ಪ್ರಜಾ ನಾಯಕ ಸುದ್ದಿ ಜಗಳೂರು -: ಪಟ್ಟಣದ ತಾಲೂಕ ಕಛೇರಿ ಮತ್ತು ಪಟ್ಟಣ ಪಂಚಾಯಿತಿಯಲ್ಲಿ ಕರ್ನಾಟಕ ಸರ್ಕಾರದ ಆದೇಶ ದ ಮೇರೆಗೆ “ಸಾಂಸ್ಕೃತಿಕ ನಾಯಕ”ರಾದ ಶ್ರೀ ಜಗ ಜ್ಯೋತಿ ಬಸವ ಣ್ಣನವರ ಭಾವಚಿತ್ರವನ್ನು ಶಾಸಕ ಬಿ.ದೇವೇಂದ್ರಪ್ಪ ಅನಾವರಣ ಗೊಳಿಸಿದರು
ನಂತರ ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ ಬಸವಣ್ಣನವರು ಪ್ರತಿಯೊಬ್ಬರು ಸತ್ಯಸುದ್ಧ ಕಾಯಕದ ಮೂಲಕ ದುಡಿತು ತಿನ್ನಲು, ಹೆಚ್ಚಿನದನ್ನು ಹಸಿದವರಿಗೆ ಹಂಚಿ ತಿನ್ನುವ ದಾಸೋಹ ಪದ್ದತಿಯ ನ್ನು ಜಾರಿಗೆ ತಂದಿದ್ದ, ವರ್ಗರಹಿತ ಸಮಾಜ ನಿರ್ಮಾಣದ ಕನಸು ಹೊಂದಿದ್ದ, ಮನುಕುಲದ ಏಳಿಗೆಗೆ ದಾರಿದೀಪವಾದ ಹಾಗೂ ಹೆಣ್ಣು ಗಂಡು ಎನ್ನುವ ಭೇಧವಳಿದು ಮಹಿಳಾ ಅಸಮಾನತೆ ಮತ್ತು ಮೂಢ ನಂಬಿಕೆಗಳ ಹೋಗಲಾಡಿಸಲು ನಿರಂತರವಾಗಿ ಶ್ರಮಿಸಿದ ಜಗಜ್ಯೋತಿ ಬಸವಣ್ಣನವರ ಭಾವಚಿತ್ರವನ್ನು ಅನಾವರ ಣ ಗೊಳಿಸುವ ಸಮಾರಂಭದಲ್ಲಿ ಭಾಗವಹಿಸಿದ್ದು ಸಂತೋಷವನ್ನು ತಂದಿದೆ ಎಂದರು.ಬಸವಣ್ಣನವರನ್ನು ಒಂದು ಜಾತಿಗೆ ಸೀಮಿತ ಗೊಳಿಸದೇ ಎಲ್ಲಾ ಜಾತಿ ಜನಾಂಗದವರು ಸ್ಮರಿಸಬೇಕಿದೆ. ಎಲ್ಲಾ ಸಮುದಾಯದವರಿಗೆ ಮಾತಾಡಲು, ಚರ್ಚಿಸಲು ಮುಕ್ತ ಅವಕಾಶ ವನ್ನು ನೀಡಿದ್ದರು.24,000 ವಚನಗಳ ರಚಿಸಿದ್ದು,ಅವು ಪ್ರತಿಯೊ ಬ್ಬರಿಗೆ ದಾರಿದೀಪಗಳಾಗಿವೆ.12ನೇ ಶತಮಾನ ದಲ್ಲೇ ಇಂದಿನ ಪಾರ್ಲಿಮೆಂಟಿನ ಪರಿಕಲ್ಪನೆಯನ್ನು ಜಾರಿಗೆ ತಂದಿದ್ದರು.ಅಲ್ಲಮ ಪ್ರಭುಗಳ ಅಧ್ಯಕ್ಷತೆಯಲ್ಲಿ ಅನುಭವ ಮಂಟಪವನ್ನು ರಚಿಸಿದ್ದರು. ಡಾ.ಬಿ.ಆರ್ ಅಂಬೇಡ್ಕರ್ ರವರು ರಚಿಸಿರುವ ಸಂವಿಧಾನವು ಸಹಾ ಬಸವಣ್ಣನವರ ಆದರ್ಶ ವಾಗಿಟ್ಟು ರಚಿಸಿದ್ದಾರೆ ಹೀಗಾಗಿ ಬಸವಣ್ಣನವರ ಚಿಂತನೆಗಳು ಸಾಂಸ್ಕೃತಿಕ ರಾಯಭಾರಿತ್ವಕ್ಕೆ ಸಮರ್ಥನೀಯವಾಗಿವೆ ಎಂದರು.
ನಂತರ ಪಟ್ಟಣ ಪಂಚಾಯಿತಿ ಮುಖ್ಯಧಿಕಾರಿ ಲೋಕ್ಯಾ ನಾಯ್ಕ್ ಮಾತನಾಡಿ ಮಾತನಾಡಿ ಈ ದಿನ “ಸುವರ್ಣ ಯುಗ”ವಾಗಿದೆ. ಬಸವಣ್ಣನವರು ಅಂದು ಕಲ್ಯಾಣದಲ್ಲಿ ಕ್ರಾಂತಿ ಎಬ್ಬಿಸಿದರು.ಅದು ಸಮಾನತೆಯ,ಅಕ್ಷರದ,ಅನ್ನದ ಧೂಳಾಗಿತ್ತು.ಧೀನ,ದಲಿತರು, ಮಹಿಳೆಯರು,ಶೋಷಿತರು ಹೀಗೆ ನೊಂದ ಪ್ರತಿಯೊಬ್ಬರನ್ನು ಬೆನ್ನುತಟ್ಟಿ ಮಾತಾಡಲು ಧೈರ್ಯತುಂಬಿದ್ದರು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಹಕ್ಕಿದೆ ಎಂದು ತೋಸಿದ್ದರು.ಭಾರತಕ್ಕೆ ಅತ್ಯಮೂಲ್ಯ ವಾದ ಸಾಂಸ್ಕೃತಿಕ ಮೌಲ್ಯವನ್ನು ಒಳಗೊಂಡಿರುವ ವಚನಗಳನ್ನು ನೀಡಿ ಮನುಕುಲದ ಏಳಿಗೆಗೆ ಶ್ರಮಿಸಿದ ಅವರನ್ನು “ಕರ್ನಾಟಕ ಸಾಂಸ್ಕೃತಿ ನಾಯಕ” ಎಂದು ಘೋಷಿಸಿರುವುದು ಅರ್ಥಪೂರ್ಣ ವಾಗಿದೆ ಎಂದರು.ನಾವು ಬರೀ ಭಾವಚಿತ್ರ ಪೂಜೆ ಮಾಡಿದರೆ ಸಾ ಲದು, ಅವರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು ಹೋಗು ವುದರ ಜೊತೆಗೆ ಮುಂದಿನ ಪೀಳಿಗೆಯವರಿಗೂ ಮುಂದುವರಿಸಿ ಕೊಂಡು ಹೋಗಲು ಮಾರ್ಗದರ್ಶವನ್ನು ನೀಡಬೇಕಿದೆ
ಈ ಸಂದರ್ಭದಲ್ಲಿ ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್ .ಸಮಾ ಜ ಕಲ್ಯಾಣ ಇಲಾಖೆ ಪ್ರಭಾರ ಅಧಿಕಾರಿ ಬಿರೇಂದ್ರ ಕುಮಾರ್. ಪಟ್ಟ ಣ ಪಂಚಾಯತಿ ಸದಸ್ಯರಾದ ಲಲಿತಮ್ಮ ಶಿವಣ್ಣ. ಪಾಪಲಿಂಗ.ರವಿ ಕುಮಾರ್.ಶಕೀಲ್ ಅಹ್ಮದ್. ಲುಕ್ಮಾನ್ ಉಲ್ಲಾ ಖಾನ್. ಸರೋಜ ಮ್ಮ ನಿವೃತ್ತ ಸಮಾಜ ಕಲ್ಯಾಣ ಅಧಿಕಾರಿ ಬಿ.ಮಹೇಶ್ವರಪ್ಪ.ವಕೀಲ ಹನುಮಂತ ಪ್ಪ.ಮುಖಂಡರಾದ ಪಲ್ಲಾಗಟ್ಟೆ ಶೇಖರಪ್ಪ.ಮಹ ಮ್ಮದ್ ಗೌಸ್.ತಿಮ್ಮಣ್ಣ. ಪಕ್ಕಿರಜ್ಜ.ಶಿವಣ್ಣ. ಕಂದಾಯ ನಿರೀಕ್ಷಕರಾದ ಮೋಹಿದೀನ್. ಇಂಜಿನಿಯರ್ ಶ್ರುತಿ. ಸಿಬ್ಬಂದಿಗಳಾದ ನಾಯಕ್. ಗಣಕಯಂತ್ರ ನಿರ್ವಾಹಕರಾದ ಚಂದ್ರು.ಮದನ್. ಪಟ್ಟಣ ಪಂಚಾ ಯಿತಿ ಹಾಗೂ ತಾಲೂಕು ಕಚೇರಿಯ ಸಿಬ್ಬಂದಿಗಳು ಹಾಗೂ ಸಾರ್ವಜನಿಕರ ಹಾಜರಿದ್ದರು