇಂದು ನನ್ನ ಸ್ವಗ್ರಾಮಕ್ಕೆ ಅದ್ದೂರಿಯಾಗಿ ಸ್ವಾಗತಿಸಿದ ಪ್ರತಿಯೊಬ್ಬರಿಗೂ ಅಭಿನಂದನೆಗಳು. ಮುಂದಿನ ದಿನಗಳನ್ನು ದೇಶದ ಬೆನ್ನೆಲುಬು ರೈತಾಪಿ ಜೀವನದಲ್ಲಿ ತೊಡಗುವೆ ಎಂದು ಅಭಿಪ್ರಾಯ ಹಂಚಿಕೊಂಡರು.
ಇದೇ ವೇಳೆ ಶಾಸಕ ಬಿ.ದೇವೇಂದ್ರಪ್ಪ ಅವರು ಸ್ವಾಗತಿಸಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಅರೆ ಸೇನಾಸಮಿತಿಯ ಪದಾಧಿಕಾರಿಗಳಾದ ರಂಗಸ್ವಾಮಿ,ಪ್ರಹ್ಲಾದ ರೆಡ್ಡಿ,ಮುಖಂಡರಾದ ಕೃಷ್ಣಮೂರ್ತಿ,ವಕೀಲ ಆರ್.ಓಬಳೇಶ್,ಕಾನನಕಟ್ಟೆ ತಿಪ್ಪೇಸ್ವಾಮಿ,ಕುಮಾರ್ ಹೇಮಾರೆಡ್ಡಿ ಸೇರಿದಂತೆ ಇದ್ದರು.