ಪ್ರಜಾ ನಾಯಕ ಸುದ್ದಿ ಜಗಳೂರು:-ಮುಖಂಡರು ಕಾರ್ಯಕರ್ತ ರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ರಾಜಕೀಯ ಜೀವನ ನಿರ್ಣ ಯ ಮಾಡಲಾಗುವುದು ಎಂದು ಮಾಜಿ ಶಾಸಕ ಎಚ್.ಪಿ ರಾಜೇ ಶ್ ಹೇಳಿಕೆ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನೂರಾರು ಕಾರ್ಯಕರ್ತರು ಅಭಿ ಮಾನಿಗೊಳ್ಳಟ್ಟಿಗೆ ಪತ್ರಿಕಾಗೋಷ್ಠಿ ಉದ್ದೇಶಿ ಮಾತನಾಡಿದರು.
ವಿಧಾನಸಭೆ ಚುನಾವಣೆಯಲ್ಲಿ ಸ್ವಾತಂತ್ರ ಅಭ್ಯರ್ಥಿಯಾಗಿ ಗೆದ್ದು ಸೋತಿದ್ದೇನೆ ೫೦ ಸಾವಿರ ಮತಗಳನ್ನು ಪಡೆದ್ದಿಕೊಂಡಿದ್ದೆ,ಮತದಾ ರರು ಅಭಿಮಾನಿಗಳು ಕಾರ್ಯಕರ್ತರು ಹಾಗೂ ಮುಖಂಡರ ಭವಿ ಷ್ಯಕ್ಕಾಗಿ ನಾನು ಬೇರೊಂದು ಪಕ್ಷಕ್ಕೆ ಹೋಗುವ ಅನಿವಾರ್ಯತೆ ಎದು ರಾಗಿದೆ ಆದ್ದರಿಂದ ಮುಂಬರುವ ಫೆ ೧೨ ಸೋಮವಾರ ವಾಲ್ಮೀ ಕಿ ಭವನದಲ್ಲಿ ಮಹತ್ವದ ಸಭೆ ಮಾಡಿ ಕಾರ್ಯಕರ್ತರು, ಅಭಿ ಮಾನಿಗಳು ಮುಖಂಡರು ಯಾವ ತೀರ್ಮಾನ ತೆಗೆದುಕೊಳ್ಳು ತ್ತಾರೋ ಅದರಂತೆ ನಾನು ಯಾವ ಪಕ್ಷಕ್ಕೆ ಹೋಗುತ್ತೇನೆ ಎಂಬು ವುದು ನಿರ್ಧಾರ ಮಾಡುತ್ತೇನೆ.ಅಲ್ಲದೆ ಯಾವ ಪಕ್ಷವು ಬೇಡ ಸ್ವಾತಂ ತ್ರ ಅಭ್ಯರ್ಥಿಯಾಗಿಯೇ ಉಳಿಯಲಿ ಎಂದರೆ ಹಾಗೇ ಉಳಿಯು ತ್ತೆನೆ ಎಂದು ತಮ್ಮ ಇಂಗಿತ ವ್ಯಕ್ತಪಡಿಸಿದರಲ್ಲದೆ ಎಲ್ಲಾ ಅಭಿಮಾನಿಗಳು ಕಾರ್ಯಕರ್ತರು ಸೋಮವಾರದ ಮಹತ್ವದ ಸಭೆ ಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕರೆ ನೀಡಿದರು
ಯಾವುದೇ ರಾಜ್ಯ ನಾಯಕರಿಂದ ಆಹ್ವಾನ ಬಂದಿಲ್ಲ :-
ಕಾಂಗ್ರೆಸ್ ನಿಂದ ಸಿದ್ದರಾಮಯ್ಯ,ಡಿ.ಕೆ ಶಿವಕುಮಾರ್ ಎಸ್ ಎಸ್ ಮಲ್ಲಿಕಾರ್ಜುನ್,ಶಿವಶಂಕರಪ್ಪ ಅಲ್ಲದೆ ಬಿಜೆಪಿಯಿಂದ ಸಂಸದ ಸಿದ್ದೇಶ್ವರ ಹಾಗೂ ವಿಜಯೇಂದ್ರ ಹೀಗೆ ಎರಡು ಪಕ್ಷಗಳಿಂದಲೂ ನನ್ನಗೆ ಅಹ್ವಾನ ಬಂದಿಲ್ಲ ಮುಖಂಡರು ಬೆಂಬಲಿಗರು ಯಾವ ಪಕ್ಷಕ್ಕೆ ಹೋಗಿ ಎಂದು ಮಾರ್ಗದರ್ಶನ ಮಾಡುತ್ತಾರೋ ಆ ಪಕ್ಷ ಕ್ಕೆ ಹೊಗುತ್ತೇನೆ ಎಂದು ಪತ್ರಕರ್ತರ ಪ್ರಶ್ನೆಗಳಿಗೆ ಸ್ಪಷ್ಟನೆ ನೀಡಿ ದರು.
ಲೋಕಸಭೆ ಚುನಾವಣೆ ಸಮೀಪವಿದ್ದು,ಮುಖಂಡರು ಕಾರ್ಯಕ ರ್ತರ ಭವಿಷ್ಯದ ಹಿತದೃಷ್ಟಿಯಿಂದ ಬೆರೋಂದು ಪಕ್ಷಕ್ಕೆ ಹೋಗುವ ತೀರ್ಮಾನ ಮಾಡಿದ್ದು, ಮುಂದಿನ ತಾ.ಪಂ.ಜಿ.ಪಂ ಚುನಾವಣೆ ಯಲ್ಲಿ ನನ್ನ ಬೆಂಬಲಿಗರಿಗೆ ಅನುಕೂಲವಾಗಲಿ ಎಂಬ ಆಶಯ ದಿಂದ ನಿರ್ಧಾರ ಮಾಡಿದ್ದೇನೆ.
-ಎಚ್.ಪಿ ರಾಜೇಶ್ ಮಾಜಿ ಶಾಸಕರು
ಈ ಸಂದರ್ಭದಲ್ಲಿ ತಿಪ್ಪೇಸ್ವಾಮಿ ಗೌಡ್ರು,ಬೈರೇಶ್.ರಾಜಣ್ಣ ,ಸೊಕ್ಕೆ ರಾಜಣ್ಣ,ಸೂರಲಿಂಗಪ್ಪ,ಲೋಕಣ್ಣ,ಮಾರಣ್ಣ.ವೆಂಕಟೇಶ್.ರೇವಣ್ಣ. ಹೊನ್ನೂರ್ ಸ್ವಾಮಿ.ಸೇರಿದಂತೆ ನೂರಾ ರು ಅಭಿಮಾನಿಗಳು ಕಾರ್ಯ ಕರ್ತರು ಪತ್ರಿಕಾಗೋಷ್ಠಿ ಯಲ್ಲಿದ್ದರು.