ಪ್ರಜಾ ನಾಯಕ ಸುದ್ದಿ ಜಗಳೂರು :- ಅಕ್ಟೋಬರ್ 12 ಗುರುವಾರ ದಂದು ಕರ್ನಾಟಕ ರಾಜ್ಯ ರೈತ ಸಂಘ ಹುಚ್ಚವ್ವನಹಳ್ಳಿ ಮಂಜು ನಾಥ್ ಬಣದಿಂದ ಬೆಸ್ಕಾಂ ಇಲಾಖೆಗೆ ಮುತ್ತಿಗೆ ಹಾಕಲಾಗುವುದು ಎಂದು ಸಂಘಟನೆ ತಾಲೂಕು ಕಾರ್ಯದರ್ಶಿ ರಾಜು ಬೈರನಾಯಕ ನಹಳ್ಳಿ ತಿಳಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ ರೈತರ ಪಂಪ್ ಸೆಟ್ ಗಳಿಗೆ ದಿನಕ್ಕೆ ದಿನದ 24 ಗಂಟೆಗಳಲ್ಲಿ ಅನಿ ಯಮಿತ ಲೋಡ್ ಶೆಡ್ಡಿಂಗ್ ಖಂಡಿಸಿ.ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು. ಜಲಮೂಲಗಳಿಲ್ಲದ ಬರದನಾಡಿನಲ್ಲಿ ಬರ ತಾಂಡ ವಾಡುತ್ತಿದೆ. ಬೋರ್ ವೆಲ್ ಗಳನ್ನೇ ನಂಬಿಕೊಂಡಿರುವ ರೈತರಿಗೆ ನೀರಾವರಿ ಜಮೀನುಗಳಲ್ಲಿ ಅಡಿಕೆ,ತೋಟಗಾರಿಕೆ ಬೆಳೆಗಳ ಉತ್ತ ಮ ಫಸಲಿಗೆ ಅಧಿಕಾರಿಗಳು ಸ್ಪಂದಿಸಬೇಕು ಎಂದು ತಿಳಿಸಿದರು.
ಸಂಘಟನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತೀಶ್ ಗೌಡಗೊಂಡನ ಹಳ್ಳಿ ಮಾತನಾಡಿ,ಅಕ್ಟೋಬರ್ 12 ರಂದು ನಡೆಯಲಿರುವ ಪ್ರತಿಭ ಟನೆಗೆ ಸಂಘಟನೆ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಸೇರಿದಂತೆ ತಾಲೂಕಿನ ನೂರಾರು ರೈತರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸಂಘಟನೆ ತಾಲೂಕು ಗೌರವಾಧ್ಯಕ್ಷ ಬನ್ನಿಹಟ್ಟಿ ವಿರೇಶ್,ರಂಗಪ್ಪ ಹನುಮಂತಾಪುರ,ತಿಪ್ಪೇಸ್ವಾಮಿ ಗುರುಸಿದ್ದಾ ಪುರ,ಎಂ ಪರುಶರಾಮಪ್ಪ ,ಚಿಕ್ರೇಶಿ ಸೇರಿದಂತೆ ಇದ್ದರು.