ಪ್ರಜಾ ನಾಯಕ ಸುದ್ದಿ ಜಗಳೂರು :- ತಾಲೂಕು ಕಛೇರಿ ಮುಂ ಬಾಗ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಎಐಟಿಯುಸಿ ನೇತೃತ್ವ ದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆ ಯುವ ಕ್ವಾರಿ ಕಾರ್ಮಿಕರ ಸಂಘದ ಪದಾಧಿಕಾರಿಗಳು ವತಿಯಿಂದ ತಹಶೀಲ್ದಾರ್ ಸಯ್ಯದ್ ಕಲೀಮುಲ್ಲಾ ಅವರ ಮುಖಾಂತರ ಸರ ಕಾರಕ್ಕೆ ಲಿಖಿತ ಮನವಿ ಸಲ್ಲಿಸಿದರು.
ಎಐಟಿಯುಸಿ ಗೌರವ ಅಧ್ಯಕ್ಷ ಮಹಮ್ಮದ್ ಭಾಷಾ ಮಾತನಾಡಿ, ಕ ಳೆ ದ ವರ್ಷ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಹಲ ವಾರು ರೀತಿಯ ಕಿಟ್,ಲ್ಯಾಪ್ ಟಾಪ್,ಟ್ಯಾಬ್,ಶಾಲಾ ಕಿಟ್,ಆರೋ ಗ್ಯ ತಪಾ ಸಣೆ,ಇತರೆ ತರಬೇತಿ ಹೆಸರಿನಲ್ಲಿ ಕಾರ್ಮಿಕರು ದುಡಿದ ಹ ಣದ ಸೆಸ್ ಹಣವನ್ನು ಆಡಳಿತ ಬಿಜೆಪಿ ಸರಕಾರ ಸಾಕಷ್ಟು ದುಂ ದು ವೆಚ್ಚಮಾಡಿದೆ ಎಂದು ಆರೋಪಿಸಿದರು.
ರಾಜ್ಯದ ಆಡಳಿತ ಕಾಂಗ್ರೆಸ್ ಸರಕಾರ ಆರೋಗ್ಯ ತಪಾಸಣೆ ನಡೆ ಸುವ ಕಾರ್ಯಕ್ರಮ ತಕ್ಷಣ ನಿಲ್ಲಿಸಬೇಕು.ಆರೋಗ್ಯ ಇಲಾಖೆ ಯಿಂ ದ ಉಚಿತ ತಪಾಸಣೆ ನಡೆಸಬೇಕು.ಬೋಗಸ್ ಕಾರ್ಡ್ ತಡೆಯಲು ಕ್ರಮ ಕೈಗೊಳ್ಳ ಬೇಕು.ಕಾರ್ಮಿಕರ ಸಮಸ್ಯೆಯನ್ನು ಪರಿಹರಿಸಲು ಭಾರತ ದೇಶದ ಅತ್ಯಂತ ಹಿರಿಯ ಕಾರ್ಮಿಕಸಂಘಟನೆ ಎಐಟಿ ಯುಸಿ ಗೆ ಮಂಡಳಿಯ ಲ್ಲಿ ಖಾಯಂ ಸದಸ್ಯತ್ವ ನೀಡಬೇಕು ಎಂ ದು ಒತ್ತಾಯಿಸಿದರು.
ಎಐಟಿಯುಸಿ ಪ್ರಧಾನಕಾರ್ಯದರ್ಶಿ ಮಾದಿಹಳ್ಳಿ ಮಂಜುನಾಥ್ ಮಾತನಾಡಿ,ತಾಲೂಕಿನಲ್ಲಿ ಬರದ ಛಾಯೆ ಆವರಿಸಿದ್ದು.ಕೂಲಿ ಕಾ ರ್ಮಿ ಕರು ಆರ್ಥಿಕ ಸಂಕಷ್ಟ ಸಿಲುಕಿದ್ದಾರೆ.ಇಂತಹ ಸಂದಿಗ್ಧ ಪರಿ ಸ್ಥಿತಿಯಲ್ಲಿ ಬಾಕಿ ಇರುವ ಸುಮಾರು 14ಲಕ್ಷ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾ ಯಧನ ಕೂಡಲೇ ವಿಲೆವಾರಿ ಮಾಡದಿ ರುವದು ಗಾಯದಮೇಲೆ ಬರೆಎಳೆದಂತಾಗಿದೆ.ಕಟ್ಟಡ ಕಾರ್ಮಿಕರ ಕಲ್ಯಾಣ ಕ್ಕಾಗಿ ಸರಕಾರ ಗಮ ನಹರಿಸಬೇಕು ಇಲ್ಲವಾದರೆ ಉಗ್ರ ಸ್ವರೂಪದ ಹೊರಾಟ ರೂಪಿಸಲಾಗು ವುದು ಎಂದು ಎಚ್ಚರಿಸಿ ದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಕಾರ್ಮಿಕರ ಸಂಘದ ತಾಲೂಕು ಅಧ್ಯಕ್ಷ ವೀರಣ್ಣ,ಪ್ರಧಾನ ಕಾರ್ಯದರ್ಶಿ ಗೊಲ್ಲ ರ ಹಟ್ಟಿ ತಿಪ್ಪೇಸ್ವಾಮಿ,ಮುಖಂಡರಾದ ಯೊಗೇಶ್,ದೇವಿಕೆರೆ ಮಧು, ಬಸ ವರಾಜ್,ಶಿವಮೂರ್ತಿ,ಪಂಪಾ ಪತಿ,ಗುರು,ಶೇಖರ ಪ್ಪ, ಅಜ್ಜಪ್ಪ,ಮಂಜುಳಾ ಸೇರಿದಂತೆ ಭಾಗವಹಿಸಿದ್ದರು.