ಪ್ರಜಾ ನಾಯಕ ಸುದ್ದಿ ಜಗಳೂರು :- ಪಟ್ಟಣದ ಜನ ಸಂಪರ್ಕ ಕಛೇರಿ ಮುಂಬಾಗ ನ್ಯಾ.ಸದಾಶಿವ ಆಯೋಗದ ವರದಿ ಜಾರಿಗಾಗಿ ಒತ್ತಾಯಿಸಿ ಮಾದಿಗ ಹಾಗೂ ಛಲವಾದಿ ಸಮಾಜದ ಮುಖಂಡರು ಗಳು ಶಾಸಕ ಬಿ.ದೇವೇಂದ್ರಪ್ಪ ಅವರಿಗೆ ಮನವಿ ಸಲ್ಲಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ವೃತ್ತ ದಿಂದ ಮೆರವಣಿಗೆ ಮುಖಾಂತರ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜನಸಂಪರ್ಕ ಕಛೇರಿ ಮುಂಬಾ ಗ ಜಮಾಯಿಸಿದರು.
ಮಾದಿಗ ಸಮಾಜದ ಹಿರಿಯ ಮುಖಂಡ ಶಂಭುಲಿಂಗಪ್ಪ ಮಾತ ನಾಡಿ,ದಶಕಗಳಿಂದ ಹೊರಾಟ ನಡೆಸುತ್ತಾ ಬಂದಿದ್ದರೂ ಆಡಳಿತ ಕಳೆದ ಅವಧಿಯಲ್ಲಿನ ಆಡಳಿತ ಸರಕಾರಗಳ ಇಚ್ಛಾಶಕ್ತಿಯ ಕೊರ ತೆಯಿಂದ ನ್ಯಾ.ಸದಾಶಿವ ಆಯೋಗ ಇದುವರೆಗೆ ಜಾರಿಗೊಂಡಿಲ್ಲ. ರಾಜ್ಯದಲ್ಲಿ ಮಾದಿಗ ಹಾಗೂ ಛಲವಾದಿ ಸಮುದಾಯಗಳು ಅಸ್ಪೃ ಶ್ಯತೆ ಅನುಭವಿಸುವುದಲ್ಲದೆ.ಸಾಮಾಜಿಕ,ಆರ್ಥಿಕ, ರಾಜಕೀಯ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಅವಕಾಶ ವಂಚಿತರಾಗುತ್ತಿದ್ದಾರೆ.ಸಾಮಾಜಿಕ ನ್ಯಾಯದಡಿ ಸರಕಾರಿ ಸೌಲಭ್ಯಗಳು ಸಿಗುತ್ತಿಲ್ಲ.ಕೂಡಲೇ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಅಹಿಂದ ವರ್ಗದ ನಾಯಕರಾಗಿ ದ್ದು.ಸದಾಶಿವ ಆಯೋಗದ ಒಳಮೀಸಲಾತಿ ಜಾರಿಗೊಳಿಸುವಂತೆ ಕ್ಷೇತ್ರದ ಶಾಸಕರು ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಚರ್ಚಿಸಿ ಒತ್ತಡ ತರಬೇಕು ಎಂದು ಮನವಿಮಾಡಿದರು.
ಶಾಸಕ ಬಿ.ದೇವೇಂದ್ರಪ್ಪ ಅವರು ಮನವಿ ಸ್ವೀಕರಿಸಿ ಮಾತನಾಡಿ, ನಾನು ಒಬ್ಬ ಎಸ್ ಟಿ ಮೀಸಲಾತಿ ಕ್ಷೇತ್ರದ ಶಾಸಕನಾಗಿ.ಶೋಷಿತ ಸಮುದಾಯಗಳ ಧ್ವನಿಯಾಗುವೆ.ನಾವುಕೂಡ ಎಸ್ಟಿ. ಮೀಸಲಾತಿ ಹೆಚ್ಚಳ ಹೊರಾಟ ನಡೆಸುತ್ತಿದ್ದೇವೆ.ಡಾ.ಬಿ.ಆರ್ .ಅಂಬೇಡ್ಕರ್ ಅವರ ಸಂವಿಧಾನದಡಿ ಮೀಸಲಾತಿ ಪ್ರತಿಯೊಬ್ಬರ ಹಕ್ಕು.ಎಸ್.ಸಿ. ಪಟ್ಟಿಯಲ್ಲಿ ಅತ್ಯಂತ ಹಿಂದುಳಿದ ಸಮುದಾಯಗಳಲ್ಲಿ ಹರಿ ಜನ ಹಾಗೂ ಛಲವಾದಿಗಳು ತಮ್ಮ ನೋವು,ಜೀವನ ಸ್ಥಿತಿಗತಿಗಳನ್ನು ನಾನು ಹತ್ತಿರದಿಂದ ಮನಗಂಡಿದ್ದು.ಬೆಳಗಾವಿ ಅಧಿವೇಶನದಲ್ಲಿ ತಮ್ಮ ಮನವಿಯನ್ನು ಸರಕಾರದ ಗಮನಹರಿಸುವೆ ಎಂದು ಭರ ವಸೆ ನೀಡಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ ಪಾಲ ಯ್ಯ.ಛಲವಾದಿ ಸಮಾಜದ ಮುಖಂಡ ಸಮಾಜ ಕಲ್ಯಾಣ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕರಾದ ಬಿ.ಮಹೇಶ್ವ ರಪ್ಪ ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಾಟೀಲ್. ಬ್ಲಾಕ್ ಕಾಂಗ್ರೆಸ್ ಅಧ್ಯ ಕ್ಷ ಶಂಶಿರ್ ಅಹಮದ್.ಚಲವಾದಿ ಸಮಾಜದ ಮುಖಂಡ ರಾದ ಸಿ.ತಿಪ್ಪೇಸ್ವಾಮಿ, ಮಾದಿಗ ಸಮಾಜದ ಮುಖಂಡರಾದ ಹಟ್ಟಿ ತಿಪ್ಪೇ ಸ್ವಾಮಿ,ಭಾರತ ಗ್ಯಾಸ್ ಮಾಲೀಕ ಓಬಣ್ಣ, ಸಿದ್ದಮ್ಮನಹಳ್ಳಿ ವೆಂಕ ಟೇಶ್. ಮಾಜಿ ಪ.ಪಂ.ಅಧ್ಯಕ್ಷ ಮಂಜುನಾಥ್. ಪೂಜಾರಿ ಸಿದ್ದಪ್ಪ. ಪಲ್ಲಾಗಟ್ಟೆ ಶೇಖರಪ್ಪ .ಅಣಬೂರು ರಾಜಶೇಖರ್,ತಾಯಿಟೋನಿ ಬಾಬು ರಾಜೇಂದ್ರ ಪ್ರಸಾದ್.ಗೌರಿಪುರ ಕುಬೇರಪ್ಪ, ಅಣಬೂರು ರೇಣು ಕೇಶ್.ಪಾಪಯ್ಯ,ಕುಬೇಂದ್ರಪ್ಪ, ದುರ್ಗಪ್ಪ. ಬಿಳಿಚೋಡ ಹಾಲೇಶ್. ಸತೀಶ್ ಮಲೆ ಮಾಚಿಕೆರೆ,ಧನ್ಯ ಕುಮಾರ್ ,ಮಾದಿಹಳ್ಳಿ ಮಂಜುನಾಥ್,ಬಸವರಾಜ್,ಸಿದ್ದಮ್ಮನಹಳ್ಳಿ ವೆಂಕಟೇಶ್,ಮಾರುತಿ . ಡಿ.ಪಿ ಜಗಳೂರಯ್ಯ.ಹನುಮಂತಪುರ ರಾಜು ಸೇರಿದಂತೆ ಭಾಗವಹಿ ಸಿದ್ದರು.