ಪ್ರಜಾ ನಾಯಕ ಸುದ್ದಿ ಜಗಳೂರು :- ತಾಲೂಕಿನಲ್ಲಿ ಬಡಮಕ್ಕಳ ಶಿಕ್ಷಣದ ಪರವಾಗಿರುವ ಸಂಘಸಂಸ್ಥೆಗಳಿಗೆ ಕೈ ಜೋಡಿಸುವೆ ಎಂದು ಶಾಸಕ ಬಿ.ದೇವೇಂದ್ರಪ್ಪ ಭರವಸೆ ನೀಡಿದರು.
ಪಟ್ಟಣದ ಪ್ರೇರಣಾ ಸಮಾಜಸೇವಾ ಸಂಸ್ಥೆಯ ಸಭಾಂಗಣದಲ್ಲಿ ಡಾನ್ ಬಾಸ್ಕೋ ಬಾಲಕಾರ್ಮಿಕರ ಮಿಷನ್.ದಾವಣಗೆರೆ.ಬ್ರೆಡ್ ಸಂಸ್ಥೆ ಬೆಂಗಳೂರು,ಸಿಎಸ್ ಯೋಜನೆ ಜಗಳೂರು,ಶಾಲಾ ಮತ್ತು ಸಾಕ್ಷರತಾ ಇಲಾಖೆ ಜಗಳೂರು ಇವರುಗಳ ಸಹಯೋಗದಲ್ಲಿ ತಾಲೂಕು ಮಟ್ಟದ ಮಕ್ಕಳ ಹಕ್ಕುಗಳ ಕ್ಲಬ್ ನ ಸಮಾವೇಶ ಹಾಗೂ ನಾಯಕತ್ವ ಶಿಬಿರ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಾಲೂಕಿನ ಕಡುಬಡತನ ಕುಟುಂಬದಲ್ಲಿ ಜನಿಸಿ ಶಿಕ್ಷಣಕ್ಕೆ ಹಂಬ ಲಿಸುತ್ತಿರುವ ಮಕ್ಕಳನ್ನು ಗುರುತಿಸಿ ವಿವಿಧ ಸಂಘ ಸಂಸ್ಥೆಗಳು ಮುಖ್ಯವಾಹಿನಿಗೆ ತರಬೇಕಿದೆ.ನಾನು ಕೂಡ ಕುಗ್ರಾಮದಲ್ಲಿ ಜನಿಸಿ ಸಂಕಷ್ಟದ ಮಧ್ಯೆ ಶಿಕ್ಷಣ ಪಡೆದ ಫಲವಾಗಿ ಇಂದು ಶಾಸಕನಾಗಿರು ವೆ.ಬಡಮಕ್ಕಳ ಶಿಕ್ಷಣಕ್ಕೆ ಅಗತ್ಯವಿರುವ ಪರಿಕರಗಳನ್ನು,ಸಮವಸ್ತ್ರ ವನ್ನು ನನ್ನ ವೈಯಕ್ತಿಕವಾಗಿ ವಿತರಿಸುವೆ.ಸತ್ಕಾರ ಪರೋಪಕಾರ ಕೆಲಸಗಳಿಂದ ಆತ್ಮತೃಪ್ತಿ ಸಿಗಲಿದೆ ಎಂದು ತಿಳಿಸಿದರು.
ವಿದ್ಯಾರ್ಥಿದೆಸೆಯಿಂದಲೇ ಶಿಕ್ಷಕರ ಮಾರ್ಗದರ್ಶನದಿಂದ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಿ ನೈತಿಕ ಶಿಕ್ಷಣ,ನಾ ಯಕತ್ವ ಗುಣಗಳನ್ನು ಮೈಗೂಡಿಸಿಕೊಂಡು ಭವಿಷ್ಯದಲ್ಲಿ ದೇಶಕ್ಕೆ ಸತ್ಪ್ರಜೆಗಳಾಗಿ ಹೊರಹೊಮ್ಮಬೇಕು ಎಂದು ಕಿವಿಮಾತು ಹೇಳಿ ದರು.
ಮಕ್ಕಳಿಗೆ ನೈತಿಕ ಶಿಕ್ಷಣದ ಸ್ಪೂರ್ತಿ ಶಾಸಕ ಬಿ.ದೇವೇಂದ್ರಪ್ಪ :-ಶಿಬಿರದಲ್ಲಿ ಭಾಗವಹಿಸಿದ್ದ ಮಕ್ಕಳಿಗೆ ಗುಟ್ಟೊಂದು ಹೇಳುವೆ ಪುಟಾ ಣಿ ಮಕ್ಕಳೆ ಎಂಬ ಹಾಡು,ಬಸವಣ್ಣ,ಸರ್ವಜ್ಞರ ವಚನ, ಶ್ಲೋಕಗ ಳೊಂದಿಗೆ ಮಕ್ಕಳಿಗೆ 40 ನಿಮಿಷಗಳ ಕಾಲ ನೈತಿಕ ಶಿಕ್ಷಣದ ಪಾಠ ಹೇಳಿದ್ದು ಮಕ್ಕಳಿಗೆ ಸ್ಪೂರ್ತಿತುಂಬಿದರು.
ಬಿಇಓ ಹಾಲಮೂರ್ತಿ ಮಾತನಾಡಿ,ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳಿಗೆ ಶಾಲಾ ಅಂಗಳದಲ್ಲಿ ನಡೆಯುವ ಪಠ್ಯೇತರ ಚಟು ವಟಿಕೆಗಳು ಸೂಕ್ತ ವೇದಿಕೆಯಾಗುತ್ತವೆ.ವಿದ್ಯಾರ್ಥಿಗಳ ಪ್ರತಿಭೆ ಕಮರದಂತೆ ಪ್ರೊತ್ಸಾಹಿಸಬೇಕು ಎಂದರು.
ಡಾನ್ ಬಾಸ್ಕೋ ಸಂಸ್ಥೆ ನಿರ್ದೇಶಕ ಫಾದರ್ ಜೇಕಬ್ ಪ್ರಾಸ್ತಾವಿಕ ವಾಗಿ ಮಾತನಾಡಿ,ಡಾನ್ ಬಾಸ್ಕೋ ಸಂಸ್ಥೆಯಿಂದ ತಾಲೂಕಿನ 15 ಶಾಲೆಗಳಲ್ಲಿ ಟೂಷನ್ ತರಬೇತಿ ನಡೆಯುತ್ತಿವೆ. 750 ವಿದ್ಯಾರ್ಥಿ ಗಳು ಸದುಪಯೋಗಪಡೆದುಕೊಳ್ಳುತ್ತಿದ್ದಾರೆ.ಸಮಾಜದಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗದಂತೆ ಗೌರವ ಮನ್ನಣೆಗಾಗಿ ಕಲಿಕಾ ಚಟುವಟಿಕೆಗಳ ಪ್ರಬುದ್ದತೆಗಾಗಿ ದಸರಾ ರಜೆ ಅವಧಿಯಲ್ಲಿ ವಿಶೇಷ ಶಿಬಿರ ಆಯೋಜಿಸಲಾಗಿದೆ ಎಂದು ಮಾಹತಿ ನೀಡಿದರು.
ಜ್ಞಾನ ತರಂಗಿಣಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಡಾ ಪಿ.ಎಸ್.ಅರ ವಿಂದನ್ ಮಾತನಾಡಿ,ಮಕ್ಕಳಹಕ್ಕುಗಳ, ಮಕ್ಕಳ ಲಾಲನೆ ,ಲೈಂಗಿಕ ದೌರ್ಜನ್ಯ, ಬಾಲ್ಯವಿವಾಹ ನಿಷೇಧ, ಕಡ್ಡಾಯ ಮತ್ತು ಉಚಿತ ಶಿಕ್ಷಣ,ಬಾಲಕಾರ್ಮಿಕ ನಿಷೇಧ,ಮಕ್ಕಳ ರಕ್ಷಣಾ ಕಾಯ್ದೆಗಳ ಸಮಗ್ರ ಮಾಹಿತಿಗಳಿಗಾಗಿ ಇಂತಹ ಶಿಬಿರಗಳು ಸಹಕಾರಿಯಾಗಲಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪೊಲೀಸ್ ಪಿ.ಎಸ್ಐ.ಸಾಗರ್,ಪ್ರೇರಣಾ ಟ್ರಸ್ಟ್ ನ ಫಾದರ್ ಸಿಲ್ವೆಸ್ಟರ್,ಡಾನ್ ಬಾಸ್ಕೋ ಶಾಲೆಯ ವಿದೇಶಿ ಯಾತ್ರಿಕ ಜಾನಾ, ದುರುಗಪ್ಪ,ಪ್ರಾಥ ಮಿಕ ಶಾಲಾ ಶಿಕ್ಷಕರ ಸಂಘದ ತಾಲೂ ಕು ಅಧ್ಯಕ್ಷ ಹನುಮಂತೇಶ್, ಬಿಆರ್ ಸಿ ಡಿಡಿ ಹಾಲಪ್ಪ,ದೈಹಿಕ ಶಿಕ್ಷಣ ಅಧಿ ಕಾರಿ ಸುರೇಶ್ ರೆಡ್ಡಿ,ಫಾದರ್ ರೆಜಿ,ರೊನಾಲ್ಡ್,ಅಕ್ಕಮ್ಮ ಸೇರಿದಂತೆ ಇದ್ದರು.