ಪ್ರಜಾ ನಾಯಕ ಸುದ್ದಿ ಜಗಳೂರು :- ಪಟ್ಟಣದ ಜಿಲ್ಲಾ ಆರೋಗ್ಯ ಆಸ್ಪತ್ರೆಯ ಸಭಾಂಗಣದಲ್ಲಿ ಬುಧುವಾರ ಭಾರತ ಸರ್ಕಾರ ಜಾರಿಗೆ ತಂದಿರುವ ಆಯುಷ್ಮಾನ್ ಭವ ಅಭಿಯಾನದ ಶುಭ ಆರಂಭ ಎಂಬ ಯೋಜನೆಗೆ ಚಾಲನೆ ನೀಡಿದರು
ನಂತರ ಮಾತನಾಡಿ,ಕಾರು ಬಂಗಲೆ ಆಸ್ತಿ ಐಶ್ವರ್ಯ ಇರುವವರು ಮಾತ್ರ ಶ್ರೀಮಂತರಲ್ಲ ಉತ್ತಮ ಆರೋಗ್ಯ ಇರುವವರೇ ಇಂದು ನಿಜವಾದ ಶ್ರಿಮಂತರು ಎಂದು ಹೇಳಿದರು.
ಕಣ್ಣಿಗೆ ಕಾಣುವ ದೇವರು ಎಂದು ರೋಗಿಗಳು ನಂಬಿಕೆ ಇಟ್ಟಿರುವು ದು ವೈದ್ಯರಿಗೆ ಮಾತ್ರ ಅಲ್ಲದೆ ಸಾವಿನಿಂದ ಅಮೃತದೆಡೆಗೆ ಕೊಂಡ್ಯ ಯುವುದು ಆರೋಗ್ಯ ಸೇವೆ ನೀಡುವ ಸಿಬ್ಬಂದಿಗಳಿಂದ ಸಾಧ್ಯ. ಸರ್ಕಾರದಿಂದ ಆಯುಷ್ಮಾನುಭವ ಎಂಬ ಆರೋಗ್ಯ ಸೇವೆ ನೀಡು ತ್ತಿದ್ದು, ಈ ಯೋಜನೆ ಅಗತ್ಯವಾದವರಿಗೆ ತಲುಪಿಸುವ ಕಾರ್ಯ ಯಶಸ್ವಿಯಾಗಿಸಿ ಎಂದು ಆರೋಗ್ಯ ಇಲಾಖೆಯವರಿಗೆ ಸೂಚಿಸಿ ದರು.
ಅರ್ಥ ರೇಖೆ ಎಷ್ಟಿದ್ದರೆನು.? :- ಆರೋಗ್ಯ ರೇಖೆ ಇಲ್ಲದ ಮೇಲೆ ಎಂಬ ವ್ಯಾಕ್ಯದಂತೆ ಹಣ ಕಳೆದುಕೊಂಡರೆ ಇನ್ನೂಂದು ರೂಪ ದಲ್ಲಿ ದುಡಿಯಬಹುದು ಗಳಿಸಬಹುದು ಆದರೆ ಆರೋಗ್ಯ ಕಳೆದು ಕೊಂಡರೆ ಮತ್ತೆ ಗಳಿಸಲಾಗದು ಉತ್ತಮ ಚಿಕಿತ್ಸೆಯಿಂದ ಮಾತ್ರ ಸಾಧ್ಯ ಆದರೆ ರೋಗಿ ಪಡೆಯುವ ನೋವಿನ ಕಷ್ಟಗಳನ್ನು ಅವನೇ ಉಣ್ಣಬೇಕಿದೆ ಎಂದರು
ರೋಗಿಯ ಗುಣಮುಖವಾಗಬೇಕಾದರೆ ವೈದ್ಯರ ನಗು ಮುಖದಲ್ಲಿ ಇರಬೇಕು ತಾಯಿ ಬಿಟ್ಟರೆ ರೋಗಿಯನ್ನು ವೈದ್ಯ ಮಾತ್ರ ತಾಯಿ ಯಂತೆ ಆರೈಸುತ್ತಾನೆ ಅಲ್ಲದೆ ಆತಂರ ಗದಲ್ಲಿ ಮಿಡಿಯುವ ಹೃದ ಯ ವೈದ್ಯರಿಗೆದೆ ಎಂದು ಹೇಳಿದರು
” ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕದ ಮಿಷನ್ ಗಳು ಕೆಟ್ಟು ಹೋಗಿವೆ ಮತ್ತು ಗರ್ಭಿಣಿಯರಿಗೆ ಸ್ಕ್ಯಾನಿಂಗ್ ಮಿಷನ್ ಗಳು ಇದ್ದರೂ ಡಾಕ್ಟರ್ ಕೊರತೆ ಇದೆ ಎಂದು ಸಾರ್ವಜನಿಕರು ಒಬ್ಬರು ದೂರಿದರು ನಂತರ ಪ್ರತಿಕ್ರಿಯಿಸಿದ ಅವರು ಸಂಬಂಧಿ ಸಿದ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಗಳಿಗೆ ಶೀಘ್ರವೇ ಅವು ಗಳ ಕಾರ್ಯ ಆರಂಭವಾಗ ಬೇಕು ಎಂದು ಆದೇಶಿಸಿದರು ಮತ್ತು ಸರ್ಕಾರಿ ಆಸ್ಪತ್ರೆಯ ಸ್ವಚ್ಛತೆ ಸುತ್ತ ಮುತ್ತ ಲು ಕ್ಲೀನ್ ಮಾಡಿಸಿ ಆಸ್ಪ ತ್ರೆಯಗೆ ಸಂಬಂಧಿಸಿ ದಂತೆ ನಿಮಗೇನಾ ದರೂ ಹೆಚ್ಚಿನ ಅನು ದಾನ ಬೇಕಾದರೆ ನನ್ನನ್ನು ಭೇಟಿ ಮಾಡಿ ಮೇಲಾಧಿ ಕಾರಿ ಗಳಿಗೆ ತಿಳಿಸಿ ಸರಿಪಡಿಸುವೆ ಎಂದು ತಾಲೂಕು ವೈದ್ಯಾಧಿ ಕಾರಿ ಷಣ್ಮುಖಪ್ಪ ಅವರಿಗೆ ತಿಳಿಸಿದರು ”
ಈ ಸಂದರ್ಭದಲ್ಲಿ ಪ್ರಭಾರಿ ಟಿ ಹೆಚ್ ಓ ಉಮೇಶ್, ತಾಲೂಕು ವೈದ್ಯಧಿಕಾರಿ ಷಣ್ಮುಕಪ್ಪ, ಪ್ರಕೃತಿ ಯೋಗ ಚಿಕಿತ್ಸಾ ಕೇಂದ್ರದ ವೈದ್ಯ ರಾದ ಶ್ವೇತಾ, ನಿವೃತ್ತ ಸಮಾಜಕಲ್ಯಾಣ ಅಧಿಕಾರಿ ಮಹೇಶ್ವರಪ್ಪ. ಸರ್ಕಾರಿ ನೌಕರ ಸಂಘದ ಖಜಾಂಚಿ ಸಿ.ಬಿ ನಾಗರಾಜ್. ಮುಖಂಡ ರಾದ ಪಲ್ಲಾಗಟ್ಟೆ ಶೇಖರಪ್ಪ.ಮಹಮ್ಮದ್ ಗೌಸ್ ಸೇರಿದಂತೆ ಆಶಾ ಕಾರ್ಯಕರ್ತೆಯರು.ಶುಶ್ರೂಷಕರು.ಆಸ್ಪತ್ರೆ ಸಿಬ್ಬಂದಿಗಳಿದ್ದರು.
ಅಪಘಾತ ಸಂದರ್ಭದಲ್ಲಿ ಹಾಗೂ ಅನೀರಿಕ್ಷಿತವಾಗಿ ಸಾವಿನ ನಂತರ ಪೊಸ್ಟ್ ಮಾಟಮ್ ಮಾಡಿಸುವವರಿಗೆ ಅನುಕೂಲ ವಾಗುವುದಕ್ಕೆ ಒಂದು ವಾಹನ ಹಾಗೂ ಮುಕ್ತಿ ವಾಹನವನ್ನು ಸ್ವಂತ ಹಣದಲ್ಲಿ ಶೀಘ್ರವೇ ಆಸ್ಪತ್ರೆಗೆ ನೀಡಲಾಗುವುದು.
— ಬಿ ದೇವೇಂದ್ರಪ್ಪ ಶಾಸಕರು ಜಗಳೂರು ವಿಧಾನಸಭಾ ಕ್ಷೇತ್ರ