ಪ್ರಜಾ ನಾಯಕ ಸುದ್ದಿ ಜಗಳೂರು :- ಕ್ಷೇತ್ರದಲ್ಲಿ ಅನೇಕ ಮಂದಿ ಶಾಸಕರು ಸೇವೆ ಸಲ್ಲಿಸಿ ಹೋಗಿದ್ದಾರೆ ಅವರ ಮಾರ್ಗದರ್ಶನದಲ್ಲಿ ಮುನ್ನಡೆಯುವೆ ಹಳೆಯ ಬೇರು ಹೊಸ ಚಿಗುರಾಗಿ ಕ್ಷೇತ್ರದ ಸರ್ವ ತೋಮುಖ ಅಭಿವೃದ್ಧಿಗೆ ಶ್ರಮಿಸಿ ಜನರ ಋಣ ತೀರಿಸುವೆ ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಹೇಳಿದರು.
ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಗುರುವಾರ ಯಾದವ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶ್ರೀಕೃಷ್ಣ ಜಯಂತೋತ್ಸ ವ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ನಂತರ ಮಾತನಾಡಿದ ಅವರು
ಶ್ರೀಕೃಷ್ಣನು 8ನೇ ಅವತಾರ ಪುರುಷನಾಗಿ ಜನ್ಮ ತಾಳಿದ್ದು ದುಷ್ಟರ ನ್ನು ಶಿಕ್ಷಿಸಿ ಶಿಷ್ಟರನ್ನು ರಕ್ಷಿಸುವ ಮೂಲಕ ಅಧರ್ಮವನ್ನು ಅಳಿಸಿ ಧರ್ಮವನ್ನು ಉಳಿಸುವ ಕೆಲಸ ಮಾಡಿದ್ದಾರೆ ಯಾದವ ಸಮುದಾ ಯದವರನ್ನು ನಂಬಿ ಕೆಟ್ಟವರಿಲ್ಲ ಅವರು ಒಳ್ಳೆಯ ಜನರಾಗಿದ್ದು ಕಾಂಗ್ರೇಸ್ ಪಕ್ಷದ ಸಾಮಾನ್ಯ ಕಾರ್ಯಕರ್ತನಾದ ನನ್ನ ಶಾಸಕನನ್ನಾ ಗಿ ಮಾಡಲು ಅವರ ಶ್ರಮವು ಸಾಕಷ್ಟಿದೆ ಯಾದವ ಸಮಾಜದ ಸಮುದಾಯ ಭವನಕ್ಕೆ ನಿವೇಶನ ಲಭ್ಯ ಇದ್ದು ನಮ್ಮ ಕಾಂಗ್ರೇಸ್ ಸರಕಾರದ ಅವಧಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಸದ್ಯ ಮಾರ್ಚ್ವರಗೆ ಅನುದಾನ ಇಲ್ಲ ನಂತರ ಎಲ್ಲಾ ಸಮುದಾಯಗಳಿಗೆ ಅನುದಾನ ನೀಡಿ ಅಭಿವೃದ್ಧಿಪಡಿಸಲಾಗುವುದು ಎಂದ ಅವರು ಈಗಾಗಲೇ ಬಾಲ್ಯವಸ್ಥೆ, ಪ್ರೌಢವಾಸ್ಥೆ, ಗೃಹಸ್ಥ ಮುಗಿದಿದ್ದು 2028 ನಂತರ ಸನ್ಯಾಸ ಹಾಗೂ ವೃದ್ಧಾವಸ್ಥೆಯನ್ನು ಪೂರೈಸಲಾಗುವುದು ಎಂದು ಶ್ರೀಕೃಷ್ಣನಿಗೆ ಸಂಬoಧಿಸಿದ ಶ್ಲೋಕ ಮತ್ತು ಹಾಡುಗಳನ್ನು ಹೇಳುವ ಮೂಲಕ ಸಭಿಕರನ್ನು ರಂಜಿಸಿದರು.
ಚಿತ್ರದುರ್ಗ ಗೊಲ್ಲಗಿರಿ ಕ್ಷೇತ್ರ ಯಾದವ ಮಹಾಸಂಸ್ಥಾನದ ಶ್ರೀಜಗ ದ್ಗುರು ಶ್ರೀಕೃಷ್ಣ ಯಾದವಾನಂದ ಮಹಾಸ್ವಾಮಿಗಳ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು ಶ್ರೀಕೃಷ್ಣ ಪರಮಾತ್ಮನು ಒಂದು ವರ್ಗಕ್ಕೆ ಸೀಮಿತವಾಗಿಲ್ಲ ಇಡೀ ಮನುಕುಲ ಕ್ಕೆ ಸಂದೇಶವನ್ನು ಸಾರಿದ್ದಾರೆ ಯಾದವ ಸಮಾಜದವರು ಸಂಘಟಿ ತರಾಗಿ ಸಾಮಾಜಿಕ, ಶೈಕಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಅಭಿವೃದ್ಧಿಯಾಗಬೇಕಾದರೆ ಒಗ್ಗಟ್ಟು ಪ್ರಮುಖವಾಗಿದ್ದು ಸಮಾಜ ಬಾಂಧವರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ ಸಮಾಜದ ಮುಖ್ಯ ವಾಹಿನಿಗೆ ತರಬೇಕಾಗಿದೆ ಯಾದವ ಸಮುದಾಯ ನಿರ್ಮಾಣಕ್ಕೆ ಶಾಸಕರು ಮಾರ್ಚ್ ನಂತರ ಅನುದಾನ ನೀಡುವುದಾಗಿ ಬರವಸೆ ನೀಡಿದ್ದಾರೆ ಅವರಿಗೆ ನಮ್ಮ ಸಮಾಜ ಚಿರಋಣಿಯಾಗಿರಲಿದೆ ಎಂದರು.
ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿ ತಾಲೂಕಿನಲ್ಲಿ ಯಾದವ ಸಮಾಜದವರು ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಮುಂದುವರೆಯ ಬೇಕಿದೆ ಸಮಾಜದ ಅಭಿವೃದ್ದಿಗೆ ಪಕ್ಷಬೇಧ ಮರೆತು ಸಂಘಟಿತರಾ ಗಬೇಕಿದ್ದು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಮುಂದಾ ಗ ಬೇಕೆಂದು ಕರೆ ನೀಡಿದರು.
ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ ಯಾವುದೇ ಜಯಂತಿಗಳನ್ನು ಕೇವಲ ಮೆರವಣಿಗೆ ಮತ್ತು ನೃತ್ಯಕ್ಕೆ ಸಮಯವನ್ನು ವ್ಯಯ ಮಾಡದೇ ದಾರ್ಶನಿಕರು ಮತ್ತು ಮಠಾ ಧೀಶರ ಹಿತನುಡಿಗಳಿಗೆ ಮೀಸಲಿಟ್ಟು ಜಾಗೃತರಾಗಿ ಸರಕಾರದ ಸೌಲಭ್ಯಗಳನ್ನು ಪಡೆದುಕೊಂಡು ಅಭಿವೃದ್ಧಿ ಹೊಂದಬೇಕೆoದು ಕಿವಿಮಾತು ಹೇಳಿದರು.
ಈ ವೇಳೆ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ವೀರಶೈವ ಕಲ್ಯಾಣ ಮಂಟಪದವರೆಗೂ ಶ್ರೀಕೃಷ್ಣನ ಭಾವಚಿತ್ರದೊಂದಿಗೆ ಮೆರವಣಿಗೆ ಯಲ್ಲಿ ಸಾಗಿದರು.
ಯಾದವ ಸಮಾಜದ ವತಿಯಿಂದ ಬೆಂಗಳೂರಿ ನ ಸಿಎಸ್ಐಆರ್ ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರಿ ಹಿರಿಯ ಸಂಶೋಧ ಕ ಸಮಾಜದ ಶಿಕ್ಷಕ ಕೆ.ಟಿ.ಚಿಕ್ಕಣ್ಣನವರ ಪುತ್ರ ಧನಂಜಯ್ ಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಯಾದವ ಸಮಾಜದ ಅಧ್ಯಕ್ಷ ಜಿ.ಸಿ.ಕೃಷ್ಣ ಮೂರ್ತಿ,ಕಾರ್ಯದರ್ಶಿ ಪ್ರಕಾಶ್, ಕಾಡುಗೊಲ್ಲ ಯುವ ಸೇನೆ ಅಧ್ಯಕ್ಷ ಇಂದ್ರೇಶ್, ಕಾರ್ಯದರ್ಶಿ ತಿಪ್ಪೇಶ್, ಸಂಸದರ ಪುತ್ರ ಅನಿತ್ ಕುಮಾರ್, ಮಾಜಿ ವಿಧಾನ ಪರಿಷತ್ ಮಾಜಿ ಸದಸ್ಯೆ ಜಯ್ಯಮ್ಮ ಬಾಲರಾಜ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಷಂಷೀರ್ ಅಹಮದ್, ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿಗೌಡ, ತಾಲೂಕು ಉಸ್ತುವಾರಿ ಕಲ್ಲೇಶರಾಜ್ ಪಟೇಲ್, ಎಸ್ಸಿ ಮೋಚಾ ಅದ್ಯಕ್ಷ ಸಿ.ತಿಪ್ಪೇಸ್ವಾಮಿ, ನಿವೃತ್ತ ಸಮಾಜ ಕಲ್ಯಾಣಾಧಿಕಾರಿ ಬಿ.ಮಹೇಶ್ವರ ಪ್ಪ, ಪತ್ರಕರ್ತರ ಸಂಘದ ಅಧ್ಯಕ್ಷ ಚಿದಾನಂದಪ್ಪ, ಶಿವಕುಮಾರ್ ಒಡೆಯರ್, ಧನಂಜಯ್ ಕುಮಾರ್, ಜಿಲ್ಲಾ ಕಾರ್ಯದರ್ಶಿ ಶೇಖರಪ್ಪ, ಟಿ.ಚಿತ್ತಪ್ಪ, ಜೀವನ್, ಕೆ.ಟಿ.ಚಿಕ್ಕಣ್ಣ, ಧನಂಜಯ್ ಕುಮಾರ್, ಮಹಾಲಿಂಗಪ್ಪ, ರಮೇಶ್, ಬಾಲರಾಜ್ ಸೇರಿದಂತೆ ಮತ್ತಿತರರಿದ್ದರು.