ಪ್ರಜಾ ನಾಯಕ ಸುದ್ದಿ ಜಗಳೂರು :- ತಾಲೂಕಿನ ಸೊಕ್ಕೆ ಗ್ರಾಮದ ಲ್ಲಿ ನವೆಂಬರ್ 20ರಿಂದ 23 ರವರೆಗೆ ಶಿರಡಿ ಸಾಯಿಬಾಬಾ ನೂತ ನ ದೇವಾಲಯದ ಪ್ರಾರಂಭೋತ್ಸವ ವಿಮಾನ ಗೋಪು ರ,ಕಳಸಾ ರೋಹ ಣ ಹಾಗೂ ಶಿಲಾಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮಹೋತ್ಸ ವ ಕಾರ್ಯಕ್ರಮ ಜರುಗಲಿವೆ ಎಂದು ಗ್ರಾಮಪಂಚಾ ಯಿತಿ ಮಾಜಿ ಅಧ್ಯಕ್ಷೆ ಸ್ವಾತಿ ತಿಪ್ಪೇಸ್ವಾಮಿ ಹೇಳಿದರು
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಪತ್ರಿಕಾ ಗೋಷ್ಠಿ ಯನ್ನುದ್ದೇಶಿಸಿ ಅವರು ಮಾತನಾಡಿದರು.
ನಮ್ಮ ತಂದೆ ಪ್ರೊಫೆಸರ್ ಹಾಗೂ ನಿವೃತ್ತ ಅಧಿಕಾರಿ ತಿಪ್ಪೇಸ್ವಾಮಿ ಅ ವರ ಸಂಕಲ್ಪದೊಂದಿಗೆ ಕುಟುಂಬದ ಆರಾಧ್ಯ ದೈವ ಶಿರಡಿ ಸಾಯಿ ಬಾಬಾ ದೇವರ ಕೃಪೆ ನನ್ನ ಗ್ರಾಮಕ್ಕೆ ಬಂದು ಬೇಕಿದೆ ಎಂಬ ಸದು ದ್ದೇಶದಿಂದ ಸುಸಜ್ಜಿತ ದೇವಸ್ಥಾನ ನಿರ್ಮಿಸಲಾಗಿದೆ.20ರಿಂದ 23 ರವರೆಗೆ ಮೂರು ದಿನಗಳ ಕಾರ್ಯ ವಿವಿಧ ಧಾರ್ಮಿಕ ಪೂಜಾ ಕೈಂ ಕರ್ಯಗಳು ಹಾಗೂ ಅಡ್ಡಪಲ್ಲಕ್ಕಿ ಉತ್ಸವ,ಹೋಮಗಳು, ಪಂಚಾ ಮೃತ ಅಭಿಷೇಕಗಳು ನಡೆಯಲಿದ್ದು.ನೆರೆಹೊರೆಯ ತಾಲೂಕಿನ ಭಕ್ತಾದಿಗಳು ಭಾಗವಹಿಸಿ ಯಶಸ್ವಿಗೊಳಿಸಲು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮೈಸೂರು ಸುತ್ತೂರು ಮಠದ ಲಿಂಗೈಕ್ಯ ಜಗದ್ಗು ರು ಡಾ.ಶ್ರೀ.ಶಿವರಾತ್ರಿ ರಾಜೇಂದ್ರ,ಪರಮಪೂಜ್ಯ ಜಗದ್ಗುರು ದೇಶಿ ಕೇಂದ್ರ ಮಹಾಸ್ವಾಮಿಗಳು,ಡಾ.ಶಿವಾನುಭವ ಚರವರ್ಯ ಕರಿವೃಷ ಭ ದೇಶಿಕೇಂದ್ರ ಶಿವಯೊಗೀಶ್ವರ ಮಹಾಸ್ವಾಮಿಜಿ,ಕಣ್ವಕುಪ್ಪೆ ಗವಿ ಮಠದ ಷ.ಬ್ರ.ಡಾ.ನಾಲ್ವಡಿ ಶಾಂತಲಿಂಗ ಮಹಾಸ್ವಾಮಿಜಿ ಅವರು ಧಿವ್ಯ ಸಾನಿಧ್ಯ ವಹಿಸಲಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಹಾಗೂ ಗ ಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಎಸ್ ಎಸ್ ಮಲ್ಲಿಕಾರ್ಜು ನ್, ಶಾಸಕ ಬಿ.ದೇವೇಂದ್ರಪ್ಪ ಅಧ್ಯಕ್ಷತೆವಹಿಸಲಿದ್ದಾರೆ.ಮುಖ್ಯ ಅತಿ ಥಿಗಳಾಗಿ ಕೃಷಿ ಸಚಿವ ಚಲುವರಾಯಸ್ವಾಮಿ ,ಸಚಿವ ಡಿ.ಸುಧಾ ಕ ರ್,ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಸಗೋಡು ಜಯ ಸಿಂಹ,ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ರವಿಕುಮಾರ್,ಚಿತ್ರ ದುರ್ಗದ ಶಾಸಕ ವೀರೇಂದ್ರ ಪಪ್ಪಿ,ಚನ್ನಗಿರಿಯ ಬಸವರಾಜ್ ಶಿವ ಗಂಗಾ,ಕೂಡ್ಲಿಗಿ ಶಾಸಕ ಡಾ.ಶ್ರೀನಿವಾಸ್,ಉದ್ಯಮಿ ಮಂಜುನಾಥ್, ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ,ಮಾಜಿ ಶಾಸಕರಾದ ಎಚ್.ಪಿ. ರಾಜೇಶ್,ಎಸ್.ವಿ.ರಾಮಚಂದ್ರ,ಸೇರಿದಂತೆ ಗಣ್ಯರು ಭಾಗವಹಿಸ ಲಿದ್ದಾರೆ ಎಂದು ಮಾಹಿತಿ ನೀಡಿದರು.
ಮಾಜಿ ಜಿ.ಪಂ.ಸದಸ್ಯ ಸೊಕ್ಕೆ ನಾಗರಾಜ್ ಮಾತನಾಡಿ,ತಾಲೂಕಿನ ಗಡಿಗ್ರಾಮ ಸೊಕ್ಕೆಯಲ್ಲಿ ಸುಸಜ್ಜಿತ ಸುಂದರ ವಿನ್ಯಾಸದೊಂದಿಗೆ ಶಿರಡಿ ಸಾಯಿಬಾಬಾ ನೂತನ ದೇವಸ್ಥಾನ ಉದ್ಘಾಟನೆ ಗೊಳ್ಳಲಿ ದೆ.ಸುತ್ತಮುತ್ತಲಿನ ತಾಲೂಕಿನ ಭಕ್ತ ಸಮೂಹ ಆಗಮಿಸಿ ಸನ್ನಿಧಾನ ದಲ್ಲಿ ಭಕ್ತಿ ಪರ್ವ ಮೆರೆದು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ತಿರುಮಲೇಶ್,ಎ.ಎಂ ಮರು ಳಾರಾಧ್ಯ, ಗ್ರಾ.ಪಂ.ಸದಸ್ಯ ಕೂಡ್ಲಿಗಿ ಬಸಣ್ಣ,ಮಲ್ಲೇಶ್,ಗೋವಿಂದ ಪ್ಪ,ಹಳ್ಳೆಪ್ಪ,ಪರುಶರಾಮ್ ಇದ್ದರು.