ಪ್ರಜಾ ನಾಯಕ ಸುದ್ದಿ ಜಗಳೂರು :- ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಯೋಗ ಸಹಕಾರಿಯಾಗಲಿದೆ ಎಂದು ಶಾಸಕ ಬಿ. ದೇವೇಂದ್ರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಪ್ರೇರಣ ಸಮಾಜ ಸೇವಾ ಸಂಸ್ಥೆಯಲ್ಲಿ ,ಸರ್ಕಾರಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರ ,ಧರ್ಮಸ್ಥಳ ಮಂಜು ನಾಥೇಶ್ವರ ಪ್ರಕೃತಿ ಚಿಕಿತ್ಸಾ ಹಾಗೂ ಯೋಗ ವಿಜ್ಞಾನ ಕಾಲೇಜು ಹಾಗೂ ಆಸ್ಪತ್ರೆಗಳು ಉಜಿರೆ ಮತ್ತು ಕಾರ್ಮೆಲ್ ಜ್ಯೋತಿ ಚಾರಿ ಟೇಬಲ್ ಟ್ರಸ್ಟ್ ಇವರುಗಳ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯೋಗ ಮತ್ತು ಪ್ರಕೃತಿ ಚಿಕಿತ್ಸೆಗೆ ಧರ್ಮಸ್ಥಳ ಮಂಜುನಾಥಸ್ವಾಮಿ ಪ್ರಕೃತಿ ಚಿಕಿತ್ಸಾ ಕೇಂದ್ರಗಳು ಆರೋಗ್ಯ ಸೇವೆಗೆ ಮುಂದಾಗಿರುವು ದು ಶ್ಲಾಘನೀಯ.ಮನುಷ್ಯನ ದೈಹಿಕ ಅಂಗಾಂಗದಲ್ಲಿನ ಸ್ವಾಭಾ ವಿಕವಾಗಿ ಸ್ನಾಯು ಸೆಳೆತ,ಮೂಳೆ ನೋವುಗಳ ನಿವಾರಣೆ ಸಾಧ್ಯ ಎಂದು ತಿಳಿಸಿದರು.
ತಾಲೂಕಿನ ಗ್ರಾಮೀಣ ಭಾಗದ ಬಡಕೂಲಿಕಾರ್ಮಿಕರಿಗೆ ಉಚಿತ ಆರೋಗ್ಯ ಶಿಬಿರಗಳಿಂದ ಅನುಕೂಲವಾಗಲಿದೆ.ನಗರ ಪ್ರದೇಶ ಗಳಿಗೆ ತೆರಳಲು ಆರ್ಥಿಕ ದುಂದುವೆಚ್ಚಕ್ಕೆ ಕಡಿವಾಣ ಹಾಕಿ. ಸ್ಥಳೀಯವಾಗಿ ಆರೋಗ್ಯ ಸೇವೆ ಸೌಲಭ್ಯ ಲಭಿಸಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ. ಪಾಲಯ್ಯ, ಸರ್ಕಾರಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರ ವೈದ್ಯಾ ಧಿಕಾರಿ ಡಾ. ಶ್ವೇತ ಎಸ್.ಬೆಳಗಲಿ,ಡಾ.ಸ್ವಾಮಿ.ಡಾ. ಸಂತೋಷ, ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ.ಪಿ.ಆರ್. ವಿಶ್ವನಾಥ, ಫಾ. ವಿಲಿಯಂ ಮಿರಾಂದ, ಫಾ.ರೊನಾಲ್ಡ್, ಡಾ.ಅರವಿಂದ್ ,ಸಮಾಜ ಕಲ್ಯಾಣ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಬಿ.ಮಹೇಶ್ವರ ಪ್ಪ, ವ್ಯವಸ್ಥಾಪಕ ಸಂತೋಷ ,ಧರ್ಮಸ್ಥಳ ಸಂಘದ ಯೋಜನಾಧಿ ಕಾರಿ ಗಣೇಶ್, ಶಾಹೀನ ಬೇಗಂ,ಸೇರಿದಂತೆ ಮತ್ತಿತರರಿದ್ದರು.