ಪ್ರಜಾ ನಾಯಕ ಸುದ್ದಿ ಜಗಳೂರು :-ಪಟ್ಟಣದ ಅಂಬೇಡ್ಕರ್ ವೃತ್ತ ದಿಂದ ತಾಲೂಕು ಆಡಳಿತ,ಸಮಾಜ ಕಲ್ಯಾಣ ಇಲಾಖೆ,ಪಟ್ಟಣ ಪಂಚಾಯಿತಿ ಸೇರಿದಂತೆ ವಿವಿಧ ಇಲಾಖೆಗಳ ಹಾಗೂ ವಿವಿಧ ಪ್ರಗ ತಿಪರ ಸಂಘಟನೆಗಳ ಸಹಯೋಗದಲ್ಲಿ ಅಧಿಕಾರಿಗಳು,ವಿದ್ಯಾ ರ್ಥಿ ಗಳು,ಸಂಘಟನೆ ಮುಖಂಡರುಗಳು,ಫೆ.20 ರಂದು ‘ಸಂವಿ ಧಾ ನ ಜಾಗೃತಿ ಜಾಥದ ರಥೋತ್ಸವ’ಆಗಮಿಸುವ ಹಿನ್ನೆಲೆ ಪೂರ್ವ ಭಾವಿ ಯಾಗಿ ಅರಿವು ಮೂಡಿಸಲಾಯಿತು.
ನಂತರ ಅಂಬೇಡ್ಕರ್ ವೃತ್ತದಬಳಿ ಜಮಾಯಿಸಿ ಪ್ರತಿಯೊಬ್ಬರೂ ಕೈಯಲ್ಲಿ ನೂರಾರು ಮೇಣದ ಬತ್ತಿ ಬೆಳಗಿಸುವ ಮೂಲಕ ಭಾರತ ಸಂವಿಧಾನ ಪ್ರಸ್ತಾವನೆ ಪೀಠಿಕೆಯನ್ನು ಸಾಮೂಹಿಕವಾಗಿ ಪಠಣ ಮಾಡಿದರು.
ಸಮಾಜಕಲ್ಯಾಣ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಮಹೇಶ್ವ ರಪ್ಪ ಮಾತನಾಡಿ,’ದೇಶದಲ್ಲಿ ಮೇಲು–ಕೀಳು, ಜಾತಿ ಪದ್ಧತಿ ಹೋಗ ಲಾಡಿಸಲು ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ದೇಶದ ಪ್ರತಿ ಯೊಬ್ಬರಿಗೂ ಪರಿಚಯಿಸುವ ಕೆಲಸ ಆಗಬೇಕಿದೆ. ಸಂವಿಧಾ ನವ ನ್ನು ಅರ್ಥೈಸಿಕೊಂಡರೆ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬಹುದು ‘ ಎಂದು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆ ಪ್ರಭಾರಿ ಸಹಾಯಕ ನಿರ್ದೇಶಕ ಬೀರೇಂದ್ರ ಕುಮಾರ್ ಮಾತನಾಡಿ, ಸಂವಿಧಾನವು ಸಮಾನತೆ ಭ್ರಾತೃತ್ವ, ರಾಷ್ಟ್ರೀಯ ಏಕತೆತರುವಲ್ಲಿ ತನ್ನದೇ ಆದ ಪಾತ್ರವಹಿಸಿದೆ. ಸಂವಿಧಾನದ ಮಹತ್ವವನ್ನು ಮನೆ ಮನೆಗೆ ತಲುಪಿಸುವ ಪ್ರಯತ್ನ ವನ್ನು ರಾಜ್ಯ ಸರ್ಕಾರ ಜಾಗೃತಿಜಾಥಾ ಮೂಲಕ ಮಾಡುತ್ತಿದೆ’ ಎಂದು ಹೇಳಿದರು.
ಈ ವೇಳೆ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಚಂದ್ರ ಶೇಖರ್ ಮಾತನಾಡಿ,’ಸಂವಿಧಾನ ಜಾರಿಗೊಂಡು 75ವರ್ಷಗಳ ಅಮೃತ ಮಹೋತ್ಸವದ ಹಿನ್ನೆಲೆ ರಾಜ್ಯದಲ್ಲಿ ಸಂವಿಧಾನದ ಆಶಯ ಮತ್ತು ಮೌಲ್ಯ ಗಳನ್ನು ಸಾರಲು ರಾಜ್ಯಸರ್ಕಾರ ರಾಜ್ಯ ವ್ಯಾಪಿ ಜಾಗೃ ತಿ ಜಾಥ ರಥೋತ್ಸವ ನಡೆಸಲಾಗುತ್ತಿದ್ದು.ತಾಲೂಕಿನಲ್ಲಿ ಫೆ.20 ರಿಂದ 23 ರವರೆಗೆ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಸಂಚರಿಸಿ ಜಾಗೃತಿ ಮೂಡಿಸಲಾಗುವುದು’ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಗ್ರೇಡ್ -2 ತಹಶೀಲ್ದಾರ್ ಮಂಜ್ಯಾನಾಯ್ಕ, ಪ. ಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ,ದೈಹಿಕ ಶಿಕ್ಷಣ ಅಧಿಕಾರಿ ಸುರೇಶ್ ರೆಡ್ಡಿ,ವಸತಿ ನಿಲಯಮೇಲ್ವಿಚಾರಕರಾದ ಮಹಾಬಲೇಶ್, ಸೋಮಣ್ಣ,ದೇವೇಂದ್ರಪ್ಪ,ಮಂಗಳಾ,ಮುಖಂಡರಾದ ಪಲ್ಲಾಗಟ್ಟೆ ಶೇಖರಪ್ಪ,ಶಂಭುಲಿಂಗಪ್ಪ,ಪ್ರಾಂಶುಪಾಲ ಎ.ಡಿ. ನಾಗಲಿಂಗಪ್ಪ, ವಕೀಲ ಆರ್.ಓಬಳೇಶ್,ಪೂಜಾರ್ ಸಿದ್ದಪ್ಪ,ವಕೀಲ ಹನುಮಂತ ಪ್ಪ,ಸೂರಗೊಂಡನಹಳ್ಳಿ ಕುಬೇಂದ್ರಪ್ಪ, ಕರ್ನಾಟಕ ಎಸ್ ಸಿ ಎಸ್ ಟಿ ಪತ್ರಿಕ ವರದಿಗಾರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ. ಸಿ.ಬಸವರಾಜ್,ಉಪಾಧ್ಯಕ್ಷ ವ್ಯಾಸಗೊಂಡನಹಳ್ಳಿ ರಾಜಪ್ಪ. ಸಂಘ ಟನಾ ಕಾರ್ಯದರ್ಶಿ ಮಾದಿಹಳ್ಳಿ ಮಂಜುನಾಥ್,ಪೋಲಿಸ್ ಸಿಬ್ಬಂದಿ ಉಮಾಪತಿ ಮುಖಂಡರಾದ ಸತೀಶ್,ಪುಟ್ಟಣ್ಣ, ಹನು ಮಂತಪ್ಪ,ನಿಂಗಪ್ಪ,ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.