ಪ್ರಜಾ ನಾಯಕ ಸುದ್ದಿ ಜಗಳೂರು :- ಮುಂದಿನ ಪೀಳಿಗೆಗೆ ಸ್ವಾತಂತ್ರ್ಯ ಕ್ಕಾಗಿ ಹೊರಾಡಿದ ಮಹಾನೀಯರ ಇತಿಹಾಸ ಪಸರಿಸಲಿ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.
ಪಟ್ಟಣದ ಬಯಲು ರಂಗಮಂದಿರದ ಆವರಣದಲ್ಲಿ ತಾಲೂಕು ಆಡಳಿತ ಹಾಗೂ ತಾಲೂಕು ಪಂಚಾಯಿತಿ,ಪಟ್ಟಣ ಪಂಚಾಯಿತಿ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಹಮ್ಮಿ ಕೊಂಡಿದ್ದ 76 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶಕ್ಕೆ ಮಹಾತ್ಮಗಾಂಧಿಜಿಯ ಅಹಿಂಸಾಮಾರ್ಗದ ಜೊತೆ ಭಗತ್ ಸಿಂಗ್,ಚಂದ್ರಶೇಖರ್ ಅಜಾದ್ ರಂತಹ ಮಹಾನ್ ಕ್ರಾಂತಿ ಕಾರಿ ಗಳ ಪ್ರಾಣತ್ಯಾಗದಿಂದ,ಹಾಗೂ ಅನೇಕ ವೀರಮಾತೆಯರ ಬಸಿರು ಬರಿದಾದ ಫಲವಾಗಿ ಸ್ವಾತಂತ್ರ್ಯ ಲಭಿಸಿ.ಇಂದು ದೇಶ ಬ್ರಿಟೀಷರ ದಾಸ್ಯದಿಂದ ಮುಕ್ತವಾಗಿ ಸರ್ವಜನರ ಶಾಂತಿಯ ತೋಟವಾಗಿ ಪರಿಣಮಿಸಿದೆ.ಇದರಿಂದ ನಮ್ಮ ಹಕ್ಕುಗಳನ್ನು ಅನುಭವಿಸುತ್ತಿದ್ದೇವೆ ಜಾತ್ಯಾತೀತ,ಧರ್ಮಾತೀತ ಮನಸ್ಸುಗಳು ಸ್ವಾತಂತ್ರ್ಯ ದಿನಾಚರಣೆ ಯನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಸಂದೇಶವನ್ನು ಸಾರಬೇಕು ಎಂದು ಹೇಳಿ ದರು.
ಗಾಂಧೀಜಿಯವರು ದೇಶ ಬ್ರಿಟೀಷರ ಸಂಕೋಲೆಯಿಂದ ಮುಕ್ತಿ ಯಾಗುವವರೆಗೆ ಮೈತುಂಬ ಬಟ್ಟೆ ಧರಿಸಲಿಲ್ಲ.ಸ್ವಾತಂತ್ರ್ಯ ದೊರೆತ ನಂತರ ಸಂತೋಷದಿಂದ ಮೈತುಂಬ ವಸ್ತ್ರ ಧರಿಸುವಾಗ ಗೂಡ್ಸೆ ಹಂತಕನಿಗೆ ಬಲಿಯಾಗಿದರು ಎಂದು ಬೇಸರ ವ್ಯಕ್ತಪಡಿಸಿದರು.
ನಾನೊಬ್ಬ ಸೇವಕ ಶಾಸಕನಲ್ಲ :-ಕ್ಷೇತ್ರದಲ್ಲಿ ನಮಿಸುವ ಕೈಗಳು ನನ್ನದಲ್ಲ ಜನರ ಕಷ್ಟ ಗಳಿಗೆ ಮಿಡಿಯುವ ಹೃದಯ ನನ್ನದು. ಉತ್ತಮ ಸಂಸ್ಕಾರದಿಂದ ಬೆಳೆದು ಬಂದ ನಾನು ಶಾಸಕನಲ್ಲ ನಾನೊಬ್ಬ ಜನಸೇವಕ ಎಂದು ತಿಳಿಸಿದರು.
ನಾಲ್ಕು ದಶಕಗಳ ಹಿಂದೆ ನಾನೊಬ್ಬ ವಿದ್ಯಾರ್ಥಿಯಾಗಿ ಇದೇ ಆವ ರಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ದ್ದೆ.ಇದೀಗ ಶಾಸಕನಾಗಿ ಮಾತನಾಡುತ್ತಿರುವುದು ಹರ್ಷತಂದಿದೆ. ಜನ್ಮ ಕೊಟ್ಟ ತಾಯಿಯ ಜೊತೆ ಜನ್ಮತಾಳಿದ ನಾಡಿಗೆ ಗೌರವ ಸಲ್ಲಿಸ ಬೇಕು.ಇಂದಿನ ಸಂಭ್ರಮದಲ್ಲಿ ದೇಶಭಕ್ತಿ ಸಾರುವ ರೂಪಕಗಳ ನೃತ್ಯದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ದೇಶಕ್ಕೆ ಉತ್ತಮ ರಾಜಕಾರಣಿಗಳು ಅಧಿಕಾರಿಗಳಾಗಿ ಹೊರಹೊಮ್ಮಲಿ ಎಂದು ಶುಭ ಹಾರೈಸಿದರು.
ಲೀಡ್ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಎನ್.ಟಿ.ಎರ್ರಿಸ್ವಾಮಿ ಉಪ ನ್ಯಾಸ ನೀಡಿದ ಅವರು,ಸ್ವಾತಂತ್ರ್ಯ ದಿನಾಚರಣೆ ವಿಜೃಂಭಣೆಯಾಗಿ ಆಚರಿಸಬೇಕು.ಕುವೆಂಪು ಅವರ ಆಶಯಗಳು ಮನೆಮಾತಾಗ ಬೇಕು.ವರ್ಷಗಳು ಕಳೆದಂತೆ ಸ್ವಾತಂತ್ರ ದಿನಾಚರಣೆ ಸಂಭ್ರಮ ಕಳೆಗುಂದುತ್ತಿರುವುದು ಇತಿಹಾಸ ಮರೆಮಾಚುತ್ತಿದೆ ಎಂದು ಕಳವಳಗೊಂಡರು.
ಕಾರ್ಯಕ್ರಮಕ್ಕೂ ಮುನ್ನ ಅಂಬೇಡ್ಕರ್ ಪುತ್ಥಳಿಗೆ ಪುಷ್ಪಾರ್ಚನೆ ಸಲ್ಲಿಸಿ ತೆರೆದ ವಾಹನದಲ್ಲಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.ಕೆಲ ಸಾಧಕರಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.ಫಲಾನುಭವಿಗಳಿಗೆ ತ್ರಿಚಕ್ರವಾಹನ ವಿತರಿಸ ಲಾಯಿತು.
ಇದೇ ವೇಳೆ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ,ಧ್ವಜವಂದನೆ ಸಲ್ಲಿಸಿದರು.
ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಅಧ್ಯಕ್ಷರು ಹಾಗೂ ತಹಶೀಲ್ದಾರ್ ಅರುಣ್ ಕಾರಗಿ 76ನೇ ಸ್ವಾತಂತ್ರ್ಯ ದಿನಾಚರಣೆ ಯ ಶುಭ ಸಂದೇಶ ನೀಡಿದರು.
ನಂತರ ಪೊಲೀಸ್ ಇಲಾಖೆ ಪಿ ಐ ಶ್ರೀನಿವಾಸ್ ರಾವ್ ಅವರು 76ನೇ ಸ್ವಾತಂತ್ರ್ಯ ದಿನಾಚರಣೆ ಕುರಿತು ಶಾಲಾ ಮಕ್ಕಳಿಗೆ ಶುಭ ಸಂದೇಶ ನೀಡಿದರು
ಈ ಸಂದರ್ಭದಲ್ಲಿ ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ. ಪಾಲಯ್ಯ,ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್,ತಾ.ಪಂ.ಇಓ ಚಂದ್ರ ಶೇಖರ್,ಪ್ರಭಾರಿ ಬಿಇಓ ಸುರೇಶ್ ರೆಡ್ಡಿ,ಪ.ಪಂ.ಮುಖ್ಯಾ ಧಿಕಾರಿ ಲೋಕ್ಯಾನಾಯ್ಕ,ಪೊಲೀಸ್ ವೃತ್ತ ನಿರೀಕ್ಷಕ ಶ್ರೀನಿವಾಸ್,ಪ.ಪಂ ಸದಸ್ಯರಾದ ರಮೇಶ್ ರೆಡ್ಡಿ,ತಿಪ್ಪೇಸ್ವಾಮಿ,ರವಿಕುಮಾರ್,ರಮೇಶ್ ರೆಡ್ಡಿ. ವಿಶಾಲಾಕ್ಷಿ , ತಿಪ್ಪೇಸ್ವಾಮಿ. ರೇವಣ್ಣ, ನಿರ್ಮಲ ಕುಮಾರಿ ನಜರ್ ಉನ್ನೀಸಾ,ನವೀನ್ ಕುಮಾರ್,ಲುಕ್ಮಾನ್ ಖಾನ್,ದೇವ ರಾಜ್, ಮಹಮ್ಮದ್ ಅಲಿ.ಪಾಪಲಿಂಗಪ್ಪ,ಮಂಜಮ್ಮ.ಲಲಿತಾ ಶಿವಣ್ಣ. ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ರಾಘವೇಂದ್ರ,ನೌಕರರ ಸಂಘದ ತಾಲೂಕು ಅಧ್ಯಕ್ಷ ಚಂದ್ರಪ್ಪ, ಕಾರ್ಯದರ್ಶಿ ತಿಪ್ಪೇಸ್ವಾಮಿ ಮುಖಂಡರಾದ ಸಣ್ಣಸೂರಜ್ಜ,ಪಲ್ಲಾಗಟ್ಟೆ ಶೇಖರಪ್ಪ,ಗೌಸ್ ಪೀರ್, ಹುಸೇನ್ ಮಿಯ್ಯಾ,ನಿವೃತ್ತ ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಹೇಶ್ವರಪ್ಪ,ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಮುಖಂಡರುಗಳು ಹಾಗೂ ವಿವಿಧ ಇಲಾಖೆಗಳ ತಾಲೂಕು ಮಟ್ಟ ದ ಅಧಿಕಾರಿಗಳು ಭಾಗವಹಿಸಿದ್ದರು.