ಪ್ರಜಾ ನಾಯಕ ಸುದ್ದಿ ಜಗಳೂರು -: ತಾಲೂಕಿನ ಜ್ಯೋತಿಪುರ ಗ್ರಾಮದಲ್ಲಿ ಇಂದು ಮುಂಜಾನೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಆಕಸ್ಮಿಕ ವಾಗಿ ಬೆಂಕಿ ತಗಲಿ ಗಂಗಮ್ಮ ಬಸಪ್ಪ ಎಂಬುವವರ ಮನೆಗೆ ಬೆಂಕಿ ಹತ್ತಿಕೊಂಡು ಸಂಪೂರ್ಣವಾಗಿ ಸುಟ್ಟು ಹೋಗಿ ರುವ ಘಟನೆ ನಡೆದಿದೆ
ಈ ಹಿನ್ನೆಲೆಯಲ್ಲಿ ಶಾಸಕ ಬಿ.ದೇವೇಂದ್ರಪ್ಪ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರ ಕುಟುಂಬಕ್ಕೆ ಸಾಂತ್ವನ ಹೇಳಿ ವೈಯಕ್ತಿಕ ವಾಗಿ 25000 ಧನ ಸಹಾಯ ಮಾಡಿದರು
ಹೆಚ್ಚಿನದಾಗಿ ಕರ್ನಾಟಕ ಸರ್ಕಾರ ದ ಮುಖ್ಯ ಮಂತ್ರಿಗಳ ಪರಿಹಾರ ನಿಧಿಯಿಂದ ತಾಲೂಕು ಆಡಳಿತ ದಿಂದ ಸೇರಿದಂತೆ ಸರ್ಕಾರದ ವತಿಯಿಂದ ಬರುವ ಪರಿಹಾರ ವನ್ನು ಶೀಘ್ರವೇ ಒದಗಿಸುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.
ಸ್ಥಳೀಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಜ್ಯೋತಿ ಪುರ ಗ್ರಾಮದ ಗಂಗಮ್ಮ ಬಸಪ್ಪ ಇವರ ಮನೆ ಸುಟ್ಟು ಹೋಗಿದೆ ಹಾಗಾ ಗಿ ಇವರಿಗೆ ಹೊಸ ಮನೆ ನಿರ್ಮಿಸಿ ಕೊಡಲು ಆದೇಶ ಮಾಡಿದ್ದೇನೆ ಜ್ಯೋತಿಪುರ ಗ್ರಾಮದ ಸ್ಥಳೀಯ ಗ್ರಾಮ ಲೆಕ್ಕಾಧಿಕಾರಿಗೆ ಈ ಕೂಡಲೇ ದಿನನಿತ್ಯ ಸಾಮಗ್ರಿ ಸೇರಿದಂತೆ ಮೂಲಭೂತ ಸೌಕರ್ಯ ಗಳನ್ನು ವ್ಯವಸ್ಥೆ ಮಾಡಲು ಸೂಚಿಸಿದ್ದೇನೆ ಎಂದರು
ಈ ಸಂದರ್ಭದಲ್ಲಿ ಪ್ರಭಾರಿ ತಹಶೀಲ್ದಾರ್ ಅರುಣ್ ಕಾರಗಿ.ರಾಜಸ್ವ ನಿರೀಕ್ಷಕರು ಧನಂಜಯ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿ ಕಾರಿ ಓಬಣ್ಣ.ಗ್ರಾಮ ಪಂಚಾಯತಿ ಅಧ್ಯಕ್ಷ ಸಿದ್ದಪ್ಪ. ಶಾಸಕರ ಆಪ್ತ ಸಹಾಯಕರಾದ ಶಿವಕುಮಾರ್.ಪಲ್ಲಾಗಟ್ಟೆ ಶೇಖರಪ್ಪ.ಮೊಹ ಮ್ಮದ್ ಗೌಸ್ ಗ್ರಾಮ ಪಂಚಾಯತಿ ಸದಸ್ಯ ಸಿದ್ದಪ್ಪ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.