✍️ವರದಿ -: ಹೆಚ್.ಬಾಬು ಮರೇನಹಳ್ಳಿ
ಪ್ರಜಾ ನಾಯಕ ವಿಶೇಷ ಸುದ್ದಿ :- ಜಗಳೂರು ಪಟ್ಟಣದ ಡಾ.ಬಿ. ಆರ್ ಅಂಬೇಡ್ಕರ್ ವೃತ್ತದಲ್ಲಿ ಸ್ಥಾಪಿಸಲಾಗಿರುವ ಬಾಬಾ ಸಾಹೇಬ್ ಅಂಬೇಡ್ಕರ್ ಕಂಚಿನ ಪುತ್ಥಳಿಗೆ ಮೆರಗು ತರಲು ಜಗಳೂರು ಶಾಸ ಕ ಬಿ ದೇವೇಂದ್ರಪ್ಪ ತೀವ್ರ ಆಸಕ್ತಿವಹಿಸಿದ್ದಾರೆ
13-03-2023ರಲ್ಲಿ ಸ್ಥಾಪಿತವಾದ ಡಾ.ಬಿ.ಆರ್ ಅಂಬೇಡ್ಕರ್ ಕಂಚಿ ನ ಪುತ್ಥಳಿಯನ್ನು ಅಂದಿನ ಶಾಸಕ ಎಸ್.ವಿ ರಾಮಚಂದ್ರ ಅವರ ನೇತೃತ್ವದಲ್ಲಿ ಸ್ಥಾಪಿಸಲಾಗಿತ್ತು ಆದರೆ ಅದಕ್ಕೆ ರಕ್ಷಣೆ ಇಲ್ಲದೆ ಮೂಲ ಭೂತ ಸೌಕರ್ಯ ಕಲ್ಪಿಸದೆ ಪುತ್ಥಳಿ ಸಮೇತ ಮೃದು ಧೋರಣೆಗೆ ತಳ್ಳಿದಂತಾಗಿತ್ತು
ಇದನ್ನು ಮನಗಂಡ ಹಾಲಿ ಶಾಸಕ.ಬಿ ದೇವೇಂದ್ರಪ್ಪ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಪುತ್ಥಳಿ ಸುತ್ತಲೂ ಅಭಿವೃದ್ಧಿ ಕಾಮಗಾರಿ ಕೈಗೊಳ್ಳ ಲು ಮುಂದಾಗಿದ್ದಾರೆ
ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಅನ್ವಯಿ ಗಳಾ ಗಿರುವ ದೇವೇಂದ್ರಪ್ಪ ಅವರು ಸಾರ್ವಜನಿಕ ಸಭೆ ಸಮಾ ರಂಭಗ ಳಲ್ಲಿ ಡಾ.ಬಿ.ಆರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರ ವಿಚಾರ ಧಾರೆಗಳನ್ನು ಭಾಷಣದುದ್ದಕ್ಕೂ ಬಿತ್ತರಿಸುತ್ತಾರೆ ಅದಲ್ಲದೆ ಅವರು ಪರಿಶಿಷ್ಟರಿಗೆ ಕೊಟ್ಟಂತಹ ಮೀಸಲಾತಿಯಲ್ಲಿ ನನ್ನ ಮಗ ಐ.ಆರ್. ಎಸ್. ಅಧಿಕಾರಿಯಾಗಿದ್ದಾರೆ ನಾನು ಕೂಡ ಅದೇ ಮೀಸಲಾತಿ ಕ್ಷೇತ್ರ ದಲ್ಲಿ ನಾನು ಕೂಡ ಶಾಸಕನಾಗಿರುವೆ ಎಂದು ಹೆಮ್ಮೆಯಿಂದ ಹೇಳಿ ಕೊಳ್ಳುತ್ತಿರುವ ಅವರು ಪುತ್ಥಳಿ ಅಭಿವೃದ್ಧಿ ಗೆ ನನ್ನದೊಂದು ಅಳಲು ಸೇವೆ ಎಂದು ಪುತ್ಥಳಿ ಬಳಿ ಸಮಗ್ರ ಅಭಿವೃದ್ಧಿ ಪಡಿಸಲು ಶಾಸಕ ಬಿ ದೇವೇಂದ್ರಪ್ಪ ಅವರೇ ಸ್ವಂತ ಖರ್ಚಿನಲ್ಲಿ ನೀಲಿ ನಕ್ಷೆ ತಯಾರಿಸಿ ದ್ದಾರೆ
ಮಹಾ ನಾಯಕ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡ ಲು ಮೆಟ್ಟಿಲು (ಟೇಲ್ ಕೇಸ್) ಅಳವಡಿಸಲು ಪುತ್ಥಳಿಯ ಸುತ್ತ ಗ್ರಿಲ್ ಅಳವಡಿ ಸುವುದು ಅದರ ಸುತ್ತಲೂ ಹಸಿರೀಕರಣ ವಿದ್ಯುತ್ ದೀಪ ಅಲಂಕಾರ ಸಿಸಿ ಕ್ಯಾಮೆರಾ ಸೇರಿದಂತೆ ಪುತ್ಥಳಿಗೆ ಮೆರಗು ತರಲು ಅವರು ಇದೀಗ ಪಣತೊಟ್ಟಿದ್ದಾರೆ
ಈಗಾಗಲೇ ಕಾಮಗಾರಿ ಆರಂಭಿಸಲಾಗಿದೆ ಅಂದುಕೊಂಡಂತೆ ಅ ಅಂದು ಕಾಮಗಾರಿ ಮುಕ್ತಾಯವಾದರೆ ಶಿವರಾತ್ರಿ ದಿನ ಜಾಗರಣೆ ರಾತ್ರಿ ದಿನ “ಡಾ.ಬಿ.ಆರ್ ಅಂಬೇಡ್ಕರ್ ಅವರ ರಾತ್ರಿಯ ನ್ನಾಗಿ” ವಿದ್ಯುತ್ತವಾಗಿ ಉದ್ಘಾಟನೆಯನ್ನು ಗಣ್ಯಾತಿ ಗಣ್ಯರಿಂದ ಮತ್ತು ಇಡೀ ರಾತ್ರಿ ಜಾನಪದ ಕಲಾ ರತ್ನ.ಜಾನಪದ ಜಂಗಮ.ಜಾನಪದ ಕಲಾ ಸಾರ್ವಭೌಮ ಪ್ರಶಸ್ತಿ ಪುರಸ್ಕೃತರಾ ದ ಗಂಜಿಗಟ್ಟಿ ಕೃಷ್ಣ ಮೂರ್ತಿ ಸೇರಿದಂತೆ ಇತರೆ ಕಲಾವಿದ ರೊಂದಿಗೆ ಇಡೀ ರಾತ್ರಿ ಜಾಗರಣೆ ನಡೆ ಸುವ ಮೂಲಕ ವಿಶ್ವ ರತ್ನ.ದಲಿತ ಸೂರ್ಯ ಡಾ.ಬಿ. ಆರ್ ಅಂಬೇಡ್ಕರ್ ಅವರಿಗೆ ನಮನ ಸಲ್ಲಿಸಲಿದ್ದಾರೆ
2023 ರಲ್ಲಿ ಸ್ಥಾಪಿತವಾದ ಡಾ.ಬಿ.ಆರ್ ಅಂಬೇಡ್ಕರ್ ಅವರ ಪುತ್ಥ ಳಿ ಬಿಸಿಲು.ಮಳೆ.ಗಾಳಿಗೆ ಮೈ ಒಡ್ಡಿ ನಿಂತಿತ್ತು ವಾಹನ ದಟ್ಟಣೆಯಿಂ ದ ಪದೇ ಪದೇ ಧೂಳು ಮೈ ತುಂಬಿಕೊಳ್ಳುತ್ತಿತ್ತು ಅಂಬೇಡ್ಕರ್ ರವ ರಿಗೆ ನಮನ ಸಲ್ಲಿಸಲು ಹಾರ ತುರಾಯಿಗಳ ನ್ನು ಮಾಲಾರ್ಪಣೆ ಮಾಡ ಬೇಕಾದರೆ ಸರ್ಕಸ್ ಮಾಡುವ ಅನುಭವ ಆಗುತ್ತಿತ್ತು ಕೋಲಿ ನಿಂದ ಹಾರ ಹಾಕಬೇಕಾಗಿತ್ತು
ಇದರಿಂದ ಅಂಬೇಡ್ಕರ್ ಅನುಯಾಯಿಗಳಿಗೆ ಅಭಿಮಾನಿಗಳಿಗೆ ತೀವ್ರ ಮುಜುಗರವೆನಿಸುತ್ತಿತ್ತು ಇದನ್ನು ಮನಗಂಡಂತಹ ಶಾಸಕ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಪುತ್ತಳಿಯ ಅಭಿವೃದ್ಧಿ ಕಾಮ ಗಾರಿ ಕೈಗೊಳ್ಳಲು ನಿರ್ಧರಿಸಿದ್ದಾರೆ
ಇದಲ್ಲದೆ ದಲಿತ ಮುಖಂಡರ ಸಭೆ ಸೇರಿಸಿ ಪುತ್ಥಳಿ ಅಭಿವೃದ್ಧಿಗೆ ಕೈಗೊಳ್ಳಲಾಗುವುದೆಂದು ಇಂಗಿತ ವ್ಯಕ್ತಪಡಿಸಿದ್ದರು ಅದರ ಖರ್ಚು ನಾನೇ ಸ್ವಂತ ಬರಿಸುತ್ತೇನೆ ನೀವೇ ಪುತ್ಥಳಿ ಅಭಿವೃದ್ಧಿ ಪಡಿಸಿ ಎಂದು ಚಾನ್ಸ್ ಕೂಡ ನೀಡಿದ್ದರು
ಆದರೆ ದಲಿತ ಮುಖಂಡರೆಲ್ಲರ ಅಭಿಪ್ರಾಯದಂತೆ ತಮ್ಮ ನೇತೃ ತ್ವದಲ್ಲಿ ಪುತ್ಥಳಿ ಅಭಿವೃದ್ಧಿ ನಡೆಸಿ ಎಂದು ಒಮ್ಮತ ಅಭಿಪ್ರಾಯ ಕ್ಕೆ ಮಣಿದ ಶಾಸಕ ಬಿ.ದೇವೇಂದ್ರಪ್ಪ ಪುತ್ಥಳಿಯ ಅಭಿವೃದ್ಧಿಗೆ ಮುಂದಾ ಗುವ ಮೂಲಕ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಋಣ ತೀರಿಸಲು ಮುಂದಾಗಿದ್ದಾರೆ ಇದಕ್ಕೆ ಡಾ.ಬಿ.ಆರ್ ಅಂಬೇಡ್ಕ ರ್ ಅಭಿಮಾನಿಗಳು ಮತ್ತು ಪರಿಶಿಷ್ಟರೆಲ್ಲರೂ ಶಾಸಕ ಬಿ ದೇವೇಂದ್ರ ಪ್ಪ ಅವರನ್ನು ತುಂಬು ಹೃದಯದಿಂದ ಅಭಿನಂದಿ ಸುತ್ತಿದ್ದಾರೆ…!