ಪ್ರಜಾ ನಾಯಕ ಸುದ್ದಿ ಜಗಳೂರು :- ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿ ಭಾಯಿಫುಲೆ ಜಯಂತಿಯನ್ನು ಶಿಕ್ಷಕರ ದಿನಾಚರಣೆ ಯನ್ನಾಗಿ ಆಚರಿಸಬೇಕು ಎಂದು ಸಾಹಿತಿ ಹಾಗೂ ಕೇಂದ್ರ ಸಾಹಿತ್ಯ ಆಕಾಡೆಮಿ ಪುರಸ್ಕೃತ ಕುಂ.ವೀರಭದ್ರಪ್ಪ ಕರೆ ನೀಡಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಡಾ.ರಾಧಕೃಷ್ಣನ್ ಅವರ 135 ನೇ ಜನ್ಮದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾ ಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದ ಸಂವಿಧಾನದಲ್ಲಿ ಎಲ್ಲಾ ವರ್ಗದವರಿಗೂ ಸಮಾನ ಅವ ಕಾಶ ಕಲ್ಪಿಸಿದ ಫಲವಾಗಿ ಜಗಳೂರಿನಲ್ಲಿ ಜವಾನರಾಗಿದ್ದವರು ಶಾಸಕರಾಗಿ ಆಯ್ಕೆಯಾಗಿದ್ದಾರೆ.ವಿಧಾನಸೌದದಲ್ಲಿ ನಿಜಕ್ಕೂ ಮಾದ ರಿ ಯಾಗಿದ್ದಾರೆ.ಶಿಕ್ಷಕರಿಗೆ ಡಾ.ಬಿ.ಆರ್.ಅಂಬೇಡ್ಕರ್,ಡಾ. ಸರ್ವ ಪಲ್ಲಿ ರಾಧಕೃಷ್ಣನ್,ಅಬ್ದುಲ್ ಕಲಾಂ ಅವರಂತಹ ಮಹಾ ನೀಯ ರು ಆದರ್ಶವಾಗಬೇಕಿದೆ.ಶಿಕ್ಷಕರು ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆ ಗೆ ನೈತಿಕತೆ ಬೆಳೆಸಬೇಕು.ತಾವುಗಳು ನಿರಂತರ ಕಲಿಕೆ,ಕಥೆ ಕಾದಂಬ ರಿ ಬರವಣಿಗೆ ಹವ್ಯಾಸ ರೂಢಿಸಿಕೊಳ್ಳಬೇಕು ಹೇಳಿದರು.
ಸರಕಾರಿ ಶಾಲಾಕಟ್ಟಡಗಳನ್ನು ಗುತ್ತಿಗೆದಾರರು ಕಳಪೆ ಮಾಡುತ್ತಿ ದ್ದಾರೆ.ಇದನ್ನು ಪ್ರಶ್ನಿಸಿದ ಶಿಕ್ಷಕರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ.ಅಲ್ಲ ದೆ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕ್ರಮೇಣ ಕ್ಷೀಣ ವಾಗುತ್ತಿ ರುವುದು ಅಪಾಯಕಾರಿ ಬೆಳವಣಿಗೆ ಕೂಡಲೇ ಸರಕಾರ ಜಾಗೃತ ವಾಗಬೇಕು ಎಂದು ಆತಂಕ ವ್ಯಕ್ತಪಡಿಸಿದರು.
ನಾನೊಬ್ಬ ಹಳ್ಳಿಯ ಶಿಕ್ಷಕನಾಗಿದ್ದೆ ಎಂಬುದು ಹೆಮ್ಮೆ :- ನಾನು ಶಿಕ್ಷ ಕ ವೃತ್ತಿಗೆ ಸೇರ್ಪಡೆಗೊಂಡು ರಸ್ತೆ,ಶೌಚಾಲಯ,ಮೂಲ ಸೌಕರ್ಯ ಗ ಳಿಲ್ಲದ ಕು ಗ್ರಾಮದಲ್ಲಿ ಶೋಷಿತ ಸಮುದಾಯದ ಮಕ್ಕಳಿಗೆ ಬೋಧನೆ ಮಾಡಿದ ಪರಿಣಾಮ ಹಲವು ಜನ ಶಿಷ್ಯಂದಿರು ವಿವಿಧ ಸರಕಾರಿ ನೌಕರಿಗಳನ್ನು ಅಲಂಕರಿಸಿದ್ದಾರೆ.ಅಲ್ಲದೆ ಹಲವು ಕಾದಂಬರಿ ರಚಿಸಿ ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಶಸ್ತಿ ಮುಡಿಗೇರಿ ಸಿಕೊಂಡಿರುವ ನಿಮ್ಮ ಪ್ರತಿನಿಧಿಯಾಗಿ ನಾನೊಬ್ಬ ಹಳ್ಳಿಯ ಶಿಕ್ಷಕ ಎಂಬುದು ಹೆಮ್ಮೆ ತಂದಿದೆ ದೇಶದಲ್ಲಿ ಶಿಕ್ಷಕರೇ ನಿಜವಾದ ಬುದ್ದಿ ವಂತರು ಸಮಾಜದಲ್ಲಿ ಶಿಕ್ಷಕರಿಗೆ ಗೌರವ ಸ್ಥಾನ ಮಾನಗಳಿವೆ ಎಂದರು.ರಾಜಕಾರಣಿಗಳು ಹಾಗೂ ಸರಕಾರಿ ನೌಕರರು ಆಂಗ್ಲ ಭಾಷೆ ವ್ಯಾಮೋಹ ತೊರೆದು.ಕನ್ನಡ ಸರಕಾರಿ ಶಾಲೆಗಳಲ್ಲಿ ಮಕ್ಕಳ ನ್ನು ಸೇರಿಸಿದಾಗ ಮಾತ್ರ ಸರಕಾರಿ ಶಾಲೆಗಳು ಉಳಿವು ಸಾಧ್ಯ ಎಂದು ಅಭಿಮತ ವ್ಯಕ್ತಪಡಿಸಿದರು.
ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ,ನಾನು ಪ್ರಾಥಮಿಕ ಶಾಲೆ ಗುರುವಿನಿಂದ ಕಲಿತಪರಿಣಾಮ.ನನ್ನ ಮಕ್ಕಳನ್ನು ಉನ್ನತವ್ಯಾಸಂಗ ಮಾಡಿಸಿ.ಇಂದು ಶಾಸಕನಾಗಿ ಆಯ್ಕೆಯಾಗಿರುವೆ.ಶಿಕ್ಷಕರು ಮಕ್ಕಳಿ ಗೆ ಬಿತ್ತುವ ಎರಡು ಅಕ್ಷರದ ಬೀಜ ಭವಿಷ್ಯದಲ್ಲಿ ಫಲ ಕೊಡುತ್ತದೆ. ಅದರಿಂದಾಗುವ ತೃಪ್ತಿ ಬೇರೊಂದಿಲ್ಲ ಎಂದರು.
ಸಮಾಜದಲ್ಲಿ ಮಕ್ಕಳನ್ನು ಸುಂದರ ಮೂರ್ತಿಗಳನ್ನಾಗಿಸುವ ಶಿಕ್ಷಕ ರೇ ನಿಜವಾದ ಶಿಲ್ಪಿಗಳು.ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿ ಭೆಯನ್ನು ಅನಾವರಣಗೊಳಿಸುವುದು ಶಿಕ್ಷಕರು.ಕ್ಷೇತ್ರದಲ್ಲಿ ಶಿಕ್ಷಕ ರು ತಮ್ಮ ಕರ್ತವ್ಯ ಮರೆತರೆ ಸಮಾಜಕ್ಕೆ ದ್ರೋಹ ಎಸಗಿದಂತೆ.ತಮ್ಮ ಪ್ರಾಮಾಣಿಕ ಸೇವೆಗೆ ನನ್ನ ಸಹಕಾರವಿದೆ ನಾನೊಬ್ಬ ಶಾಸಕನಲ್ಲ ಜನಸೇವಕ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕಿ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳ ಸಹಕಾರ ದಿಂದ ಇಂದಿನ ವೈಭವದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಯಶಸ್ವಿಯಾಗಿ ಸಂಭ್ರಮ ಮನೆಮಾಡಿದೆ ತಮಗೆ ಚಿರ ಋಣಿ ಯಾಗಿರುವೆ ಎಂದು ಸಂತಸ ವ್ಯಕ್ತಪಡಿಸಿದರು.
ಬಿಇಓ ಹಾಲಮೂರ್ತಿ ಪ್ರಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಪ್ರವಾಸಿ ಮಂದಿರದಿಂದ ಪ್ರಮುಖಬೀದಿಗಳಮೂಲಕ ಅಂಬೇಡ್ಕರ್ ಭವನದವರೆಗೆ ಭಾವ ಚಿತ್ರದೊಂದಿಗೆ ಶಾರದಾ ಬ್ಯಾಂಡ್ ಆರ್ಕೆಸ್ಟ್ರಾ ದಿಂದ ಮೆರವಣಿಗೆ ಜರುಗಿತು.ಕಾರ್ಯಕ್ರಮದಲ್ಲಿ ಸಾಧಕ ಶಿಕ್ಷಕರಿಗೆ ಸನ್ಮಾನಿಸಿ ಗೌರವಿ ಸಲಾಯಿತು
ಈ ಸಂದರ್ಭದಲ್ಲಿ ಕೆಪಿಸಿಸಿ ಎಸ್.ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ. ಪಾಲಯ್ಯ,ತಹಶೀಲ್ದಾರ್ ಡಾ.ಅರುಣಕುಮಾರ್ ಕಾರಗಿ,ತಾ.ಪಂ ಇಓ ಚಂದ್ರಶೇಖರ್,ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಚಂದ್ರಪ್ಪ,ಕಾರ್ಯದರ್ಶಿ ಎ.ಎಲ್, ತಿಪ್ಪೇಸ್ವಾಮಿ.ಸರಕಾರಿ ಪ್ರಾಥಮಿಕ ಶಾಲಾ ತಾಲೂಕು ಅಧ್ಯಕ್ಷ ಹನುಮಂತೇಶ್,ಕಾರ್ಯ ದರ್ಶಿ ಅಂಜಿನಾಯ್ಕ,ಕೆ.ಪಿ.ಸಿ.ಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್, ಪ.ಪಂ ಸದಸ್ಯರಾದ ಲಲಿತಮ್ಮ, ಮಂಜಮ್ಮ,ರಮೇಶ್ ರೆಡ್ಡಿ,ರವಿ ಕುಮಾರ್, ಲುಕ್ಮಾನ್ ಉಲ್ಲಾಖಾನ್.ಮುಖಂಡರಾದ.ಪಲ್ಲಾ ಗಟ್ಟೆ ಶೇಖರಪ್ಪ, ಮಹಮ್ಮದ್ ಗೌಸ್.ನಿವೃತ್ತ ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಹೇಶ್ವರಪ್ಪ,ಪ.ಪಂ ಮುಖ್ಯಾಧಿಕಾರಿ ಲೊಕ್ಯಾನಾಯ್ಕ, ಬಿ.ಆರ್ ಸಿ ಡಿ.ಡಿ ಹಾಲಪ್ಪ,ಸಿಆರ್ಪಿ ಮಂಜಣ್ಣ. ರವಿ ಪ್ರಸಾದ್. ಸಿಬ್ಬಂದಿಗಳಾದ ತಿರುಮಲೇಶ್. ರಮೇಶ್. ಶಿಕ್ಷಕ ರಾದ ಸತೀಶ್.ಸೇರಿದಂತೆ ಸಾವಿರಾರು ಶಿಕ್ಷಕರು ಭಾಗವಹಿಸಿದ್ದರು.