ಪ್ರಜಾ ನಾಯಕ ಸುದ್ದಿ ಜಗಳೂರು :- ತಳಸಮುದಾಯಗಳಿಗೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನ ವರದಾನವಾಗಿದ್ದು. ಮೀಸಲಾತಿ ಸದ್ಬಳಕೆಮಾಡಿಕೊಂಡು ಮುಖ್ಯವಾಹಿನಿಗೆ ಬರಬೇಕಿದೆ ಎಂದು ಶಾಸಕ ಬಿ.ದೇವೇಂದ್ರಪ್ಪ ಕರೆ ನೀಡಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಆದಿಜಾಂಭವ ಸಮಾಜ ದಿಂದ ನೂತನ ಶಾಸಕ ಬಿ.ದೇವೇಂದ್ರಪ್ಪ ಅವರಿಗೆ ಆಯೋಜಿ ಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿ ದರು.
ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಅತ್ಯಂತ ಹಿಂದುಳಿದ ಮಾದಿಗ ಸಮಾ ಜ ಜಾಗೃತರಾಗಿ ಶಿಕ್ಷಣ,ಸಂಘಟನೆ ಯೊಂದಿಗೆ ಸಂವಿಧಾನ ಬದ್ದ ಹಕ್ಕುಗಳಿಗಾಗಿ ಹೊರಾಟ ಅನಿವಾರ್ಯತೆ. ಕಾರಣ ಸಂವಿಧಾನ ವಿರೋಧಿ ಶಕ್ತಿಗಳಿಂದ ದೇಶದ ಸಂವಿಧಾನ ಅಪಾಯದಂಚಿನಲ್ಲಿ ದ್ದು.ಮೀಸಲಾತಿ ಕ್ರಮೇಣ ನಮಗೆ ಅರಿವಿಲ್ಲದೆ ಕಡಿತಗೊಳ್ಳುತ್ತಿದೆ. ಇದರಿಂದ ನಮ್ಮ ಪೂರ್ವಜರು ಅನುಭವಿಸಿದ ಶೋಷಣೆ ಮರು ಕಳಿಸುವುದು ಖಚಿತ ಎಂದು ಆತಂಕ ವ್ಯಕ್ತಪಡಿಸಿದರು.
ಕ್ಷೇತ್ರದಲ್ಲಿ ಸಾಮರಸ್ಯತೆಗೆ ಆದ್ಯತೆ ನೀಡುವೆ ದಲಿತ ಸಮುದಾ ಯಕ್ಕೆ ರಕ್ಷಣೆಗಿರುವ ಕಾನೂನನ್ನು ದುರ್ಬಳಕೆ ಮಾಡಿಕೊಳ್ಳ ಬಾರದು.ಸಮ ಯೋಚಿತವಾಗಿ ಬಳಕೆಮಾಡಿಕೊಂಡು.ಇತರೆ ಸಮುದಾಯಗ ಳೊಂದಿಗೆ ಅನ್ಯೂನ್ಯತೆಯಿಂದ ಜೀವನ ಸಾಗಿಸಬೇಕು.ಅಲ್ಲದೆ ಮೌಢ್ಯತೆ,ಅಂಧಕಾರದಿಂದ ಹೊರಬಂದು ಉತ್ತಮ ಬದುಕು ಕಟ್ಟಿಕೊಳ್ಳಿ.ದುಡಿಮೆಯ ಒಂದು ಭಾಗವನ್ನು ಸಮಾಜದ ಬಡಮಕ್ಕ ಳ,ನಿರ್ಗತಿಕರ,ಕ್ಷೇಮಾಭಿವೃದ್ದಿಗೆ ಮೀಸಲಿಟ್ಟರೆ ಅಂಬೇಡ್ಕರ್ ಅವರ ಸಂವಿಧಾನಕ್ಕೆ ಗೌರವ ಜೀವನ ಸಾರ್ಥಕ ವಿಧಾನ ಸಭಾ ಕ್ಷೇತ್ರದ ಮಾದಿಗ ಸಮಾಜದ ಶ್ರೇಯೋಭಿವೃದ್ದಿಗೆ ಬದ್ದನಾಗಿರುವೆ ಎಂದು ಭರವಸೆ ನೀಡಿದರು.
ಅಂಬೇಡ್ಕರ್ ನಿಧಿ ಸಂಗ್ರಹಣೆಗೆ ಚಾಲನೆ ₹14360 ಸಂಗ್ರಹ :- ಅಂಬೇಡ್ಕರ್ ನಿಧಿ ಸಂಗ್ರಹಣೆಗೆ ವೈಯಕ್ತಿಕವಾಗಿ 5000 ನೀಡುವ ಮೂಲಕ ಚಾಲನೆನೀಡಿದರು.ಕಾರ್ಯಕ್ರಮದಲ್ಲಿ ಒಟ್ಟು 14360 ಹಣ ಸಂಗ್ರಹವಾಯಿತು.ಸಂಗ್ರಹವಾಗುವ ಹಣವನ್ನು ಸಮಾಜದ ಬಡಮಕ್ಕಳ ಶಿಕ್ಷಣ,ಅಂಬೇಡ್ಕರ್ ಅವರ ಕಾರ್ಯಕ್ರಮಗಳಿಗೆ ವಿನಿ ಯೋಗಿಸಬೇಕು.ಈ ವರ್ಷದ ಶಿವರಾತ್ರಿ ರಾತ್ರಿ ಅಂಬೇಡ್ಕರ್ ವೃತ್ತ ದಲ್ಲಿ ಅಂಬೇಡ್ಕರ್ ಜಾಗರಣೆ ಹಬ್ಬವನ್ನಾಗಿ ಆಚರಿಸೋಣ ಎಂದು ವಾಗ್ದಾನ ಮಾಡಿದರು.
ಹಿರಿಯೂರು ಕೋಡಿಹಳ್ಳಿ ಆದಿಜಾಂಭವ ಮಠದ ಷಡಕ್ಷರಿ ಮುನಿ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಾಚನ ನೀಡಿ,ಪೌರ ಕಾರ್ಮಿ ಕರ ಜೊತೆ ಕಸಗುಡಿಸಿ ಸ್ಪೂರ್ತಿ ನೀಡು ತ್ತಿರುವ ಶಾಸಕ ಬಿ.ದೇವೇಂದ್ರಪ್ಪ ಅವರ ವ್ಯಕ್ತಿತ್ವ ವಿಶಾಲವಾ ದದ್ದು.ಶಾಸಕರಿಗೆ ಸ್ವಾಭಿಮಾನ ಸಂತಸದ ಸನ್ಮಾನ ತಮ್ಮದಾ ಗಬೇಕು ಅವರ ಕೈ ಬಲ ಪಡಿಸಲು ಸನ್ನದ್ದರಾಗಿ ನಂತರ ಅವ ರಿಂದ ಸಹಕಾರ ಬಯಸ ಬೇಕು ಎಂದು ಕಿವಿಮಾತು ಹೇಳಿದರು.
ಮೀಸಲಾತಿ ಶಿಕ್ಷಣಕ್ಕೆ ಮಾತ್ರ ಜಾತಿ ಅವಶ್ಯಕ,ಆದರೆ ಸಮಾಜದಲ್ಲಿ ಬ್ರಾತೃತ್ವ,ಸಹೋದರತೆ,ಗೆ ಜ್ಞಾನ ನೀತಿ ಅಳವಡಿಸಿಕೊಳ್ಳ ಬೇಕು. ಮಾದಿಗ ಸಮಾಜದವರು ವಿನಾಕಾರಣ ಜಾತಿನಿಂದನೆ ಪ್ರಕರಣ ದಾಖಲಿಸದೆ.ಸಂಘಟನೆ ಮುಖಂಡರುಗಳು ಮುಂಚೂಣಿಯಲ್ಲಿ ದ್ದು ರಾಜಿ ಸಂಧಾನ ಮಾಡುವ ಮೂಲಕ ಮೇಲ್ವರ್ಗದವರ ವಿಶ್ವಾಸ ಪ್ರೀತಿ ಗಳಿಸಬೇಕು.ಇದರಿಂದ ರಾಜಕೀಯ ನ್ಯಾಯ ಸಾಧ್ಯ ಎಂದರು.
ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯಾಧ್ಯಕ್ಷ ಕೆ ಪಿ ಪಾಲಯ್ಯ ಮಾತ ನಾಡಿ,ಅಂಬೇಡ್ಕರ್ ಅವರ ಮತದಾನದ ಹಕ್ಕನ್ನು ಅರ್ಹ ಶೋಷಿತ ಸಮುದಾಯದ ಧ್ವನಿಯಾಗುವ ಪಕ್ಷದ ನಾಯಕರಿಗೆ ಚಲಾಯಿಸ ಬೇಕು.ಧರ್ಮ,ದೇವರ ಹೆಸರಿನಲ್ಲಿ ಸಮಾಜವನ್ನು ಒಡೆದಾಳುವ ಕೋಮುವಾದಿ ಗಳಿಗೆ ಮುಂಬರುವ ಲೋಕ ಸಭಾ ಚುನಾವಣೆ ಯಲ್ಲಿ ತಕ್ಕ ಪಾಠಕಲಿಸಬೇಕಿದೆ.ಬಹು ಸಂಖ್ಯಾತರಿಗೆ ಅಧಿಕಾರ ಸಿಗುತ್ತಿಲ್ಲ.ಒಂದು ವರ್ಗಕ್ಕೆ ಸೀಮಿತವಾಗಿದೆ ‘ಎಂದು ಬೇಸರ ವ್ಯಕ್ತಪಡಿಸಿದರು.
ಮಾದಿಗ ಸಮಾಜದ ಹಿರಿಯ ಮುಖಂಡ ಜಿ.ಶಂಭುಲಿಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ ‘ಸಮಾಜದಲ್ಲಿ ಅಧಿಕಾರ ಸಂಪತ್ತು ಉಳ್ಳವರ ಪಾಲಾಗುತ್ತಿದೆ.ಪರಿಣಾಮ ಶೋಷಿತರು ಬಡತನದಿಂದ ಸಂಪೂರ್ಣ ನಿರ್ಮೂಲನೆಯಾಗಿಲ್ಲ.ಕ್ಷೇತ್ರದಲ್ಲಿ ರಾಜಕೀಯ ಪಕ್ಷ ಗಳು ಮಾದಿಗ ಸಮಾಜವನ್ನು ಕೇವಲ ಮತ ಬ್ಯಾಂಕ್ ಗೆ ಬಳಕೆ ಮಾಡಿಕೊಳ್ಳುತ್ತಿದ್ದು ಕಾಂಗ್ರೆಸ್ ಪಕ್ಷ ಗುರುತಿಸಿ ಸೂಕ್ತ ಸ್ಥಾನಮಾನ ಒದಗಿಸಬೇಕು ಎಂದು ಮನವಿಮಾಡಿದರು.
ಈ ಸಂದರ್ಭದಲ್ಲಿಕೆ.ಪಿ.ಸಿ.ಸಿ ಎಸ್ ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ.ಕೀರ್ತಿಕುಮಾರ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್,ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇ ಲ್, ನಿವೃತ್ತ ಸಮಾಜ ಕಲ್ಯಾಣ ಅಧಿಕಾರಿ ಬಿ ಮಹೇಶ್ವರಪ್ಪ.ಪ.ಪಂ ಸದ ಸ್ಯರಾದ ನಿರ್ಮಲಕುಮಾರಿ,ದೇವರಾಜ್,ಮುಖಂಡರಾದ ಸಿದ್ದಮ್ಮ ನಹಳ್ಳಿ ವೆಂಕಟೇಶ್.ಸಿ ತಿಪ್ಪೇಸ್ವಾಮಿ,ಪಲ್ಲಾಗಟ್ಟೆ ಶೇಖ ರಪ್ಪ,ಪೂಜಾ ರ್ ಸಿದ್ದಪ್ಪ ಮರಿಯಪ್ಪ,ಶಂಭುಲಿಂಗಪ್ಪ,ಹಟ್ಟಿ ತಿಪ್ಪೇಸ್ವಾಮಿ.ಹನು ಮಂತಾಪುರ ಶಿವಕುಮಾರ್,ಗುತ್ತಿದುರ್ಗ ರುದ್ರೇಶ್,ಮಾಳಮ್ಮನ ಹಳ್ಳಿ ವೆಂಕ ಟೇಶ್,ಬಿ.ಮಹೇಶ್ವರಪ್ಪ, ಪಾಪ ಣ್ಣ,ಪ.ಪಂ ಮಾಜಿ ಅಧ್ಯಕ್ಷ ಮಂಜು ನಾಥ್,ಪ್ರಕಾಶ್ ರೆಡ್ಡಿ,ಸತೀಶ್ ಮಲೆ ಮಾಚಿಕೆರೆ, ವೆಂಕಟೇಶ್, ಪೂ ಜಾರ್ ಸಿದ್ದಪ್ಪ, ಭಾರತ್ ಗ್ಯಾಸ್ ಮಾಲೀಕರಾದ ಓಬಣ್ಣ, ಸತೀಶ್, ರಾಜಪ್ಪ ವ್ಯಾಸಗೊಂಡನಹಳ್ಳಿ, ಮಹೇಶ್,ಕು ಮಾರ್,ಓಬಣ್ಣ, ಕುಮಾರ್ ಮರೇನಹಳ್ಳಿ.ನಾಗೇಶ್.ವಕೀಲ ಮಹಾಂತೇಶ್.ಹೊನ್ನೂರಪ್ಪ.ರಾಜಶೇಖರ್ ಬಾಬು ರಾಜೇಂದ್ರ ಪ್ರಸಾದ್.ಮಾರುತಿ.ಮಹಮದ್ ಗೌಸ್.ತಿಮ್ಮಣ್ಣ.ಸೇರಿದಂತೆ ಇದ್ದರು.