ಪ್ರಜಾ ನಾಯಕ ಜಗಳೂರು ಸುದ್ದಿ :- ಹುಟ್ಟೂರು ಚಿಕ್ಕಮ್ಮನಹಟ್ಟಿ ಯನ್ನು ಓದು, ಸಾಮರಸ್ಯತೆಯಲ್ಲಿ ದೊಡ್ಡಮ್ಮನಹಟ್ಟಿ ಗ್ರಾಮವ ನ್ನಾಗಿ ಸುವೆ ಪಕ್ಷಾತೀತವಾಗಿ ಸರ್ವರೂ ಕೈಜೋಡಿಸಿ ಎಂದು ಶಾಸ ಕ ಬಿ.ದೇವೇಂದ್ರಪ್ಪ ಕರೆ ನೀಡಿದರು.
ತಾಲೂಕಿನ ಚಿಕ್ಕಮ್ಮನಹಟ್ಟಿ ಗ್ರಾಮದಲ್ಲಿ ನೂತನ ನ್ಯಾಯಬೆಲೆ ಅಂಗಡಿ ಹಾಗೂ ವ್ಯಾಯಾಮ ಶಾಲೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸೂಕ್ತ ಸಾರಿಗೆ ವ್ಯವಸ್ಥೆಯೂ ಇಲ್ಲದ ಚಿಕ್ಕಮ್ಮನಹಟ್ಟಿ ಫಲಾನುಭ ವಿಗಳು ದಿನವಿಡೀ ತಮ್ಮ ವೈಯಕ್ತಿಕ ಕೆಲಸ ಬದಿಗೊತ್ತಿ ಪಡಿತರ ದಾಸ್ತಾನು ಪಡೆಯಲು ಪಕ್ಕದ ಕಣ್ವಕುಪ್ಪೆ ಗ್ರಾಮಕ್ಕೆ ತೆರಳಬೇಕಿತ್ತು. ದಶಕಗಳ ಕನಸಿನ ನ್ಯಾಯಬೆಲೆ ಅಂಗಡಿ ಇಂದು ನನ್ನ ಆಡಳಿತಾ ವಧಿಯಲ್ಲಿ ಆರಂಭವಾಗಿರುವುದು ಸಂತಸ ತಂದಿದೆ ಎಂದರು.
ಸ್ವಗ್ರಾಮದವರ ಮೇಲಿನ ನೋವಿಗೆ ಇಂದು ತೆರೆ :- ಕಾಂಗ್ರೆಸ್ ಪಕ್ಷ ಟಿಕೇಟ್ ಸಿಕ್ಕು ಗ್ರಾಮದಲ್ಲಿ ನೆಲೆಸಿರುವ ನಾಲ್ಕು ದೇವರುಗಳ ಅನು ಗ್ರಹದಿಂದ ಗೆಲುವು ಸಾಧಿಸಿದರೂ ನನ್ನ ಮೇಲೆ ಸ್ವಗ್ರಾಮದ ವರಿ ಗೇಕೆ ತಾತ್ಸಾರ ಅಸೂಯೆ ಎಂಬುದು ನೋವು ತಂದಿತ್ತು.ಆದರೆ ಇಂದಿನ ಕಾರ್ಯಕ್ರಮಕ್ಕೆ ಅದ್ದೂರಿಸ್ವಾಗತ ಅಭಿಮಾನಕ್ಕೆ ನನ್ನ ನೋವಿ ಗೆ ತೆರೆಬಿದ್ದು.ಹರ್ಷ ತಂದಿದೆ.ಗ್ರಾಮಸ್ಥರ ಬೇಡಿಕೆಯಂತೆ ಶಾಲಾಕಾಂಪೌಂಡ್,ಪಶುಆಸ್ಪತ್ರೆ,ಪ್ರೌಢಶಾಲೆ,ರಸ್ತೆ ಸೇರಿದಂತೆ ಗ್ರಾಮದ ಸಮಗ್ರ ಅಭಿವೃದ್ದಿಗೆ ಬದ್ದನಾಗಿರುವೆ ತಮ್ಮಸಹಕಾರ ಮುಖ್ಯ ಎಂದರು.
ಕೌಟುಂಬಿಕ ಕಷ್ಟದ ಜೀವನ ಸ್ಮರಿಸಿ ಭಾವುಕರಾದರು:-ಕಡು ಬಡ ತ ನದಲ್ಲಿಜನಿಸಿ ವಿದ್ಯಾಬ್ಯಾಸಮಾಡುವಾಗ ತುತ್ತು ಕೂಳಿಗೂ ಕಷ್ಟ ಪಡುತ್ತಿರುವಾಗ ಗ್ರಾಮದ ಸಹೋದರ ಸಮಾಜದವರಾದ ರಂಗ ಯ್ಯಇಮ್ಮಡಾಪುರ ಮನೆತನದ ವರು,ಕಾಟಪ್ಪ,ಪಾರ್ವ ತಕ್ಕ,ಗೆಳೆಯ ಪಾಪಲಿಂಗಪ್ಪ ತಾಯಿ,ಪ್ರತಿಯೊಬ್ಬರೂ ಮರುಕ ದಿಂದ ಅನ್ನವಿಕ್ಕಿ ದ್ದನ್ನು ನಾನು ಯಾವತ್ತೂ ಮರೆಯುವುದಿಲ್ಲ ಎಂದು ಭಾವುಕ ರಾದರು.
ಗ್ರಾಮದಲ್ಲಿ ಯಾದವ ಸಮಾಜದ ಪೋಳಿ ದೇವಸ್ಥಾನವನ್ನು ಸರ ಕಾರದ ಅನುದಾನ ಹಾಗೂ ವೈಯಕ್ತಿಕ ಸಹಾಯದಿಂದ ಅಭಿವೃದ್ದಿ ಪಡಿಸುವೆ.ಮೂರು ಗ್ರಾಮ ಸಮಿತಿ ರಚಿಸಿ ಧಾರ್ಮಿಕ ಸಭೆ ಆಯೋಜಿ ಸುವೆ.ವಿಶಿಷ್ಠ ಬುಡಕಟ್ಟು ಸಂಪ್ರದಾಯದಿಂದ ದೈವ ಆರಾಧಿಸಿ ಕೃಪೆಗೆ ಪಾತ್ರರಾಗೋಣ ಎಂದು ಹೇಳಿದರು.
ನೂತನ ತಹಶೀಲ್ದಾರ್ ಸಯ್ಯದ್ ಖಲೀಮುಲ್ಲಾ ಮಾತನಾಡಿ,ಪ್ರಸ್ತಾ ವಿಕವಾಗಿ ನ್ಯಾಯಬೆಲೆಅಂಗಡಿಗೆ ಅನುಮತಿ ದೊರೆಯಲು ಇಲಾ ಖೆ ಯಿಂದ ಹಲವು ಮಾನದಂಡಗಳಿವೆ ಅದರಲ್ಲಿ ಸಂಘ ಸಂಸ್ಥೆ ಪ್ರತಿನಿಧಿಗಳಿಗೆ,ವಿಕಲಚೇತನರಿಗೆ ಮೊದಲ ಆದ್ಯತೆಯಿದೆ.ಶಾಸಕರ ಸ್ವಗ್ರಾಮದಲ್ಲಿ ವಿಕಲಚೇತನ ವ್ಯಕ್ತಿಗೆ ನ್ಯಾಯಬೆಲೆ ಅಂಗಡಿಮಂಜೂ ರಾಗಿ ಉದ್ಘಾಟನೆಯಾಗಿರುವುದು ಸೌಭಾಗ್ಯ ವಾಗಿದೆ.ಗ್ರಾಮದಲ್ಲಿ 344 ಪಡಿತರ ಚೀಟಿಯ ಫಲಾನುಭವಿಗಳಿದ್ದು.ಸರಕಾರ ಒದಗಿಸು ವ ಸೌಲಭ್ಯಗಳನ್ನು ಸದುಪಯೋಗಪಡೆದು ಕೊಳ್ಳಬೇಕು ಎಂದರು.
ಗ್ರಾ.ಪಂ ಸದಸ್ಯ ಚಿಕ್ಕಮ್ಮನಹಟ್ಟಿ ಮಂಜಣ್ಣ ಮಾತನಾಡಿ,ಎಸ್ ಸಿ ಎಸ್ ಟಿ ಓಬಿಸಿ ಸಮುದಾಯದವರು ಪಡಿತರಕ್ಕಾಗಿ ದಶಕಗಳಿಂದ ಕೆಚ್ಚೇನಹಳ್ಳಿ,ಕಣ್ವಕುಪ್ಪೆ ಗ್ರಾಮವನ್ನು ಅವಲಂಬಿಸಿದ್ದೆವು.2008 ರಿಂದ ನ್ಯಾಯಬೆಲೆಅಂಗಡಿಗಾಗಿ ಹೊರಟವಿತ್ತು.ಆದರೆ ರಾಜಕೀ ಯ ಪ್ರಭಾವವಿಲ್ಲದ ಕಾರಣ ವಿಳಂಬವಾಗಿ ಸ್ವ ಗ್ರಾಮವಾಗಿರುವ ಶಾಸಕರ ಕಾಳಜಿಯಿಂದ ಇಂದು ಬೇಡಿಕೆ ಈಡೇರಿದೆ.ಪರಿಶಿಷ್ಠ ಸಮು ದಾಯದವರಿಗೆ ಸರಕಾರಿ ಜಾಗದಲ್ಲಿ ಸೂರು ಕಲ್ಪಿಸಬೇಕು. ಗ್ರಾಮಕ್ಕೆ ಅಗತ್ಯವಿರುವ ಪ್ರೌಢಶಾಲೆ,ಶಾಲಾ ಕಾಂಪೌಂಡ್,ಪಶು ಆಸ್ಪತ್ರೆ,ಉಪ ಆರೋಗ್ಯ ಕೇಂದ್ರ ತೆರೆಯಲು ಮನವಿ ಮಾಡಿದರು.
ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ಯಾದವ,ವಾಲ್ಮೀಕಿ,ಹರಿಜನ, ಸಮುದಾಯಗಳ ಹಟ್ಟಿಗಳಲ್ಲಿ ಸಂಚರಿಸಿದ ಮೆರವಣಿಗೆ ಯಲ್ಲಿ ಶಾಸಕ ಬಿ.ದೇವೇಂದ್ರಪ್ಪ ಅವರಿಗೆ ಗ್ರಾಮದ ಮಹಿಳೆಯರು,ಮಕ್ಕ ಳು,ಗ್ರಾಮಸ್ಥರಿಂದ ಪುಷ್ಪಾರ್ಚನೆ,ಆರತಿ ಬೆಳಗಿ,ಪಟಾಕಿ ಸಿಡಿಸಿ ಸ್ವಗ್ರಾಮದ ಕಾರ್ಯಕ್ರಮಕ್ಕೆ ಸ್ವಾಗತಿಸಿದರು.
ಸಂದರ್ಭದಲ್ಲಿ ನ್ಯಾಯಬೆಲೆಅಂಗಡಿ ಮಾಲೀಕರ ಸಂಘದ ಅಧ್ಯಕ್ಷ ಓಮಣ್ಣ,ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್,ಸಮಾಜಕಲ್ಯಾ ಣ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಬಿ.ಮಹೇಶ್ವರ ಪ್ಪ,ಗ್ರಾ. ಪಂ.ಉಪಾಧ್ಯಕ್ಷೆ ಸುಧಾಮಣಿ,ಮುಖಂಡರಾದ ಓಮಣ್ಣ,ಕೃಷ್ಣಪ್ಪ, ಎಸ್.ಕಾಟಪ್ಪ,ಮಾರಪ್ಪ,ತಮಲೇಹಳ್ಳಿ ಗುರುಮೂರ್ತಿ,ಪುಟ್ಟಣ್ಣ, ಕೆಳಗೋಟೆ ಅಹಮ್ಮದ್ ಅಲಿ,ಪಲ್ಲಾಗಟ್ಟೆ ಶೇಖರಪ್ಪ,ಗೌಸ್ ಪೀರ್, ರಂಗಪ್ಪ,ಪಿಡಿಓ ವಾಸುದೇವ,ಪಾಪಲಿಂಗಪ್ಪ,ಎಇಇ ಚಂದ್ರಶೇಖರ್ ,ಜಗಳೂರಯ್ಯ,ಸೇರಿದಂತೆ ಭಾಗವಹಿಸಿದ್ದರು.