ಪ್ರಜಾ ನಾಯಕ ಸುದ್ದಿ ಜಗಳೂರು :- ದಶಕಗಳಿಂದ ಅಭಿವೃದ್ಧಿ ಇಲ್ಲದೆ ವಂಚಿತವಾಗಿರುವ ತಾಲ್ಲೂಕಿನ ಭೋವಿ ಹಟ್ಟಿಗಳಿಗೆ ಸಂಪರ್ಕ ರಸ್ತೆ, ಸಾರಿಗೆ ಸಂಚಾರ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ವಕೀಲ ಡಿ. ಶ್ರೀನಿವಾಸ್ ಒತ್ತಾಯಿಸಿ ದರು.
ಪಟ್ಟಣದ ಭೋವಿ ಹಾಸ್ಟೆಲ್ ನಲ್ಲಿ ಶನಿವಾರ ನಡೆದ ತಾಲ್ಲೂಕು ಮಟ್ಟದ ಭೋವಿ ಸಮಾಜದ ಸಭೆಯಲ್ಲಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ ಭೋವಿ ಸಮಾಜದ ಬಹುತೇಕರು ಭೂರಹಿತರಾಗಿ ದ್ದು, ಜೀವನನಿರ್ವಹಣೆಗಾಗಿ ದೂರದ ಕಾಫಿಸೀಮೆ ಅಥವಾ ದೊಡ್ಡ ನಗರಗಳಿಗೆ ಹಲವು ದಶಕಗಳಿಂದ ಸಾಮೂಹಿಕವಾಗಿ ಗುಳೆ ಹೋಗುವುದು ಸಾಮಾನ್ಯವಾಗಿದೆ. ಗುಳೆ ಪದ್ದತಿಯಿಂದ ಭೋವಿ ಸಮುದಾಯದ ಮಕ್ಕಳು ಶಿಕ್ಷಣದಿಂದ ವಂಚಿರಾಗುವಂತಾಗಿದೆ. ಗುಳೆ ನಿಯಂತ್ರಿಸುವ ನಿಟ್ಟಿನಲ್ಲಿ ಕೂಲಿಕಾರ್ಮಿಕರಿಗೆ ಕೆಲಸ ನೀಡ ಬೇಕು. ಭೋವಿ ಹಟ್ಟಿಗಳಿಗೆ ಎಲ್ಲಾ ರೀತಿಯ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಆರ್. ಅಂಜಿನಪ್ಪ ಮಾತನಾಡಿ, ಭೂರಹಿತ ಕಾರ್ಮಿಕರು ಹಾಗೂ ಬಡವರೇ ಹೆಚ್ಚಾಗಿ ರುವ ಭೋವಿ ಸಮಾಜದದಲ್ಲಿ ಜಾಗೃತಿ ಮೂಡಿಸುವ ಅಗತ್ಯ ಇದೆ. ಸಮಾಜ ಸಂಘಟನೆಯಾಗಬೇಕಿದ್ದು, ಪ್ರಬಲ ಸಂಘಟನೆಯನ್ನು ರೂಪಿಸುವ ಅಗತ್ಯ ಇದೆ. ಹೊಸದಾಗಿ ನೇಮಕವಾಗಿರುವ ಪದಾಧಿ ಕಾರಿಗಳು ಸಮಾಜದ ಏಳ್ಗೆಗೆ ಶ್ರಮಿಸಬೇಕು ಎಂದು ಹೇಳಿದರು.
ಭೋವಿ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ:- ಜಗ ಳೂರು ತಾಲ್ಲೂಕು ಭೋವಿ ಸಮಾಜಕ್ಕೆ ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಅಧ್ಯಕ್ಷರಾಗಿ ಅರ್ಜುನ್ ಪಲ್ಲಾಗಟ್ಟೆ, ಕಾರ್ಯದರ್ಶಿಯಾಗಿ ಎಂ.ವಿ. ಶ್ರೀನಿವಾಸ್, ಸಹ ಕಾರ್ಯದರ್ಶಿ- ಮುಸ್ಟೂರು ವಿರೂಪಾಕ್ಷಿ, ಉಪಾ ಧ್ಯಕ್ಷ-ಗೋವಿಂದಪ್ಪ, ಖಜಾಂಚಿ-ಎ. ರಂಗನಾಥ್ ಹಾಗೂ ಕಾರ್ಯ ಕಾರಿ ಸಮಿತಿ ಸದಸ್ಯರಾಗಿ ಬೆಂಚಿಕಟ್ಟೆ ಗಂಗಾಧರ, ತಿಮ್ಮಾರೆಡ್ಡಿ,ರಾಜಪ್ಪ, ಚಿಕ್ಕಬನ್ನಿಹಟ್ಟಿ ನಾಗರಾಜ, ಮರಿಕಟ್ಟೆ ಪರಶುರಾಮ್, ವೀರೇಶ್, ಯರ್ಲಕಟ್ಟೆ ಸಂದೀಪ, ವೆಂಕಟೇಶ್, ಸಿ. ನಾಗರಾಜ್ ಅವರು ಅವಿರೋಧವಾಗಿ ಆಯ್ಕೆಯಾದರು.
ಭೋವಿ ಸಮಾಜದ ಮುಖಂಡರಾದ ಎಂ.ಆರ್. ಪುಟ್ಟಣ್ಣ, ಎ. ವೆಂಕಟೇಶ್, ಎಸ್.ವಿ. ಈರಪ್ಪ, ತುಪ್ಪದಹಳ್ಳಿ ದಾಸಪ್ಪ, ರಾಮಾಂಜನೇಯ, ಎ.ರಂಗನಾಥ, ಎಂ.ವಿ. ಶ್ರೀನಿವಾಸ್, ಬಿ. ತಿರುಮಲೇಶ್. ಯು. ಸಿ ರವಿ. ವೀೀರೇಶ್ ವಿರೂಪಾಕ್ಷ ಇದ್ದರು