ಪ್ರಜಾ ನಾಯಕ ಸುದ್ದಿ ಜಗಳೂರು :- ಕ್ಷೇತ್ರದಲ್ಲಿ ನಾನು ಶಾಸಕನು ಮಾತ್ರ ಆದರೆ ಕಾಂಗ್ರೆಸ್ ಪಕ್ಷ ಮಾತೃಸ್ವರೂಪವಾಗಿದ್ದು ಅದಕ್ಕೆ ದ್ರೋಹವೆಸಗಬೇಡಿ ಎಂದು ಶಾಸಕ ಬಿ.ದೇವೇಂದ್ರಪ್ಪ ಕರೆ ನೀಡಿದರು.
ಪಟ್ಟಣದ ಜನಸಂಪರ್ಕ ಕೇಂದ್ರದಲ್ಲಿ ಪಕ್ಷ ತೊರೆದವರು ಕಾಂಗ್ರೆಸ್ ಪಕ್ಷ ಮರು ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ದರು.
2023ರ ವಿಧಾನ ಸಭಾ ಚುನಾವಣೆಯಲ್ಲಿ ನನಗೆ ಟಿಕೇಟ್ ಸಿಕ್ಕ ತಕ್ಷಣವೇ ಹಲವು ಮುಖಂಡರುಗಳು ದಶಕಗಳ ಕಾಲ ಪಕ್ಷದಲ್ಲಿ ದ್ದವರು ದಿಢೀರ್ ನೆ ಕಾಂಗ್ರೆಸ್ ಪಕ್ಷ ನಿಷ್ಠೆ ತೊರೆದು ವ್ಯಕ್ತಿಗತವಾಗಿ ಪಕ್ಷೇತರ ಅಭ್ಯರ್ಥಿಯ ಬೆಂಬಲಕ್ಕೆ ತೆರಳಿದ್ದು ಸರಿಯಲ್ಲ.ಪಕ್ಷಕ್ಕೆ ವ್ಯಕ್ತಿ ಅನಿವಾರ್ಯವಲ್ಲ.ವ್ಯಕ್ತಿಗೆ ಪಕ್ಷ ಅನಿವಾರ್ಯ.ರಾಜ್ಯದಲ್ಲಿ ಕಾಂಗ್ರೆಸ್ ಪರ ಪ್ರವಾಹವಿತ್ತು ನಾನು ಪಕ್ಷದ ಚಿಹ್ನೆಯಡಿ ಗೆಲುವು ಸಾಧಿಸಿರುವೆ .ಆದರೆ ಪುನಃ ತಾವು ಮನಪರಿವರ್ತನೆಗೊಂಡು ಪಕ್ಷಕ್ಕೆ ಮರು ಸೇರ್ಪಡೆಗೊಳ್ಳುತ್ತಿರುವುದು ಸ್ವಾಗತರ್ಹ ಆದರೆ ಮುಂದಿನ ದಿನ ಗಳಲ್ಲಿ ಪ್ರಾಮಾಣಿಕವಾಗಿ ಪಕ್ಷದಲ್ಲಿ ಶ್ರಮಿಸಬೇಕು.ಮತ್ತೊಮ್ಮೆ ತಪ್ಪು ಮಾಡಿದರೆ ನಾನು ಕ್ಷಮಿಸುವುದಿಲ್ಲ ಎಂದರು.
ಪಕ್ಷತೊರೆದಿದ್ದು ಬೇಸರ ತಂದಿಲ್ಲ.ಸರ್ವಜನಾಂಗದ ಶಾಂತಿಯ ತೋಟವೆಂಬ ನಂಬಿಕೆಯಿಟ್ಟ ನನಗೆ ಕೇವಲ ಚುನಾವಣೆ ಉದ್ದೇಶ ಅಧಿಕಾರದ ಆಸೆಯಿಂದ ರೌಡಿ ಪಟ್ಟ ಕಟ್ಟಿದ್ದು ವೈಯಕ್ತಿಕವಾಗಿ ನೋವುಂಟುಮಾಡಿದೆ.ಕೆಲವರ ದ್ವೇಷದ ರಾಜಕಾರಣಕ್ಕೆ ಏನೂ ತಪ್ಪು ಮಾಡದ ಮಾಜಿ ಶಾಸಕ ಎಚ್.ಪಿ.ರಾಜೇಶ್ ಅವರ ರಾಜ ಕೀಯ ಭವಿಷ್ಯಕ್ಕೆ ಸಂಚಕಾರ ತಂದೊಡ್ಡಿದ್ದಾರೆ ಎಂದು ಕೆಲ ಮುಖಂಡರುಗಳ ವಿರುದ್ದ ವಾಗ್ದಾಳಿ ನಡೆಸಿದರು.
ಕೆ.ಪಿ.ಪಾಲಯ್ಯ ತ್ಯಾಗಮಯಿ ಶಿಸ್ತಿನ ಸಿಪಾಯಿ :- ಕಾಂಗ್ರೆಸ್ ಪಕ್ಷ ದಿಂದ ಮೂರು ಜನ ಆಕಾಂಕ್ಷಿಗಳಿದ್ದೆವು.ಜೊತೆಯಲ್ಲಿ ಪಕ್ಷ ಸಂಘ ಟನೆ ಮಾಡುತ್ತಾ ಟಿಕೇಟ್ ಗೆ ಪೈಪೋಟಿ ನಡೆಯಿತು. ಆದರೆ ಅದೃ ಷ್ಠ ಶ್ರಮದ ಫಲವಾಗಿ ನನಗೆ ಬಿ ಫಾರಂ ನೀಡಿ ದರು.ಎಲ್ಲರೂ ಪಕ್ಷ ತೊರೆದು ಹೋದರೂ ಕೆ.ಪಿ.ಪಾಲಯ್ಯ ಅವರು ತ್ಯಾಗಮಯಿ ಯಾ ಗಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಅವಿರತ ಶ್ರಮವಹಿಸಿ ದರು.ನಿಜ ಕ್ಕೂ ಚಿರ ಋಣಿಯಾಗಿರುವೆ ಎಂದು ಪ್ರಶಂಸಿದರು.
ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯಾಧ್ಯಕ್ಷ ಕೆಪಿ ಪಾಲಯ್ಯ ಮಾತ ನಾಡಿ,ಷರತ್ತುರಹಿತವಾಗಿ ಮರು ಸೇರ್ಪಡೆಗೊಂಡಿರುವವರು ಪ್ರಾಮಾಣಿಕವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿ.ತಮ್ಮ ಸ್ವಾರ್ಥ ಕ್ಕಾಗಿ ದ್ರೋಹ ಮಾಡದೆ ಪಕ್ಷ ನಿಷ್ಠೆಯಿಂದ ಆಗಮಿಸುವವರಿಗೆ ಆಹ್ವಾನವಿದೆ.ಆಂತರಿಕ ವೈಮನಸ್ಸು ತೊರೆದು ಸಲಹೆ ಸಹಕಾರ ದಿಂದ ಕ್ಷೇತ್ರದ ಅಭಿವೃದ್ದಿಗೆ ಸಹಕರಿಸಬೇಕು.
ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್ ಮಾತನಾಡಿ,ತಾಲೂಕಿ ನಲ್ಲಿ ಕೆಲ ಹಿರಿಯರು ಕಾಂಗ್ರೆಸ್ ಪಕ್ಷದಿಂದ ಅಧಿಕಾರ ಪಡೆದಿ ದ್ದರೂ ಸಹ ತಾತ್ಕಾಲಿಕವಾಗಿ ಚುನಾವಣೆಯಲ್ಲಿ ವ್ಯಕ್ತಿಗತವಾಗಿ ಬೆಂಬಲಿಸಲು ಪಕ್ಷೇತರ ಅಭ್ಯರ್ಥಿ ಪರವಾಗಿ ಪಕ್ಷ ತೊರೆದು ತೆರಳಿ ದ್ದರು.ಇದೀಗ ಮರುಸೇರ್ಪಡೆ ಸಂತಸ ತಂದಿದೆ ಮುಂದಿನ ಲೋಕ ಸಭಾ,ಜಿ.ಪಂ.ತಾ.ಪಂ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಸಂಕಲ್ಪಗೈಯಬೇಕು ಎಂದು ಕರೆ ನೀಡಿದರು.
ಇದೇ ವೇಳೆ ಜಿ.ಪಂ ಮಾಜಿ ಸದಸ್ಯ ಎಸ್.ಕೆ.ರಾಮರೆಡ್ಡಿ,ತಾ. ಪಂ. ಮಾಜಿ ಸದಸ್ಯ ಚಿತ್ತಪ್ಪ, ನಿವೃತ್ತ ಸಮಾಜ ಕಲ್ಯಾಣ ಇಲಾಖೆ ಸಹಾ ಯಕ ನಿರ್ದೇಶಕ ಬಿ.ಮಹೇಶ್ವರಪ್ಪ,ಪ್ರಹ್ಲಾದ್ ರೆಡ್ಡಿ,ಹುಚ್ಚವ್ವನಹಳ್ಳಿ ನಾಗ ರಾಜ್,ಸೇರಿದಂತೆ ವಿವಿಧ ಕಾರ್ಯಕರ್ತರು ಅಧಿಕೃತವಾಗಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡರು.
ಈಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್, ಪ.ಪಂ ಸದಸ್ಯರಾದ ರಮೇಶ್ ರೆಡ್ಡಿ,ರವಿಕುಮಾರ್,ಮುಖಂಡರಾದ ಪಲ್ಲಾಗಟ್ಟೆ ಶೇಖರಪ್ಪ,ಸಿ.ತಿಪ್ಪೇಸ್ವಾಮಿ,ತಿಮ್ಮಾರೆಡ್ಡಿ,ಷಂಷುದ್ದೀನ್, ಮಾಳಮ್ಮನಹಳ್ಳಿ ವೆಂಕಟೇಶ್,ಪ್ರಕಾಶ್ ರೆಡ್ಡಿ,ವಿಜಯ್,ಅನೂಪ್ ರೆಡ್ಡಿ,ಬಸವನಗೌಡ,ಮಹಮ್ಮದ್ ಗೌಸ್,ನಾಗರಾಜ್,ಶಿವಣ್ಣ, ಮಹಬೂಬ್ ಸಾಬ್.ಸೇರಿದಂತೆ ಕಾರ್ಯಕರ್ತರು ಇದ್ದರು.